Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಹಾ ಶಿವರಾತ್ರಿಯಂದೇ ಚತುರ್ಗ್ರಹ ಯೋಗ: ಈ ರಾಶಿಯವರಿಗೆ ಅದೃಷ್ಟಕರ, ಆರ್ಥಿಕ ಸ್ಥಿತಿ ಉತ್ತುಂಗಕ್ಕೆ
ಮಹಾ ಶಿವರಾತ್ರಿ ಆಗಮಿಸುತ್ತಿದೆ. ಫೆಬ್ರವರಿ 15ರಂದು ಮಹಾಶಿವಾರಾತ್ರಿ ಆಗಮಿಸುತ್ತಿದೆ. ಈ ದಿನ ಶಿವನ ಭಕ್ತರು ಉಪವಾಸ, ಜಾಗರಣೆ, ಪೂಜೆ, ಭಜನೆ ಹೀಗೆ ವಿಶೇಷ ದಿನವನ್ನಾಗಿ ಆಚರಿಸುತ್ತಾರೆ. ಈ ಸಮಯದಲ್ಲಿ ಹಲವು ಗ್ರಹಗಳ ಚಲನೆ ಹಾಗೂ ನಕ್ಷತ್ರಗಳ ಸ್ಥಾನಪಲ್ಲಟವು ಹಲವು ರೀತಿಯ ಶುಭ ಗಳಿಗೆಯನ್ನು ತರಲಿದೆ. ಈ ಶುಭದಿನದಂದೇ ನಾಲ್ಕು ಗ್ರಹಗಳ ಚಲನೆಯು ವಿಶೇಷ ಯೋಗವೊಂದಕ್ಕೆ ಕಾರಣವಾಗುತ್ತಿದೆ.
ಈ ಶುಭ ದಿನದಂದು 4 ಗ್ರಹಗಳು ಶನಿಯ ಕುಂಭ ರಾಶಿಯಲ್ಲಿ ಒಟ್ಟಿಗೆ ಪ್ರಯಾಣಿಸುತ್ತವೆ. ಈ 4 ಗ್ರಹಗಳ ಸಂಯೋಜನೆಯಿಂದಾಗಿ ಅತ್ಯಂತ ಶಕ್ತಿಶಾಲಿ ಚತುರ್ಗ್ರಹ ಯೋಗವು ರೂಪುಗೊಳ್ಳುತ್ತದೆ. ಪ್ರಸ್ತುತ ರಾಹು ಬುಧ ಮತ್ತು ಸಂಪತ್ತಿನ ಅಂಶವಾದ ಶುಕ್ರ ಕೂಡ ಕುಂಭ ರಾಶಿಯಲ್ಲಿ ಪ್ರಯಾಣಿಸುತ್ತಿದ್ದಾರೆ. ಆದರೆ ಮಹಾ ಶಿವರಾತ್ರಿಯ ಮೊದಲು ಅಂದರೆ ಫೆಬ್ರವರಿ 13 ರಂದು ಸೂರ್ಯನು ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ.

ಹೀಗಾಗಿ ಮಹಾ ಶಿವರಾತ್ರಿಯ ದಿನದಂದು ಕುಂಭ ರಾಶಿಯಲ್ಲಿ 4 ಗ್ರಹಗಳ ಸಂಯೋಜನೆಯಿಂದಾಗಿ ಚತುರ್ಗ್ರಹ ಯೋಗವು ರೂಪುಗೊಳ್ಳುತ್ತದೆ. ಎಲ್ಲಾ ರಾಶಿ ಜನರ ಜೀವನದಲ್ಲೂ ಈ ಯೋಗದ ಪ್ರಭಾವ ಕಂಡುಬರಲಿದೆ. ಹಾಗೆ ಕೆಲವು ರಾಶಿ ಜನರಿಗೆ ಈ ಸಮಯವು ಬಹಳ ಪ್ರಯೋಜನಕಾರಿಯಾಗಲಿದೆ. ಹಾಗಾದ್ರೆ ಈ ಸಮಯದಲ್ಲಿ ಯಾವೆಲ್ಲಾ ರಾಶಿಯವರಿಗೆ ಶಿವನ ಆಶೀರ್ವಾದ ಇರಲಿದೆ. ಯಾರಿಗೆ ಲಾಭದಾಯಕ ಅನ್ನೋದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಮೇಷ ರಾಶಿ
ಮೇಷ ರಾಶಿಯ 11 ನೇ ಮನೆಯಲ್ಲಿ 4 ಗ್ರಹಗಳ ಸಂಯೋಜನೆಯು ಚತುರ್ಗ್ರಹ ಯೋಗವನ್ನು ಸೃಷ್ಟಿಸುತ್ತದೆ. ಇದರಿಂದಾಗಿ ಈ ರಾಶಿ ಜನರ ಆರ್ಥಿಕ ಪರಿಸ್ಥಿತಿಯಲ್ಲಿ ಉತ್ತಮ ಪ್ರಗತಿಯನ್ನು ಕಾಣುತ್ತವೆ. ಸಿಲುಕಿಕೊಂಡಿರುವ ಹಣ ಅವರ ಕೈಗೆ ಬರುತ್ತದೆ. ಖರ್ಚುಗಳು ಕಡಿಮೆಯಾಗುತ್ತವೆ. ಹೂಡಿಕೆಗಳಿಂದ ಉತ್ತಮ ಲಾಭವಾಗುತ್ತದೆ. ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಉದ್ಯೋಗ ಅವಕಾಶ ಒಲಿಯಲಿದೆ. ನಿಮ್ಮ ಬಾಕಿ ಉಳಿದ ಕೆಲಸಗಳನ್ನು ಈ ಸಮಯದಲ್ಲಿ ಅಡ್ಡಿಗಳಿಲ್ಲದೆ ಮಾಡಿ ಮುಗಿಸುವಿರಿ.
ಮಕರ ರಾಶಿ
ಮಕರ ರಾಶಿಯ 2 ನೇ ಮನೆಯಲ್ಲಿ 4 ಗ್ರಹಗಳ ಸಂಯೋಜನೆಯು ಚತುರ್ಗ್ರಹ ಯೋಗವನ್ನು ಸೃಷ್ಟಿಸುತ್ತದೆ. ಇದರಿಂದಾಗಿ ಇಲ್ಲಿಯವರೆಗೆ ಎದುರಿಸುತ್ತಿದ್ದ ಆರ್ಥಿಕ ಸಮಸ್ಯೆಗಳು ಕೊನೆಗೊಳ್ಳುತ್ತವೆ. ನ್ಯಾಯಾಲಯದ ಪ್ರಕರಣಗಳಲ್ಲಿ ನೀವು ಗೆಲುವು ಪಡೆಯಲಿದ್ದೀರಿ. ಸಾಲದ ಸುಳಿಯಿಂದ ನೀವು ಹೊರಬರುವ ಸಂಭವವಿದೆ. ಖರ್ಚುಗಳನ್ನು ಕಡಿಮೆ ಮಾಡುವುದು ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲು ಸಹಕಾರಿಯಾಗಲಿದೆ. ಹೂಡಿಕೆ ಹೆಚ್ಚಾಗಲಿದೆ. ಉಳಿತಾಯ ಕೂಡ ಹೆಚ್ಚಾಗಲಿದೆ. ಸಂಬಂಧಿಕರಲ್ಲಿ ನಿಮ್ಮ ಬಗೆಗಿನ ಭಾವನೆಗಳು ಬದಲಾಗುತ್ತವೆ. ಹೊಸ ಆದಾಯ ಮೂಲವನ್ನು ಹುಡುಕುವ ಪ್ರಯತ್ನದಲ್ಲಿ ಫಲ ಸಿಗಲಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯ 6ನೇ ಮನೆಯಲ್ಲಿ 4 ಗ್ರಹಗಳ ಸಂಯೋಜನೆಯು ಚತುರ್ಗ್ರಹ ಯೋಗವನ್ನು ಉಂಟುಮಾಡುತ್ತದೆ. ಇದರಿಂದಾಗಿ ಪಿತ್ರಾರ್ಜಿತ ಆಸ್ತಿಗಳಲ್ಲಿನ ಸಮಸ್ಯೆಗಳು ಬಗೆಹರಿಯುತ್ತವೆ ಮತ್ತು ಉತ್ತಮ ಆರ್ಥಿಕ ಲಾಭಗಳು ದೊರೆಯುತ್ತವೆ. ಹೊಸ ಮನೆ ಮತ್ತು ವಾಹನವನ್ನು ಖರೀದಿಸುವ ಅವಕಾಶಗಳು ಇರುತ್ತವೆ. ಈ ಅವಧಿಯಲ್ಲಿ ಮಾಡಿದ ಕೆಲಸಗಳು ಫಲಿ ನೀಡುತ್ತವೆ. ಧನಾತ್ಮಕ ಕೆಲಸಗಳಲ್ಲಿ ನಿಮ್ಮ ಒಲವು ಹೆಚ್ಚಾಗಲಿದೆ. ಪ್ರಭಾವಿಗಳ ಭೇಟಿಯಿಂದ ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಲಿದೆ.
ಕುಂಭ ರಾಶಿ
ಕುಂಭ ರಾಶಿಯ ಮೊದಲ ಮನೆಯಲ್ಲಿ 4 ಗ್ರಹಗಳ ಸಂಯೋಜನೆಯು ಚತುರ್ಗ್ರಹ ಯೋಗವನ್ನು ರೂಪಿಸುತ್ತದೆ. ಇದರಿಂದಾಗಿ ಈ ರಾಶಿ ಜನರಿಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗುತ್ತದೆ. ಹಣದ ಹರಿವು ಹೆಚ್ಚಾಗುತ್ತದೆ. ಹಣದ ಸಮಸ್ಯೆಗಳು ಬಗೆಹರಿಯುತ್ತವೆ. ನಿಮ್ಮ ವೃತ್ತಿಜೀವನದಲ್ಲಿ ಉತ್ತಮ ಪ್ರಗತಿಯನ್ನು ನೀವು ನೋಡುತ್ತೀರಿ. ಅವಿವಾಹಿತರಲ್ಲಿ ಹಣಕಾಸು ಸಮಸ್ಯೆಗಳು ಕಡಿಮೆಯಾಗಲಿದೆ. ಆಧ್ಯಾತ್ಮಿಕ ವಿಚಾರದಲ್ಲಿ ನೀವು ಬಲವಾಗಿ ನಂಬಿಕೆ ಹೊಂದುವ ಸಮಯ ಇದಾಗಿರಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹವಾಗಿದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. )



Click it and Unblock the Notifications