Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಧನು ರಾಶಿಯಲ್ಲಿ ಬುಧನ ವಕ್ರೀಯ ಚಲನೆ: ಡಿಸೆಂಬರ್ 28ರವರೆಗೆ ಈ 5 ರಾಶಿಯವರು ಸಂಬಂಧದ ವಿಷಯದಲ್ಲಿ ಹೆಚ್ಚು ಜಾಗ್ರತೆವಹಿಸಿ
ಪ್ರತಿ ತಿಂಗಳು ಕೆಲವೊಂದು ಗ್ರಹಗಳ ಸಂಚಾರವಿದ್ದೇ ಇರುತ್ತದೆ. ಯಾವುದೇ ಗ್ರಹ ಹಿಮ್ಮುಖ ಚಲನೆಯಲ್ಲಿದ್ದಾಗ ಅದು ಹೆಚ್ಚು ಕೆಟ್ಟ ಪರಿಣಾ ಬೀರುತ್ತದೆ ಎಂದು ವೈದಿಕ ಶಾಸ್ತ್ರ ಹೇಳುತ್ತದೆ. ಈ ತಿಂಗಳಲ್ಲಿ ಮೊದಲು ಬುಧ ತನ್ನ ಸಂಚಾರ ಬದಲಾಯಿಸಲಿದೆ, ಅದರಲ್ಲೂ ಹಿಮ್ಮುಖ ಚಲನೆಯಲ್ಲಿ ಇರಲಿದೆ. ಡಿಸೆಂಬರ್ 13ರಿಂದ ಡಿಸೆಂಬರ್ 28ರವರೆಗೆ ಹಿಮ್ಮುಖ ಚಲನೆಯಲ್ಲಿದ್ದು ನಂತರ ವೃಶ್ಚಿಕ ರಾಶಿಯಲ್ಲಿ ಹಿಮ್ಮುಖ ಚಲನೆ ಮಾಡುತ್ತದೆ.
ಈ ಅವಧಿ ಹಲವಾರು ರಾಶಿಗಳಿಗೆ ಅನುಕೂಲಕರವಲ್ಲ, ಆದರೆ ಈ ರಾಶಿಯವರು ತಮ್ಮ ಸಂಬಂಧದಲ್ಲಿ ಅಂತರ ಉಂಟಾಗದಂತೆ ಹೆಚ್ಚಿನ ಜಾಗ್ರತೆವಹಿಸಬೇಕಾಗಿದೆ:

ಮೇಷ ರಾಶಿ
ಈ ಅವಧಿ ನಿಮಗೆ ಸವಾಲುಗಳು ಹೆಚ್ಚಾಗಬಹುದು. ನಿಮ್ಮ ಮಾತುಗಳನ್ನು ಬೇರೆಯವರು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ನಿಮಗನಿಸುವುದು. ಆದರೆ ಒಳ್ಳೆಯ ಮಾರ್ಗದರ್ಶನ ಸಿಕ್ಕರೆ ಅದನ್ನು ಪಾಲಿಸಿ. ಸಂಬಂಧಗಳ ವಿಷಯದಲ್ಲಿ, ವೃತ್ತಿಜೀವನದಲ್ಲಿ ಸಮಸ್ಯೆಗಳು ಉಂಟಾಗಬಹುದು, ಆದ್ದರಿಂದ ಜಾಗರೂಕರಾಗಿರಬೇಕು.
ಈ ಅವಧಿಯಲ್ಲಿ ನೀವು ಕೋಪ ನಿಯಂತ್ರಿಸುವುದು ಒಳ್ಳೆಯದು. ಕುಟುಂಬದವರ ಸಂಬಂಧ ಕಾಪಾಡಿಕೊಳ್ಳಲು ನೀವು ತುಂಬಾನೇ ಪ್ರಯತ್ನಿಸಬೇಕು. ಈ ಅವಧಿಯಲ್ಲಿ ನೀವು ತುಂಬಾ ಜಾಗ್ರತೆವಹಿಸಬೇಕು.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಈ ಸಮಯ ಸವಾಲಿನಿಂದ ಕೂಡಿರಲಿದೆ. ಆರೋಗ್ಯ ಸಂಬಂಧಿತ ಸಮಸ್ಯೆಗಳು ಉಂಟಾಗಬಹುದು, ಮನೆಯಲ್ಲಿ ಅನೇಕ ಏರಿಳಿತಗಳು ಉಂಟಾಗಬಹುದು. ವೈವಾಹಿಕ ಜೀವನದಲ್ಲಿ ವಿವಾದಗಳು, ಪ್ಪುಗ್ರಹಿಕೆಗಳು ಹೆಚ್ಚಾಗಬಹುದು, ಈ ಸಮಯದಲ್ಲಿ ಎಷ್ಟು ತಾಳ್ಮೆಯಿಂದ ವರ್ತಿಸುತ್ತೀರೋ ಅಷ್ಟು ಒಳ್ಳೆಯದು.
ಕರ್ಕ ರಾಶಿ
ಕರ್ಕ ರಾಶಿಯವರಿಗೆ ಪಾಲುದಾರರೊಂದಿಗಿನ ಸಂಬಂಧಗಳಲ್ಲಿ ಏರಿಳಿತಗಳು ಉಂಟಾಗಬಹುದು , ಆತ್ಮವಿಶ್ವಾಸದ ಕೊರತೆಯಿಂದಾಗಿ ಸಮಸ್ಯೆ ಮತ್ತಷ್ಟು ಹೆಚ್ಚಾಗುವುದು. ಧನು ರಾಶಿಯಲ್ಲಿ ಬುಧದ ಹಿಮ್ಮುಖ ಚಲನೆಯು ಕರ್ಕ ರಾಶಿಯ ಜನರಿಗೆ ತೊಂದರೆ ಉಂಟುಮಾಡಬಹುದು. ಯಾವುದೇ ವಿವಾದಕ್ಕೆ ಸಿಲುಕಿಕೊಳ್ಳದಂತೆ ನೋಡಿಕೊಳ್ಳಿ. ಯಾವುದೇ ಅನಗತ್ಯ ಕಾಮೆಂಟ್‌ಗಳಿಂದ ದೂರವಿರಿ. ಕೆಲಸದ ಸ್ಥಳದಲ್ಲಿ ಆಗುತ್ತಿರುವ ಬದಲಾವಣೆಗಳು ನಿಮ್ಮ ಮಾನಸಿಕ ಒತ್ತಡ ಹೆಚ್ಚಾಗಲಿದೆ. ಈ ಅವಧಿಯಲ್ಲಿ ಯಾರಿಗೂ ಹಣವನ್ನು ಸಾಲ ನೀಡಬೇಡಿ, ಒಂದು ವೇಳೆ ನೀಡಿದರೆ ಮರಳಿ ಸಿಗುವುದು ಕಷ್ಟ.
ಸಿಂಹ ರಾಶಿ
ಬುಧದ ಹಿಮ್ಮುಖ ಚಲನೆಯು ನಿಮ್ಮ ಸಂಪತ್ತು, ಖ್ಯಾತಿಗೆ ಹಾನಿಯುಂಟಾಗುವುದು, ಆದ್ದರಿಂದ ಈ ಬಗ್ಗೆ ಜಾಗ್ರತೆವಹಿಸಿ. ಈ ಸಮಯದಲ್ಲಿ ಹಣವನ್ನು ಹೂಡಿಕೆ ಮಾಡುವುದನ್ನು ತಪ್ಪಿಸಬೇಕು. ಷೇರು ಮಾರುಕಟ್ಟೆ, ಬೆಟ್ಟಿಂಗ್ ಇವುಗಳಿಂದ ದೂರವಿರುವುದು ಒಳ್ಳೆಯದು, ಇಲ್ಲದಿದ್ದರೆ ಹಣ ನಷ್ಟವಾಗುವ ಸಾಧ್ಯತೆ ಇದೆ. ಈ ಸಮಯದಲ್ಲಿ, ಯಾರಿಗೂ ಸಾಲ ನೀಡಬೇಡಿ. ನಿಮ್ಮ ಗೌರವಕ್ಕೆ ಧಕ್ಕೆಯಾಗಬಹುದಾದ ಕಾರ್ಯಗಳನ್ನು ಮಾಡಬೇಡಿ.
ಧನು ರಾಶಿ
ಈ ಸಮಯದಲ್ಲಿ ಧನು ರಾಶಿಯವರಿಗೆ, ಖ್ಯಾತಿ ಕಡಿಮೆಯಾಗಬಹುದು, ಕಚೇರಿಯಲ್ಲಿ ಕೆಲಸದಲ್ಲಿ ಅಡೆತಡೆಗಳು ಮತ್ತು ವೈವಾಹಿಕ ಜೀವನದಲ್ಲಿ ಏರಿಳಿತಗಳು ಉಂಟಾಗಬಹುದು. ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ತುಂಬಾ ತಾಳ್ಮೆವಹಿಸುವಂತೆ ಸಲಹೆ ನೀಡಲಾಗುವುದು.
ಈ 5 ರಾಶಿಯವರು ಡಿಸೆಂಬರ್ 28ರವರೆಗೆ ಹೆಚ್ಚು ಜಾಗ್ರತೆವಹಿಸಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications