Latest Updates
-
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ?
ಸಿಂಹ ರಾಶಿಯಲ್ಲಿ ಬುಧ ಅಸ್ತಂಗತ: ಬುಧ ಅಸ್ತವಾಗಿರುವುದರಿಂದ ಯಾವೆಲ್ಲಾ ರಾಶಿಗಳು ಜಾಗ್ರತೆ
ಇದೀಗ ಬುಧನು ಸಿಂಹರಾಶಿಯಲ್ಲಿ ಅಸ್ತನಾಗಿದ್ದಾನೆ, ಬುಧನು ಅಸ್ತನಾಗಿರುವ ಸ್ಥಿತಿಯಲ್ಲಿದ್ದಾಗ ಈ ಅವಧಿ ಬಹುತೇಕ ರಾಶಿಗಳಿಗೆ ಅಅನುಕೂಲಕರವಲ್ಲ, ಬುಧನ ಪ್ರಭಾವ ಯಾರಿಗೆ ಹೇಗಿದೆ ನೋಡೋಣ:
ಮೇಷ ರಾಶಿ
ಈ ಅವಧಿಯಲ್ಲಿ ಭವಿಷ್ಯದ ಬಗ್ಗೆ ಯಾವುದೇ ದೊಡ್ಡ ನಿರ್ಧಾರ ತೆಗೆದುಕೊಳ್ಳಬೇಡಿ. ನಿಮ್ಮ ಕೆಲಸದಲ್ಲಿ ನೀವು ಕೆಲವು ಅಡೆತಡೆಗಳನ್ನು ಎದುರಿಸಬೇಕಾಗಬಹುದು. ವೃತ್ತಿ ಬದುಕಿನ ಬಗ್ಗೆ ಚಿಂತೆ ಕಾಡುವುದು. ವ್ಯಾಪಾರಿಗಳಿಗೆ ಈ ಅವಧಿ ಧನಲಾಭವಾಗಲಿದೆ. ಆರ್ಥಿಕವಾಗಿ ನೋಡುವುದಾದರೆ
ಲಾಭ ಮತ್ತು ವೆಚ್ಚ ಎರಡನ್ನೂ ಎದುರಿಸಬೇಕಾಗುತ್ತದೆ. ಸಂಬಂಧದ ಬಗ್ಗೆ ಹೇಳುವುದಾದರೆ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯವಿರಬಹುದು.

ವೃಷಭ ರಾಶಿ
ಬುಧ ಅಸ್ತದ ಈ ಸಮಯದಲ್ಲಿ ವೃಷಭ ರಾಶಿಯವರು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು, ಈ ಅವಧಿ ಆರ್ಥಿಕವಾಗಿ ತುಂಬಾ ಒಳ್ಳೆಯದಿದೆ. ನಿಮ್ಮ ಕೆಲಸಕ್ಕೆ ಸಂಬಂಧಿಸಿದಂತೆ ನಿಮ್ಮ ಪ್ರಗತಿಯಲ್ಲಿ ಅಡೆತಡೆ ಎದುರಿಸುತ್ತೀರಿ. ವ್ಯಾಪಾರಿಗಳು ಲಾಭ, ನಷ್ಟ ಎರಡನ್ನೂ ಪಡೆಯುತ್ತೀರಿ. ಕುಟುಂಬಕ್ಕೆ ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ಸಂಬಂಧದ ವಿಷಯದಲ್ಲಿ ಭಿನ್ನಾಭಿಪ್ರಾಯಗಳಿರಬಹುದು, ಹೊಟ್ಟೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆ ಎದುರಿಸಬಹುದು.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಈ ಅವಧಿ ಉತ್ತಮವಾಗಿರಲಿದೆ. ವೃತ್ತಿ ಬದುಕಿನಲ್ಲಿ ನಿಮಗೆ ತುಂಬಾ ಒಳ್ಳೆಯದಿದೆ. ವ್ಯಾಪಾರಿಗಳು ಉತ್ತಮ ಲಾಭವನ್ನು ಗಳಿಸುವಲ್ಲಿ ಯಶಸ್ಸನ್ನು ಪಡೆಯಬಹುದು. ಆರ್ಥಿಕವಾಗಿ ಈ ಅವಧಿ ಉತ್ತಮವಾಗಿದೆ. ಸಂಬಂಧ ಚೆನ್ನಾಗಿರಲಿದೆ. ಆರೋಗ್ಯ ಚೆನ್ನಾಗಿರಲಿದೆ.
.
ಕರ್ಕ ರಾಶಿ
ಬುಧ ಅಸ್ತವಾಗಿರುವ ಈ ಅವಧಿಯಲ್ಲಿ ನೀವು ಆರ್ಥಿಕ ವಿಷಯಗಳತ್ತ ಗಮನಹರಿಸಿ. ನಿಮ್ಮ ವೈಯಕ್ತಿಕ ವಿಷಯಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕು. ವೃತ್ತಿ ಬದುಕಿನಲ್ಲಿ ತೃಪ್ತಿ ಕಡಿಮೆ ಇರಲಿದೆ. ವ್ಯಾಪಾರಿಗಳು ಹೂಡಿಕೆ ಸಂಬಂಧಿಸಿದ ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳಬೇಡಿ. ಹಣ ಗಳಿಸಲು ಹೆಚ್ಚು ಪ್ರಯತ್ನ ಮಾಡಬೇಕು, ವೈಯಕ್ತಿಕ ಜೀವನದಲ್ಲಿ ಕೆಲ ಸಮಸ್ಯೆಗಳು ಇರಬಹುದು. ಈ ಅವಧಿಯಲ್ಲಿ ಆರೋಗ್ಯದ ಕಡೆಗೆ ಗಮನಹರಿಸಿ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಈ ಅವಧಿ ಅನುಕೂಲಕರವಾಗಿದೆ ವೃತ್ತಿ ಬದುಕಿನಲ್ಲಿ ಪ್ರಗತಿಯನ್ನು ಕಾಣುತ್ತೀರಿ ಮತ್ತು ನೀವು ಹೆಚ್ಚು ತೃಪ್ತರಾಗುತ್ತೀರಿ. ಆರ್ಥಿಕವಾಗಿ ಉತ್ತಮವಾಗಿದೆ, ಉಳಿತಾಯ ಮಾಡಲು ಸಾಧ್ಯವಾಗುವುದು. ವ್ಯಾಪಾರಿಗಳು ಲಾಭ ಗಳಿಸುತ್ತೀರಿ. ಕುಟುಂಬ ಜೀವನ ಚೆನ್ನಾಗಿರಲಿದೆ. ಆರೋಗ್ಯ ಸಮಸ್ಯೆಗಳಿರಬಹುದು.
ಕನ್ಯಾ ರಾಶಿ
ನೀವು ಉದ್ಯೋಗ ಬದಲಾವಣೆಯ ಬಗ್ಗೆ ಆಲೋಚಿಸಬಹುದು. ವ್ಯಾಪಾರಿಗಳಿಗೆ ಈ ಅವಧಿ ಅನುಕೂಲಕರವಲ್ಲ, ಈ ಅವಧಿಯಲ್ಲಿ ಖರ್ಚು ಹೆಚ್ಚಿರಲಿದೆ. ವೈಯಕ್ತಿಕ ಬದುಕಿನಲ್ಲಿ ಕೆಲ ಸಮಸ್ಯೆಗಳನ್ನು ಎದುರಿಸಬಹುದು. ಮಾನಸಿಕ ಒತ್ತಡ ಇರಲಿದೆ. ವೃತ್ತಿ ಜೀವನದಲ್ಲಿ ಒತ್ತಡ ಇರಲಿದೆ.
ತುಲಾ ರಾಶಿ
ಸಿಂಹರಾಶಿಯಲ್ಲಿ ಬುಧ ಅಸ್ತವಾಗಿರುವ ಮತ್ತು ಜೀವನದಲ್ಲಿ ಉತ್ತಮ ಸಮತೋಲನವನ್ನು ಕಾಯ್ದುಕೊಳ್ಳಲು ಸಾಧ್ಯವಾಗದಿರುವ ಸಾಧ್ಯತೆ ಇದೆ. ಆರ್ಥಿಕ ವಿಷಯದಲ್ಲಿ ಮಿಶ್ರಫಲ. ಈ ಅವಧಿಯಲ್ಲಿ ಖರ್ಚು ಇರಲಿದೆ. ವೈಯಕ್ತಿಕ ಜೀವನದಲ್ಲಿ ಸಂಗಾತಿಯ ಜೊತೆ ಕೆಲ ಭಿನ್ನಾಭಿಪ್ರಾಯಗಳಿರಬಹುದು. ಆರೋಗ್ಯದ ಕಡೆಗೆ ಹೆಚ್ಚು ಕಾಳಜಿವಹಿಸಿ.
ವೃಶ್ಚಿಕ ರಾಶಿ
ಬುಧ ಅಸ್ತವಾಗಿರುವ ಈ ಅವಧಿ ವೃಶ್ಚಿಕ ರಾಶಿಯವರಿಗೆ ಅನುಕೂಲಕರವಲ್ಲ, ವೃತ್ತಿ ಬದುಕಿನಲ್ಲಿ ಕೆಲಸ ಬದಲಾವಣೆ ಬಗ್ಗೆ ಆಲೋಚಿಸಬಹುದು. ವ್ಯಾಪಾರಿಗಳಿಗೆ ಈ ಅವಧಿ ಸವಾಲಿನಿಂದ ಕೂಡಿರಲಿದೆ. ಲಾಭ ಗಳಿಸಲು ಹೆಚ್ಚು ಕಷ್ಟಪಡಬೇಕಾಗುತ್ತದೆ. ಕುಟುಂಬದಲ್ಲಿ ಕೆಲ ಭಿನ್ನಾಭಿಪ್ರಾಯತೆ ಇರಬಹುದು. ಈ ಅವಧಿಯಲ್ಲಿ ಆರೋಗ್ಯದ ಕಡೆಗೆ ಗಮನಹರಿಸಿ.
ಧನು ರಾಶಿ
ಈ ಅವಧಿಯಲ್ಲಿ ಆರೋಗ್ಯದ ಕಡೆಗೆ ಗಮನಹರಿಸಿ. ಆರೋಗ್ಯಕ್ಕಾಗಿ ಹಣ ಖರ್ಚು ಮಾಡಬೇಕಾಗುತ್ತದೆ. ಕೆಲಸದಲ್ಲಿ ನೀವು ಬಯಸಿದ ಫಲಿತಾಂಶಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಲಾಭವನ್ನು ಪಡೆಯಲು ಹೆಚ್ಚು ನಷ್ಟವನ್ನು ಅನುಭವಿಸಬಹುದು. ಹಣಕಾಸಿನ ವಿಷಯದಲ್ಲಿ, ಅಜಾಗರೂಕತೆಯಿಂದ ನೀವು ಸ್ವಲ್ಪ ನಷ್ಟವನ್ನು ಅನುಭವಿಸಬೇಕಾಗಬಹುದು. ಸಂಗಾತಿಯ ಜೊತೆ ಏನಾದರೂ ಸಮಸ್ಯೆ ಇದ್ದರೆ ಮುಕ್ತವಾಗಿ ಮಾತನಾಡಿ. ಆರೋಗ್ಯ ಸಮಸ್ಯೆಗಳಿರಬಹುದು.
ಮಕರ ಸಂಕ್ರಾಂತಿ
ಬಧ ಅಸ್ತವಾದಾಗ ನೀವು ಅನಿರೀಕ್ಷಿತ ಪ್ರಯೋಜನಗಳನ್ನು ಪಡೆಯುತ್ತೀರಿ. ಈ ಅವಧಿ ಹಣಕಾಸಿನ ದೃಷ್ಟಿಯಿಂದ ಉತ್ತಮವಲ್ಲ. ವೃತ್ತಿ ಜೀವನದಲ್ಲಿ
ನೀವು ನಷ್ಟವನ್ನು ಎದುರಿಸಬಹುದು. ಹಣಕಾಸಿನ ವಿಷಯದಲ್ಲಿ, ನಿಮ್ಮ ಖರ್ಚುಗಳನ್ನು ಪೂರೈಸುವಲ್ಲಿ ನೀವು ತೊಂದರೆಗಳನ್ನು ಎದುರಿಸಬೇಕಾಗಬಹುದು. ವೈಯಕ್ತಿಕ ಬದುಕಿನಲ್ಲಿ ಒತ್ತಡ ಇರಲಿದೆ. ಆರೋಗ್ಯದ ಬಗ್ಗೆ ಹೇಳುವುದಾದರೆ ಕಣ್ಣು ನೋವಿನ ಸಮಸ್ಯೆವಿರಬಹುದು.
ಕುಂಭ ರಾಶಿ
ಬುಧ ಅಸ್ತವಾಗಿರುವ ಈ ಅವಧಿ ವ್ಯಾಪಾರಿಗಳಿಗೆ ಅನುಕೂಲಕರವಾಗಿದೆ, ನೀವು ಹೊಸ ವ್ಯವಹಾರವನ್ನು ಸಹ ಪ್ರಾರಂಭಿಸಬಹುದು. ವೃತ್ತಿ ಬದುಕಿನಲ್ಲಿ ನೀವು ಬಯಸಿದ ಫಲಿತಾಂಶ ಪಡೆಯುತ್ತೀರಿ. ವ್ಯಾಪಾರದ ದೃಷ್ಟಿಯಿಂದ ನೀವು ಲಾಭ ಮತ್ತು ನಷ್ಟ ಎರಡನ್ನೂ ಪಡೆಯುತ್ತೀರಿ. ಹಣಕಾಸಿನ ವಿಷಯದಲ್ಲಿ
ಲಾಭದ ಬದಲಿಗೆ ಹೆಚ್ಚಿನ ವೆಚ್ಚಗಳನ್ನು ಭರಿಸಬೇಕಾಗುತ್ತದೆ. ಈ ಅವಧಿಯಲ್ಲಿ ಉಳಿತಾಯ ಕೂಡ ಕಷ್ಟವಾಗುವುದು. ಸಂಬಂಧದ ಕಡೆಗೆ ಗಮನಹರಿಸಬೇಕು. ಆರೋಗ್ಯದ ಕಡೆಗೆ ಗಮನಹರಿಸಿ. ಇಲ್ಲದಿದ್ದರೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಎದುರಿಸಬೇಕಾಗುತ್ತದೆ.
ಮೀನ ರಾಶಿ
ಸಿಂಹ ರಾಶಿಯಲ್ಲಿ ಬುಧ ಗ್ರಹದ ಸಮಯದಲ್ಲಿ, ನೀವು ಕೌಟುಂಬಿಕ ಜೀವನದಲ್ಲಿ ಸಮಸ್ಯೆಗಳನ್ನು ಮತ್ತು ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ಕೆಲಸಕ್ಕೆ ಸರಿಯಾದ ಮೆಚ್ಚುಗೆಯನ್ನು ಪಡೆಯಲು ನಿಮಗೆ ಸಾಧ್ಯವಾಗುವುದಿಲ್ಲ, ವ್ಯವಹಾರದಲ್ಲಿ ನಿಮ್ಮ ನಿರ್ಧಾರವು ನಿಮಗೆ ವಿರುದ್ಧವಾಗಬಹುದು, ಹಣಕಾಸಿನ ವಿಷಯದಲ್ಲಿ, ನೀವು ಅನಗತ್ಯ ರೀತಿಯಲ್ಲಿ ಖರ್ಚು ಮಾಡಬೇಕಾಗುತ್ತದೆ, ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯಗಳಿರಬಹುದು. ಈ ಅವಧಿಯಲ್ಲಿ ನೀವು ಜೀರ್ಣಕ್ರಿಯೆ ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











