Latest Updates
-
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ?
'K' ಅಕ್ಷರದ ಹೆಸರಿನವರಿಗೆ ವಿವಾಹದ ಬಳಿಕ ಶುಭಯೋಗ..! ವ್ಯಕ್ತಿತ್ವದ ಬಗ್ಗೆ ಸಂಖ್ಯಾಶಾಸ್ತ್ರ ಹೇಳೋದೇನು.?
ವ್ಯಕ್ತಿಯೊಬ್ಬನ ಹೆಸರು ಆತನ ವ್ಯಕ್ತಿತ್ವಕ್ಕೆ ಹಿಡಿದಿರುವ ಕನ್ನಡಿಯಾಗಿರುತ್ತೆ. ಅಂದ್ರೆ ನಿಮ್ಮ ಹೆಸರಿನ ಮೊದಲ ಅಕ್ಷರ ನಿಮ್ಮ ಗುಣ-ನಡತೆಯ ಪ್ರತಿಬಿಂಬವಾಗಿರುತ್ತದೆ. ಹಿಂದೂ ಧರ್ಮಗ್ರಂಥಗಳ ಪ್ರಕಾರ ನಿಮ್ಮ ಹೆಸರಿಗೂ ನಿಮ್ಮ ಜೀವನದಲ್ಲಿ ನಡೆಯುವ ಬಹುಪಾಲು ಆಗು ಹೋಗುಗಳಿಗೂ ಅವಿನಾಭಾವ ಸಂಬಂಧವಿದೆ.
ಜನರು ತಮ್ಮ ಮಗುವಿನ ಜನನದ ಸಮಯದಲ್ಲಿ ಮತ್ತು ನಾಮಕರಣಕ್ಕಾಗಿ ಹಲವು ರೀತಿಯ ಹೆಸರುಗಳ ನೋಡುತ್ತಾರೆ. ಮಗು ಜನಿಸಿದ ವಾರ, ತಿಥಿ, ದಿನ, ಗಳಿಗೆಯ ಪ್ರಕಾರವೇ ಹೆಸರನ್ನು ಇಡುವ ಸಂಪ್ರದಾಯ ಇಂದಿಗೂ ನಡೆದುಕೊಂಡು ಬಂದಿದೆ. ಹಾಗಾದರೆ ನಾವಿಂದು ಕ ಅಥವಾ K ಅಕ್ಷರದಿಂದ ನಿಮ್ಮ ಹೆಸರು ಆರಂಭವಾಗುವುದಾದರೆ, ಆ ವ್ಯಕ್ತಿಗಳ ವ್ಯಕ್ತಿತ್ವ ಎಂತಹದ್ದು, ಗುಣಗಳೇನು ಎಂಬುದನ್ನು ತಿಳಿದುಕೊಳ್ಳೋಣ.

ಕ ಅಕ್ಷರದಿಂದ ಹೆಸರು ಆರಂಭವಾಗುವ ಜನರು ಎಲ್ಲಾ ವಿಚಾರದಲ್ಲು ಸದಾ ಮುಂದಿರುತ್ತಾರೆ. ಸ್ವಂತಿಕೆ ಎಂಬುದಕ್ಕೆ ಬಹಳ ಪ್ರಾಮುಖ್ಯತೆ ನೀಡುತ್ತಾರೆ. ತಮ್ಮ ಕೆಲಸವನ್ನು ಸರಿಯಾದ ಸಮಯಕ್ಕೆ ಮುಗಿಸುವ ದಾವಂತ ಅವರದ್ದಾಗಿರುತ್ತದೆ. ಯಶಸ್ಸಿಗಾಗಿ ಎಂತಹ ಕಷ್ಟದ ಕೆಲಸವಿರಲಿ ಇಲ್ಲವೆ ಎಂತಹ ಸಾಹಸಕ್ಕಾದರು ಅವರು ತಯಾರಿರುತ್ತಾರೆ.
ಸಾಮಾನ್ಯವಾಗಿ ಕ ಅಕ್ಷರದಿಂದ ಹೆಸರು ಆರಂಭವಾಗುವ ಮಂದಿ ಯಾವಾಗಲು ಶಾಂತಿ ಬಯಸುತ್ತಾರೆ. ಆದರೆ ಕಠಿಣವಾದ ನಿಯಮಗಳ ಹಾಕಿಕೊಂಡಿರುತ್ತಾರೆ. ಅವರ ಸುತ್ತ ಎಂತಹ ಜನರು ಇರಬೇಕು ಎಂಬುದನ್ನು ನಿರ್ಧರಿಸುತ್ತಾರೆ. ಕುಟುಂಬ, ಮನೆ, ಆಸ್ತಿ ಸಂಪ್ರದಾಯಗಳ ಮೇಲೆ ಪ್ರಾಣವಿಟ್ಟುರುತ್ತಾರೆ.
ಇವರಲ್ಲಿ ನಾಯಕತ್ವದ ಗುಣವಿರುತ್ತದೆ. ರಾಜಕೀಯವಾಗಿ ಅತ್ಯುತ್ತಮ ರೀತಿಯ ಅವಕಾಶಗಳು ಇವರಿಗೆ ಒಲಿಯಬಹುದು. ಜೊತೆಗೆ ಶಿಕ್ಷಣದ ವಿಚಾರದಲ್ಲಿ ಸ್ವಲ್ಪ ಹಿಂದೆ ಬಿದ್ದರೂ ಲೋಕಜ್ಞಾನದಲ್ಲಿ ಇವರನ್ನು ಮೀರಿಸುವುದು ಕಷ್ಟವಾಗಬಹುದು.
ಕ ಅಕ್ಷರದ ಹೆಸರಿನವರ ವಿವಾಹ ಜೀವನ ಹೇಗಿದೆ.?
ಕ ಅಕ್ಷರದಿಂದ ಹೆಸರು ಆರಂಭವಾಗುವ ಮಂದಿ ವಿವಾಹ ಜೀವನದಲ್ಲಿ ಸುಖ ಕಾಣುತ್ತಾರೆ. ವಿವಾಹದ ಬಳಿಕ ಅವರ ಜೀವನದಲ್ಲಿ ಮಹತ್ತರ ಬದಲಾವಣೆಗಳಾಗುತ್ತವೆ. ಎಲ್ಲಿಲ್ಲದ ಅಭಿವೃದ್ಧಿ, ಹಣ ಸಂಪಾದನೆ, ನೆಮ್ಮದಿ ಅವರಿಗೆ ವಿವಾಹದ ಬಳಿಕವೇ ಸಿಗುತ್ತದೆ. ತಮ್ಮ ಜೊತೆಗಾರರಲ್ಲಿ ಅವರು ಅತ್ಯಂತ ಸಂತೋಷದ ದಿನಗಳ ಕಳೆಯುತ್ತಾರೆ. ಹಾಗೆ ಇಡೀ ಕುಟುಂಬದಲ್ಲಿ ಅವರೊಂದು ಆದರ್ಶದಂತಿರುತ್ತಾರೆ. ಆದರೆ ವಿವಾಹಕ್ಕೂ ಮುನ್ನ ಪ್ರಿತಿಯ ವಿಚಾರದಲ್ಲಿ ಅವರಿಗೆ ಯಶಸ್ಸು ಕಡಿಮೆ. ಅಲ್ಲಿ ಸೋಲಿನ ಬಳಿಕ ಅವರಲ್ಲಿ ವಿವಾಹದ ಕಡೆ ಹೆಚ್ಚು ಒಲವು ಮೂಡಿರುತ್ತದೆ. ಆದರೆ ಪ್ರೀತಿಯಲ್ಲಿ ಅವರಿಗೆ ಯಶಸ್ಸು ಸಿಗುವುದು ಕಷ್ಟ. ಇನ್ನು ಪ್ರೀತಿ ಪಾತ್ರರ ಬಳಿ ಅವರ ಪ್ರೇಮ ಯಾವ ಫಲಾಪೇಕ್ಷೆಯಿಲ್ಲದೆ ಮಾಡುತ್ತಾರೆ. ನಿಷ್ಟಾವಂತರಾಗಿರುತ್ತಾರೆ, ಆದರೆ ಅದನ್ನು ಉಳಿಸಿಕೊಳ್ಳುವುದು ಅವರಿಗೆ ಕಷ್ಟವಾಗಬಹುದು.
2024ರಲ್ಲಿ ನಿಮ್ಮ ಸಂಗಾತಿಯೊಂದಿಗೆ ನೀವು ಕೆಲವು ಮಂಗಳಕರ ಕುಟುಂಬ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೀರಿ, ಅದನ್ನು ಮುಕ್ತವಾಗಿ ಆನಂದಿಸಿ ಮತ್ತು ನಿಮ್ಮ ಸಂಬಂಧವು ಮತ್ತಷ್ಟು ಬಲಗೊಳ್ಳುತ್ತದೆ. ಈ ವರ್ಷದ ಜನವರಿಯಿಂದ ಏಪ್ರಿಲ್ ವರೆಗೆ, ನಿಮ್ಮ ಸಂಗಾತಿಯೊಂದಿಗೆ ನೀವು ಸಮನ್ವಯವನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಆದಾಗ್ಯೂ, ಇದರ ನಂತರದ ಸಮಯವು ಸಂಬಂಧಗಳಿಗೆ ಅನುಕೂಲಕರವಾಗಿರುತ್ತದೆ. ನೀವು ಹೊಸ ಸಂಬಂಧವನ್ನು ಪ್ರಾರಂಭಿಸಲು ಬಯಸಿದರೆ ವರ್ಷದ ಜುಲೈ ಬಳಿಕ ಅತ್ಯುತ್ತಮ ಸಮಯವಾಗಿದೆ.
ಉದ್ಯೋಗ ಮತ್ತು ವೃತ್ತಿ
ಕ ಅಕ್ಷರದಿಂದ ಹೆಸರು ಆರಂಭವಾಗುವ ಮಂದಿ ಉದ್ಯೋಗದಲ್ಲಿಯೂ ಗೆಲುವು ಪಡೆಯುತ್ತಾರೆ. ಈ ಹೆಸರಿನ ವ್ಯಕ್ತಿಗಳಿಗೆ ಸರ್ಕಾರಿ ಉದ್ಯೋಗ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ. ಖಾಸಗಿ ಕೆಲಸಗಳು ಸಹ ಇವರನ್ನು ಹುಡುಕಿ ಬರುತ್ತದೆ. ಆದರೆ ಕೆಲವು ಬಾರಿ ಅವರು ಆಯ್ಕೆ ಮಾಡಿಕೊಳ್ಳುವಲ್ಲಿ ಯಡುವಿರುತ್ತಾರೆ. ಇನ್ನು ಕಚೇರಿ ಕೆಲಸಗಳಲ್ಲಿ ಅವರನ್ನು ಮೀರಿಸುವವರು ಇರುವುದಿಲ್ಲ. ಹೆಚ್ಚು ಶ್ರಮ, ನಿಷ್ಟೆ, ಪ್ರಮಾಣಿಕವಾಗಿ ಅವರು ಕೆಲಸ ಮಾಡುತ್ತಾರೆ. ಆದ್ರೆ ಬಡ್ತಿ, ವೇತನ ಹೆಚ್ಚಳದಂತಹ ಕಾರ್ಯದಲ್ಲಿ ಅವರು ತೊಡಕು ಎದುರಿಸುತ್ತಾರೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











