Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ವರ್ಷದ ಮೊದಲ ಬುಧಾದಿತ್ಯ ಯೋಗ ಈ ರಾಶಿಗಳಿಗೆ ಅದೃಷ್ಟ ತಂದಿದೆ
ಬುಧಾದಿತ್ಯ ಯೋಗವನ್ನು ಶುಭ ಯೋಗ ಎಂದು ಪರಿಗಣಿಸಲಾಗಿದೆ. ಈ ಯೋಗದ ಬಲದಿಂದ ಕೆಲ ರಾಶಿಯವರು ತುಂಬಾನೇ ಅದ್ಭುತ ಪ್ರಯೋಜನ ಪಡೆಯುತ್ತಾರೆ. ಅದರಲ್ಲಿಯೂ ಈ ವರ್ಷದ ಮೊದಲ ಬುಧಾದಿತ್ಯ ಜನವರಿ ತಿಂಗಳಿನಲ್ಲಿ ಉಂಟಾಗಲಿದೆ.

ಬುಧಾದಿತ್ಯ ಯೋಗ ಎಂದರೇನು?
ಗ್ರಹಗಳ ಅಧಿಪತಿಯಾದ ಸೂರ್ಯ ಹಾಗೂ ಗ್ರಹಗಳ ರಾಜಕುಮಾರ ಎಂದು ಕರೆಯಲ್ಪಡುವ ಬುಧನು ಒಂದೇ ರಾಶಿಯಲ್ಲಿರುವುದು. ಈ ಎರಡು ಗ್ರಹಗಳ ಸಂಯೋಗವಾದಾಗ ಕೆಲ ರಾಶಿಗಳ ಮೇಲೆ ಅದ್ಭುತ ಪ್ರಯೋಜನ ಬೀರಲಿದೆ. ಈಗ ಧನು ರಾಶಿಯಲ್ಲಿ ಬುಧಾದಿತ್ಯ ಯೋಗ ನಡೆಯುತ್ತಿದೆ, ಜನವರಿ ಮಾಸದ ಕೊನೆಯ ವಾರದಲ್ಲಿ ಮಕರ ರಾಶಿಯಲ್ಲಿ ಬುಧಾದಿತ್ಯ ಯೋಗ ಉಂಟಾಗಲಿದ್ದು ಈ ರಾಶಿಯವರು ಹೆಚ್ಚಿನ ಪ್ರಯೋಜನ ಪಡೆಯಲಿದ್ದಾರೆ:
ವೃಷಭ ರಾಶಿ
ವೃಷಭ ರಾಶಿಯವರು ಬುಧಾದಿತ್ಯ ಯೋಗದ ಪ್ರಯೋಜನವನ್ನು ಈಗ ಕಾಣುತ್ತಿದ್ದೀರಿ. ಈ ಅವಧಿಯಲ್ಲಿ ನಿಮ್ಮ ಕೆಲಸ ಕಾರ್ಯಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣವಾಗುವುದನ್ನು ಗಮನಿಸಬಹುದು. ವ್ಯಾಪಾರಸ್ಥರು ಈ ಸಮಯದಲ್ಲಿ ಉತ್ತಮ ಪ್ರಯೋಜನ ಪಡೆಯುತ್ತೀರಿ. ವ್ಯಾಪಾರದಲ್ಲಿಉತ್ತಮ ಲಾಭ ಗಳಿಸಲು ಸಾಧ್ಯವಾಗುವುದು, ಆರ್ಥಿಕ ದೃಷ್ಟಿಯಿಂದಲೂ ಈ ಅವಧಿ ತುಂಬಾ ಚೆನ್ನಾಗಿದೆ. ಇನ್ನು ಈ ಅವಧಿಯಲ್ಲಿ ಹೊಸ ಕೆಲಸಕ್ಕೆ ಪ್ರಯತ್ನ ಮಾಡಿದರೆ ಉತ್ತಮ ಪ್ರತಿಫಲ ಸಿಗಲಿದೆ.
ಕರ್ಕ ರಾಶಿ
ಬುಧಾದಿತ್ಯ ಯೋಗದಿಂದ ಕರ್ಕ ರಾಶಿಯವರು ಉತ್ತಮ ಪ್ರಯೋಜನ ಪಡೆಯುತ್ತೀರಿ, ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿ ತುಂಬಾ ಚೆನ್ನಾಗಿರಲಿದೆ. ಚಿಕ್ಕ ಪ್ರಯತ್ನಕ್ಕೆ ದೊಡ್ಡ ಫಲ ಸಿಗಲಿದೆ, ಇದೆಲ್ಲವೂ ಈ ಯೋಗದ ಬಲದಿಂದ ಪಡೆಯುತ್ತೀರಿ. ನಿಮ್ಮ ಕೆಲಸ ಕಾರ್ಯಗಳಲ್ಲಿ ಉತ್ತಮ ಪ್ರಯೋಜನ ಪಡೆಯುತ್ತೀರಿ. ಇನ್ನು ವಿದೇಶಕ್ಕೆ ಹೋಗಲು ಪ್ರಯತ್ನ ಮಾಡುತ್ತಿದ್ದರೆ ಈ ಬುಧಾದಿತ್ಯ ಯೋಗದ ಬಲದಿಂದ ನೀವು ಬಯಸಿದ ಫಲ ಪಡೆಯುವಲ್ಲಿ ಯಶಸ್ಸು ಪಡೆಯುತ್ತೀರಿ.
ಕನ್ಯಾ ರಾಶಿ
ಕನ್ಯಾ ರಾಶಿಯವರು ಬುಧಾದಿತ್ಯ ಯೋಗದ ಪ್ರಯೋಜನ ಪಡೆಯುತ್ತೀರಿ, ಕುಟುಂಬ ಜೀವನ ಚೆನ್ನಾಗಿರಲಿದೆ, ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ತುಂಬಾ ಚೆನ್ನಾಗಿರಲಿದೆ. ನೀವು ಬಯಸಿದ ಕೆಲಸ ಸಿಗಲಿದೆ. ವೃತ್ತಿ ಜೀವನ ಚೆನ್ನಾಗಿರಲಿದೆ, ನಿಮ್ಮ ಹಾಗೂ ಸಂಗಾತಿ ನಡುವೆ ಬಾಂಧವ್ಯ ಚೆನ್ನಾಗಿರಲಿದೆ. ನಿಮ್ಮ ವೃತ್ತಿ ಬದುಕಿನಲ್ಲಿ ಉತ್ತಮ ಅವಕಾಶಗಳು ದೊರೆಯಲಿದೆ.
ತುಲಾ ರಾಶಿ
ತುಲಾ ರಾಶಿಯವರು ಈ ಅವಧಿಯಲ್ಲಿ ಉತ್ತಮ ಪ್ರಯೋಜನ ಪಡೆಯುತ್ತೀರಿ. ವೃತ್ತಿ ಬದುಕು ತುಂಬಾ ಚೆನ್ನಾಗಿರಲಿದೆ. ಈ ಅವಧಿಯಲ್ಲಿ ಅಪೂರ್ಣವಾಗಿರುವ ಕೆಲಸ ಪೂರ್ಣವಾಗಲಿದೆ. ಆರ್ಥಿಕ ಪ್ರಯೋಜನ ಪಡೆಯುತ್ತೀರಿ. ವೃತ್ತಿ ಹಾಗೂ ವೈಯಕ್ತಿಕ ಬದುಕಿನ ನಡುವೆ ಸಮತೋಲನ ಕಾಪಾಡಿಕೊಳ್ಳಲು ಸಾಧ್ಯವಾಗುವುದು.
ಮೀನ ರಾಶಿ
ಈ ಅವಧಿ ನಿಮಗೆ ಅನುಕೂಲಕರವಾಗಿದೆ, ನಿಮ್ಮ ಕೆಲಸ ಕಾರ್ಯದಲ್ಲಿ ಉತ್ತಮ ಪ್ರಯೋಜನ ಪಡೆಯುತ್ತೀರಿ. ನೀವು ಹೂಡಿಕೆಯಿಂದ ಉತ್ತಮ ಆರ್ಥಿಕ ಪ್ರಯೋಜನ ಪಡೆಯುತ್ತೀರಿ. ಬಡ್ತಿ ನಿರೀಕ್ಷೆ ಅಥವಾ ವರ್ಗಾವಣೆ ನಿರೀಕ್ಷೆಯಲ್ಲಿರುವವರೆಗೆ ಈ ಅವಧಿ ತುಂಬಾನೇ ಅನುಕೂಲಕರವಾಗಿದೆ. ನಿಮಗೆ ವಹಿಸಿರುವ ಕೆಲಸವನ್ನು ಉತ್ತಮವಾಗಿ ಪೂರ್ಣಗೊಳಿಸಲು ಸಾಧ್ಯವಾಗುವುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
