Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಡಿಸೆಂಬರ್ನಲ್ಲಿ ಚತುರ್ಗ್ರಹ ಯೋಗ: ಹಣ ಪಡೆಯುವ ನಿಮ್ಮ ದಾರಿ ಸುಗಮ, ಮನಸ್ತಾಪಗಳು ದೂರ!
ಡಿಸೆಂಬರ್‌ನಲ್ಲಿ ಹಲವು ಗ್ರಹಗಳು ತಮ್ಮ ಸ್ಥಾನ ಬದಲಾಯಿಸುತ್ತಿವೆ. ಅದ್ರಲ್ಲೂ ಕೆಲವು ಗ್ರಹಗಳ ಸಂಚಾರವು ಹಲವು ಯೋಗಗಳ ತರಲಿದೆ. ಅದ್ರಲ್ಲೂ ಪ್ರಮುಖ ಗ್ರಹ ಸಂಚಾರದಲ್ಲಿ ನಾವು ಮಂಗಳ ಹಾಗೂ ಬುಧನಂತಹ ಗ್ರಹಗಳ ಸಂಚಾರದಿಂದ ಉಂಟಾಗುವ ಯೋಗವು ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಉಂಟು ಮಾಡುವುದು ನೋಡಬಹುದು. ಬುಧ ಮತ್ತು ಸೂರ್ಯ ಧನು ರಾಶಿಯಲ್ಲಿರಲಿದ್ದಾರೆ.
ಹಾಗೆ ಮಂಗಳ ಮತ್ತು ಶುಕ್ರನು ಸಿಂಹ ರಾಶಿಗೆ ಚಲಿಸಲಿದ್ದಾರೆ. ಇದು ಧನು ರಾಶಿಯಲ್ಲಿ ಚತುರ್ಗ್ರಹ ಯೋಗಕ್ಕೆ ಕಾರಣವಾಗಲಿದೆ. ಇದು ಹಲವು ರಾಶಿಗಳಿಗೆ ಶುಭಯೋಗಗಳನ್ನು ತರಲಿದೆ. ಗ್ರಹಗಳ ಚಲನೆ ಮತ್ತು ಅವು ರಾಶಿ ಬದಲಾವಣೆಗಳನ್ನು ಜ್ಯೋತಿಷ್ಯದಲ್ಲಿ ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ.

ಗ್ರಹಗಳು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ನಿಗದಿತ ಕಾಲಘಟ್ಟದಲ್ಲಿ ಚಲಿಸಲಿವೆ. ಹಾಗೆ ಈ ಎಲ್ಲಾ ಗ್ರಹಗಳ ಚಲನೆಯು 12 ರಾಶಿಗಳ ಮೇಲೆ ಪ್ರಭಾವ ಉಂಟು ಮಾಡುತ್ತವೆ. ಈಗ ಡಿಸೆಂಬರ್ನಲ್ಲಿ ಉಂಟಾಗುತ್ತಿರುವ ವಿಶೇಷ ಹಾಗೂ ಅಪರೂಪದ ಯೋಗವಾಗಿರುವ ಚತುರ್ಗ್ರಹ ಯೋಗವು ಹಲವು ರಾಶಿಗಳಿಗೆ ಶುಭ ಯೋಗಗಳ ತರಲಿದೆ.
ಡಿಸೆಂಬರ್‌ನಲ್ಲಿ ಬುಧ ಮತ್ತು ಸೂರ್ಯ ಧನು ರಾಶಿಯಲ್ಲಿರುತ್ತಾರೆ, ನಂತರ ಮಂಗಳ ಮತ್ತು ಶುಕ್ರ ಸಿಂಹ ರಾಶಿಗೆ ಪ್ರವೇಶಿಸುತ್ತಾರೆ. ಇದು ಧನು ರಾಶಿಯಲ್ಲಿ ಚತುರ್ಗ್ರಹ ಯೋಗವನ್ನು ಸೃಷ್ಟಿಸುತ್ತದೆ. ಈ ಯೋಗವು ಕೆಲವು ರಾಶಿ ಜನರಿಗೆ ವಿಶೇಷ ಪ್ರಯೋಜನ ತರಲಿದೆ. ಹಾಗಾದ್ರೆ ಈ ಅಪರೂಪದ ಯೋಗದಿಂದಾಗಿ ಯಾವೆಲ್ಲಾ ರಾಶಿಗಳಿಗೆ ಶುಭವಾಗಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಮೇಷ ರಾಶಿ
ಚತುರ್ಗ್ರಹಿ ಯೋಗವು ಮೇಷ ರಾಶಿಯವರಿಗೆ ಬಹಳ ಪ್ರಯೋಜನಗಳ ತರಲಿದೆ. ಈ ಯೋಗವು ನಿಮ್ಮ ಜಾತಕದ ಒಂಬತ್ತನೇ ಮನೆಯಲ್ಲಿ ರೂಪುಗೊಳ್ಳುತ್ತದೆ, ನಿಮಗೆ ಅದೃಷ್ಟವನ್ನು ತರುತ್ತದೆ. ನಿಮ್ಮ ವೃತ್ತಿ ಮತ್ತು ವ್ಯವಹಾರದಲ್ಲಿ ನೀವು ಪ್ರಯೋಜನ ಪಡೆಯುತ್ತೀರಿ. ನಿಮ್ಮ ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿ ಕಾಣುವಿರಿ. ವ್ಯವಹಾರದಲ್ಲಿ ಆರ್ಥಿಕ ಲಾಭದ ಅವಕಾಶಗಳು ಹೆಚ್ಚಾಗುತ್ತವೆ. ವಿವಾಹ ಸಂಬಂಧಿತ ಇದ್ದಂತಹ ಅಡ್ಡಿ ನಿವಾರಣೆಯಾಗುವುದು ನೋಡಬಹುದು. ನಿಮ್ಮ ಪಿತ್ರಾರ್ಜಿತ ಆಸ್ತಿ, ವಸ್ತು ಸಂಬಂಧಿತ ವಿಚಾರದಲ್ಲಿ ಧನಾತ್ಮಕ ಕೆಲಸವಾಗುತ್ತದೆ.
ಧನು ರಾಶಿ
ಚತುರ್ಗ್ರಹಿ ಯೋಗವು ಧನು ರಾಶಿಗೆ ತುಂಬಾ ಶುಭ ಮತ್ತು ಸಕಾರಾತ್ಮಕವೆಂದು ಸಾಬೀತುಪಡಿಸಬಹುದು. ಈ ಸಂಯೋಗವು ನಿಮ್ಮ ರಾಶಿಯ ಮೊದಲ ಮನೆಯಲ್ಲಿ ರೂಪುಗೊಳ್ಳುತ್ತದೆ. ಇದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ನಿಮ್ಮ ವೈವಾಹಿಕ ಜೀವನವು ಸಂತೋಷದಿಂದ ಕೂಡಿರುತ್ತದೆ. ಉದ್ಯೋಗ ವಿಚಾರದಲ್ಲಿ ನಿಮ್ಮ ವರ್ಗಾವಣೆ, ವೇತನ ಹೆಚ್ಚಳ, ಜವಾಬ್ದಾರಿಯಲ್ಲಿನ ಒತ್ತಡ ಸಂಬಂಧವಾಗಿ ಧನಾತ್ಮಕವಾಗಿರಲಿದೆ. ಕೌಟುಂಬಿಕ ವಿಚಾರದಲ್ಲಿ ಇದ್ದಂತಹ ಹಣಕಾಸಿನ ಮನಸ್ತಾಪಗಳು ನಿವಾರಣೆಯಾಗಲಿದೆ.
ಮೀನ ರಾಶಿ
ಮೀನ ರಾಶಿಯವರಿಗೆ ಚತುರ್ಗ್ರಹಿ ಸಂಯೋಗವು ನಿಮ್ಮ ವೃತ್ತಿ ಮತ್ತು ವ್ಯವಹಾರಕ್ಕೆ ಬಹಳ ಶುಭವೆಂದು ಸಾಬೀತುಪಡಿಸುತ್ತದೆ. ಈ ಸಂಚಾರವು ನಿಮ್ಮ ರಾಶಿಯ 10ನೇ ಮನೆಯಲ್ಲಿ ರೂಪುಗೊಳ್ಳುತ್ತದೆ. ಪರಿಣಾಮವಾಗಿ ನಿಮ್ಮ ವೃತ್ತಿ ಮತ್ತು ವ್ಯವಹಾರದಲ್ಲಿ ಗಮನಾರ್ಹ ಪ್ರಗತಿ ಇರಲಿದೆ. ನಿಮ್ಮ ಕಠಿಣ ಪರಿಶ್ರಮಗಳು ಈ ಸಮಯದಲ್ಲಿ ಪ್ರತಿಫಲ ನೀಡಲಿದೆ. ಶಿಕ್ಷಣ ಕ್ಷೇತ್ರದಲ್ಲಿರುವವರು ಗಮನಾರ್ಹ ಯಶಸ್ಸನ್ನು ಪಡೆಯಬಹುದು. ನಿಮ್ಮಲ್ಲಿ ಇರುವ ದಾಂಪತ್ಯ ಸಂಬಂಧಿತ ಸಮಸ್ಯೆಯೊಂದು ನಿವಾರಣೆಯಾಗಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications