Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
B ಅಕ್ಷರದಿಂದ ಹೆಸರು ಆರಂಭವಾಗುವವರ ವ್ಯಕ್ತಿತ್ವವೇನು? ಅವರ ಯಶಸ್ಸಿನ ಗುಟ್ಟೇನು.?
ನಿಮ್ಮ ಹೆಸರು ನಿಮ್ಮ ಗುಣಗಳನ್ನು ಹೇಳುತ್ತವೆ. ನಿಮ್ಮ ಹೆಸರಿನ ಮೊದಲ ಅಕ್ಷರದಿಂದಲೇ ನಿಮ್ಮ ವ್ಯಕ್ತಿತ್ವ, ಗುಣ ಏನು ಎಂಬುದನ್ನು ಹೇಳಬಹುದು. ಅದರಲ್ಲೂ ನಿಮ್ಮ ಮುಂದಿನ ಜೀವನ ಹಾಗೂ ಭವಿಷ್ಯದ ಕುರಿತ ಪ್ರತಿಭಿಂಬವಾಗಿರುತ್ತದೆ. ಹಾಗಾದರೆ ನಾವಿಂದು 'ಬ' ಅಥವಾ B ಅಕ್ಷರದಿಂದ ಆರಂಭವಾಗುವ ಹೆಸರಿನ ವ್ಯಕ್ತಿಗಳ ಗುಣ ಹಾಗೂ ವ್ಯಕ್ತಿತ್ವವನ್ನು ನಾವಿಂದು ತಿಳಿದುಕೊಳ್ಳೋಣ.
'ಬಿ' ಅಕ್ಷರದಿಂದ ಆರಂಭವಾಗುವ ಹೆಸರಿನ ವ್ಯಕ್ತಿಗಳ ಗುಣಗಳೇನು?
ಬಿ ಅಕ್ಷರದಿಂದ ಪ್ರಾರಂಭವಾಗುವ ಜನರು ಸಾಹಸ ಮಯ ಪ್ರಜ್ಞೆಯನ್ನು ಹೊಂದಿರುವವರು ಆಗಿದ್ದಾರೆ. ಅವರಲ್ಲಿ ವಿಶೇಷವಾದ ಗುಣಗಳಿವೆ. ಅಲ್ಲ ವಿಚಾರದಲ್ಲೂ ಅವರು ವೈಚಾರಿಕತೆಯನ್ನು ನಂಬುತ್ತಾರೆ. ಸುಲಭಗಾಗಿ ಇತರರಂತೆ ಮೋಸ ಹೋಗುವುದಿಲ್ಲ, ಜೊತೆಗೆ ಹೊಸ ವಿಚಾರಗಳ ತಿಳಿದುಕೊಳ್ಳಲು ಅವರು ಯಾವಾಗಲು ಹಾತೊರೆಯುತ್ತಾರೆ. ಯಾವಾಗಲು ಹೊಸ ಸ್ಥಳಗಳು, ಹೊಸ ವಿಚಾರಗಳು, ಹೊಸ ಉದ್ಯೋಗ ಮಾಡುವತ್ತ ಅವರ ಮನಸ್ಸು ಕೇಂದ್ರೀಕೃತವಾಗಿರುತ್ತದೆ.

ಈ ಹೆಸರಿನ ಜನರು ಅಂತರ್ಮುಖಿಗಳು. ಅವರು ತಮ್ಮ ಆಲೋಚನೆಗಳನ್ನು ತಮ್ಮೊಳಗೆ ಇಟ್ಟುಕೊಳ್ಳುತ್ತಾರೆ. ಶಾಂತ ಸ್ವಭಾವವನ್ನು ಬೆಳೆಸಿಕೊಳ್ಳುತ್ತಾರೆ. ಹೀಗಾಗಿ ಅವರು ಹೆಚ್ಚು ಜನರೊಂದಿಗೆ ಬೆರೆಯಲು ಇಷ್ಟಪಡುವುದಿಲ್ಲ ಆದರೆ ಸಂಖ್ಯ ಹಾಗೂ ಸ್ನೇಹಿತರ ಸಂಪಾದಿಸುತ್ತಾರೆ.
ದಾಂಪತ್ಯ ಜೀವನ ಹೇಗಿರಲಿದೆ?
ಬಿ ಅಕ್ಷರದಿಂದ ಹೆಸರು ಆರಂಭವಾಗುವ ಮಂದಿ ದಾಂಪತ್ಯ ಬದುಕು ಹೆಚ್ಚು ಸುಮುದುರವಾಗಿರುತ್ತದೆ. ಅವರಲ್ಲಿ ಯಾವಾಗಲು ಹೊಂದಾಣಿಕೆ, ಪ್ರೀತಿ, ಅನ್ಯೋನ್ಯತೆ ಕಾಣಬಹುದು. ಆದರೆ ಕೆಲವು ಬಾರಿ ಅತ್ಯಂತ ಬೇಸರ, ಕೋಪ, ಗಲಾಟೆ, ವೈಮನಸ್ಸು ಸಹ ಕಾಡುತ್ತದೆ. ಆದರೆ ಇದು ಶಾಶ್ವತವಾಗಿರುವುದಿಲ್ಲ. ಏಕೆಂದರೆ ಅವರಲ್ಲಿರುವ ಸೌಮ್ಯ ಸ್ವಾಭವವು ಎಂದಿನಂತೆ ಜೀವನ ನಡೆಸುವತ್ತ ಗಮನ ಹರಿಸುತ್ತದೆ. ಇದು ದಾಂಪತ್ಯದಲ್ಲೂ ಮುಂದುವರೆಯುತ್ತದೆ. ಅವರ ಸಂಬಂಧ ಗಾಢವಾಗಿ ಬೇರೂರುವಂತೆ ಮಾಡಿರುತ್ತದೆ.
ಇದಲ್ಲದೆ ದಾಂಪತ್ಯ ಜೀವನದಲ್ಲಿ ಅವರು ತಮ್ಮ ಪ್ರೀತಿ ಪಾತ್ರರ ಆರೋಗ್ಯ ಮತ್ತು ಅವರ ಕಾಳಜಿಗೆ ಹೆಚ್ಚು ಸಮಯ ಕಳೆಯುತ್ತಾರೆ. ಇದರಿಂದ ಅವರಿಗೆ ನೆಮ್ಮದಿ ಸಿಗುತ್ತದೆ. ಬಾಳ ಸಂಗಾತಿಯ ಜೊತೆ ಅವರು ದೀರ್ಘ ಕಾಲ ಕಳೆಯುವ ಕನಸು ಕಂಡಿರುತ್ತಾರೆ.
ಪ್ರೀತಿ ಜೀವನ ಹೇಗಿದೆ?
ಬ ಅಕ್ಷರದಿಂದ ನಿಮ್ಮ ಹೆಸರು ಆರಂಭವಾದರೆ ನಿಮ್ಮ ಪ್ರೇಮ ಜೀವನದಲ್ಲಿ ದೊಡ್ಡ ದೊಡ್ಡ ಸವಾಲು ಎದುರಾಗಬಹುದು. ಆದರೆ ಅಂತ್ಯದಲ್ಲಿ ಈ ಎಲ್ಲಾ ಸವಾಲುಗಳನ್ನೂ ನೀವು ಜಯಿಸುತ್ತೀರಿ. ಅಂದರೆ ನಿಮ್ಮ ಪ್ರೀತಿಯ ಜೀವನ ಸುಖಕರವಾಗಿಯೂ ಹೆಚ್ಚು ಮದುರವಾಗಿಯೂ ಇರಲಿದೆ. ಪ್ರೀತಿಯಲ್ಲಿ ನೀವು ತುಂಬಾ ನಿಷ್ಠಾವಂತರು ಹಾಗೂ ನೇರ ನುಡಿ ಹೊಂದಿದವರು ಆಗಿರುತ್ತಾರೆ. ಪ್ರೀತಿಯನ್ನು ಉಳಿಸಿಕೊಳ್ಳಲು, ಅದನ್ನು ಕಾಪಾಡಲು ಯಾವ ಮಟ್ಟದ ಅಪಾಯವನ್ನಾದರು ತೆಗೆದುಕೊಳ್ಳಲು ಇವರು ಸಿದ್ಧರಿರುತ್ತಾರೆ. ಹೀಗಾಗಿ ಪ್ರೀತಿಯಲ್ಲಿ ಅವರು ಎಂದಿಗೂ ಯಶಸ್ವಿಯಾಗುತ್ತಾರೆ.
ಬಿ ಯಿಂದ ಪ್ರಾರಂಭವಾಗುವ ಹೆಸರನ್ನು ಹೊಂದಿರುವ ಜನರು ಭಾವನಾತ್ಮಕವಾಗಿರುತ್ತಾರೆ ಮತ್ತು ಆದ್ದರಿಂದ ಬೇಗನೆ ಪ್ರೀತಿಯಲ್ಲಿ ಬೀಳುತ್ತಾರೆ. ಆದರೆ ಪ್ರೀತಿಯಲ್ಲಿ ಬೀಳುವ ಮೊದಲು, ಬಹಳ ಎಚ್ಚರಿಕೆ ವಹಿಸಿರುತ್ತಾರೆ. ಅವರ ಪ್ರೀತಿ ಅವರ ನಿರೀಕ್ಷೆಗಳಿಗೆ ತಕ್ಕಂತೆ ಇರದಿದ್ದರೆ, ಒಬ್ಬಂಟಿಯಾಗಲು ಇಚ್ಛಿಸುತ್ತಾರೆ.
ಉದ್ಯೋಗ, ವೃತ್ತಿ
ಬ ಅಕ್ಷರದಿಂದ ಹೆಸರು ಆರಂಭವಾಗುವ ಮಂದಿ ತಮ್ಮ ಉದ್ಯೋಗ ಮತ್ತು ವೃತ್ತಿಯಲ್ಲಿ ಸೃಜನಶೀಲ ವ್ಯಕ್ತಿತ್ವ ಹೊಂದಿರುತ್ತಾರೆ. ಯಾವುದೇ ಅಡೆತಡೆ ಇರಲಿ, ಸಮಸ್ಯೆ ಅವರ ಮುಂದಿರಲಿ ಅದನ್ನು ಸುಲಭವಾಗಿ ಪರಿಹರಿಸುತ್ತಾರೆ. ಉದ್ಯೋಗ ರಂಗದಲ್ಲಿ ಅವರದ್ದು ಏರಿಕೆಯ ಮನಸ್ಥಿತಿಯಾಗಿರುತ್ತದೆ. ತಮ್ಮ ವೃತ್ತಿಗೆ ನ್ಯಾಯ ಒದಗಿಸುವುದು ಅವರ ಮೊದಲ ಆಧ್ಯತೆಯಾಗಿರಲಿದೆ. ಅವರಲ್ಲಿ ಬದ್ಧತೆ ಇರಲಿದೆ. ಈ ಕೆಲಸ ಮಾಡಿ ಮುಗಿಸಬೇಕು ಎಂದುಕೊಂಡರೆ ಅದನ್ನು ಮಾಡಿಯೇ ತೀರುತ್ತಾರೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications


