Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
2025ರಲ್ಲಿ ಬುಧಾದಿತ್ಯ ಯೋಗದಿಂದ ಕುಬೇರನಂತೆ ಬದಲಾಗಲಿದ್ದಾರೆ ಇವರು..! ಯಾರಿಗೆ ಲಾಭವಿದೆ ಗೊತ್ತಾ?
2025ರ ಹೊಸ ವರ್ಷ ಆರಂಭವಾಗುತ್ತಿದ್ದಂತೆ ಕೆಲವು ರಾಶಿಯವರಲ್ಲಿ ಲಾಭ ನಷ್ಟದ ಲೆಕ್ಕಾಚಾರ ಆರಂಭಗೊಂಡಿದೆ. ಏಕೆಂದರೆ 2025ರಲ್ಲಿ ಹಲವು ಗ್ರಹಗಳ ಸಂಚಾರದಿಂದಾಗಿ ಹತ್ತಾರು ಯೋಗ ರೂಪುಗೊಳ್ಳುತ್ತಿದೆ. ಹೀಗಾಗಿ ಮುಂದಿನ ವರ್ಷ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬಹಳ ಮಹತ್ವದ ವರ್ಷವಾಗಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಜನವರಿಯಲ್ಲಿ ಅನೇಕ ಪ್ರಮುಖ ಗ್ರಹಗಳ ಬದಲಾವಣೆಗಳು ಸಂಭವಿಸಲಿವೆ. ಈ ಗ್ರಹಗಳ ಸಂಚಾರದಿಂದಾಗಿ ಕೆಲವು ಆರ್ಥಿಕ ಲಾಭಗಳನ್ನು ಅನುಭವಿಸಲಿದ್ದಾರೆ ಮತ್ತು ಅವರ ಸಂಪತ್ತು ಹೆಚ್ಚಾಗುತ್ತದೆ.
ಅದರಲ್ಲೂ 2025ರಲ್ಲಿ ಬುಧನು ಧನು ರಾಶಿ ಪ್ರವೇಶಿಸಿದರೆ ಇತ್ತ ಸೂರ್ಯ ಮಕರ ರಾಶಿ ಪ್ರವೇಶಿಸಲಿದ್ದಾನೆ. ಇದು ಬುಧಾದಿತ್ಯ ರಾಜಯೋಗಕ್ಕೆ ಕಾರಣವಾಗುತ್ತಿದೆ. ಈ ರಾಜಯೋಗವು ನಿರ್ದಿಷ್ಟ ರಾಶಿ ಜನರಲ್ಲಿ ಅನೇಕ ಪ್ರಯೋಜನಗಳ ತರಲಿದೆ. ಬುದ್ಧಾದಿತ್ಯ ರಾಜಯೋಗದಿಂದ ಲಾಭ ಅನುಭವಿಸುವ 4 ರಾಶಿಗಳ ಕುರಿತಾಗಿ ಇಲ್ಲಿ ವಿವರಿಸಲಾಗಿದೆ. ಹಾಗಾದ್ರೆ ಯಾರಿಗೆ ಲಾಭವಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಿ.

ಮೇಷ ರಾಶಿ
ಮೇಷ ರಾಶಿಯವರು ಬುಧಾದಿತ್ಯ ರಾಜಯೋಗದಿಂದ ಉತ್ತಮ ಲಾಭ ಪಡೆಯಲಿದ್ದಾರೆ. ಉದ್ಯೋಗಾಕಾಂಕ್ಷಿಗಳಿಗೆ ಈ ಅವಧಿಯಲ್ಲಿ ತಾವು ಬಯಸಿದಂತೆ ಕೆಲಸ ಕಾರ್ಯಗಳು ದೊರೆಯಲಿದೆ. ನಿಮ್ಮ ಆರ್ಥಿಕ ಸಮಸ್ಯೆಗಳು ದೂರಾಗಲಿದೆ. ವಿದ್ಯಾರ್ಥಿಗಳಿಗೆ ಇದು ಶುಭ ಕಾಲವಾಗುತ್ತಿದೆ. ಹಾಗೆ ಎಲ್ಲ ಕೆಲಸಗಳು ನೀವು ಅಂದುಕೊಂಡತೆ ನಡೆಯಲಿದೆ. ಆರೋಗ್ಯದಲ್ಲಿ ಸುಧಾರಣೆ, ಪ್ರೀತಿ, ಪ್ರೇಮದ ವಿಚಾರದಲ್ಲಿ ನಿಮಗೆ ಉತ್ತಮ ದಿನಗಳು ಬರಲಿದೆ.
ಮಿಥುನ ರಾಶಿ
ಮಿಥುನ ರಾಶಿಯವರು ಬುಧಾದಿತ್ಯ ರಾಜಯೋಗದಿಂದ ಅಪಾರ ಲಾಭವನ್ನು ಪಡೆಯಲಿದ್ದಾರೆ. ಅವರು ಕೆಲಸದ ಸ್ಥಳದಲ್ಲಿ ಅನೇಕ ಮನ್ನಣೆಗಳ ಪಡೆಯುತ್ತಾರೆ. ಜೀವನದಲ್ಲಿ ಅವರು ಬಹುದೊಡ್ಡ ಕನಸುಗಳನ್ನು ಸಾಕಾರ ಮಾಡಿಕೊಳ್ಳಲು ಮುಂದಾಗುತ್ತಾರೆ. ವೃತ್ತಿಯಲ್ಲಿ ಪ್ರಗತಿ ನೋಡಲಿದ್ದಾರೆ. ನಿಮ್ಮ ಬಹುದೊಡ್ಡ ಕನಸುಗಳಿಗೆ ಈ ಸಮಯದಲ್ಲಿ ಸೂಕ್ತ ಪ್ರಗತಿ ಕಾಣಲಿದೆ. ವ್ಯಪಾರಿಗಳಿಗೆ ಈ ಕಾಲ ಬಹಳ ಶುಭಕರವಾಗಿರಲಿದೆ. ಕೌಟುಂಬಿಕ ವಿಚಾರದಲ್ಲಿ ನಿಮ್ಮ ಪರವಾದ ಪ್ರಶಂಸೆ ನೋಡಬಹುದು.
ತುಲಾ ರಾಶಿ
ತುಲಾ ರಾಶಿಯವರು ಬುಧಾದಿತ್ಯ ರಾಜಯೋಗದಿಂದ ಅನೇಕ ಲಾಭಗಳನ್ನು ಪಡೆಯುತ್ತಾರೆ. ಈ ರಾಶಿಯವರಲ್ಲಿ ಆರ್ಥಿಕ ಪ್ರಗತಿ ನೋಡಬಹುದು. ಬುಧ ಮತ್ತು ಸೂರ್ಯ ಎರಡೂ ಗ್ರಹಗಳ ಲಾಭ ನಿಮಗೆ ಸಿಗುತ್ತದೆ. ಇದು ದೀರ್ಘಕಾಲದ ನಿಮ್ಮ ಆರ್ಥಿಕ ಸಮಸ್ಯೆಯನ್ನು ದೂರ ಮಾಡಲಿದೆ. ಹಣಕಾಸಿನ ವಿಚಾರದಲ್ಲಿ ನಿಮಗೆ ಗೆಲುವು ಸಿಗಲಿದೆ. ಹಣಕಾಸಿನ ಸಮಸ್ಯೆಗಳು ಅವರಿಂದ ದೂರವಾಗುತ್ತವೆ ಮತ್ತು ಅದೃಷ್ಟವು ನಿಮ್ಮನ್ನು ಹುಡುಕಿ ಬರಲಿದೆ. ಸಾಮಾನ್ಯಕ್ಕಿಂತ ಹೆಚ್ಚು ಆಸ್ತಿಯ ಪ್ರಗತಿ ನೀವು ನೋಡಬಹುದು. ಹಣದ ವಿಚಾರದಲ್ಲಿ ನಿಮ್ಮ ಕೈ ತುಂಬಬಹುದು.
ಮಕರ ರಾಶಿ
ಬುಧಾದಿತ್ಯ ರಾಜಯೋಗವು ಮಕರ ರಾಶಿಯವರ ಆರ್ಥಿಕ ಸಮಸ್ಯೆಗಳನ್ನು ಪರಿಹರಿಸುತ್ತದೆ. ಹೊಸ ವ್ಯವಹಾರ ಪ್ರಾರಂಭಿಸು ನಿಮ್ಮ ಕನಸುಗಳಿಗೆ ಇಂದು ಶುಭವಾಗಲಿದೆ. ವ್ಯಾಪಾರಿಗಳು ತಮ್ಮ ವ್ಯವಹಾರದಲ್ಲಿ ಖ್ಯಾತಿಯನ್ನು ಗಳಿಸಬಹುದು. ಅವರ ನವೀನ ವ್ಯಾಪಾರ ತಂತ್ರಗಳು ಅವರಿಗೆ ಅದೃಷ್ಟವನ್ನು ತರುತ್ತವೆ. ಉದ್ಯೋಗದಲ್ಲಿರುವವರಿಗೆ ಭಾರೀ ಆರ್ಥಿಕ ಲಾಭವಾಗಲಿದೆ. ಮನೆಯಲ್ಲಿ ಶಾಂತಿ ಇರಲಿದೆ. ನಿಮ್ಮ ಕೆಲಸಗಳಿಂದ ಬೇರೆಯವರು ಕೂಡ ಖುಷಿ ಪಡುತ್ತಾರೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯನ್ನು ಖಾತರಿಪಡಿಸಲಾಗಿಲ್ಲ. ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕನ್ನಡ ಬೋಲ್ಡ್ ಸ್ಕೈ ಖಚಿತಪಡಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications