Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಾಘ ನಕ್ಷತ್ರಕ್ಕೆ ಬುಧ ಸಂಚಾರ: ಇಷ್ಟು ದಿನ ಅನುಭವಿಸಿದ್ದ ಸಮಸ್ಯೆ ದೂರ..!
ವೈದಿಕ ಜ್ಯೋತಿಷ್ಯದ ಪ್ರಕಾರ ಪ್ರತಿಯೊಂದು ಗ್ರಹವನ್ನು ಪ್ರಮುಖ ಎಂದು ಪರಿಗಣಿಸಲಾಗಿದೆ. ಹಾಗೆ ಬುಧ ಗ್ರಹವನ್ನು ಶಕ್ತಿ, ಬುದ್ದಿವಂತಿಕೆ, ಮಾತು, ವ್ಯವಹಾರ, ವ್ಯಾಪಾರದ ಅಂಶವೆಂದು ಪರಿಗಣಿಸಲಾಗಿದೆ. ಹೀಗಾಗಿ ಬುಧನ ಅಂಶವು ಯಾರ ರಾಶಿಯಲ್ಲಿ ಧನಾತ್ಮಕ ಸ್ಥಾನದಲ್ಲಿರುತ್ತದೆಯೋ ಅವರಲ್ಲಿ ಅತ್ಯುತ್ತಮ ದಿನಗಳ ನೋಡಬಹುದು. ಹಾಗೆ ಬುಧನಿಂದ ಹಲವರಿಗೆ ಲಾಭ ಇರಲಿದೆ.
ಈ ಗ್ರಹವು ತುಂಬಾ ಕ್ರಿಯಾತ್ಮಕವಾಗಿದ್ದು, ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರತಿ 15 ದಿನಗಳಿಗೊಮ್ಮೆ ಪ್ರವೇಶಿಸುತ್ತದೆ. ಅದೇ ಅನುಕ್ರಮದಲ್ಲಿ, ಆಗಸ್ಟ್ 2025 ರ ಕೊನೆಯಲ್ಲಿ, ಬುಧವು ಮಾಘ ನಕ್ಷತ್ರಕ್ಕೆ ಚಲಿಸಲಿದ್ದಾನೆ. ಇದರ ಜೊತೆಗೆ ಆಗಸ್ಟ್ 30ರಂದು ಸಿಂಹ ರಾಶಿಗೆ ಚಲಿಸಲಿದ್ದಾನೆ. ಮಾಘ ನಕ್ಷತ್ರವು ಕೇತು ಗ್ರಹದ ಆಳ್ವಿಕೆಯಲ್ಲಿರಲಿದೆ.

ಈ ವಿಶೇಷ ನಕ್ಷತ್ರಪುಂಜದಲ್ಲಿ ಬುಧನ ಸಂಚಾರವು ಮಾನಸಿಕ ಮತ್ತು ಬೌದ್ಧಿಕ ಮಟ್ಟದ ಮೇಲೆ ಪರಿಣಾಮ ಬೀರುವುದಲ್ಲದೆ, ಕೆಲವು ರಾಶಿ ಜನರಿಗೆ ಈ ಸಮಯವು ಅದೃಷ್ಟದ ಸಂಕೇತವೂ ಆಗಬಹುದು. ಹಾಗೆ ಅಂತಹ ಪರಿಸ್ಥಿತಿಯಲ್ಲಿ, ಯಾವ ರಾಶಿ ಜನರು ಹೆಚ್ಚಿನ ಅನುಕೂಲಕ ಪಡೆಯಲಿದ್ದಾರೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ವೃಷಭ ರಾಶಿ
ಮಾಘ ನಕ್ಷತ್ರದಲ್ಲಿ ಬುಧನ ಸಂಚಾರವು ವೃಷಭ ರಾಶಿಯ ಜನರಿಗೆ ಮಾನಸಿಕ ಮತ್ತು ಭಾವನಾತ್ಮಕ ಮಟ್ಟದಲ್ಲಿ ಸಾಕಷ್ಟು ಪರಿಹಾರವನ್ನು ತರಬಹುದು. ಈ ಅವಧಿಯಲ್ಲಿ, ನಿಮ್ಮೊಳಗೆ ಅಡಗಿರುವ ವಿಷಯಗಳು ಅಥವಾ ಭಾವನೆಗಳು ಬಹಿರಂಗವಾಗಿ ಹೊರಬರುವ ಸಾಧ್ಯತೆಯಿದೆ. ನೀವು ಯಾರಿಗಾದರು ಬಹಳ ಸಮಯದಿಂದ ಹೇಳದೆ ಉಳಿಸಿಕೊಂಡ ವಿಚಾರವಾಗಿ ಮುಕ್ತವಾಗಿ ಹಂಚಿಕೊಳ್ಳುತ್ತೀರಿ. ವೃತ್ತಿ ಜೀವನದಲ್ಲಿ ಎದುರಾಗಿದ್ದ ಸಮಸ್ಯೆಗಳ ನಿವಾರಣೆಗೆ ಶ್ರಮಿಸುವಿರಿ. ಮಾನಸಿಕ ನೆಮ್ಮದಿಗೆ ಕಾರಣವಾಗುವ ಹಲವು ವಿಚಾರಗಳು ಫಲಿಸಲಿದೆ. ಆರ್ಥಿಕ ವಿಚಾರದಲ್ಲಿ ನೀವು ಬಯಸಿದಂತಹ ದಿನಗಳು ನಿಮ್ಮದಾಗಲಿವೆ. ದಾಂಪತ್ಯ ಕುರಿತಾದ ವಿಚಾರವಾಗಿಯೂ ನಿಮಗೆ ನೆಮ್ಮದಿ ಒಲಿಯಲಿದೆ.
ಸಿಂಹ ರಾಶಿ
ಬುಧವು ಸಿಂಹ ರಾಶಿಯವರಿಗೆ ಮುಖ್ಯ. ಏಕೆಂದರೆ ಸಿಂಹ ರಾಶಿಯಲ್ಲಿ ಸೂರ್ಯನ ಸಂಯೋಗವಾಗುತ್ತದೆ. ಇದರಿಂದಾಗಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುವ ಕೆಲಸ ಮಾಡುವಿರಿ. ಬುದ್ದಿವಂತಿಕೆಯಿಂದ ನೀವು ಎಲ್ಲಾ ಕೆಲಸಗಳ ಮಾಡುವಿರಿ. ನಿಮ್ಮ ಔದ್ಯೋಗಿಕ ವಿಚಾರದಲ್ಲಿ ಲಾಭಕರ ಅಂಶಗಳ ನೋಡುವಿರಿ. ಅಚ್ಚರಿಯಂತೆ ನಿಮ್ಮ ಹಣಕಾಸು, ಹಾಗೂ ವ್ಯವಹಾರ ಸಂಬಂಧ ವಿಚಾರದಲ್ಲಿ ಧನಾತ್ಮಕ ಬದಲಾವಣೆಗಳ ನೋಡುವಿರಿ. ಸಾಮಾಜಿಕ ಕಾರ್ಯಗಳಲ್ಲಿ ನೀವು ಭಾಗಿಯಾಗುತ್ತೀರಿ. ಆಪ್ತರೊಬ್ಬರಿಂದ ಹಣ ಬರುವ ಸಾಧ್ಯತೆಗಳು ಹೆಚ್ಚಾಗುತ್ತದೆ. ನೀವು ಯಾವುದೇ ಹೊಸ ಕೆಲಸ ಆರಂಭಿಸಿದರು ಅದರಿಂದ ಲಾಭ ಅಥವಾ ಯಶಸ್ಸು ನೋಡಬಹುದು. ಬರವಣಿಗೆ, ವಾಹನ, ನಂಬಿ ಬದುಕು ಕಟ್ಟಿಕೊಂಡವರಿಗೆ ಉತ್ತಮ ಸಮಯ ಆಗಿರಲಿದೆ.
ವೃಶ್ಚಿಕ ರಾಶಿ
ಬುಧನ ಈ ಸಂಚಾರವು ವೃಶ್ಚಿಕ ರಾಶಿಯವರಿಗೆ ಹಲವು ವಿಧಗಳಲ್ಲಿ ಸಕಾರಾತ್ಮಕವೆಂದು ಸಾಬೀತುಪಡಿಸಬಹುದು. ಕೇತುವಿನ ಅಧಿಪತಿಯಾದ ಮಾಘ ನಕ್ಷತ್ರದಲ್ಲಿ ಬುಧ ಸಂಚರಿಸಿದಾಗ ನಿಮ್ಮ ಮನೋಬಲ ಹೆಚ್ಚಾಗುತ್ತದೆ. ನಿಮ್ಮ ಅನೇಕ ಕೆಲಸ ಕಾರ್ಯಗಳು ನೀವು ಅಂದುಕೊಂಡಂತೆ ನೆರವೇರಲಿದೆ, ಇದರಿಂದ ನಿಮ್ಮಲ್ಲಿ ಶಾಂತಿ ನೋಡುವಿರಿ. ಕುಟುಂಬದಲ್ಲಿ ಶುಭ ಕಾರ್ಯಗಳ ಕುರಿತಾದ ಮಾತುಕತೆಗಳು ಫಲಪ್ರದವಾಗುತ್ತವೆ. ದಾಂಪತ್ಯದಲ್ಲಿ ಶುಭ ಸುದ್ದಿ ಕೇಳಿಬರಲಿದೆ. ಮಕ್ಕಳಿಂದ ನೀವು ಅನುಭವಿಸಿದ್ದ ನೋವು ಅಥವಾ ಸಮಸ್ಯೆಯೂ ದೂರಾಗಲಿದೆ. ವೃತ್ತಿಜೀವನದ ಬೆಳವಣಿಗೆ ಸಾಧ್ಯ, ವಿಶೇಷವಾಗಿ ನೀವು ಉದ್ಯೋಗಗಳನ್ನು ಬದಲಾಯಿಸಲು ಅಥವಾ ಹೊಸ ಯೋಜನೆಯನ್ನು ಪ್ರಾರಂಭಿಸಲು ಬಯಸಿದರೆ ಒಳಿತಾಗಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications