Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಚತುರ್ಗ್ರಹಿ ಯೋಗ: 4 ಗ್ರಹಗಳ ಸಂಯೋಗದಿಂದ ಈ ರಾಶಿಯವರ ಅದೃಷ್ಟವೇ ಬದಲು!
ವೈದಿಕ ಜ್ಯೋತಿಷ್ಯದಲ್ಲಿ ಗ್ರಹಗಳ ಚಲನೆಯನ್ನು ಬಹಳ ಪ್ರಮುಖ ವಿದ್ಯಮಾನ ಎಂದು ಪರಿಗಣಿಸಲಾಗಿದೆ. ಗ್ರಹಗಳು ನಿರ್ದಿಷ್ಟ ಸಮಯದಲ್ಲಿ ನಿರ್ದಿಷ್ಟ ರಾಶಿಗೆ ಚಲಿಸುವುದು ನೋಡಬಹುದು. ಹೀಗೆ ಗ್ರಹಗಳ ಚಲನೆಯು ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಬೀರುವುದು ನೋಡಬಹುದು. ಇಂತಹ ಗ್ರಹಗಳ ಚಲನೆಯಲ್ಲಿ ನಾವಿಂದು ಹಲವು ಗ್ರಹಗಳ ಚಲನೆಯಿಂದಾಗಿ ಉಂಟಾಗುವ ಅಪರೂಪದ ಯೋಗಗಳ ಕುರಿತು ತಿಳಿದುಕೊಳ್ಳೋಣ.
ಸೆಪ್ಟೆಂಬರ್‌ನಲ್ಲಿ ವಿಶೇಷ ಚತುರ್ಗ್ರಹಿ ಯೋಗವು ರೂಪುಗೊಳ್ಳುತ್ತಿದೆ. ಈ ಯೋಗವು ಬುಧ, ಶುಕ್ರ, ಕೇತು ಮತ್ತು ಸೂರ್ಯನ ಕಾರಣದಿಂದ ರೂಪುಗೊಳ್ಳುತ್ತದೆ. ಸೂರ್ಯನು ಸಿಂಹ ರಾಶಿಯಲ್ಲಿದ್ದಾಗ ಗ್ರಹಗಳ ಸಂಗಮವು ಅಪರೂಪದ ಚತುರ್ಗ್ರಹಿ ಯೋಗ ರೂಪುಗೊಳ್ಳಲಿದೆ. ಈ ಯೋಗ ಅಪರೂಪದಲ್ಲಿ ಅಪರೂಪ ಎಂದು ಪರಿಗಣಿಸಲಾಗಿದೆ. ಇದರಿಂದ ಹಲವರಿಗೆ ಲಾಭವಿದೆ.

ಚತುರ್ಗ್ರಹಿ ಯೋಗದಿಂದಾಗಿ ಯಾರಿಗೆಲ್ಲಾ ಶುಭವಾಗುತ್ತಿದೆ. ಯಾರಿಗೆ ಇದರಿಂದ ಶುಭವಾಗುತ್ತಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಹಾಗಾದ್ರೆ ಯಾವೆಲ್ಲಾ ರಾಶಿಗಳಿಗೆ ಈ ಯೋಗವು ಉಪಕಾರಿಯಾಗಲಿದೆ ಎಂಬುದನ್ನು ನೋಡೋಣ
ಸಿಂಹ ರಾಶಿ
ಚತುರ್ಗ್ರಹಿ ಯೋಗವು ನಿಮ್ಮ ರಾಶಿಯ ಮೊದಲ ಮನೆಯಲ್ಲಿ ಉಂಟಾಗುತ್ತಿದೆ. ಇದು ನಿಮಗೆ ಬಹಳ ಶುಭ ತರಲಿದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುವಂತಹ ಕೆಲಸದಲ್ಲಿ ನೀವು ಭಾಗಿಯಾಗುತ್ತೀರಿ. ಅಪರಿಚಿತರೊಂದಿಗೆ ನಿಮ್ಮ ಹಣಕಾಸು ವ್ಯವಹಾರವು ಲಾಭದಾಯಕವಾಗಿ ಬದಲಾಗುತ್ತದೆ. ಸೂರ್ಯನು ಸಿಂಹ ರಾಶಿಯ ಅಧಿಪತಿಯಾಗಿರುವ ಕಾರಣದಿಂದಾಗಿ ಈ ಯೋಗವು ನಿಮಗೆ ಬಹಳಷ್ಟು ಪ್ರಭಾವಕಾರಿಯಾಗಲಿದೆ. ನಿಮ್ಮ ಜನಪ್ರೀಯತೆ ಹೆಚ್ಚಾಗಲಿದೆ. ನಿಮ್ಮ ಹಣಕಾಸಿನ ವಿಚಾರವಾಗಿ ಅನುಕೂಲಕರ ದಿನಗಳಿವೆ, ಹಲವು ಸಮಯದಿಂದ ನೀವು ಸಾಲ ಪಡೆಯಲು ಮುಂದಾಗಿದ್ದರೆ ಈ ಸಮಯದಲ್ಲಿ ಸುಲಭವಾಗಿ ನಿಮ್ಮ ಕೈಸೇರಲಿದೆ. ಸಂಬಂಧಿಕರು, ನೆರೆಹೊರೆಯವರಲ್ಲಿ ಆಸ್ತಿ ಕುರಿತಾಗಿ ಯಾವುದಾದರು ಸಮಸ್ಯೆಗಳಿದ್ದರೆ ನಿಮಗೆ ಗೆಲುವು ಸಾಧ್ಯತೆ ಇದೆ. ನಿಮ್ಮ ವಾಹನ ಸಂಬಂಧಿ ಕನಸು ನನಸಾಗಲಿದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಜನರಿಗೆ ಈ ಯೋಗವು ವಿಶೇಷವಾಗಿ ಪ್ರಯೋಜನಕಾರಿಯಾಗಲಿದೆ ಏಕೆಂದರೆ ಇದು ನಿಮ್ಮ ಕೆಲಸದ ಮನೆಯಲ್ಲಿ ರೂಪುಗೊಳ್ಳುತ್ತಿದೆ. ಈ ಸಮಯದಲ್ಲಿ, ನಿಮ್ಮ ಕೆಲಸದಲ್ಲಿ ಉತ್ತಮ ಪ್ರಗತಿ ಕಂಡುಬರುತ್ತದೆ. ಹಾಗೆ ನಿರುದ್ಯೋಗಿಗಳಾಗಿದ್ದರೆ ಅಥವಾ ಉದ್ಯೋಗ ಬದಲಿಸುವುದು, ಪಾಲುದಾರಿಕೆ ವ್ಯವಹಾರ, ಹೊಸ ಉದ್ಯೋಗ ಆರಂಭಿಸುವ ಆಲೋಚನೆಯಲ್ಲಿದ್ದರೆ ಅತ್ಯುತ್ತಮ ಸಮಯ ಆಗಿರಲಿದೆ. ನಾಯಕತ್ವದ ಲಕ್ಷಣಗಳ ಕಾರಣದಿಂದಾಗಿ ನಿಮ್ಮ ಹಲವು ಯೋಜನೆಗಳಲ್ಲಿ ಎಲ್ಲರ ಗಮನ ಸೆಳೆಯುತ್ತೀರಿ. ವರ್ಗಾವಣೆ, ಬಡ್ತಿ, ವೇತನ ಸಂಬಂಧವಾಗಿ ನೀವು ಅಂದುಕೊಂಡಂತಹ ವಿಚಾರಗಳಲ್ಲಿ ಯಶಸ್ಸು ಇರಲಿದೆ. ನೀವು ಆಧ್ಯಾತ್ಮಿಕವಾಗಿ ಬಹಳ ದೃಢರಾಗುತ್ತೀರಿ. ಹಣಕಾಸಿನ ವಿಚಾರದಲ್ಲಿ ತರಾತುರಿಯ ನಿರ್ಧಾರಕ್ಕೆ ಮುಂದಾಗಬೇಡಿ.
ಧನು ರಾಶಿ
ಧನು ರಾಶಿಯವರಿಗೆ ಅದೃಷ್ಟ ಮನೆಯಲ್ಲಿ ಈ ಯೋಗವು ರೂಪುಗೊಳ್ಳುತ್ತಿದೆ, ಇದರಿಂದಾಗಿ ಅದೃಷ್ಟವು ಸಂಪೂರ್ಣವಾಗಿ ಬೆಂಬಲಿತವಾಗಿರುತ್ತದೆ. ನಿಮ್ಮ ವ್ಯವಹಾರಗಳಲ್ಲಿ ದಿಢೀರ್ ಬದಲಾವಣೆಗಳು ನಿಮಗೆ ಶುಭವಾಗಿ ಪರಿಣಮಿಸಲಿವೆ. ನಿಮ್ಮ ಆದಾಯದ ಮೂಲ ವಾಹನವಾಗಿದ್ದರೆ ಉತ್ತಮ ಲಾಭ ನೋಡಬಹುದು. ವಿದೇಶಿ ಪ್ರವಾಸಗಳು, ಕೌಟುಂಬಿಕ ವಿಚಾರಗಳು, ಪ್ರೇಮ ಸಂಬಂಧಗಳಲ್ಲಿ ನೀವು ಅಂದುಕೊಂಡ ದಿನಗಳಿವೆ ಎನ್ನಬಹುದು. ನಿಮ್ಮ ದೈನಂದಿನ ಕೆಲಸದಲ್ಲಿ ಹಣಕಾಸಿನ ಸಮಸ್ಯೆಗಳು ಎದುರಾಗಿದ್ದರೆ ಅದನ್ನು ನಿವಾರಿಸಿಕೊಳ್ಳುವಿರಿ. ಮನೆಯ ಕುರಿತಾದ ದುಂದುವೆಚ್ಚಗಳು ಕಡಿಮೆಯಾಗುವುದು ನೋಡಬಹುದು. ಆಪ್ತರೊಬ್ಬರಿಂದ ಹಣ ಬರುವುದು ಬಾಕಿ ಉಳಿದಿದ್ದರೆ ಈ ಸಮಯದಲ್ಲಿ ನಿಮ್ಮ ಕೈ ಸೇರಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications



