Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಏಪ್ರಿಲ್ 23ರಿಂದ ಮೀನ ರಾಶಿಯಲ್ಲಿ ಚತುರ್ಗಹಿ ಯೋಗ: ಈ 4 ರಾಶಿಯವರಿಗೆ ತುಂಬಾನೇ ಶುಭ ಸಮಯ
ನವಗ್ರಹಗಳಲ್ಲಿ ಮಂಗಳ ಗ್ರಹವನ್ನು ಶೌರ್ಯ, ಧೈರ್ಯ, ಕೋಪದ ಗ್ರಹವೆಂದು ಪರಿಗಣಿಸಲಾಗಿದೆ. ಈ ಮಂಗಳ ಗ್ರಹವು ಏಪ್ರಿಲ್ 23, 2024 ಬೆಳಗ್ಗೆ 08:19 ಕ್ಕೆ ರಾಶಿ ಬದಲಾವಣೆ ಮಾಡಲಿದೆ. ಮಂಗಳ ಉಗ್ರಗ್ರಹವಾದರೂ ಅದು ಕೆಲವೊಂದು ಸ್ಥಾನದಲ್ಲಿ ಶುಭಫಲ, ಇನ್ನು ಕೆಲವೊಂದು ಸ್ಥಾನದಲ್ಲಿ ಅಶುಭಫಲ ನೀಡುವುದು.
ಮಂಗಳ ನಮ್ಮ ರಾಶಿಯಲ್ಲಿ ಅನುಕೂಲಕರ ಸ್ಥಾನದಲ್ಲಿದ್ದರೆ ಶುಭ ಫಲ ನೀಡುತ್ತದೆ. ಮಂಗಳನ ಶುಭ ಸ್ಥಾನದಿಂದಾಗಿ ವ್ಯಕ್ತಿಗೆ ಎಲ್ಲಾ ರೀತಿಯ ಸೌಕರ್ಯಗಳನ್ನು, ಸಮಾಜದಲ್ಲಿ ಗೌರವ ಮತ್ತು ಸ್ಥಾನಮಾನವನ್ನು ಪಡೆಯುತ್ತಾನೆ
ಮಂಗಳನು ಮೀನರಾಶಿಗೆ ಹೋದಾಗ ಚತುರ್ಗ್ರಾಹಿ ಯೋಗವು ರೂಪುಗೊಳ್ಳುತ್ತದೆ. ರಾಹು, ಬುಧ ಮತ್ತು ಶುಕ್ರ ಗ್ರಹಗಳು ಈಗಾಗಲೇ ಮೀನ ರಾಶಿಯಲ್ಲಿದೆ, ಇದೀಗ ಮಂಗಳ ಕೂಡ ಅದೇ ರಾಶಿಗೆ ಸಂಚರಿಸಿದಾಗ ನಾಲ್ಕುಗ್ರಹಗಳು ಒಂದೇ ರಾಶಯಲ್ಲಿ ಇರಲಿದೆ. ಈ ಚತುರ್ಗ್ರಾಹಿ ಯೋಗವು ಈ ರಾಶಿಗಳಿಗೆ ಅನುಕೂಲಕರವಾಗಿದೆ. ಈ ಸಮಯ ನಿಮಗೆ ಅದ್ಭುತವಾಗಿರಲಿದೆ, ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ.

ವೃಷಭ ರಾಶಿ
ಈ ಚತುರ್ಗ್ರಾಹಿ ಯೋಗದ ಫಲದಿಂದಾಗಿ ವೃಷಬ ರಾಶಿಯವರು ಉತ್ತಮ ಲಾಭಗಳನ್ನು ಪಡೆಯುತ್ತಾರೆ. ಏಪ್ರಿಲ್ 23 ರಿಂದ ಮೀನ ರಾಶಿಯಲ್ಲಿ ಮಂಗಳ ಸಂಚಾರವು ನಿಮ್ಮ ಹಣಕಾಸಿನ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ನಿಮ್ಮ ಆರ್ಥಿಕ ಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ಈ ಅವಧಿಯಲ್ಲಿ ಅನಿರೀಕ್ಷಿತ ಹಣ ಕೈ ಸರಲಿದೆ. ಈ ಅವಧಿಯಲ್ಲಿ ವೃತ್ತಿ ಜೀವನದಲ್ಲಿ ಉತ್ತಮ ಯಶಸ್ಸು ಸಿಗಲಿದೆ. ಬಡ್ತಿ ಸಿಗಬಹುದು ಅಥವಾ ನಿಮ್ಮ ಸಂಬಳ ಹೆಚ್ಚಾಗಬಹುದು. ಈ ಅವಧಿಯಲ್ಲಿ ವ್ಯಾಪಾರಸ್ಥರು ಉತ್ತಮ ಲಾಭ ಗಳಿಸುತ್ತಾರೆ.
ಮಿಥುನ ರಾಶಿ
ಈ ಚತುರ್ಗ್ರಾಹಿ ಯೋಗವು ಮಿಥುನ ರಾಶಿಯವರಿಗೆ ವರದಾನವಾಗಿದೆ. ಈ ಸಮಯದಲ್ಲಿ ಆರ್ಥಿಕ ಲಾಭಕ್ಕೆ ಉತ್ತಮ ಅವಕಾಶಗಳು ದೊರೆಯಲಿವೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಲಿದೆ. ಅಲ್ಲದೆ ಈ ಅವಧಿಯಲ್ಲಿ ನೀವು ಪೂರ್ವಜರ ಆಸ್ತಿಯಿಂದ ನೀವು ಪ್ರಯೋಜನ ಪಡೆಯಬಹುದು. ಉದ್ಯೋಗಸ್ಥರಿಗೆ ಹೊಸ ಉದ್ಯೋಗಾವಕಾಶಗಳು ದೊರೆಯಲಿವೆ. ಹಾಗಾಗಿ ನೀವು ಕೆಲಸ ಬದಲಾವಣೆಗೆ ಪ್ರಯತ್ನಿಸುತ್ತಿದ್ದರೆ ಈ ಅವಧಿಯಲ್ಲಿ ಒಳ್ಳೆಯ ಕಡೆ ಕೆಲಸ ಸಿಗುವ ಸಾಧ್ಯತೆ ಇದೆ. ಇನ್ನು ಕೆಲ ಕಾರಣದಿಂದ ಅಪೂರ್ಣವಾಗಿದ್ದ ಕೆಲಸ ಈ ಅವಧಿ ಚುರುಕುಗೊಳ್ಳಲಿದೆ. ಒಟ್ಟಿನಲ್ಲಿ ಈ ಸಮಯ ಉತ್ತಮವಾಗಿರಲಿದೆ. ನೀವು ನಿರೀಕ್ಷೆ ಮಾಡಿದಂತೆಯೇ ನಿಮ್ಮ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿದೆ.
ಕರ್ಕ ರಾಶಿ
ಮೀನ ರಾಶಿಯಲ್ಲಿ ಮಂಗಳ ಮತ್ತು ಇತರ ಮೂರು ಗ್ರಹಗಳ ಸಂಯೋಜನೆಯಿಂದ ರೂಪುಗೊಂಡ ಚತುರ್ಗ್ರಾಹಿ ಯೋಗವು ಕರ್ಕ ರಾಶಿಯ ಅದೃಷ್ಟದ ತರಲಿದೆ. ಕಳೆದ ಕೆಲವು ದಿನಗಳಿಂದ ನೀವು ಎದುರಿಸುತ್ತಿದ್ದ ಆರ್ಥಿಕ ಸಮಸ್ಯೆಗಳು ಈಗ ದೂರವಾಗುತ್ತವೆ. ಸ್ಥಗಿತಗೊಂಡಿರುವ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲಾಗುವುದು. ಆರ್ಥಿಕ ಲಾಭಗಳಿಸಲು ಸಾಧ್ಯವಾಗುವುದು. ಉದ್ಯೋಗಿಗಳಿಗೆ ಸಂಬಳ, ಬಡ್ತಿ ಸಿಗುವ ಸಾಧ್ಯತೆ ಇದೆ. ನಿಮ್ಮ ಹಣಕಾಸಿನ ಚಿಂತೆ ದೂರವಾಗುತ್ತದೆ. ಆರೋಗ್ಯ ಚೆನ್ನಾಗಿರುತ್ತದೆ.
ಧನು ರಾಶಿ
ಚತುರ್ಗ್ರಾಹಿ ಯೋಗದಿಂದಾಗಿ ಧನು ರಾಶಿಯವರಿಗೆ ಮಂಗಳಕರವಾಗಿರುತ್ತದೆ, ಈ ಸಮಯದಲ್ಲಿ ನಿಮ್ಮ ಸೌಕರ್ಯ ಹೆಚ್ಚಾಗಲಿದೆ.ಆರ್ಥಿಕವಾಗಿ ಈ ಸಮಯ ನಿಮಗೆ ತುಂಬಾ ಚೆನ್ನಾಗಿರಲಿದೆ. ನಿಮ್ಮ 4ನೇ ಮನೆಯಲ್ಲಿ ಚತುರ್ಗ್ರಾಹಿ ಯೋಗವು ಸಂಭವಿಸಿದೆ, ಇದರಿಂದಾಗಿ ತುಂಬಾ ಒಳ್ಳೆಯದು. ಈ ಸಮಯದಲ್ಲಿ ಹಣದ ತೊಂದರೆ ಕಡಿಮೆಯಾಗಲಿದೆ. ಹಣದ ಸಮಯದಿಂದ ಅಪೂರ್ಣ ಮಾಡಿದ್ದ ಕೆಲಸ ಕಾರ್ಯಗಳಲ್ಲಿ ನೀವು ಮುಂದುವರೆಯಬಹುದು, ಯಾವುದೇ ಆರ್ಥಿಕ ತೊಂದರೆಯಿರಲ್ಲ. ಆರೋಗ್ಯ ಉತ್ತಮವಾಗಿರಲಿದೆ, ಅಲ್ಲದೆ ದೊಡ್ಡ ಖರ್ಚು ಕೂಡ ಇರಲ್ಲ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











