Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕರ್ಕ ರಾಶಿಫಲ 2026: ಈ ವರ್ಷ ಕರ್ಕ ರಾಶಿಯವರಿಗೆ ಏನೆಲ್ಲಾ ಶುಭವಿದೆ?
2025ರಲ್ಲಿ ಕರ್ಕ ರಾಶಿಯವರಿಗೆ ಹಲವು ರೀತಿಯ ಶುಭ ಹಾಗೂ ಅಶುಭ ಯೋಗಗಳು ಉಂಟಾಗಿರುವುದು ಗಮನಿಸಿರಬಹುದು. ಹಾಗೆ 2026ರಲ್ಲಿ ಕರ್ಕಾಟಕ ರಾಶಿ ಜನರಿಗೆ ಅದೃಷ್ಟಗಳ ತರಬಹುದು. ನಿಮ್ಮ ರಾಶಿಯು 2026ರಲ್ಲಿ ದೊಡ್ಡ ಲಾಭಗಳ ನೋಡಬಹುದು. 2026 ರ ಭವಿಷ್ಯವಾಣಿಗಳು ಈ ವರ್ಷವು ನಿಮಗೆ ಒಟ್ಟಾರೆಯಾಗಿ ಉತ್ತಮವಾಗಿರುತ್ತದೆ.
ಕರ್ಕ ರಾಶಿಯವರಲ್ಲಿ 2026ರ ಸಮಯದಲ್ಲಿ ಗುರುವು ಜೂನ್ ನಿಂದ ಅಕ್ಟೋಬರ್ ವರೆಗೆ ಚಲಿಸುತ್ತಾನೆ. ಆದರೆ ರಾಹು ವರ್ಷವಿಡೀ ಎಂಟನೇ ಮನೆಯಲ್ಲಿರುತ್ತಾನೆ. ಪರಿಣಾಮವಾಗಿ ಈ ವರ್ಷ ನಿಮ್ಮ ಜೀವನದಲ್ಲಿ ಹಲವು ರೀತಿಯ ಬದಲಾವಣೆಗಳ ನೋಡಬಹುದು. ಪ್ರಗತಿ, ಮಾನಸಿಕ ಸ್ಪಷ್ಟತೆ, ಆರ್ಥಿಕ ಲಾಭ, ಕೌಟುಂಬಿಕ ನೆಮ್ಮದಿಯಂತಹ ವಿಚಾರಗಳಲ್ಲಿ ಯಾವ ರೀತಿ ಫಲವಿದೆ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.

2026ರಲ್ಲಿ ಕರ್ಕ ರಾಶಿಯವರ ಭವಿಷ್ಯ
ಕರ್ಕಾಟಕ ರಾಶಿಯವರಿಗೆ 2026 ವರ್ಷವು ವೃತ್ತಿ ಮತ್ತು ವ್ಯವಹಾರದ ವಿಷಯದಲ್ಲಿ ಬೆಳವಣಿಗೆ ಮತ್ತು ಪ್ರಗತಿಯನ್ನು ಸೂಚಿಸುತ್ತದೆ. ಈ ವರ್ಷ ನಿಮ್ಮ ಹಲವು ಕೆಲಸಗಳನ್ನು ಗುರುವಿನ ಆಶೀರ್ವಾದದ ಪರಿಣಾಮವಾಗಿ ಯಶಸ್ವಿಯಾಗಿ ಮಾಡಿ ಮುಗಿಸುವಿರಿ. ವರ್ಷದ ಆರಂಭದಲ್ಲಿ ಕೆಲವು ಗೊಂದಲಗಳು ಮತ್ತು ತೊಂದರೆಗಳು ಇರುತ್ತವೆ, ಆದರೆ ವರ್ಷದ ತ್ರೈಮಾಸಿಕದ ನಂತರ ಹಲವು ವಿಷಯಗಳು ನಿಮ್ಮ ಲಾಭವಾಗಿ ಪರಿವರ್ತನೆಯಾಗುತ್ತದೆ.
ಕೆಲಸದಲ್ಲಿನ ಸಂದರ್ಭಗಳು ಕೆಲವೊಮ್ಮೆ ಸವಾಲಿನದ್ದಾಗಿ ಕಾಣಿಸಬಹುದು, ಆದರೆ ನಿಮ್ಮ ಶಾಂತ ಸ್ವಭಾವ ಮತ್ತು ಜವಾಬ್ದಾರಿಯನ್ನು ನಿರ್ವಹಿಸುವ ಸಾಮರ್ಥ್ಯವು ಎಲ್ಲವನ್ನೂ ಸುಲಭಗೊಳಿಸುತ್ತದೆ. ನೀವು ಉದ್ಯೋಗದಲ್ಲಿದ್ದರೆ ಹೊಸ ಜವಾಬ್ದಾರಿಗಳು ನಿಮಗೆ ಒಲಿಯಲಿವೆ. ನಿಮ್ಮ ಕಠಿಣ ಒರಿಶ್ರಮಗಳು ಈ ವರ್ಷ ಉತ್ತಮ ಪ್ರತಿ ಫಲ ತರಲಿದೆ.
ಆರೋಗ್ಯ ಮತ್ತು ಐಷಾರಾಮಿ ಜೀವನ
2026ರಲ್ಲಿ ಕರ್ಕ ರಾಶಿಯವರ ಆರೋಗ್ಯದ ವಿಚಾರದಲ್ಲಿ ಮಿಶ್ರಫಲವಿದೆ. ವರ್ಷದ ಆರಂಭದಲ್ಲಿ ನಿಮ್ಮ ಆರೋಗ್ಯ ನೆಮ್ಮದಿಯಿಂದ ಕೂಡಿರಲಿದೆ. ಆದ್ರೆ ವರ್ಷದ ಮಧ್ಯದಲ್ಲಿ ನಿಮ್ಮ ಆರೋಗ್ಯದಲ್ಲಿ ಏರುಪೇರು ನೋಡಬಹುದು. ಹಾಗೆ ನಿಮ್ಮ ಆದಾಯ ಸಂಬಂಧಿತ ವಿಚಾರದಲ್ಲಿ ಐಷಾರಾಮಿ ಜೀವನಕ್ಕೆ ಸಂಬಂಧಿಸಿದ ವಸ್ತುಗಳ ನೀವು ಪಡೆಯಬಹುದು.
ಈ ವರ್ಷ ಪ್ರೀತಿ ಮತ್ತು ಕುಟುಂಬ ಸಂಬಂಧಗಳ ವಿಷಯದಲ್ಲಿ ಕರ್ಕ ರಾಶಿಯವರಿಗೆ ಅನುಕೂಲಕರವಾಗಿರುತ್ತದೆ. ನಿಮ್ಮ ಭಾವನಾತ್ಮಕ ಸಂಪರ್ಕಗಳು ಬಲಗೊಳ್ಳುತ್ತವೆ ಮತ್ತು ಆಳವಾಗುತ್ತವೆ. ಅದ್ರಲ್ಲೂ ಅವಿವಾಹಿತರು ಈ ವರ್ಷ ಅನುಕೂಲಕರ ಸಂಬಂಧವನ್ನು ಪಡೆಯಬಹುದು. ನಿಮ್ಮ ತಂದೆ ತಾಯಿಯೊಂದಿಗಿನ ಸಂಬಂಧಗಳು ಗಟ್ಟಿಯಾಗುತ್ತದೆ. ಮನೆಯಲ್ಲಿ ನಿಮ್ಮ ಅಭಿವ್ಯಕ್ತಿ ಸ್ವಾತಂತ್ರ ಹಾಗೆ ನಿಮ್ಮ ಮಾತುಗಳಿಗೆ ಈ ವರ್ಷ ಬೆಂಬಲ ಸಿಗಲಿದೆ. ಹಲವು ಕೆಲಸಗಳಲ್ಲಿ ಮನೆಯ ಸದಸ್ಯರು ನಿಮಗೆ ಬೆಂಬಲವಾಗಿ ನಿಲ್ಲಲಿದ್ದಾರೆ.
2026 ರಲ್ಲಿನ ಗ್ರಹಗಳ ಸಂಯೋಗದಿಂದ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಹಾಗೆ ನಿಮ್ಮ ಹಲವು ಕನಸುಗಳನ್ನು ಈ ವರ್ಷ ಈಡೇರಿಸಿಕೊಳ್ಳಬಹುದು. ನಿಮ್ಮ ಆರ್ಥಿಕ ಪ್ರಗತಿಗೆ ಕಾರಣವಾಗುವಂತಹ ಆದಾಯಕ್ಕೆ ನೀವು ಹತ್ತಿರವಾಗುತ್ತೀರಿ. ಆಪ್ತರೊಬ್ಬರಿಂದ ನಿಮ್ಮ ಸಾಲ ಮರುಪಾವತಿಯಾಗಲಿದೆ. ಹಾಗೆ ದೊಡ್ಡ ವ್ಯವಹಾರದಲ್ಲಿನ ಅಡ್ಡಿಗಳು ಈ ವರ್ಷ ನಿವಾರಣೆಯಾಗಬಹುದು.
ಇನ್ನು ವ್ಯಾಪಾರದಲ್ಲಿ ಈ ವರ್ಷದ ಆರಂಭದಲ್ಲಿ ನೆಮ್ಮದಿ ಇರಲಿದೆ. ಆದ್ರೆ ವರ್ಷದ ಕೊನೆಯ 3 ತಿಂಗಳುಗಳು ನಿಮಗೆ ದೊಡ್ಡ ಹೊಡೆತ ನೀಡಬಹುದು. ಹಾಗೆ ಹೊಸ ಆದಾಯ ಮೂಲಗಳಿಂದ ನಿಮಗೆ ಬರುವ ಹಣದ ಪ್ರಮಾಣದಲ್ಲಿ ಇಳಿಕೆ ನೋಡಬಹುದು. ಇನ್ನು ಪಾಲುದಾರಿಕೆ ವ್ಯವಹಾರಗಳು ಸಾಮಾನ್ಯವಾಗಿರಲಿದೆ. ಇದು ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಯಾವುದೇ ಬದಲಾವಣೆ ತರುವುದಿಲ್ಲ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications



