Latest Updates
-
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು?
Budhaditya Rajyoga: ನವರಾತ್ರಿಯಲ್ಲಿ ಬುಧಾದಿತ್ಯ ಯೋಗದಿಂದ ಯಾರಿಗೆಲ್ಲಾ ಶುಭಯೋಗ!
Budhaditya Rajyoga: ವೈದಿಕ ಶಾಸ್ತ್ರದಲ್ಲಿ ಗ್ರಹಗಳ ಚಲನೆಯನ್ನು ಬಹಳ ಪ್ರಮುಖ ವಿದ್ಯಮಾನವಾಗಿ ನೋಡಲಾಗುತ್ತದೆ. ಅದ್ರಲ್ಲೂ ಕೆಲವೊದು ಗ್ರಹಗಳ ಚಲನೆಯನ್ನು ಶುಭ ಹಾಗೂ ಅಶುಭ ಕಾರಕವಾಗಿಯೂ ನೋಡಲಾಗಿದೆ. ಇನ್ನು ಈ ಗ್ರಹಗಳು ನಿರ್ಧಿಷ್ಟ ಸಮಯದಲ್ಲಿ ರಾಶಿಗಳ ಬದಲಾಯಿಸುತ್ತವೆ. ಹಾಗೆ ಈ ಸಮಯದಲ್ಲೇ ಒಂದು ಗ್ರಹವು ಮತ್ತೊಂದು ಗ್ರಹದೊಂದಿಗೆ ಸಂಯೋಗವಾಗುವುದು ಕೂಡ ನೋಡಬಹುದು.
ಹೀಗೆ ಎರಡು ಗ್ರಹಗಳ ಸಂಯೋಗವು ಅಪರೂಪದ ಯೋಗಗಳಿಗೂ ಕಾರಣವಾಗಲಿವೆ. ಸದ್ಯ ಈಗ ಬುಧನ ಸಂಚಾರವು ಬುಧಾದಿತ್ಯ ಯೋಗ ರೂಪಿಸುತ್ತಿದೆ. ಬುಧ ಹಾಗು ಆದಿ ಅಂದರೆ ಸೂರ್ಯನ ಸಂಯೋಗವು ಈ ಅಪರೂಪದ ಹಾಗೆ ಶಕ್ತಿಶಾಲಿಯಾದ ಯೋಗ ರೂಪುಗೊಳ್ಳಲು ಕಾರಣವಾಗಲಿದ್ದಾರೆ. ಈ ರಾಜಯೋಗವು ವ್ಯಕ್ತಿಯ ಜಾತಕದಲ್ಲಿ ರೂಪುಗೊಂಡಾಗ, ಅವರ ಜೀವನದಲ್ಲಿ ಯಾವುದೇ ಸಂಪತ್ತು ಮತ್ತು ಸೌಕರ್ಯಗಳ ಅನುಭವಿಸುತ್ತೀರಿ.

ಈ ಯೋಗವು ಅಕ್ಟೋಬರ್ ತಿಂಗಳಲ್ಲಿ ತುಲಾ ರಾಶಿಯಲ್ಲಿ ರೂಪುಗೊಳ್ಳಲಿದೆ. ಸೂರ್ಯ ಮತ್ತು ಬುಧ ಇಬ್ಬರೂ ತುಲಾ ರಾಶಿಯಲ್ಲಿದ್ದಾಗ. ಇದರ ಪರಿಣಾಮಗಳು ಎಲ್ಲಾ 12 ರಾಶಿ ಜನರಿಗೂ ಇದು ಅದ್ಭುತ ಲಾಭ ತರಬಹುದು. ಕೆಲವು ರಾಶಿ ಜನರಿಗೆ ಅದೃಷ್ಟ ಹರಿದು ಬರಬಹುದು. ಅವರಿಗೆ ಜೀವನದಲ್ಲಿ ಗೌರವ ಮತ್ತು ಸಂಪತ್ತಿನ ಕೊರತೆ ಉಂಟಾಗುವುದಿಲ್ಲ. ಹಾಗಾದ್ರೆ ಬುಧಾದಿತ್ಯ ರಾಜಯೋಗವು ಯಾರಿಗೆ ಅದೃಷ್ಟ ತರಲಿದೆ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಬುಧ ಮತ್ತು ಸೂರ್ಯನ ಸಂಯೋಗದಿಂದ ರೂಪುಗೊಂಡ ಬುಧಾದಿತ್ಯ ರಾಜಯೋಗವು ತುಂಬಾ ಶುಭ ಮತ್ತು ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ಈ ಯೋಗ ನಿಮ್ಮ ಜಾತಕದ 5ನೇ ಮನೆಯಲ್ಲಿ ರೂಪುಗೊಳ್ಳುತ್ತದೆ. ಇದರಿಂದ ನಿಮ್ಮ ಶಿಕ್ಷಣದಲ್ಲಿ ಶುಭವಿದೆ. ವಿವಾಹಿತರಲ್ಲಿ ಮಕ್ಕಳ ಸಂಬಂಧ ಶುಭವಿದೆ. ವೈವಾಹಿಕ ಜೀವನದಲ್ಲಿದ್ದ ಸಮಸ್ಯೆಗಳು ನಿವಾರಣೆಯಾಗಲಿವೆ. ನಿಮ್ಮ ಪ್ರೀತಿ ಪಾತ್ರರಿಗೆ ಇದು ಬಹಳ ಅದೃಷ್ಟ ತರುವ ದಿನಗಳಿವೆ. ಹಠಾತ್ ಆರ್ಥಿಕ ಲಾಭ ಪಡೆಯಬಹುದು.
ತುಲಾ ರಾಶಿ
ಬುಧಾದಿತ್ಯ ರಾಜ್ಯಯೋಗವು ತುಲಾ ರಾಶಿಯವರಿಗೆ ತುಂಬಾ ಅನುಕೂಲಕರವೆಂದು ಸಾಬೀತುಪಡಿಸುತ್ತದೆ. ಲಾಭದಾಯಕ ಅವಕಾಶಗಳು ಹೆಚ್ಚಾಗಲಿವೆ. ನಿಮ್ಮ ಮೊದಲ ಮನೆಯಲ್ಲಿ ಈ ಯೋಗ ರೂಪುಗೊಳ್ಳುತ್ತಿದೆ. ಇದರಿಂದ ನಿಮ್ಮ ವ್ಯಕ್ತಿತ್ವ, ಬುದ್ದಿವಂತಿಕೆಗೆ ಸಂಬಂಧಿಸಿದ ಲಾಭಗಳ ಹೆಚ್ಚಿಸಲಿದೆ. ಸಾಲಗಳಿಂದ ನೀವು ಮುಕ್ತರಾಗುವ ದಿನಗಳು ಹತ್ತಿರವಾಗಲಿದೆ. ವೈವಾಹಿಕ ಜೀವನದಲ್ಲಿ ನಿಮಗೆ ಸುಖ ಇರಲಿದೆ. ಆರ್ಥಿಕ ಸ್ಥಿತಿ ಕೂಡ ಸುಧಾರಿಸುವುದರಿಂದ ನಿಮ್ಮಲ್ಲಿ ಶಾಂತಿಯು ಹೆಚ್ಚಾಗಲಿದೆ. ಮನೆಗಾಗಿ ನೀವು ಖರೀದಿಸುವ ವಸ್ತುಗಳಿಂದ ನೆಮ್ಮದಿ ಇರಲಿದೆ. ಆಸ್ತಿ ಖರೀದಿಯ ಉತ್ಸುಕತೆ ಕಾಣಲಿದೆ.
ಮಕರ ರಾಶಿ
ಮಕರ ರಾಶಿಯವರಿಗೆ ಬುಧಾದಿತ್ಯ ರಾಜ್ಯಯೋಗವು ತುಂಬಾ ಶುಭ ಮತ್ತು ಪ್ರಯೋಜನಕಾರಿ. ಮಕರ ರಾಶಿಯ ವೃತ್ತಿ ಮತ್ತು ವ್ಯವಹಾರ ಕ್ಷೇತ್ರದಲ್ಲಿ ರೂಪುಗೊಳ್ಳುತ್ತದೆ. ಆದ್ದರಿಂದ ಹಲವಾರು ತಿಂಗಳುಗಳಿಂದ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಹೊಸ ಉದ್ಯೋಗ ಸಿಗಬಹುದು. ನಿಮ್ಮ ಜವಾಬ್ದಾರಿ ಹೆಚ್ಚಾಗಲಿದೆ, ಹಾಗೆ ಬಡ್ತಿ, ವರ್ಗಾವಣೆ ಸಂಬಂಧವಾಗಿ ಶುಭ ಸುದ್ದಿ ಕೇಳಬಹುದು. ಅವಿವಾಹಿತರು ಕೂಡ ವಿವಾಹ ಸಂಬಂಧವಾಗಿ ಉತ್ತಮ ಸುದ್ದಿ ಕೇಳುವ ಸಂಭವವಿದೆ. ನಿಮ್ಮ ವ್ಯವಹಾರಗಳಲ್ಲಿದ್ದ ಅಡ್ಡಿ ಆತಂಕಗಳು ದೂರಾಗಲಿವೆ. ಸಂಬಂಧಿಕರಲ್ಲಿ ಯಾರಿಗಾದರು ಹಣಕಾಸಿನ ಸಹಾಯ ಮಾಡಿದ್ದರೆ ಅವರಿಂದಲೂ ಮರಳಿ ಸಹಾಯ ಪಡೆಯುತ್ತೀರಿ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications