Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನವೆಂಬರ್ 17ರಿಂದ ಬುಧಾದಿತ್ಯ ಯೋಗ: ಈ 5 ರಾಶಿಯವರಿಗೆ ರಾಜಯೋಗ
ಬುಧ ನವೆಂಬರ್ 6ಕ್ಕೆ ವೃಶ್ಚಿಕ ರಾಶಿಗೆ ಸಂಚರಿಸಿದೆ, ಸೂರ್ಯ ನವೆಂಬರ್ 17ರಿಂದ ವೃಶ್ಚಿಕ ರಾಶಿಯಲ್ಲಿ ಇರಲಿದೆ. ಈ ಎರಡು ಗ್ರಹಗಳು ಒಂದೇ ರಾಶಿಯಲ್ಲಿ ಬಂದಾಗ ಬುಧಾದಿತ್ಯ ಯೋಗ ಉಂಟಾಗುವುದು. ಈ ಯೋಗ ತುಂಬಾನೇ ಶುಭ ಫಲ ನೀಡುವುದು ಎಂದು ವೈದಿಕ ಶಾಸ್ತ್ರ ಹೇಳುತ್ತದೆ. ಈ ಬುಧಾದಿತ್ಯ ಯೋಗ ನವೆಂಬರ್ 26ರವರೆಗೆ ಇರಲಿದೆ. ಈ ಯೋಗವು ಈ 5 ರಾಶಿಯವರಿಗೆ ತುಂಬಾನೇ ಮಂಗಳಕರ ಫಲಿತಾಂಶ ನೀಡಲಿದೆ.

ಸಿಂಹ ರಾಶಿ
ಬುಧಾದಿತ್ಯ ಯೋಗದಿಂದಾಗಿ ಸಿಂಹ ರಾಶಿಯವರುಈ ಅವಧಿಯಲ್ಲಿ ತುಂಬಾನೇ ಶುಭ ಫಲ ಪಡೆಯಲಿದ್ದೀರಿ, ನೀವು ಆದಾಯಕ್ಕೆ ಉತ್ತಮ ಮಾರ್ಗ ಕಂಡುಕೊಳ್ಳಲು ಸಾಧ್ಯವಾಗುವುದು. ವೃತ್ತಿ ಜೀವನದಲ್ಲಿಯೂ ಪ್ರಗತಿಯನ್ನು ಕಾಣುತ್ತೀರಿ. ಸಾಮಾಜಿಕವಾಗಿ ಗುರುತಿಸಿಕೊಳ್ಳವಿರಿ, ನಿಮ್ಮ ಆಸೆಗಳು ನೆರವೇರಲಿದೆ. ನೀವು ಆಸ್ತಿ ಅಥವಾ ಮನೆಯಲ್ಲಿ ಹೂಡಿಕೆ ಮಾಡಲು ತುಂಬಾ ಸಮಯದಿದ ಯೋಚಿಸುತ್ತಿದ್ದರೆ ಈ ಅವಧಿಯಲ್ಲಿ ಸಾಧ್ಯವಾಗಲಿದೆ.
ಕನ್ಯಾ ರಾಶಿ
ಈ ಅವಧಿಯಲ್ಲಿ ಕನ್ಯಾರಾಶಿಯವರಿಗೆ ಅದೃಷ್ಟದ ಬಾಗಿಲು ತೆಗೆಯಲಿದೆ. ನಿಮ್ಮ ವ್ಯಕ್ತಿತ್ವದಲ್ಲೂ ಧನಾತ್ಮಕ ಬದಲಾವಣೆಗಳಾಗಲಿವೆ. ಬರವಣಿಗೆ, ಮಾಧ್ಯಮ, ಕ್ರಿಯಾತ್ಮಕ ಕ್ಷೇತ್ರದಲ್ಲಿ ಕೆಲಸ ಮಾಡುವವರು ಈ ಅವಧಿಯಲ್ಲಿ ತುಂಬಾನೇ ಪ್ರಗತಿ ಕಾಣುವಿರಿ. ಆರ್ಥಿಕವಾಗಿ ಈ ಅವಧಿ ತುಂಬಾ ಒಳ್ಳೆಯದಿದೆ. ಈ ಅವಧಿಯಲ್ಲಿ ನೀವು ಏನಾದರೂ ಹೊಸ ಕಾರ್ಯ ಮಾಡಿದರೆ ಅದರಲ್ಲಿ ಅದೃಷ್ಟದ ಬೆಂಬಲದಿಂದಾಗಿ ನಿಮಗೆ ಯಶಸ್ಸು ಸಿಗಲಿದೆ.
ತುಲಾ ರಾಶಿ
ವೃತ್ತಿ ಜೀವನ ಈ ಅವಧಿಯಲ್ಲಿ ಅದ್ಭುತವಾಗಿರುತ್ತದೆ. ನಿಮಗೆ ಅನೇಕ ಉದ್ಯೋಗ ಅವಕಾಶಗಳು ದೊರೆಯಲಿದೆ, ಕೆಲಸ ಬದಲಾಯಿಸಲು ಬಯಸಿದ್ದರೆ ಈ ಅವಧಿಯಲ್ಲಿ ಪ್ರಯತ್ನಿಸಿದರೆ ನೀವು ಉತ್ತಮ ಉದ್ಯೋಗ ಅವಕಾಶಗಳು ದೊರೆಯಲಿದೆ. ಅವಧಿಯಲ್ಲಿ ವ್ಯಾಪಾರಸ್ಥರು, ಉದ್ಯಮಿಗಳು ಉತ್ತಮ ಲಾಭ ಪಡೆಯುತ್ತೀರಿ. ಆರ್ಥಿಕವಾಗಿ ತುಂಬಾನೇ ಪ್ರಗತಿ ಕಾಣುವಿರಿ, ನಿಮ್ಮ ಸೌಕರ್ಯಕ್ಕಾಗಿ ವಸ್ತುಗಳನ್ನು ಖರೀದಿಸುತ್ತೀರಿ.
ಧನು ರಾಶಿ
ಬುಧಾದಿತ್ಯ ಯೋಗದಿಂದಾಗಿ ಈ ಅವಧಿಗೆ ಧನು ರಾಶಿಯವರಿಗೆ ಅದ್ಭುತವಾಗಿರಲಿದೆ. ವಿದ್ಯಾರ್ಥಿಗಳಿಗೆ ಈ ಅವಧಿ ತುಂಬಾ ಅನುಕೂಲಕರವಾಗಿದೆ. ವೃತ್ತಿ ಜೀವನದಲ್ಲಿ ನಿಮಗೆ ಉತ್ತಮ ಅವಕಾಶ ಸಿಗುವುದರಿಂದ ಆರ್ಥಿಕವಾಗಿ ಈ ಅವಧಿ ಅತ್ಯಂತ ಮಂಗಳಕರವಾಗಿದೆ. ವಿದೇಶಕ್ಕೆ ಹೋಗಲು ಪ್ರಯತ್ನಿಸುತ್ತಿದ್ದರೆ ಈ ಅವಧಿಯಲ್ಲಿ ಉತ್ತಮ ಅವಕಾಶಗಳು ಸಿಗಲಿದೆ.
ಮಕರ ರಾಶಿ
ಮಕರ ರಾಶಿಯವರು ಈ ಅವಧಿಯಲ್ಲಿ ಆರ್ಥಿಕ ಸ್ಥಿರತೆ ಕಾಣಬಹುದು. ನಿಮ್ಮ ಸಾಮಾಜಿಕ ಸ್ಥಾನಮಾನ ಹೆಚ್ಚಾಗಲಿದೆ, ವೈವಾಹಿಕ ಜೀವನದಲ್ಲಿ ಸಂತೋಷ ಇರಲಿದೆ. ನೀವು ಈ ಅವಧಿಯಲ್ಲಿ ಯಶಸ್ಸು ನಿಮಗೆ ಲಭಿಸಲಿದೆ. ಆರ್ಥಿಕ ಸ್ಥಿತಿ ತುಂಬಾ ಚೆನ್ನಾಗಿರಲಿದೆ. ಸಂಬಂಧದ ಬಗ್ಗೆ ಹೇಳುವುದಾದರೆ ಬಾಂಧವ್ಯ ಮತ್ತಷ್ಟು ಗಟ್ಟಿಯಾಗುವುದು, ಆರ್ಥಿಕವಾಗಿ ಈ ಅವಧಿ ತುಂಬಾ ಒಳ್ಳೆಯದಿದೆ.
ಬುಧಾದಿತ್ಯ ಯೋಗ ಯಾವ ಮನೆಯಲ್ಲಿದ್ದರೆ ಏನು ಪ್ರಯೋಜನ
1ನೇ ಮನೆ: ಹೆಸರು, ಕೀರ್ತಿ, ಯಶಸ್ಸು ತರುತ್ತದೆ
2ನೇ ಮನೆ: ಐಶ್ವರ್ಯ ಸಿಗುವುದು, ಸೌಕರ್ಯ ಹೆಚ್ಚಾಗುವುದು, ವೈವಾಹಿಕ ಜೀವನ ತುಂಬಾ ಸಂವಹನಶೈಲಿ ಉತ್ತಮವಾಗಿರುತ್ತದೆ, ನಿಮ್ಮ ಜೀವನ ಸಂಗಾತಿ ಯಶಸ್ಸು ಗಳಿಸುತ್ತಾರೆ.
8ನೇ ಮನೆ: ಪೂರ್ವಜರ ಆಸ್ತಿಯಿಂದ ಲಾಭ ಗಳಿಸುತ್ತೀರಿ.
9ನೇ ಮನೆ: ಸಂಪತ್ತು, ಸಮೃದ್ಧಿ ಹೆಚ್ಚಾಗುವುದು
10ನೇ ಮನೆ: ಬುಧಾದಿತ್ಯ 10ನೇ ಮನೆಯಲ್ಲಿ ಉಂಟಾದರೆ ಕೀರ್ತಿ ಹೆಚ್ಚಾಗುವುದು
11ನೇ ಮನೆ: ಬುಧಾದಿತ್ಯ ಯೋಗ 11ನೇ ಮನೆಯಲ್ಲಿ ಉಂಟಾದರೆ ಆಕಸ್ಮಿಕವಾಗಿ ಹಣವನ್ನು ಗಳಿಸುತ್ತೀರಿ.
12ನೇ ಮನೆ: ವಿದೇಶದಲ್ಲಿ ಹೂಡಿಕೆ ಮಾಡಿರುವವರು ತುಂಬಾ ಹೆಚ್ಚಿನ ಲಾಭ ಗಳಿಸುತ್ತಾರೆ.
ಬುಧಾದಿತ್ಯ ಯೋಗ ಕಡಿಮೆ ಇರುವ ರಾಶಿಯವರು ಏನು ಮಾಡಬೇಕು?
* ಪ್ರತಿದಿನ ಸೂರ್ಯನಿಗೆ ಆರ್ಘ್ಯ ಅರ್ಪಿಸಿ
* ಓಂ ಆದಿತ್ಯ ನಮಃ ಮಂತ್ರವನ್ನು ಪ್ರತಿದಿನ ಪಠಿಸಿ
* ವಿಷ್ಣು ಸಹಸ್ರನಾಮ ಸ್ರೋತ್ರ ಪ್ರತಿದಿನ ಪಠಿಸಿ.
ಏನು ಮಾಡಬಾರದು?
* ಯಾರ ಬಳಿ ಸಾಲ ಪಡೆಯಬೇಡಿ
* ಯಾವುದೇ ಉದ್ಯಮದಲ್ಲಿ ಹಣವನ್ನು ಹೂಡಿಕೆ ಮಾಡಬೇಡಿ
* ಯಾರ ಜೊತೆಗಾದರೂ ಪಾಲಿದಾರಿಕೆಯಲ್ಲಿ ವ್ಯಾಪಾರ ಮಾಡುತ್ತಿದ್ದರೆ ಜಾಗ್ರತೆವಹಿಸಿ
* ಹಣಗಳಿಸಲು ಅಡ್ಡಮಾರ್ಗ ಹಿಡಿಯಬೇಡಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications