Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
'J' ಹೆಸರಿನವರು ಈ ವರ್ಷ ಅಂದುಕೊಂಡಿದ್ದೆಲ್ಲಾ ಸಾಧಿಸಬಹುದು..! ಅವರ ವ್ಯಕ್ತಿತ್ವ-ಗುಣ ಏನು ಹೇಳುತ್ತೆ..?
ನಮ್ಮ ಹೆಸರು ಸಹ ನಮ್ಮ ಭವಿಷ್ಯ ರೂಪಿಸಲು ಹಾಗೂ ನಮ್ಮ ನಡುವಳಿಕೆಯ ಕೇಂದ್ರಬಿಂದುವಾಗಿದೆ. ಹೆಸರಿನ ಮೊದಲ ಅಕ್ಷರವು ನಮ್ಮ ನಡುವಳಿಕ, ವ್ಯಕ್ತಿತ್ವ, ಜೀವನ ಹಾಗೂ ಗುಣದ ಪ್ರತಿರೂಪವಾಗಿರುತ್ತದೆ. ನಮ್ಮ ಇಡೀ ಜೀವನದ ಸಾರ ಈ ಹೆಸರಿನ ಮೊದಲ ಅಕ್ಷರದಲ್ಲಿ ಅಡಗಿದೆ. ಹಾಗಾದರೆ ನಮ್ಮ ಹೆಸರಿನ ಮೊದಲ ಅಕ್ಷರ ನಮ್ಮ ಭವಿಷ್ಯ ಕುರಿತು ಏನು ಹೇಳುತ್ತವೆ.
ಸಂಖ್ಯಾಶಾಸ್ತ್ರದ ಪ್ರಕಾರ ನಮ್ಮ ಹೆಸರಿಗೂ ನಮ್ಮ ನಡುವಳಿಕೆ, ಗುಣಕ್ಕೂ ನೇರನೇರ ಸಂಬಂಧವಿದೆ. ಹಾಗಾದರೆ ನಾವಿಂದು 2024ರಲ್ಲಿ 'J' ಅಥವಾ 'ಜ' ಅಕ್ಷರದಿಂದ ಆರಂಭವಾಗುವ ಹೆಸರಿನ ವ್ಯಕ್ತಿಗಳ ಗುಣಗಳೇನು? ಅವರ ದಾಂಪತ್ಯ ಜೀವನ ಹೇಗಿರಲಿದೆ? ಅವರ ಪ್ರೇಮ ಜೀವನ ಹೇಗಿದೆ ಎಂಬುದನ್ನು ತಿಳಿದುಕೊಳ್ಳೋಣ.

ಮೊದಲನೆಯದಾಗಿ, ನಾವು ವ್ಯಕ್ತಿತ್ವದ ಬಗ್ಗೆ ಹೇಳುವುದಾದರೆ, ಸಂಖ್ಯಾಶಾಸ್ತ್ರದ ಪ್ರಕಾರ, 'J' ಅನ್ನು ಸಂಖ್ಯೆ 1 ರಿಂದ ಪರಿಗಣಿಸಲಾಗುತ್ತದೆ. ಸೂರ್ಯನನ್ನು ನಂಬರ್ ಒನ್ ಗ್ರಹ ಎಂದು ಪರಿಗಣಿಸಿದಂತೆ, ಉತ್ತರಾಷಾಢ ನಕ್ಷತ್ರದವರು ಜ ಅಕ್ಷರದ ಜನರಾಗಿದ್ದಾರೆ. ಅವರಿಗೆ ಉತ್ತರ ದಿಕ್ಕು ಶುಭ ದಿಕ್ಕು ಎಂದು ಹೇಳಲಾಗಿದೆ. ಅವರು ಯಾವಾಗಲು ಒಂದು ಹೆಜ್ಜೆ ಮುಂದೆ ಇರಲು ಬಯಸುತ್ತಾರೆ. ಇದಕ್ಕಾಗಿ ಎಂತಹ ಹೋರಾಟ, ಸಾಹಸಕ್ಕೂ ತಯಾರಿರುತ್ತಾರೆ.
ನಾಯಕತ್ವ ಗುಣ ಅವರಲ್ಲಿದ್ದು, ಬೇರೆಯವರ ಮಾತಿಗಿಂತಲೂ ತಮ್ಮದೇ ಮಾತಿನಲ್ಲಿ ಹೆಚ್ಚು ನಂಬಿಕೆ ಇಡುತ್ತಾರೆ. ಜೊತೆಗೆ ಎಲ್ಲಾ ಕಾರ್ಯವನ್ನೂ ಮುನ್ನುಗ್ಗಿ ಮಾಡುತ್ತಾರೆ. ಫಲಿತಾಂಶದ ಕಡೆಗೆ ಹೆಚ್ಚು ತಲೆ ಕೆಡಿಸಿಕೊಳ್ಳುವವರಲ್ಲ, ಆದರೆ ಎಲ್ಲದರಲ್ಲೂ ಗೆಲವು ಪಡೆಯುವುದು ಅವರಿಗೆ ಸಾಮಾನ್ಯ ಎನ್ನವಂತಾಗಿರುತ್ತದೆ. ಅಚ್ಚರಿ ಎಂದರೆ ಜ ಅಕ್ಷರದ ಹೆಸರೇ ತುಂಬ ಅದೃಷ್ಟವಂತೆ. ಅವರಲ್ಲಿ ಸೋಲಿಗಿಂತಲೂ ಗೆಲುವು ಜಾಸ್ತಿ, ಜಯ ಅವರ ಪ್ರತಿಬಿಂಬವಾಗಿರುತ್ತದೆ.
ಕಠಿಣ ಸಮಯದಲ್ಲಿ ಯಾವ ರೀತಿ ಜಯಿಸಬೇಕು ಎಂಬುದನ್ನು ಅವರು ತಿಳಿದಿರುತ್ತಾರೆ, ಎಂತಹ ಸಂದರ್ಭದಲ್ಲೂ ವಿಚಿಲಿತರಾಗದೆ ಹಿಡಿದ ಪಟ್ಟು ಬಿಡದ ಮನೋಭಾವದವರು. ಜೆ ಅಕ್ಷರವನ್ನು ಹೊಂದಿರುವ ಜನರು ಯಾವಾಗಲೂ ಸಂತೋಷವಾಗಿರುತ್ತಾರೆ, ಅವರ ಸುತ್ತಲಿನ ಪರಿಸರವನ್ನು ಸಂತೋಷವಾಗಿರಿಸಿಕೊಳ್ಳುತ್ತಾರೆ ಮತ್ತು ತುಂಬಾ ಧನಾತ್ಮಕ ಶಕ್ತಿಯನ್ನು ಹೊಂದಿರುತ್ತಾರೆ. ಅವರ ಮನೋಬಲವನ್ನು ಕುಗ್ಗಿಸುವುದು ಬಹಳ ಕಷ್ಟದ ಕೆಲಸ. ಎಲ್ಲಿಯಾದರು ಅನ್ಯಾಯವಾಗಿತ್ತಿದೆ ಎಂದು ತಿಳಿದರೆ ಅವರು ಪ್ರತಿಭಟಿಸುತ್ತಾರೆ. ಇಲ್ಲಿಯು ನಾಯಕತ್ವದ ಗುಣಗಳು ಅವರಲ್ಲಿರುತ್ತದೆ.
ಜೆ ಹೆಸರಿನವರ ದಾಂಪತ್ಯ ಜೀವನ
2024ರಲ್ಲಿ ಅವರ ದಾಂಪತ್ಯವು ಸುಮಾರಾಗಿದೆ. ಏಕೆಂದರೆ ಅವರಲ್ಲಿ ಆರ್ಥಿಕ ಪರಿಸ್ಥಿತಿ ಇನ್ನಷ್ಟೇ ಸುಧಾರಣೆಯಾಗುತ್ತಿದೆ. ಹೀಗಾಗಿ ದಾಂಪತ್ಯದಲ್ಲೂ ಅವರು ಸುಧಾರಣೆ ಕಾಣುತ್ತಾರೆ. ಆದರೆ ಪ್ರೀತಿಯಲ್ಲಿ ಯಾವ ಕಡಿಮೆಯೂ ಇರದಂತೆ ಅವರು ಬಾಳುತ್ತಾರೆ. ತಮ್ಮ ಪ್ರೀತಿ ಪಾತ್ರರೊಂದಿಗಿನ ಸಂಬಂಧ ಮತ್ತಷ್ಟು ಬಲಗೊಳ್ಳುತ್ತದೆ. ಕೆಲವು ಬಾರಿ ಅನಿರೀಕ್ಷಿತ ಬೆಳವಣಿಗೆಗಳು ನಿಮಗೆ ಅಚ್ಚರಿ ತರಬಹುದು.
ವೃತ್ತಿ ಜೀವನ ಹೇಗಿದೆ?
ಈ ಹೆಸರಿನ ವ್ಯಕ್ತಿಗಳಲ್ಲಿ 2024 ಅತ್ಯುತ್ತಮ ವರ್ಷವಾಗಲಿದೆ. ಹೊಸ ಹೊಸ ಉದ್ಯಮ, ವೃತ್ತಿ ಆರಂಭಕ್ಕೆ ಇದು ಶುಭ ಗಳಿಗೆಯಾಗಲಿದೆ. ಇದನ್ನು ಹೊರತುಪಡಿಸಿ ವರ್ಷದ ಕೊನೆಯಲ್ಲಿ ವೃತ್ತಿಯಲ್ಲಿ ಗೊಂದಲ ಏರ್ಪಡಬಹುದು. ಆದರೆ ಇದಕ್ಕೂ ನಿಮ್ಮ ಬಳಿಯೇ ಪರಿಹಾರ ಕಂಡುಕೊಳ್ಳುತ್ತೀರಿ. ಬಡ್ತಿ, ವೃತ್ತಿ ಬದಲಾವಣೆ, ಕೆಲಸದಲ್ಲಿ ಲಾಭ ಹೀಗೆ ಹಲವು ರೀತಿ ಅನುಕೂಲ ನೀವು ಪಡೆಯುತ್ತೀರಿ.
ಪ್ರೀತಿ ಜೀವನದಲ್ಲಿ ಏನಿದೆ?
ಈ ವರ್ಷ ನಿಮ್ಮ ಪ್ರೀತಿಯ ಸಂಬಂಧವನ್ನು ಹೆಚ್ಚಿಸುವಲ್ಲಿ ಮತ್ತು ಬಲಪಡಿಸುವಲ್ಲಿ ನೀವು ಯಶಸ್ಸನ್ನು ಸಾಧಿಸುವಿರಿ. ನಿಮ್ಮ ಪ್ರೀತಿಯ ಜೀವನದಲ್ಲಿ ನಡೆಯುತ್ತಿರುವ ಪ್ರತಿಯೊಂದು ಸಮಸ್ಯೆಯನ್ನು ಪರಿಹರಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ನಿಮ್ಮ ಸಂಗಾತಿ ನಿಮ್ಮಿಂದ ಏನನ್ನು ನಿರೀಕ್ಷಿಸುತ್ತಾರೋ ಅದನ್ನು ಪೂರೈಸಲು ನಿಮಗೆ ಸಾಧ್ಯವಾಗುತ್ತದೆ. ಜನವರಿಯಿಂದ ಏಪ್ರಿಲ್ ವರೆಗೆ, ನೀವು ನಿಮ್ಮ ಸಂಗಾತಿಯೊಂದಿಗೆ ಕೆಲವು ಶುಭ ಸಮಾರಂಭಗಳಲ್ಲಿ ಭಾಗವಹಿಸಬಹುದು.
ಮೇ ನಿಂದ ನವೆಂಬರ್ ನಡುವೆ ಪ್ರೇಮ ಜೀವನದಲ್ಲಿ ಸ್ವಲ್ಪ ವಿರಸ ಏರ್ಪಡಬಹುದು. ಈ ಸಮಯದಲ್ಲಿ, ನಿಮ್ಮ ಸಂಬಂಧದಲ್ಲಿ ತಿಳುವಳಿಕೆಯ ಕೊರತೆಯೂ ಕಂಡುಬರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಈ ಸಮಯದಲ್ಲಿ ತಾಳ್ಮೆಯಿಂದಿರಿ ಮತ್ತು ಸಂಬಂಧದಲ್ಲಿ ಸಾಮರಸ್ಯವನ್ನು ಕಾಪಾಡಿಕೊಳ್ಳಲು ನಿಮಗೆ ಸಲಹೆ ನೀಡಲಾಗುತ್ತಿದೆ. ಅಗತ್ಯವಿದ್ದರೆ ಹೊಂದಾಣಿಕೆಗಳನ್ನು ಮಾಡಿ ಆದರೆ ನಿಮ್ಮ ಸಂಬಂಧವನ್ನು ಗಟ್ಟಿಯಾಗಿರಿಸಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











