Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಶುಕ್ರ-ಬುಧ ಯುತಿ ಜೂನ್ 29ರವರೆಗೆ ಈ 3 ರಾಶಿಯವರು ಪ್ರಯೋಜ ಪಡೆಯಲಿದ್ದಾರೆ
ಶುಕ್ರನು ಮಿಥುನ ರಾಶಿಗೆ ಸಂಚರಿಸಿದೆ, ಇದರಿಂದ ಶುಕ್ರ-ಬುಧ ಯುತಿ ಉಂಟಾಗಿದೆ. ಈ ಬುಧ-ಶುಕ್ರ ಯುತಿಯಿಂದಾಗಿ ಕೆಲವು ರಾಶಿಯವರು ಅನುಕೂಲಕರ ಪ್ರಯೋಜನ ಪಡೆದರೆ ಇನ್ನು ಕೆಲವು ರಾಶಿಯವರಿಗೆ ಸಾಧಾರಣವಾಗಿರಲಿದೆ.
ಶುಕ್ರ-ಬುಧ ನಿಮ್ಮ ರಾಶಿಯಲ್ಲಿ ಅನುಕೂಲಕರ ಸ್ಥಾನದಲ್ಲಿ ಇದ್ದರೆ ಅದೃಷ್ಟದ ಸಮಯ ಇದಾಗಿದೆ, ಈ ಯುತಿಯಿಂದಾಗಿ ಈ ರಾಶಿಯವರು ಉತ್ತಮ ಪ್ರಯೋಜನ ಪಡೆಯುತ್ತಾರೆ:

ಮಿಥುನ ರಾಶಿಯಲ್ಲಿ ಉಂಟಾಗಿದೆ ಶುಕ್ರ-ಬುಧ ಯುತಿ
ಮಿಥುನ ರಾಶಿಯಲ್ಲಿ ಶುಕ್ರ ಮತ್ತು ಬುಧನ ಯುತಿ ಉಂಟಾಗಿದೆ. ಜೂನ್ 12ರಂದು ಅದೃಷ್ಟದ ಗ್ರಹವಾದ ಶುಕ್ರ ಮಿಥುನ ರಾಶಿಗೆ ಸಂಚರಿಸಿದೆ. ಜೂನ್ 14ರಂದು ಬುಧನು ಮಿಥುನ ರಾಶಿಗೆ ಸಂಚರಿಸಿದೆ. ಇದರಿಂದ ಜೂನ್ 29ರವರೆಗೆ ಈ ಶುಕ್ರ ಬುಧ ಯುತಿ ಉಂಟಾಗಿದೆ. ಜೂನ್ 29ಕ್ಕೆ ಬುಧ ಕರ್ಕ ರಾಶಿಗೆ ಸಂಚರಿಸುವುದು.
ಶುಕ್ರ-ಬುಧ ಯುತಿಯಿಂದಾಗಿ ಈ ರಾಶಿಯವರಿಗೆ ಶುಭ:
ಮಿಥುನ ರಾಶಿ
ಮಿಥುನ ರಾಶಿಯ ಮೊದಲ ಮನೆಯಲ್ಲಿ ಶುಕ್ರ ಬುಧ ಯುತಿ ಉಂಟಾಗಿದೆ. ಇದರಿಂದಾಗಿ ನಿಮ್ಮ ಆದಾಯ ಹೆಚ್ಚಾಗಲಿದೆ. ಈ ಅವಧಿಯಲ್ಲಿ ಸಾಲದಿಂದ ಮುಕ್ತಿ ಪಡೆಯುತ್ತೀರಿ. ಈ ಅವಧಿಯನ್ನು ನಿಮ್ಮ ವೈವಾಹಿಕ ಬದುಕು ತುಂಬಾ ಚೆನ್ನಾಗಿರಲಿದೆ, ನಿಮ್ಮ ನಡುವೆ ಇರುವ ಭಿನ್ನಾಭಿಪ್ರಾಯ ದೂರಾಗಲಿದೆ. ಕುಟುಂಬದೊಂದಿಗೆ ಟ್ರಿಪ್ ಆಯೋಜಿಸಬಹುದು. , ಈ ಅವಧಿಯು ಹಣದ ಹೂಡಿಕೆಗೆ ಉತ್ತಮವಾಗಿರಲಿದೆ. ಆದಾಯ ಚೆನ್ನಾಇರಲಿದೆ.
ಸಿಂಹ ರಾಶಿ
ಬುಧ ಮತ್ತು ಶುಕ್ರ ಯುತಿಯಿಂದಾಗಿ ಈ ಅವಧಿ ಅನುಕೂಲಕರವಾಗಿದೆ. ಸರ್ಕಾರಿ ಉದ್ಯೋಗದಲ್ಲಿ ಇರುವವರು ಈ ಅವಧಿಯಲ್ಲಿ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು. ವ್ಯಾಪಾರಿಗಳು ವ್ಯವಹಾರದಲ್ಲಿ ಸುಧಾರಣೆಯನ್ನು ತರುತ್ತದೆ. ನಿಮ್ಮ ಆರ್ಥಿಕ ಜೀವನದಲ್ಲಿ ನೀವು ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಅದು ಬಗೆಹರಿಯಲಿದೆ, ನಿಮ್ಮ ಆರ್ಥಿಕ ಸ್ಥಿತಿಯು ಮೊದಲಿಗಿಂತ ಉತ್ತಮವಾಗುವುದು. ನೀವು ಆರೋಗ್ಯದಲ್ಲಿ ತುಂಬಾನೇ ಜಾಗ್ರತೆವಹಿಸಿ. ಧಾರ್ಮಿಕ ಚಟುವಟಿಕೆ ಕಡೆಗೆ ಗಮನಹರಿಸಿ.
ಕನ್ಯಾರಾಶಿ
ಕನ್ಯಾ ರಾಶಿಯವರಿಗೆ ಬುಧ ಮತ್ತು ಶುಕ್ರ ಯುತಿಯಿಂದಾಗಿ ಈ ಅವಧಿ ಅನುಕೂಲಕರವಾಗಿದೆ. ಈ ಅವಧಿಯು ನಿಮಗೆ ಅಪಾರವಾದ ಲಾಭ ಸಿಗಲಿದೆ. ವ್ಯಾಪಾರಿಗಳು ನಿಮ್ಮ ವ್ಯವಹಾರದಲ್ಲಿ ಉತ್ತಮ ಲಾಭ ಗಳಿಸಲು ಸಾಧ್ಯವಾಗುವುದು. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ. ಮಾನಸಿಕ ಸಂತೋಷ ಇರಲಿದೆ, ಆದರೆ ನೀವು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.
ಯಾವ ಮನೆಯಲ್ಲಿ ಹೇಗೆ ಪ್ರಭಾವ ಬೀರಲಿದೆ?
ಮೊದಲ ಮನೆಯಲ್ಲಿ ಶುಕ್ರ ಬುಧ ಯುತಿ: ಈ ಅವಧಿಯಲ್ಲಿ ನಿಮ್ಮ ವ್ಯಕ್ತಿತ್ವ ಜನರನ್ನು ಆಕರ್ಷಿಸುತ್ತದೆ, ಜೀವನದಲ್ಲಿ ಯಶಸ್ಸು ದೊರೆಯಲಿದೆ.
2ನೇ ಮನೆಯಲ್ಲಿ ಶುಕ್ರ ಬುಧ ಯುತಿ: ಕುಟುಂಬ ಜೀವನ ಚೆನ್ನಾಗಿರಲಿದೆ, ಆರ್ಥಿಕವಾಹಿ ಈ ಅವಧಿ ತುಂಬಾ ಚೆನ್ನಾಗಿರಲಿದೆ.
3ನೇ ಮನೆಯಲ್ಲಿ ಶುಕ್ರ ಬುಧ ಯುತಿ: ವೈಯಕ್ತಿಕ- ವೃತ್ತಿ ಜೀವನದ ದೃಷ್ಟಿಯಿಂದ ನಿಮಗೆ ಒಳ್ಳೆಯದಿದೆ, ಒಡ
ಹುಟ್ಟಿದವರ ಜೊತೆಗಿನ ಸಂಬಂಧ ಚೆನ್ನಾಗಿರಲಿದೆ.
4ನೇ ಮನೆಯಲ್ಲಿ ಶುಕ್ರ ಬುಧ ಯುತಿ: ಮನೆಯಲ್ಲಿ ನೆಮ್ಮದಿ ಇರಲಿದೆ, ಆರ್ಥಿಕವಾಗಿ ತುಂಬಾನೇ ಒಳ್ಳೆಯದಿದೆ.
5ನೇ ಮನೆಯಲ್ಲಿ ಶುಕ್ರ ಬುಧ ಯುತಿ: 5ನೇ ಮನೆಯಲ್ಲಿ ಲಕ್ಷ್ಮಿ ನಾರಾಯಣ ಯೋಗದಿಂದಾಗಿ ತುಂಬಾನೇ ಉತ್ತಮ ಪ್ರಯೊಜನ ಪಡೆಯುತ್ತೀರಿ.
6ನೇ ಮನೆಯಲ್ಲಿ ಶುಕ್ರ ಬುಧ ಯುತಿ: ಸಂಬಂಧದಲ್ಲಿ ಕೆಲ ಭಿನ್ನಾಭಿಪ್ರಾಯವಿರಬಹುದು, ಕಾನೂನು ಸಂಬಂಧಿತ ವಿಷಯದಲ್ಲಿ ಜಾಗ್ರತೆವಹಿಸಬೇಕು
7ನೇ ಮನೆಯಲ್ಲ ಶುಕ್ರ ಬುಧ ಯುತಿ: ವೈವಾಹಿಕ ಜೀವನ ಚೆನ್ನಾಗಿರಲಿದೆ, ಸಮಾಜದಲ್ಲಿ ಗೌರವ ಸಿಗಲಿದೆ, ಈ ಅವಧಿ ನಿಮಗೆ ಅನುಕೂಲಕರವಾಗಿದೆ.
8ನೇ ಮನೆಯಲ್ಲಿ ಶುಕ್ರ ಬುಧ ಯುತಿ: ಆರ್ಥಿಕವಾಗಿ ಒಳ್ಳೆಯದಿದೆ, ಆದರೆ ಸಂಬಂಧದ ವಿಷಯದಲ್ಲಿ ಕೆಲ ಅಂತರವಿರಬಹುದು.
9ನೇ ಮನೆಯಲ್ಲಿ ಶುಕ್ರ ಬುಧ ಯುತಿ: ಈ ಅವಧಿಯಲ್ಲಿ ಹೆಸರು, ಕೀರ್ತಿ ಹೆಚ್ಚಾಗಲಿದೆ.
10ನೇ ಮನೆಯಲ್ಲಿ ಶುಕ್ರ ಬುಧ ಯುತಿ: ಬಡ್ತಿ ಸಿಗಲಿದೆ, ಸಂಬಳ ಹೆಚ್ಚಾಗುವುದು, ವ್ಯವಹಾರದಲ್ಲಿ ಉತ್ತಮ ಲಾಭ ಸಿಗಲಿದೆ.
11ನೇ ಮನೆಯಲ್ಲಿ ಶುಕ್ರ ಬುಧ ಯುತಿ: ವೃತ್ತಿ ಬದುಕಿನಲ್ಲಿ ಪ್ರಗತಿ ಸಿಗಲಿದೆ, ನಿಮ್ಮ ಆಸೆ ಈಡೇರಲಿದೆ.
12ನೇ ಮನೆಯಲ್ಲಿ ಶುಕ್ರ ಯುತಿ: ಈ ಅವಧಿಯಲ್ಲಿ ಬುದ್ಧಿವಂತಿಕೆಯಿಂದ ನಿರ್ಧಾರ ತೆಗೆದುಕೊಳ್ಳುತ್ತೀರಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications