Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬುಧ ಗೋಚರ: ತಿಂಗಳ ಅಂತ್ಯದಿಂದ ಮೂರು ರಾಶಿಯವರ ಭವಿಷ್ಯ ಬದಲು.! ತಲೆ ಎತ್ತಿ ನಡೆಯುವ ದಿನಗಳು!
ಜ್ಯೋತಿಷ್ಯದಲ್ಲಿ ಗ್ರಹಗಳ ಚಲನೆಯನ್ನು ಬಹಳ ಪ್ರಮುಖ ವಿದ್ಯಮಾನ ಎಂದು ಪರಿಗಣಿಸಲಾಗಿದೆ. ಹಾಗೆ ಈ ಗ್ರಹಗಳ ಚಲನೆಯಿಂದ ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಬೀರುವುದು ಸಹ ನೋಡಬಹುದು. ಇನ್ನು ಈ ಎಲ್ಲಾ ವಿದ್ಯಮಾನಕ್ಕಿಂತಲೂ ಗ್ರಹಗಳ ಚಲನೆಯಲ್ಲಿ ಉಂಟಾಗುವ ಸಂಯೋಗಗಳನ್ನು ಬಹಳ ಪರಿಣಾಮಕಾರಿ ಎಂದು ಬಿಂಬಿಸಲಾಗಿದೆ.
ಇನ್ನು ಇದೇ ಆಗಸ್ಟ್ 30 ರಂದು ಸಂಜೆ 4:39ರಲ್ಲಿ ಬುಧನು ಕರ್ಕ ರಾಶಿಯಿಂದ ಸೂರ್ಯನ ಅಧಿಪತ್ಯ ಇರುವಂತಹ ಸಿಂಹ ರಾಶಿಗೆ ಪ್ರವೇಶಿಸಲಿದ್ದಾನೆ. ಈ ಬುಧ ಗೋಚರವು ಹಲವು ರಾಶಿಗಳ ಮೇಲೆ ಪ್ರಭಾವ ಉಂಟು ಮಾಡುವುದು ನೋಡಬಹುದು. ಬುಧನನ್ನು ಬುದ್ದಿವಂತಿಕೆ, ವ್ಯವಹಾರ, ಆರ್ಥಿಕ ಅಂಶಗಳ ಗ್ರಹವೆಂದು ಪರಿಗಣಿಸಲಾಗಿದೆ. ಈಗ ಬುಧ ಗೋಚರವು ಹಲವು ರಾಶಿಗಳ ಮೇಲೆ ಪರಿಣಾಮ ಬೀರುವುದು ನೋಡಬಹುದು.

ಬುಧನು ಸೆಪ್ಟೆಂಬರ್ 15ರ ವರೆಗೂ ಸಿಂಹ ರಾಶಿಯಲ್ಲಿರುತ್ತಾನೆ. ಈ ಸಮಯದಲ್ಲಿ ಬುಧನಿಂದ ಹಲವು ರಾಶಿಗಳು ವಿಶೇಷ ಆಶೀರ್ವಾದಕ್ಕೆ ಒಳಗಾಗುವುದು ನೋಡಬಹುದು. ವೃತ್ತಿ, ವೈಯಕ್ತಿಕ ಜೀವನ, ಹಣಕಾಸು, ಆಸ್ತಿ ಹೀಗೆ ಹಲವು ವಿಚಾರಗಳಲ್ಲಿ ಶುಭವಾಗುವುದು ನೋಡಬಹುದು. ಅದರಲ್ಲೂ ವಿಶೇಷವಾಗಿ ಯಾವ ಮೂರು ರಾಶಿಗಳ ಮೇಲೆ ಆತನ ಧನಾತ್ಮಕ ಪರಿಣಾಮ ಉಂಟು ಮಾಡಲಿದ್ದಾನೆ ಅನ್ನೋದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ವೃಷಭ ರಾಶಿ
ವೃಷಭ ರಾಶಿಯ 4ನೇ ಮನೆಯಲ್ಲಿ ಬುಧ ಸಂಚಾರ ನೋಡಬಹುದು. 4ನೇ ಮನೆಯು ಕುಟುಂಬ, ಆಸ್ತಿ, ಮನೆಗೆ ಸಂಬಂಧಿಸಿದ ವಿಚಾರಗಳಿಗೆ ಶುಭವಾಗುವ ಸಾಧ್ಯತೆಗಳಿವೆ. ದೀರ್ಘಕಾಲದವರೆಗೆ ಸಿಲುಕಿಕೊಂಡಿದ್ದ ಕೆಲಸವು ಮತ್ತೆ ವೇಗವನ್ನು ಪಡೆಯಬಹುದು ಮತ್ತು ನೀವು ನಿರಾಳರಾಗುವಿರಿ. ಭೂಮಿ ಮತ್ತು ಆಸ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ ಯಶಸ್ಸಿನ ಸಾಧ್ಯತೆ ಇರುತ್ತದೆ, ಅದು ಖರೀದಿ ಮತ್ತು ಮಾರಾಟ ಅಥವಾ ಯಾವುದೇ ವಿವಾದವನ್ನು ಪರಿಹರಿಸುವ ವಿಷಯವಾಗಿರಬಹುದು. ಮನೆಯಲ್ಲಿ ಸೌಕರ್ಯಗಳು ಹೆಚ್ಚಾಗುತ್ತವೆ ಮತ್ತು ಹೊಸ ಮಾರ್ಗಗಳನ್ನು ಪಡೆಯಬಹುದು. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ ಮತ್ತು ಕುಟುಂಬದ ವಾತಾವರಣವೂ ಆಹ್ಲಾದಕರವಾಗಿರುತ್ತದೆ. ಬುಧನ ಆರಂಭಿಕ ದಿನಗಳ ಚಲನೆಯಿಂದ ಸ್ವಲ್ಪ ಅಡಚಣೆ ಇದ್ದರೂ ಬಳಿಕ ನೀವು ಅಂದುಕೊಂಡ ಕೆಲಸಗಳು ಮುಗಿಯುವುದು ನೋಡಬಹುದು.
ಕರ್ಕ ರಾಶಿ
ಕರ್ಕ ರಾಶಿಯ 2ನೇ ಮನೆಯಲ್ಲಿ ಬುಧ ಸಂಚಾರ ನೋಡಬಹುದು. ಇದು ಕೂಡ ಸಂಪತ್ತು, ಆಸ್ತಿ, ಮನೆ, ಕುಟುಂಬ ಸಂಬಂಧಿತ ವಿಚಾರವಾಗಿ ಒಳಿತಾಗುವ ಶುಭ ಸೂಚನೆಯಾಗಿರಲಿದೆ. ನೀವು ಹಠಾತ್ ಆರ್ಥಿಕ ಪ್ರಯೋಜನಗಳನ್ನು ಪಡೆಯಬಹುದು ಮತ್ತು ಆರ್ಥಿಕ ಪರಿಸ್ಥಿತಿ ಬಲವಾಗಿರುತ್ತದೆ. ಅಲ್ಲದೆ ನಿಮ್ಮ ಮಾತಿನ ಶೈಲಿಯಲ್ಲಿ ಸಕಾರಾತ್ಮಕ ಬದಲಾವಣೆ ಇರುತ್ತದೆ, ಇದರಿಂದಾಗಿ ಜನರು ನಿಮ್ಮ ಮಾತುಗಳಿಗೆ ಪ್ರಾಮುಖ್ಯತೆ ನೀಡುತ್ತಾರೆ. ಈ ಸಮಯದಲ್ಲಿ ನೀವು ದುಬಾರಿ ಬಟ್ಟೆ ಅಥವಾ ಆಭರಣಗಳನ್ನು ಖರೀದಿಸುವ ಕಾರ್ಯಕ್ಕೂ ಮುಂದಾಗಬಹುದು. ಕುಟುಂಬದ ಕಾರ್ಯಗಳಿಗೆ ನಿಮ್ಮ ಸಹಕಾರ ಇರಲಿದೆ. ಸಮಾಜದಲ್ಲಿ ನಿಮ್ಮ ಕೆಲಸಗಳಿಗೆ ಬೆಂಬಲ ಸಿಗಲಿದೆ. ಆಪ್ತರೊಬ್ಬರಿಂದ ಅಪೇಕ್ಷಿಸಿದ್ದ ಹಣಕಾಸಿನ ಬೆಂಬಲ ದೊರೆಯುವ ಸಾಧ್ಯತೆ ಇದೆ.
ತುಲಾ ರಾಶಿ
ತುಲಾ ರಾಶಿಯವರಲ್ಲಿ ಬುಧ ಸಂಚಾರದಿಂದ ಹಲವು ರೀತಿಯಾಗಿ ಲಾಭದಾಯಕ ದಿನಗಳ ನೋಡಬಹುದು. ಲಾಭದ ಮನೆಯಲ್ಲಿ ಬುಧನ ಆಗಮನವು ವೃತ್ತಿ ಮತ್ತು ಆರ್ಥಿಕ ಜೀವನದಲ್ಲಿ ಹೊಸ ಅವಕಾಶಗಳ ತರುತ್ತದೆ. ದೀರ್ಘಕಾಲದಿಂದ ಬಾಕಿ ಇರುವ ಕೆಲಸಗಳು ಈ ಸಮಯದಲ್ಲಿ ಮುಗಿಯುವಂತಹ ಲಕ್ಷಣಗಳಿವೆ. ವ್ಯವಹಾರದಲ್ಲಿ ಉತ್ತಮ ಲಾಭ ಪಡೆಯುವ ಸಾಧ್ಯತೆಯಿದೆ. ನಿಮ್ಮ ಆದಾಯದ ಹೊಸ ಮೂಲಗಳು ತೆರೆಯಬಹುದು. ಇದು ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಬ್ಯಾಂಕಿಂಗ್ ವಿಚಾರಗಳು, ಸಾಲ ಸೌಲಭ್ಯ ಪಡೆಯಲು ಯತ್ನಿಸುತ್ತಿದ್ದ ಮಂದಿಗೆ ಈ ಸಮಯದಲ್ಲಿ ಬಹುತೇಕ ಲಾಭ ಮಾಡುವಿರಿ. ವೃತ್ತಿಗೆ ಸಂಬಂಧಿಸಿದಂತೆ ಒತ್ತಡಗಳು ಕಡಿಮೆಯಾಗಲಿವೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications