Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕರ್ಕ ರಾಶಿಗೆ ಬುಧ ಸಂಚಾರ: ಈ ರಾಶಿಗಳಿಗೆ ಸವಾಲಿನ ಸಮಯವಿದು
ಬುಧ ಕರ್ಕ ರಾಶಿಗೆ ಜೂನ್ 29ಕ್ಕೆ ಸಂಚರಿಸಲಿದೆ, ಬುಧ ಮಿಥುನ ರಾಶಿಯಲ್ಲಿ ಇರುವಾಗ ಈ ರಾಶಿಯವರಿಗೆ ಸವಾಲು ಹೆಚ್ಚು...
ವೃಷಭ ರಾಶಿ
ಬುಧನು ವೃಷಭ ರಾಶಿಯಲ್ಲಿ 3ನೇ ಮನೆಯಲ್ಲಿ ಇರಲಿದೆ. ವೃತ್ತಿ ಬದುಕಿನ ಬಗ್ಗೆ ಚಿಂತೆ ಹೆಚ್ಚುವುದು, ಕೆಲವೊಂದು ಉತ್ತಮ ಅವಕಾಶ ಕೈ ತಪ್ಪಲಿದೆ . ಅಲ್ಲದೆ ಸಹೋದ್ಯೋಗಿಗಳೊಂದಿಗೆ ಸಮಸ್ಯೆಗಳನ್ನು ಎದುರಿಸಬಹುದು. ಸ್ವಂತ ವ್ಯಾಪಾರ ಹೊಂದಿರುವವರು ಈ ಅವಧಿಯಲ್ಲಿ ಜಾಗ್ರತೆವಹಿಸಿ, ವ್ಯಾಪಾರದಲ್ಲಿ ನಷ್ಟವನ್ನು ಅನುಭವಿಸಬೇಕಾಗಬಹುದು.

ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುತ್ತಿದ್ದರೆ ಈ ಅವಧಿಯಲ್ಲಿ ಹೆಚ್ಚು ಜಾಗ್ರತೆವಹಿಸಿ, ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯ ಇರಲಿದೆ. ಆರ್ಥಿಕ ಜೀವನದ ದೃಷ್ಟಿಯಿಂದ ಈ ಅವಧಿ ಅನುಕೂಲಕರವಲ್ಲ. ಅಲ್ಲದೆ ಈ ಅವಧಿಯಲ್ಲಿ ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು. ಆರೋಗ್ಯದ ಬಗ್ಗೆ ಕಾಳಜಿವಹಿಸಿ.
ಕರ್ಕ ರಾಶಿ
ಬುಧ ನಿಮ್ಮ ಮೊಲದನೇ ಮನೆಗೆ ಸಂಚರಿಸಿಲಿದೆ, ಬುಧನ ಈ ಸಂಚಾರ ನಿಮಗೆ ಸವಾಲಾಗಬಹುದು. ವೃತ್ತಿ ಬದುಕಿನಲ್ಲಿ ಅನೇಕ ಸಮಸ್ಯೆಗಳು ಎದುರಾಗಬಹುದು, ಸ್ವಂತ ವ್ಯವಹಾರ ಮಾಡುತ್ತಿರುವವರು ಈ ಅವಧಿಯಲ್ಲಿ ತುಂಬಾನೇ ಸಮಸ್ಯೆ ಎದುರಿಸಬೇಕಾಗುವುದು. ವ್ಯವಹಾರದ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ಬುಧದ ಸಾಗಣೆಯು ನಿಮಗೆ ಬಹಳಷ್ಟು ಖರ್ಚುಗಳನ್ನು ತರಬಹುದು. ಅಲ್ಲದೆ ಸಂಬಂಧದ ವಿಷಯದಿಂದಲೂ ಈ ಅವಧಿ ಅನುಕೂಲಕರವಲ್ಲ, ನಿಮ್ಮ ನಡುವೆ ತಿಳುವಳಿಕೆಯ ಕೊರತೆ ಉಂಟಾಗಬಹುದು. ಆರೋಗ್ಯ ಸಮಸ್ಯೆಗಳು ಇರಲಿದೆ.
ಸಿಂಹ ರಾಶಿ
ಬುಧನು ಸಿಂಹ ರಾಶಿಯಲ್ಲಿ 12ನೇ ಮನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ಕೆಲಸದಲ್ಲಿ ಹೆಚ್ಚಿನ ಒತ್ತಡವನ್ನು ಎದುರಿಸಬೇಕಾಗಬಹುದು, ನಿಮ್ಮ ವೃತ್ತಿಜೀವನದಲ್ಲಿ ಪ್ರಗತಿಗಾಗಿ ತುಂಬಾನೇ ಕಷ್ಟಪಡಬೇಕು, ವ್ಯಾಪಾರಿಗಳು ನಷ್ಟದ ಪರಿಸ್ಥಿತಿಯನ್ನು ಎದುರಿಸಬಹುದು. ಹಣದ ತೊಂದರೆ ಎದುರಾಗಬಹುದು. ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವಿನ ಸಂವಹನವು ಕಡಿಮೆಯಾಗುವ ಸಾಧ್ಯತೆಯಿದೆ , ಆರೋಗ್ಯ ಸಮಸ್ಯೆಗಳಿರಲಿದೆ, ಆದರೆ ಅದನ್ನು ನಿರ್ಲಕ್ಷ್ಯ ಮಾಡಿದರೆ ಆರೋಗ್ಯ ಸಮಸ್ಯೆ ಹೆಚ್ಚಾಗುವುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯಲ್ಲಿ ಬುಧ 9ನೇ ಮನೆಯಲ್ಲಿ ಇರಲಿದೆ. ಮನಸ್ಸಿನಲ್ಲಿ ಹಲವು ನಕರಾತ್ಮಕ ಚಿಂತನೆ ಕಾಡಲಿದೆ. ವೃತ್ತಿ ಬದುಕಿನಲ್ಲಿ ಸವಾಲುಗಳು ಎದುರಾಗಬಹುದು.
ವ್ಯಾಪಾರಿಗಳಿಗೂ ಈ ಅವಧಿ ಸವಾಲಿನಿಂದ ಕೂಡಿರಲಿದೆ. ಈ ಅವಧಿಯಲ್ಲಿ ಖರ್ಚು ಹೆಚ್ಚಿರಲಿದೆ. ಆರೋಗ್ಯಕ್ಕಾಗಿ ಕೂಡ ಹೆಚ್ಚಿನ ಹಣ ಖರ್ಚಾಗುವುದು. ಅಲ್ಲದೆ ಕುಟುಂಬದಲ್ಲಿಯೂ ಭಿನ್ನಾಭಿಪ್ರಾಯ ಇರಲಿದೆ.
ಧನು ರಾಶಿ
ಧನು ರಾಶಿಯಲ್ಲಿ ಬುಧ 8ನೇ ಮನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ಕೆಲಸದ ಜಾಗದಲ್ಲಿ ಸಮಸ್ಯೆ ಎದುರಿಸಬೇಕಾಗುವುದು.ಕೆಲಸದಲ್ಲಿ ಸುಲಭವಾಗಿ ಯಶಸ್ಸನ್ನು ಪಡೆಯುವ ಸಾಧ್ಯತೆಯಿಲ್ಲ. ವ್ಯಾಪಾರಿಗಳಿಗೆ ಲಾಭ ಪಡೆಯಲು ಕಷ್ಟವಾಗುವುದು. ಹೊಸ ವ್ಯಾಪಾರ ಅವಕಾಶಗಳನ್ನು ಕಳೆದುಕೊಳ್ಳಬಹುದು. ನಿಮ್ಮ ಆರ್ಥಿಕ ಜೀವನದಲ್ಲಿ ಹಣಕಾಸಿನ ನಷ್ಟದ ಸಾಧ್ಯತೆಯಿದೆ . ವೈವಾಹಿಕ ಬದುಕಿನಲ್ಲಿಯೂ ಏರಿಳಿತಗಳನ್ನು ಎದುರಿಸಬೇಕಾಗುತ್ತದೆ. ಆರೋಗ್ಯದ ಕಡೆಗೆ ಗಮನಹರಿಸಿ.
ಕುಂಭ ರಾಶಿ
ಕುಂಭ ರಾಶಿಯಲ್ಲಿ ಬುಧ 6ನೇ ಮನೆಯಲ್ಲಿ ಇರಲಿದೆ, ಬುಧನು ಕೆಲಸದಲ್ಲಿ ವಿಳಂಬವನ್ನು ಎದುರಿಸಬೇಕಾಗಬಹುದು, ವೃತ್ತಿ ಬದುಕಿನಲ್ಲಿ ಅತೃಪ್ತಿ ಉಂಟಾಗುವುದು, ಕೆಲಸ ಬದಲಾಯಿಸಲು ಯೋಚಿಸುತ್ತೀರಿ, ಆದರೆ ಒಂದು ಕೆಲಸ ಸಿಗುವವರೆಗೆ ಕೆಲಸ ಬಿಡಲು ಯೋಚಿಸಬೇಡಿ. ತಮ್ಮ ಸ್ವಂತ ವ್ಯವಹಾರವನ್ನು ನಡೆಸುವವರು ಕೆಲವು ಸವಾಲುಗಳನ್ನು ಎದುರಿಸಬೇಕಾಗುವುದು. ಖರ್ಚು ಹೆಚ್ಚಿರಲಿದೆ. ವೈವಾಹಿಕ ಜೀವನ ಚೆನ್ನಾಗಿರಲ್ಲ.
ಈ ಸಮಸ್ಯೆಗಳ ನಿವಾರಣೆಗೆ ಪರಿಹಾರ
21 ಬಾರಿ "ಓಂ ನಮಃ ಶಿವಾಯ" ಜಪಿಸಿ.
ಪ್ರತಿದಿನ ಆದಿತ್ಯ ಹೃದಯಂ ಪಠಿಸಿ.
ಆದಿತ್ಯ ಹೃದಯಂ ಮಂತ್ರ:
।। ಆದಿತ್ಯಹೃದಯಂ ಪುಣ್ಯಂ ಸರ್ವಶತ್ರುವಿನಾಶನಮ್
ಜಯಾವಹಂ ಜಪಂ ನಿತ್ಯಮಕ್ಷಯಂ ಪರಮಂ ಶಿವಮ್ ।।
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications