Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಡಿಸೆಂಬರ್ 29ಕ್ಕೆ ಚತುರ್ಗ್ರಹಿ ಯೋಗ: ಈ ರಾಶಿಯವರಿಗೆ 4 ಗ್ರಹಗಳ ಯೋಗ!
ಜ್ಯೋತಿಷ್ಯದಲ್ಲಿ 9 ಗ್ರಹಗಳಲ್ಲಿ ಪ್ರತಿಯೊಂದೂ ಗ್ರಹವನ್ನು ಸಹ ಪ್ರಮುಖ ಎಂದು ಪರಿಗಣಿಸಲಾಗುತ್ತದೆ. ಹಾಗೆ ಎಲ್ಲಾ ಗ್ರಹಗಳು ಒಂದು ನಿರ್ಧಿಷ್ಟ ಸಮಯದಲ್ಲಿ ತಮ್ಮ ರಾಶಿ ಬದಲಾಯಿಸುವುದು ನೋಡಬಹುದು. ಹಾಗೆ ಎಲ್ಲಾ ರಾಶಿಗಳ ಪಾಲಿಗೂ ಗ್ರಹಗಳ ಚಲನೆ ಶುಭ ಹಾಗೂ ಅಶುಭ ಗಳಿಗೆ ತರಲು ಕಾರಣವಾಗುತ್ತದೆ. ಇಂತಹ ಯೋಗಗಳ ತರುವ ಗ್ರಹಗಳು ಹಲವು ರೀತಿಯ ಪರಿಣಾಮ ತರಲಿದೆ. ವ್ಯಕ್ತಿಯೊಬ್ಬನ ಜೀವನದಲ್ಲಿ ಅತ್ಯಮೂಲ್ಯ ಬದಲಾವಣೆಗೆ ಇದು ಕಾರಣವಾಗಲಿದೆ.
ಹಾಗೆ ಈ ವರ್ಷದ ಕೊನೆಯಲ್ಲಿ ಅದೃಷ್ಟದಾಯಕ ಯೋಗ ರೂಪುಗೊಳ್ಳುವುದು ನೋಡಬಹುದು. ಹಲವು ಗ್ರಹಗಳು ಒಂದೇ ರಾಶಿಯಲ್ಲಿ ಚಲಿಸುವ ಮೂಲಕ ಅಪರೂಪದ ಚಲನೆಯೊಂದಿಗೆ ಅಪರೂಪದ ಯೋಗಕ್ಕೂ ಕಾರಣವಾಗುತ್ತಿವೆ. ಇದೆ ಡಿಸೆಂಬರ್ 29ರಂದು ಸೂರ್ಯ, ಮಂಗಳ, ಗುರು, ಶುಕ್ರ ಧನು ರಾಶಿಯಲ್ಲಿ ಕಾಣಿಸಿಕೊಳ್ಳಲಿವೆ.

ಶುಕ್ರ ಗ್ರಹವು ಡಿಸೆಂಬರ್ 20ರಂದು ಧನು ರಾಶಿ ಪ್ರವೇಶಿಸುವುದು ನೋಡಬಹುದು. ಹಾಗೆ ಸೂರ್ಯ, ಮಂಗಳ, ಗುರು ಈ ಮೊದಲೇ ಧನು ರಾಶಿಯಲ್ಲಿರುತ್ತಾರೆ. ಇದೊಂದು ಅಪರೂಪದ ವಿದ್ಯಮಾನ ಸಹ ಆಗಿರಲಿದೆ. ಇದೇ ಸಮಯದಲ್ಲಿ ಅಪರೂಪದ ಚತುರ್ಗ್ರಹಿ ಯೋಗ ರೂಪುಗೊಳ್ಳುವುದು ನೋಡಬಹುದು.
ಈ ಅಪರೂಪದ ಗ್ರಹಗಳ ಸಂಯೋಗವು ಹಲವರಿಗೆ ಯೋಗ ತರಲಿದೆ. ಇದು ಶುಭ ಹಾಗೂ ಅಶುಭ ಯೋಗಗಳ ತರಲು ಕಾರಣವಾಗಲಿದೆ. ಹೊಸ ವರ್ಷದ ಆರಂಭವು ಕೆಲವರಿಗೆ ತುಂಬಾ ಅದ್ಭುತ ಮತ್ತು ಸಮೃದ್ಧವಾಗಿರಲಿದೆ. ಈಗ 2025 ರ ಕೊನೆಯಲ್ಲಿ ರೂಪುಗೊಳ್ಳುವ ಚತುರ್ಗ್ರಹ ಯೋಗದಿಂದಾಗಿ ಯಾವ ರಾಶಿ ಜನರಿಗೆ ಅದೃಷ್ಟ ಬರಲಿದೆ ಅನ್ನೋದನ್ನು ತಿಳಿದುಕೊಳ್ಳೋಣ.
ಮೇಷ ರಾಶಿ
ಮೇಷ ರಾಶಿಯ 9 ನೇ ಮನೆಯಲ್ಲಿ ಚತುರ್ಗ್ರಹ ಯೋಗವು ರೂಪುಗೊಳ್ಳಲಿದೆ. ಇದರಿಂದಾಗಿ ಈ ರಾಶಿಚಕ್ರ ಚಿಹ್ನೆಗಳ ವಿದೇಶದಲ್ಲಿ ಕೆಲಸ ಮಾಡುವ ಕನಸು ನನಸಾಗುತ್ತದೆ. ಆಧ್ಯಾತ್ಮಿಕತೆಯಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ವೃತ್ತಿಪರವಾಗಿ ನಿಮಗೆ ಉತ್ತಮ ಫಲಿತಾಂಶಗಳು ಸಿಗುತ್ತವೆ. ಆನುವಂಶಿಕ ಆಸ್ತಿಗೆ ಸಂಬಂಧಿಸಿದ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಹೂಡಿಕೆಗಳಿಂದ ಉತ್ತಮ ಲಾಭ ಪಡೆಯುತ್ತೀರಿ. ವಿವಾಹಿತರ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ. ಹಲವು ಮಾರ್ಗಗಳಿಂದ ಹಣ ಬರಬಹುದು. ಬಹು ಸಮಯದಿಂದ ಅರ್ಧಕ್ಕೆ ನಿಂತ ಕೆಲಸಗಳನ್ನು ಪೂರ್ಣ ಮಾಡುವಿರಿ. ಆಪ್ತರಿಂದ ನಿಮಗೆ ಬರಬೇಕಾದ ಹಣ ನಿಮ್ಮ ಕೈ ಸೇರಲಿದೆ.
ಮಿಥುನ ರಾಶಿ
ಮಿಥುನ ರಾಶಿಯ 7 ನೇ ಮನೆಯಲ್ಲಿ ಚತುರ್ಗ್ರಹ ಯೋಗವು ರೂಪುಗೊಳ್ಳಲಿದೆ. ಇದರಿಂದಾಗಿ ನಿಮಗೆ ಆರ್ಥಿಕ ಲಾಭ ನೋಡಬಹುದು. ಕೆಲಸ ಮಾಡುವವರಿಗೆ ಇದು ಉತ್ತಮ ಸಮಯ ಆಗಿರಲಿದೆ. ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಗುತ್ತದೆ. ವ್ಯವಹಾರದಲ್ಲಿ ಉತ್ತಮ ಪ್ರಗತಿ ಇರುತ್ತದೆ. ನೀವು ಹೊಸ ಹೂಡಿಕೆಗಳನ್ನು ಮಾಡಿದರೆ ನಿಮಗೆ ಉತ್ತಮ ಲಾಭ ಸಿಗುತ್ತದೆ. ಕೆಲಸ ಮಾಡುವವರಿಗೆ ಆದಾಯದಲ್ಲಿ ಉತ್ತಮ ಹೆಚ್ಚಳ ನೋಡಬಹುದು. ಕುಟುಂಬ ವ್ಯವಹಾರಗಳು ಬಹಳ ಸಮಯದಿಂದ ನಷ್ಟದಲ್ಲಿದ್ದರೆ ಈ ಸಮಯದಲ್ಲಿ ಲಾಭದಾಯಕವಾಗಿ ಪರಿಣಮಿಸಲಿದೆ.
ಧನು ರಾಶಿ
ಧನು ರಾಶಿಯ ಮೊದಲ ಮನೆಯಲ್ಲಿ ಚತುರ್ಗ್ರಹ ಯೋಗವು ರೂಪುಗೊಳ್ಳುತ್ತಿದೆ. ಇದರಿಂದಾಗಿ ಅವಿವಾಹಿತರಿಗೆ ಉತ್ತಮ ಸಂಬಂಧಗಳು ಹುಡುಕಿ ಬರಬಹುದು. ನಿರುದ್ಯೋಗಿ ವರ್ಗಕ್ಕೆ ಲಾಭಕರ ಉದ್ಯೋಗ ಸಿಗುವ ಸಮಯವಿದು. ಹೊಸ ಸದಸ್ಯರ ಆಗಮನವು ಸಕಾರಾತ್ಮಕ ಬದಲಾವಣೆಗಳನ್ನು ತರುತ್ತದೆ. ಉದ್ಯಮಿಗಳಿಗೆ ಉತ್ತಮ ಲಾಭ ಸಿಗುತ್ತದೆ. ವೃತ್ತಿಯಲ್ಲಿ ಅನಿರೀಕ್ಷಿತ ಪ್ರಗತಿಯ ಸಾಧ್ಯತೆಯಿದೆ. ಬಹು ಸಮಯದಿಂದ ವಾಹನ ಖರೀದಿಯ ಬಯಕೆಯಿಂದ ಹಣ ಒಗ್ಗೂಡಿಸಿದ್ದರೆ ಈ ಹೊಸ ವರ್ಷದಲ್ಲಿ ವಾಹನ ಲಾಭ ನೋಡಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಊಹೆಗಳು ಮತ್ತು ಇಂಟರ್ನೆಟ್‌ನಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದು. ಇದನ್ನು ಮಾಹಿತಿಯಾಗಿ ಮಾತ್ರ ತೆಗೆದುಕೊಳ್ಳಬೇಕು. ಯಾವುದೇ ಮಾಹಿತಿ ಅಥವಾ ಊಹೆಯನ್ನು ಅಭ್ಯಾಸ ಮಾಡುವ ಅಥವಾ ಕಾರ್ಯಗತಗೊಳಿಸುವ ಮೊದಲು, ದಯವಿಟ್ಟು ಸಂಬಂಧಿತ ತಜ್ಞರನ್ನು ಸಂಪರ್ಕಿಸಿ.)



Click it and Unblock the Notifications



