Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮೀನ ರಾಶಿಗೆ ಬುಧ ಸಂಚಾರ: 3 ರಾಶಿಗಳಿಗೆ ಅದೃಷ್ಟಕರ, 2 ರಾಶಿಯವರು ಜಾಗ್ರತೆ
ಬುಧನು ಫೆಬ್ರವರಿ 27ಕ್ಕೆ ಮೀನ ರಾಶಿಗೆ ಪ್ರವೇಶ ಮಾಡಿದೆ, ಬುಧನು ಪ್ರತಿಬಾರಿ ರಾಶಿ ಬದಲಾವಣೆ ಮಾಡಿದಾಗ ಅದರ ಪ್ರಭಾವ 12 ರಾಶಿಗಳ ಮೇಲೆ ಇರಲಿದೆ. ಈ ಬುಧನ ಸಂಚಾರ ಯಾವ ರಾಶಿಗೆ ಅದೃಷ್ಟಕರ, ಯಾವ ರಾಶಿಯವರು ಜಾಗ್ರತೆವಹಿಸಬೇಕು ಎಂದು ನೋಡೊಣ ಬನ್ನಿ:

ಬುಧನ ಸಂಚಾರ ಈ ರಾಶಿಗಳಿಗೆ ಅನುಕೂಲಕರ
ವೃಷಭ ರಾಶಿ
ವೃಷಭ ರಾಶಿಯಲ್ಲಿ ಸೌಕರ್ಯದ ಮನೆಯಾದ 11ನೇ ಮನೆಯಲ್ಲಿರುವುದರಿಂದ ಆರ್ಥಕವಾಗಿ ತುಂಬಾನೇ ಪ್ರಯೋಜನಕಾರಿಯಾಗಿದೆ, ವೃತ್ತಿ ಬದುಕಿನಲ್ಲಿ ಈ ಅವಧಿ ತುಂಬಾನೇ ಉತ್ತಮವಾಗಿದೆ, ನಿಮ್ಮ ಕೆಲಸಕ್ಕೆ ಮನ್ನಣೆ ಸಿಗಲಿದೆ. ವಿದೇಶದಲ್ಲಿ ಕೆಲಸಕ್ಕೆ ಪ್ರಯತ್ನ ಮಾಡುತ್ತಿದ್ದರೆ ಈ ಅವಧಿಯಲ್ಲಿ ನೀವು ಉತ್ತಮ ಪ್ರಯೋಜನ ಪಡೆಯುತ್ತೀರಿ. ಹಣದ ದೃಷ್ಟಿಯಿಂದಲೂ ಈ ಸಮಯ ಉತ್ತಮವಾಗಿದೆ.
ಧನು ರಾಶಿ
ಈ ಬುಧ ಸಂಚಾರ ಧನು ರಾಶಿಯವರಿಗೆ ತುಂಬಾನೇ ಪ್ರಯೋಜನಕಾರಿಯಾಗಿದೆ. ಧನು ರಾಶಿಯ ನಾಲ್ಕನೇ ಮನೆಯಲ್ಲಿ ಬುಧನಿದ್ದು ಬುಧನ ಈ ಸ್ಥಾನ ಸೌಕರ್ಯಗಳನ್ನು ಹೆಚ್ಚಿಸಲಿದೆ, ವ್ಯಾಪಾರದಲ್ಲಿ ಪ್ರಗತಿ ದೊರೆಯಲಿದೆ. ಸಾಲ ಮಾಡಿದ್ದರೆ ಈ ಸಮಯದಲ್ಲಿ ಸಾಲ ತೀರಿಸಲು ಸಾಧ್ಯವಾಗಲಿದೆ. ಇನ್ನು ಹೂಡಿಕೆಗೆ ಈ ಸಮಯ ಉತ್ತಮವಾಗಿದೆ. ಈ ಹಿಂದೆ ಹೂಡಿಕೆ ಮಾಡಿದ್ದರೆ ಅದರಿಂದ ಲಾಭ ದೊರೆಯಲಿದೆ.
ಮೀನ ರಾಶಿ
ಬುಧನು ಮೀನ ರಾಶಿಗೆ ಸಂಚಾರ ಮಾಡಿದೆ. ಲಗ್ನ ಮನೆಯಲ್ಲಿರುವ ಬುಧನು ನಿಮಗೆ ಅನುಕೂಲಕರ ಪ್ರಯೋಜನ ನೀಡಲಿದ್ದಾನೆ. ವೃತ್ತಿ ಬದುಕಿನ ದೃಷ್ಟಿಯಿಂದ ಈ ಅವಧಿ ಉತ್ತಮವಾಗಿದೆ. ಕೆಲಸದಲ್ಲಿ ನೀವು ಯಶಸ್ಸು ಗಳಿಸುತ್ತೀರಿ. ನಿಮ್ಮ ಆರ್ಥಿಕ ಸ್ಥಿತಿ ತುಂಬಾನೇ ಚೆನ್ನಾಗಿರಲಿದೆ. ಆರ್ಥಿಕವಾಗಿ ಪ್ರಯೋಜನ ಪಡೆಯುತ್ತೀರಿ.
ಈ ಎರಡು ರಾಶಿಯವರು ಜಾಗ್ರತೆ
ಮೇಷ ರಾಶಿ
ಬುಧನು 12ನೇ ಮನೆಯಲ್ಲಿರುವುದರಿಂದ ಈ ಸ್ಥಾನ ಅಷ್ಟೊಂದು ಅನುಕೂಲಕರವಲ್ಲ. ಬುಧನ ಈ ಸಂಚಾರದ ಅವಧಿಯಲ್ಲಿ ಖರ್ಚು ಹೆಚ್ಚಿರಲಿದೆ, ಕೆಲಸದ ಜಾಗದಲ್ಲಿಯೂ ಸವಾಲುಗಳು ಬರಬಹುದು, ಹೆಚ್ಚು ಪ್ರಯಾಣ ಮಾಡಬೇಕಾಗಿ ಬರುವುದು, ಇದರಿಂದ ಕೂಡ ಖರ್ಚು ಹೆಚ್ಚಾಗಲಿದೆ. ಇನ್ನು ಆರೋಗ್ಯದ ಕಡೆಗೆ ತುಂಬಾನೇ ಗಮನಹರಿಸಬೇಕು, ಕುಟುಂಬದ ಸದಸ್ಯರ ಆರೋಗ್ಯ ಸಮಸ್ಯೆಯಿಂದಾಗಿ ಖರ್ಚು ಹೆಚ್ಚಿರಬಹುದು. ಈ ಅವಧಿಯಲ್ಲಿ ಸಾಲ ಕೊಡುವುದು ಅಥವಾ ಯಾವುದೇ ಹೂಡಿಕೆ ಮಾಡುವುದು ಸೂಕ್ತವಲ್ಲ.
ಕುಟುಂಬದ ಕಡೆಗೆ ಕೂಡ ಹೆಚ್ಚಿನ ಗಮನಹರಿಸಬೇಕು. ಕೆಲಸದ ಜಾಗದಲ್ಲಿ ಒಳ ರಾಜಕೀಯದ ಬಗ್ಗೆ ಜಾಗ್ರತೆವಹಿಸಿ. ಹಣಕಾಸಿನ ವ್ಯವಹಾರದ ಬಗ್ಗೆ ಗಮನಹರಿಸಿ.
ವೃಶ್ಚಿಕ ರಾಶಿ
ವೃಶ್ಚಕ ರಾಶಿಯಲ್ಲಿ ಬುಧನು 5ನೇ ಮನೆಯಲ್ಲಿ ಇರುವಾಗ ಕುಟುಂಬದ ಮೇಲೆ ಪರಿಣಾಮ ಬೀರಬಹುದು, ಈ ಅವಧಿಯಲ್ಲಿ ಗೊಂದಲವಿರಬಹುದು, ಯಾವುದೇ ನಿರ್ಧಾರವಾದರು ಆತುರದಿಂದ ತೆಗೆದುಕೊಳ್ಳಬೇಡಿ. ಆರ್ಥಿಕ ದೃಷ್ಟಿಯಿಂದ ನೀವು ಜಾಗ್ರತೆವಹಿಸಬೇಕು, ಸಾಲ ಕೊಡುವುದು, ಪಡೆಯುವುದು ಮಾಡಬೇಡಿ. ವೃತ್ತಿ ಬದುಕಿನಲ್ಲಿಯೂ ಹೆಚ್ಚು ಒತ್ತಡಗಳಿರಬಹುದು.
ಸೂಚನೆ
ಈ ಲೇಖನವನ್ನು ಜ್ಯೋತಿಷ್ಯ ಪ್ರಕಾರ ನೀಡಲಾಗಿದ್ದು, ಮಾಹಿತಿಯ ಉದ್ದೇಶದಿಂದ ಮಾತ್ರ ನೀಡಲಾಗಿದೆ, ಯಾವುದೇ ನಿರ್ಧಾರ ಅಥವಾ ನಷ್ಟಗಳಿಗೆ Kannada Boldsky.com ಹೊಣೆಯಲ್ಲ. ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಅಥವಾ ಹೂಡಿಕೆ ಮುನ್ನ ತಜ್ಞರ ಸಲಹೆ ಪಡೆಯುವುದು ಸೂಕ್ತ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications