Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಚತುರ್ಗ್ರಹಿ ಯೋಗ 2025: ಈ ರಾಶಿಯವರಿಗೆ ಅದೃಷ್ಟ ಬದಲು..ಕೈಯಿಟ್ಟ ಕೆಲಸದಲ್ಲಿ ಯಶಸ್ಸು..!
ಫೆಬ್ರವರಿಯಲ್ಲಿ ಹಲವು ಗ್ರಹಗಳ ಚಲನೆಯ ಹಲವು ರೀತಿ ಯೋಗಗಳ ಉಂಟುಮಾಡುತ್ತಿವೆ. ಪ್ರತಿಯೊಂದು ಗ್ರಹಗಳು ಒಂದು ನಿರ್ದಿಷ್ಟ ಅವಧಿಯಲ್ಲಿ ರಾಶಿಚಕ್ರ ಚಿಹ್ನೆಯನ್ನು ಬದಲಾಯಿಸುತ್ತವೆ. ಈ ವೇಳೆ ಗ್ರಹಗಳ ಚಲನೆಯು ಹಲವು ರೀತಿಯ ಶುಭ ಮತ್ತು ಅಶುಭಕ್ಕೆ ಕಾರಣವಾಗುತ್ತದೆ. ಹಾಗೆ ಮಾರ್ಚ್‌ನಲ್ಲಿ ನಾವು ವಿಶೇಷ ಯೋಗದ ರಚನೆಗೆ ಸಾಕ್ಷಿಯಾಗುತ್ತಿದ್ದೇವೆ ಅದರಲ್ಲೂ ಅಪರೂಪವಾಗಿ ರೂಪುಗೊಳ್ಳುವ ಚತುರ್ಗ್ರಹಿ ಯೋಗ ಕೂಡ ಸಂಭವಿಸುತ್ತಿದೆ.
ಮಾರ್ಚ್‌ನಲ್ಲಿ ನಾವು ಮೀನ ರಾಶಿಯಲ್ಲಿ ಈ ಚತುರ್ಗ್ರಹಿ ಯೋಗ ಉಂಟಾಗುತ್ತಿದೆ. ಆದ್ರೆ ಎಲ್ಲಾ ರಾಶಿಗಳ ಮೇಲೆಯೂ ಇದರ ಪರಿಣಾಮವಿದೆ. ಮಾರ್ಚ್ ತಿಂಗಳಲ್ಲಿ ಚತುರ್ಗ್ರಹಿ ಯೋಗ ರೂಪುಗೊಳ್ಳುತ್ತಿದೆ. ಈ ಯೋಗವು ಶುಕ್ರ, ಬುಧ, ಶನಿ ಮತ್ತು ಸೂರ್ಯ ಸಂಯೋಗದಿಂದ ರೂಪುಗೊಳ್ಳುತ್ತದೆ. ಇದರಿಂದಾಗಿ ಕೆಲವು ರಾಶಿಗಳಿಗೆ ಸಂಪತ್ತು, ಆಸ್ತಿ, ಪ್ರಗತಿ ಮತ್ತು ಯಶಸ್ಸಿಗೆ ಕಾರಣವಾಗುತ್ತಿದೆ.

ಹಾಗಾದ್ರೆ ಅಪರೂಪದ ಚತುರ್ಗ್ರಹಿ ಯೋಗವು ಯಾವ ಮೂರು ರಾಶಿಯವರಿಗೆ ಲಾಭದಾಯಕವಾಗಿ ಬದಲಾಗುತ್ತಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಅದರಲ್ಲೂ ಯಾವ ಮೂರು ರಾಶಿಯವರಲ್ಲಿ ಈ ಯೋಗವು ಅನೇಕ ಲಾಭದಾಯಕ ಕೆಲಸಗಳಿಗೆ ಕಾರಣವಾಗಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಕರ್ಕಾಟಕ ರಾಶಿ
ಚತುರ್ಗ್ರಹಿ ಯೋಗದಿಂದಾಗಿ ಕರ್ಕಾಟಕ ರಾಶಿ ಜನರಲ್ಲಿ ಅತ್ಯುತ್ತಮ ಲಾಭದಾಯಕ ದಿನಗಳ ನೋಡಬಹುದು. ಕರ್ಕ ರಾಶಿಯ 9ನೇ ಮನೆಯಲ್ಲಿ ಈ ಯೋಗ ರೂಪುಗೊಳ್ಳುತ್ತದೆ. ಈ ಸಮಯದಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುವ ಹಲವು ಕೆಲಸಗಳ ಮಾಡುತ್ತೀರಿ. ಧಾರ್ಮಿಕ ಮತ್ತು ಸಮಾಜಿಕ ಕಾರ್ಯಗಳಲ್ಲಿ ನೀವು ತೊಡಗುತ್ತೀರಿ. ನಿಮ್ಮ ಭವಿಷ್ಯದ ಉಳಿತಾಯಗಳು, ಹೂಡಿಕೆಗಳಿಂದ ಲಾಭ ಗಳಿಸುವ ಸಾಧ್ಯತೆ ಹೆಚ್ಚಾಗಿದೆ. ಕುಟುಂಬದವರಲ್ಲಿ ನೀವು ಪ್ರೀತಿ, ಸಂತಸ ನೋಡಬಹುದು. ಅವಿವಾಹಿತರು, ನಿರುದ್ಯೋಗಿಗಳು, ಕೈಗಾರಿಕ ವಲಯದಲ್ಲಿರುವವರು ಒಳ್ಳೆಯ ದಿನಗಳ ನೋಡುತ್ತೀರಿ. ನಿಮ್ಮ ಹಣಕಾಸಿನ ಸಮಸ್ಯೆಗಳು ಬಗೆಹರಿಯಲಿವೆ.
ಧನು ರಾಶಿಯ
ಚತುರ್ಗ್ರಹಿ ಯೋಗದ ರಚನೆಯು ಧನು ರಾಶಿಯವರಲ್ಲಿ ಅತ್ಯಧಿಕ ಲಾಭ ತರುತ್ತಿದೆ. ಧನು ರಾಶಿಯ 4ನೇ ಮನೆಯಲ್ಲಿ ಈ ಯೋಗ ರೂಪುಗೊಳ್ಳುತ್ತಿದೆ. ಇದರಿಂದ ನೀವು ಬಯಸಿದ್ದ ಕೆಲಸಗಳು ನಿಮ್ಮ ಅಣತಿಯಂತೆ ನಡೆಯಲಿದೆ. ಈ ಸಮಯದಲ್ಲಿ ನೀವು ವಾಹನ ಅಥವಾ ಆಸ್ತಿಯನ್ನು ಖರೀದಿಸಬಹುದು. ರಿಯಲ್ ಎಸ್ಟೇಟ್, ಆಸ್ತಿ, ವೈದ್ಯಕೀಯ ಮತ್ತು ಆಹಾರಕ್ಕೆ ಸಂಬಂಧಿಸಿದ ವ್ಯವಹಾರ ಕೈ ಹಿಡಿಯಲಿದೆ. ನಿಮ್ಮ ಹಳೆಯ ಸಾಲಗಳು ತೀರುತ್ತವೆ. ಹೊಸದಾಗಿ ಹೂಡಿಕೆ, ಉಳಿತಾಯಕ್ಕೆ ಇದು ಸಕಾಲವಾಗುತ್ತಿದೆ. ಆನಾರೋಗ್ಯ ಸಂಬಂಧಿ ಸಮಸ್ಯೆ ಹೊಂದಿದವರಲ್ಲಿ ಚೇತರಿಕೆ ನೋಡಬಹುದು. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ಹಾಗೆ ನಿಮ್ಮ ಬಹುದೊಡ್ಡ ಕನಸು ಈಡೇರಿಸಿಕೊಳ್ಳಲು ನೀವು ಇಟ್ಟಿರುವ ಹೆಜ್ಜೆ ಈ ಸಮಯದಲ್ಲಿ ಮೊದಲ ಯಶಸ್ಸು ಪಡೆಯಲಿದೆ.
ಮೀನ ರಾಶಿ
ಚತುರ್ಗ್ರಹಿ ಯೋಗದ ರಚನೆಯಿಂದ ಮೀನ ರಾಶಿಯವರಲ್ಲಿ ಸಂಪತ್ತು ವೃದ್ಧಿ ನೋಡಬಹುದು. ಮೀನ ರಾಶಿಯ ಲಗ್ನ ಮನೆಯಲ್ಲಿ ಈ ಯೋಗ ರೂಪುಗೊಳ್ಳುತ್ತಿದೆ. ಇದರಿಂದ ನಿಮ್ಮ ಎಲ್ಲಾ ಕಷ್ಟಗಳು ದೂರಾಗುವ ಸಮಯ ಇದು ಎನ್ನಬಹುದು. ನೀವು ಯಾವುದೇ ಕೆಲಸ ಮಾಡಿದರೆ ಅದರು ನಿಮ್ಮನ್ನು ಯಶಸ್ಸಿನತ್ತ ಕರೆದೊಯ್ಯಲಿದೆ. ಗೌರವ, ಪ್ರತಿಷ್ಠೆ ಹೆಚ್ಚಾಗುತ್ತದೆ. ಸಂಬಂಧಗಳಲ್ಲಿ ಸಂತೋಷ, ಆತ್ಮಿಯತೆ ಹೆಚ್ಚಲಿದೆ. ಅವಿವಾಹಿತರಿಗೆ ಈ ಸಮಯ ಬಹಳ ಆನಂದದಾಯಕವಾಗುತ್ತಿದೆ. ಹಣ ಬರುವ ದಾರಿ ಮತ್ತಷ್ಟು ಸುಗಮವಾಗುತ್ತಿದೆ. ಆರೋಗ್ಯದ ಕಡೆ ಗಮನವಿಟ್ಟರೆ ಖರ್ಚು ಕಡಿಮೆ ಮಾಡಬಹುದಾಗಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications