Latest Updates
-
ಬಿಸಿಗಾಳಿ ಕಾಟ: ಮದುವೆ ಡೇಟಿಂಗ್ ಪ್ಲಾನ್ ಹಾಳಾಗದಂತೆ ತಡೆಯುವುದು ಹೇಗೆ? -
ಬಾಲ್ಕನಿ ಅಲಂಕಾರ: ಹಬ್ಬದ ಸಂಭ್ರಮಕ್ಕೆ 10 ನಿಮಿಷದ ಮ್ಯಾಜಿಕ್ -
ಬಿಸಿಲಿನ ಬೇಗೆಗೆ ಈ ಪಾನೀಯಗಳೇ ಮದ್ದು, ತಂಪಾಗಿರಿ ಹೀಗೆ! -
ಬೈಸಾಕಿ ಮತ್ತು ವಿಷು ಹಬ್ಬದ ಲುಕ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ತೆಲಂಗಾಣ ಬಿಸಿಲ ಬೇಗೆ: ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ -
MI vs RCB ಮ್ಯಾಚ್ ನೋಡುವಾಗ ದಂಪತಿಗಳ ಜಗಳ ತಪ್ಪಿಸುವುದು ಹೇಗೆ? -
ವಿಷು, ಬೈಸಾಖಿ ಹಬ್ಬಕ್ಕೆ ನಿಮ್ಮ ಮನೆ ಮಿಂಚಬೇಕೆ? ಈ ಟಿಪ್ಸ್ ಫಾಲೋ ಮಾಡಿ -
ಗರ್ಭಿಣಿಯರ ಆಹಾರ ಕ್ರಮ: ಮಗುವಿನ ಆರೋಗ್ಯಕ್ಕೆ ಈ ಬದಲಾವಣೆ ಕಡ್ಡಾಯ! -
ಬೇಸಿಗೆ ಬಿಸಿಲಿಗೆ ತಂಪಾಗಲು ವೈರಲ್ ಆಗುತ್ತಿರುವ ಫ್ಯಾಷನ್ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ಫಿಟ್ನೆಸ್ ರೂಟೀನ್ ಬದಲಿಸಿ
ಕುಂಭದಲ್ಲಿ ಬುಧ ಗೋಚಾರ ಫಲ: ಈ 3 ರಾಶಿಯವರ ವೃತ್ತಿ ಜೀವನ, ವ್ಯವಹಾರದಲ್ಲಿ ಪ್ರಗತಿಯ ಸಮಯ
ವೈದಿಕ ಜ್ಯೋತಿಷ್ಯದ ಪ್ರಕಾರ, ಪ್ರತಿಯೊಂದು ಗ್ರಹಕ್ಕೂ ತನ್ನದೇ ಆದ ಮಹತ್ವವಿದೆ. ಅದರಲ್ಲೂ ಬುಧ ಗ್ರಹವು ನಮ್ಮ ಸ್ವಭಾವ, ಯೋಚನಾ ಶಕ್ತಿ ಇವುಗಳ ಮೇಲೆ ಪ್ರಭಾವ ಬೀರುವ ಗ್ರಹವಾಗಿದೆ. ಫೆಬ್ರವರಿ 20 ರಂದು ಗ್ರಹಗಳ ರಾಜಕುಮಾರ ಎಂದು ಕರೆಯಲ್ಪಡುವ ಬುಧ ಕುಂಭ ರಾಶಿಗೆ ಸಂಚರಿಸಲಿದೆ.
ಇದೇ ರಾಶಿಯಲ್ಲಿ ಶನಿಯೂ ಇದೆ. ಬುಧ ಕುಂಭ ರಾಶಿಗೆ ಪ್ರವೇಶ ಮಾಡಿದಾಗ ಕೆಲವೊಂದು ರಾಶಿಗಳಿಗೆ ತುಂಬಾ ಒಳ್ಳೆಯದು. ಈ ಅವಧಿಯಲ್ಲಿ ಆರ್ಥಿಕ ಸ್ಥಿತಿ ತುಂಬಾ ಚೆನ್ನಾಗಿರಲಿದೆ, ವ್ಯಾಪಾರಿಗಳು ಈ ಸಮಯದಲ್ಲಿ ಉತ್ತಮ ಲಾಭ ಗಳಿಸಲು ಸಾಧ್ಯವಾಗುವುದು.

ಬುಧನು ನಿಮ್ಮ ರಾಶಿಯಲ್ಲಿ ಪ್ರಬಲ ಸ್ಥಾನದಲ್ಲಿದ್ದರೆ ವೃತ್ತಿ ಹಾಗೂ ವ್ಯವಹಾರದಲ್ಲಿ ಸಾಕಷ್ಟು ಯಶಸ್ಸನ್ನು ಪಡೆಯುತ್ತಾನೆ. ಅದೇ ಸಮಯದಲ್ಲಿ, ಬುಧವು ದುರ್ಬಲವಾಗಿದ್ದಾಗ ವ್ಯಕ್ತಿಯ ವೃತ್ತಿ ಜೀವನದಲ್ಲಿ ಸಮಸ್ಯೆಗಳು ಉಂಟಾಗಬಹುದು. ಈ ಬುಧ ಸಂಚಾರ ಈ ರಾಶಿಯವರ ವ್ಯವಹಾರಸ್ಥರಿಗೆ ತುಂಬಾ ಒಳ್ಳೆಯದು:
ವೃಷಭ ರಾಶಿ
ಕುಂಭ ರಾಶಿಯಲ್ಲಿ ಬುಧ ಸಂಚಾರದಿಂದ ನಿಮ್ಮ ಆದಾಯ ಹೆಚ್ಚಾಗುತ್ತದೆ. ವ್ಯಕ್ತಿ ಹಣ ಗಳಿಸುವುದರ ಜೊತೆಗೆ ಉಳಿತಾಯದಲ್ಲಿಯೂ ಯಶಸ್ಸನ್ನು ಪಡೆಯುತ್ತಾನೆ. ವೃತ್ತಿಯಲ್ಲಿ ವಿದೇಶಕ್ಕೆ ಹೋಗುವ ಎಲ್ಲಾ ಸಾಧ್ಯತೆಗಳಿವೆ. ಆದ್ದರಿಂದ ವಿದೇಶಕ್ಕೆ ಹೋಗಲು ಪ್ರಯತ್ನಿಸುತ್ತಿದ್ದರೆ ಈ ಅವಧಿಯಲ್ಲಿ ಒಳ್ಳೆಯ ಫಲ ಕಾಣುವಿರಿ. ನೀವು ಪ್ರಚಾರ ಮತ್ತು ಪ್ರಶಂಸೆ ಎರಡನ್ನೂ ಪಡೆಯುತ್ತೀರಿ. ಒಟ್ಟಾರೆಯಾಗಿ, ಈ ಸಾಗಣೆಯು ನಿಮಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ.ಖಾಯಂ ಉದ್ಯೋಗ ಮಾಡುವವರಿಗೆ ಲಾಭವಾಗಲಿದೆ. ವ್ಯಾಪಾರಿಗಳು ಹೆಚ್ಚಿನ ಲಾಭ ಪಡೆಯುವಲ್ಲಿ ಯಶಸ್ವಿಯಾಗುತ್ತೀರಿ.
ಮಿಥುನ ರಾಶಿ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕುಂಭ ರಾಶಿಯಲ್ಲಿ ಬುಧ ಸಂಕ್ರಮಣ ನಿಮ್ಮ ಅದೃಷ್ಟವನ್ನು ಹೆಚ್ಚಿಸುತ್ತದೆ. ಈ ಸಮಯದಲ್ಲಿ ನೀವು ಎಲ್ಲಾ ರೀತಿಯ ಒಳ್ಳೆಯ ಸುದ್ದಿಗಳನ್ನು ಪಡೆಯುತ್ತೀರಿ. ಕಚೇರಿಯಲ್ಲಿ ಹಿರಿಯರಿಂದ ಬೆಂಬಲ ಸಿಗುವ ಸಾಧ್ಯತೆ ಇದೆ. ಇದರೊಂದಿಗೆ ಕುಟುಂಬದ ಸಂತೋಷ ಸಿಗಲಿದೆ. ಉದ್ಯೋಗ ಹುಡುಕುತ್ತಿದ್ದರೆ ಒಳ್ಳೆಯ ಉದ್ದೋಗ ಅವಕಾಶಗಳು ದೊರೆಯಲಿದೆ. ಉದ್ಯೋಗ ಬದಲಾವಣೆಗೆ ಈ ಸಮಯ ಉತ್ತಮವಾಗಿದೆ. ನೀವು ಷೇರು ಮಾರುಕಟ್ಟೆಯಿಂದ ಲಾಭವನ್ನು ಪಡೆಯುತ್ತೀರಿ. ಪೋಷಕರೊಂದಿಗಿನ ಸಂಬಂಧವು ಮಧುರವಾಗಿರುತ್ತದೆ.ನೀವು ಸ್ನೇಹಿತರಿಂದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ವೈವಾಹಿಕ ಜೀವನ ಚೆನ್ನಾಗಿರಲಿದೆ.
ಸಿಂಹ ರಾಶಿ
ಬುಧ ಕುಂಭ ರಾಶಿಗೆ ಅಂತಹ ಪರಿಸ್ಥಿತಿಯಲ್ಲಿ, ಪಾಲುದಾರಿಕೆಗೆ ಸಂಬಂಧಿಸಿದ ಕೆಲಸದಲ್ಲಿ ವ್ಯಕ್ತಿಯು ಯಶಸ್ಸನ್ನು ಪಡೆಯುತ್ತಾನೆ. ವೃತ್ತಿಯ ದೃಷ್ಟಿಯಿಂದಲೂ ಈ ಅವಧಿಯು ಉತ್ತಮವಾಗಿರುತ್ತದೆ. ನಿಮ್ಮ ಕಾರ್ಯಕ್ಷಮತೆ ಅತ್ಯುತ್ತಮವಾಗಿರುತ್ತದೆ. ಕೆಲಸದ ಸ್ಥಳದಲ್ಲಿ ಬೆಂಬಲವಿರುತ್ತದೆ ಮತ್ತು ಬಡ್ತಿ ಕೂಡ ಆಗಬಹುದು. ನಿಮ್ಮ ಕೆಲಸಗಳಿಗೆ ಹಿರಿಯರ ಬೆಂಬಲ ಸಿಗಲಿದೆ. ವೈವಾಹಿಕ ಜೀವನ ಚೆನ್ನಾಗಿರಲಿದೆ.
ಬುಧ ನಮ್ಮ ರಾಶಿಯ ಪ್ರಭಲ ಸ್ಥಾನದಲ್ಲಿದ್ದರೆ ಈ ಪ್ರಯೋಜನಗಳು ದೊರೆಯುವುದು
ವ್ಯಾಪಾರದಲ್ಲಿ ಪ್ರಗತಿ ಕಂಡು ಬರುವುದು
ಬುಧ ಪ್ರಬಲ ಸ್ಥಾನದಲ್ಲಿದ್ದರೆ ವ್ಯಾಪಾರಿಗಳು ಉತ್ತಮ ಲಾಭ ಪಡೆಯಲು ಸಾಧ್ಯವಾಗುವುದು, ಈ ಅವಧಿಯಲ್ಲಿ ಮಾರುಕಟ್ಟೆಯಲ್ಲಿ ಉತ್ತಮ ಲಾಭ ಗಳಿಸಲಿದೆ.
ಜ್ಞಾನ
ಬುಧವು ನಿಮ್ಮ ಜ್ಞಾನವನ್ನು ಹೆಚ್ಚಿಸುತ್ತದೆ, ಈ ಅವಧಿಯಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರಗಳಿಂದ ಉತ್ತಮ ಫಲವನ್ನು ಪಡೆಯಬಹುದು. ಬುಧ ಗ್ರಹವು ವಾಣಿಜ್ಯ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸಲು ಪ್ರೇರೇಪಿಸುತ್ತದೆ.
ಸಂಬಂಧ
ಬುಧ ಗ್ರಹವು ಸಂಬಂಧದ ವಿಷಯದಲ್ಲಿ ಉತ್ತಮವಾಗಿದೆ. ಈ ಗ್ರಹದ ಪ್ರಭಾವವು ನಮ್ಮ ಸಂಬಂಧಗಳಲ್ಲಿ ನಮ್ಮನ್ನು ಅರ್ಥಮಾಡಿಕೊಳ್ಳಲು, ಉತ್ತಮ ಸಂಬಂಧಗಳನ್ನು ಕಾಪಾಡಿಕೊಳ್ಳಲು, ಹೊಸ ಸಂಬಂಧಗಳಲ್ಲಿ ಯಶಸ್ಸನ್ನು ಸಾಧಿಸಲು ಸಹಾಯ ಮಾಡುವುದು.
ಬುಧ ಮಂತ್ರ
ಓಂ ಐಂ ಶ್ರೀಂ ಶ್ರೀಂ ಬುಧಾಯ ನಮಃ ।।
ಓಂ ಬುಧಾಯ ನಮಃ
* ಬುಧ ವೇದ ಮಂತ್ರ
ಓಂ ಉದ್ಬುಧಯಸ್ವಾಗ್ನೇ ಪ್ರತಿ ಜಾಗೃತವಮಿಷ್ಟಾಪೂರತೇ
ಸ ಗ್ವಂ ಸೃಜೇ ತಮ್ಯಾಂ ಚ, ಅಸ್ಮಿನ್ತಧಸ್ತೇ ಅಧುತ್ತರಸ್ಮಿನ್
ವಿಶ್ವೇದೇವ ಯಜಮಾನಶ್ಚ ಸೀದತ್ । ಓಂ ಬುಧಾಯ ನಮಃ ।
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











