ರಕ್ಷಾ ಬಂಧನ ದಿನದಂದು ಬ್ಲೂ ಮೂನ್‌ ಡೇ: ದ್ವಾದಶ ರಾಶಿಗಳ ಮೇಲೆ ಇದರ ಪ್ರಭಾವ ಹೀಗಿರಲಿದೆ

ಆಗಸ್ಟ್ 19ಕ್ಕೆ ರಕ್ಷಾ ಬಂಧನ, ಇದೇ ದಿನದಂದು ಬ್ಲೂ ಮೂನ್‌ ಡೇ. ಈ ದಿನ ಚಂದ್ರ ಭೂಮಿಗೆ ತುಂಬಾ ಸಮೀಪಿಸುತ್ತಾನೆ, ಈ ದಿನವನ್ನು ಬ್ಲೂ ಮೂನ್‌ ಡೇ ಎಂದು ಕರೆಯಲಾಗುವುದು. ಈ ದಿನ ಆಕಾಶ ನೋಡಿದರೆ ಚಂದ್ರ ಪ್ರಕಾಶಮಾನವಾಗಿ ಮತ್ತಷ್ಟು ಬೃಹತ್‌ ಆಗಿ ಕಾಣಲಿದೆ. ಈ ಬ್ಲೂ ಮೂನ್‌ ಆಕಾಶದಲ್ಲಿ ನೀವು 3 ದಿನ ಕಾಣಬಹುದು. ಮೂರನೇಯ ದಿನದಿಂದ ಚಂದ್ರನ ಗಾತ್ರ ಕಿರಿದಾಗಿ ಮೊದಲಿನಂತೆ ಕಾಣಿಸಲಾರಂಭಿಸುತ್ತಾನೆ.

ರಕ್ಷಾ ಬಂಧನದಂದು ಶ್ರಾವಣ ಹುಣ್ಣಿಮೆಯೂ ಹೌದು. ಅಲ್ಲದೆ ವೈದಿಕ ದೃಷ್ಟಿಯಿಂದ ಶಶ ರಾಜಯೋಗ, ಬುಧಾದಿತ್ಯ ರಾಜಯೋಗ, ಲಕ್ಷ್ಮೀ ನಾರಾಯಣ ರಾಜಯೋಗದಂಥ ಅದ್ಭುತ ಕಾಕತಾಳೀಯಗಳು ನಡೆಯುತ್ತಿವೆ. ಈ ಯೋಗಗಳು ರಾಶಿಗಳ ಮೇಲೆ ಕೂಡ ಪ್ರಭಾವ ಬೀರುತ್ತದೆ. ಯಾವ ರಾಶಿಗೆ ಹೇಗೆ ಪ್ರಭಾವ ಬೀರಲಿದೆ ಎಂದು ನೋಡೋಣ:

Blue Moon Day

ಮೇಷ ರಾಶಿ

ಈ ಯೋಗ ನಿಮ್ಮ ವೃತ್ತಿ ಜೀವನಕ್ಕೆ ಅನುಕೂಲಕರವಾಗಿದೆ. ಈ ಅವಧಿಯಲ್ಲಿ ನೀವು ಅದ್ಭುತ ಯಶಸ್ಸನ್ನು ಸಾಧಿಸುವಿರಿ. ಆರ್ಥಿಕವಾಗಿ ಈ ಅವಧಿ ಉತ್ತಮವಾಗಿದೆ.
ಹಠಾತ್ ಆರ್ಥಿಕ ಲಾಭದಿಂದ ಹಣಕಾಸಿನ ಸಮಸ್ಯೆಗಳು ಪರಿಹಾರವಾಗುತ್ತವೆ. ಕೌಟುಂಬಿಕ ಜೀವನ ಸುಖಮಯವಾಗಿರಲಿದೆ.

ವೃಷಭ ರಾಶಿ

ವ್ಯಾಪಾರಿಗಳಿಗೆ ಈ ದಿನ ಉತ್ತಮವಾಗಿದೆ, ವೃತ್ತಿ ಜೀವನದ ದೃಷ್ಟಿಯಿಂದ ಉತ್ತಮವಾಗಿದೆ, ಆದರೆ ಹಣದ ವಿಷಯದಲ್ಲಿ ಜಾಗ್ರತೆವಹಿಸಬೇಕು, ಹೆಚ್ಚು ಖರ್ಚು ಮಾಡದಿದ್ದರೆ ಒಳ್ಳೆಯದು.

ಮಿಥುನ ರಾಶಿ

ನೀವು ವೃತ್ತಿ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ತುಂಬಾ ಆಲೋಚಿಸಿ ತೆಗೆದುಕೊಳ್ಳಬೇಕು. ನಿಮ್ಮ ಶ್ರಮಕ್ಕೆ ಉತ್ತಮ ಫಲ ಸಿಗಲಿದೆ. ವೈವಾಿಕ ಜೀವನ ಚೆನ್ನಾಗಿರಲಿದೆ. ಕುಟುಂಬ ಜೀವನ ಚೆನ್ನಾಗಿರಲಿದೆ.

ಕರ್ಕ ರಾಶಿ

ಈ ಅವಧಿಯಲ್ಲಿ ನೀವು ಹೆಚ್ಚು ಶ್ರಮವಹಿಸಿ ಕೆಲಸ ಮಾಡಿದರೆ ಉತ್ತಮ ಯಶಸ್ಸು ಸಿಗಲಿದೆ, ವೈವಾಹಿಕ ಬದುಕು ತುಂಬಾ ಚೆನ್ನಾಗಿರಲಿದೆ, ಮನೆಯಲ್ಲಿ ಶಾಂತಿ, ನೆಮ್ಮದಿ ಇರಲಿದೆ.

ಸಿಂಹ ರಾಶಿ

ಮನೆಯಲ್ಲಿ ಖುಷಿಯ ವಾತಾವರಣ ಇರಲಿದೆ, ವ್ಯಾಪಾರಿಗಳು ಲಾಭ ಗಳಿಸಲು ಸಾಧ್ಯವಾಗುವುದರಿಂದ ಖುಷಿಯಾಗಿರುತ್ತೀರಿ. ಇನ್ನು ಕೆಲಸದಲ್ಲಿ ಒತ್ತಡ ಹೆಚ್ಚಿರಲಿದೆ. ನೀವು ಯೋಜನೆಯ ಪ್ರಕಾರ ಕೆಲಸ ಪೂರ್ಣಗೊಳಿಸಿ, ಯಾವುದೇ ಕೆಲಸ ಅರ್ಧದಲ್ಲಿ ಬಿಡಬೇಡಿ.

ಕನ್ಯಾ ರಾಶಿ

ಈ ಅವಧಿಯಲ್ಲಿ ನೀವು ಯಾವುದೇ ದೊಡ್ಡ ನಿರ್ಧಾರ ತೆಗೆದುಕೊಳ್ಳಬೇಡಿ. ಆಸ್ತಿಗೆ ಸಂಬಂಧಿಸಿದಂತೆ ಅತುರದ ನಿರ್ಧಾರ ತೆಗೆದುಕೊಳ್ಳಬೇಡಿ. ವಿದ್ಯಾರ್ಥಿಗಳಿಗೆ ಸಮಯ ಅನುಕೂಲಕರವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತೀರಿ.

ತುಲಾ ರಾಶಿ

ನೀವು ಬೇಡದ ವಿಚಾರಗಳಿಂದ ದೂರವಿರಬೇಕು. ಕೋಪದಿಂದ ಯಾರ ಮನಸ್ಸು ನೋಯಿಸಬೇಡಿ. ಇಲ್ಲದಿದ್ದರೆ ನಿಮ್ಮ ಸಂಬಂಧ ಹಾಳಾಗುವುದು. ಈ ಸಮಯದಲ್ಲಿ ಹೆಚ್ಚು ಪ್ರಯಾಣ ಮಾಡುತ್ತೀರಿ.

ವೃಶ್ಚಿಕ ರಾಶಿ

ಈ ಅವಧಿ ಹಣದ ದೃಷ್ಟಿಯಿಂದ ನಿಮಗೆ ತುಂಬಾನೇ ಉತ್ತಮವಾಗಿದೆ.ವ್ಯಾಪಾರಿಗಳಿಗೆ ಉತ್ತಮ ಲಾಭ ದೊರೆಯಲಿದೆ. ನಿಮ್ಮ ಆದಾಯ ಹೆಚ್ಚಾಗಬಹುದು. ಅವಾಹಿತರಿಗೆ ಮದುವೆ ಪ್ರಸ್ತಾಪ ಬರಲಿದೆ.

ಧನು ರಾಶಿ

ನಿಮ್ಮ ಆತ್ಮವಿಶ್ವಾಸ ಮತ್ತು ಸಕಾರಾತ್ಮಕತೆ ತುಂಬಾ ಚೆನ್ನಾಗಿರಲಿದೆ. ನಿಮ್ಮ ಜೀವನಶೈಲಿಯಲ್ಲಿ ನೀವು ಕೆಲವು ಬದಲಾವಣೆಗಳನ್ನು ಮಾಡುವುದರಿಂದ ಮತ್ತಷ್ಟು ಉತ್ತಮ ಪ್ರಯೋಜನ ಪಡೆಯುತ್ತೀರಿ. ಹಣಕ್ಕೆ ಸಂಬಂಧಿಸಿದ ಚಿಂತೆಗಳಿಂದ ನೀವು ಪರಿಹಾರ ಪಡೆಯುತ್ತೀರಿ.

ಮಕರ ರಾಶಿ

ಸಂಬಂಧದ ದೃಷ್ಟಿಯಿಂದ ಈ ಅವಧಿ ಉತ್ತಮವಾಗಿರಲಿದೆ. ಸಂಬಂಧದಲ್ಲಿನ ಭಿನ್ನಾಭಿಪ್ರಾಯ ದೂರ ಮಾಡಲು ಪ್ರಯತ್ನಿಸುತ್ತೀರಿ. ಉದ್ಯೋಗಕ್ಕೆ ಮಾಡಿದ ಪ್ರಯತ್ನ ಫಲ ಸಿಗುವುದು. ನಿಮ್ಮ ಕಠಿಣ ಪರಿಶ್ರಮಕ್ಕೆ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ.

ಕುಂಭ ರಾಶಿ

ಈ ಅವಧಿಯಲ್ಲಿ ನಿಮ್ಮ ಪ್ರೀತಿ ಪಾತ್ರರರ ಬೆಂಬಲ ಸಿಗಲಿದೆ. ಕೆಲಸದ ಸ್ಥಳದಲ್ಲಿ ಸವಾಲುಗಳು ಎದುರಾಗುತ್ತವೆ, ಆದರೆ ನಿಮ್ಮ ಧೈರ್ಯ ಮತ್ತು ಬುದ್ಧಿವಂತಿಕೆಯಿಂದ ಪ್ರತಿ ಸವಾಲು ಎದುರಿಸುತ್ತೀರಿ, ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ.

ಮೀನ ರಾಶಿ

ನೀವು ಅನಗ್ಯತ ಚಿಂತೆಗಳಿಂದ ದೂರವಿರಬೇಕು. ಇಲ್ಲದಿದ್ದರೆ ನಿಮ್ಮ ಪ್ರಮುಖ ಕಾರ್ಯಗಳ ಮೇಲೆ ಸರಿಯಾಗಿ ಗಮನಹರಿಸಲು ಸಾಧ್ಯವಾಗುವುದಿಲ್ಲ. ಕಷ್ಟಕರ ಸಂದರ್ಭಗಳಲ್ಲಿ ನಿಮ್ಮ ಪ್ರೀತಿಪಾತ್ರರಿಂದ ಸಂಪೂರ್ಣ ಬೆಂಬಲವನ್ನು ನೀವು ಪಡೆಯುತ್ತೀರಿ. ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಿ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

Story first published: Saturday, August 17, 2024, 17:19 [IST]
X
Desktop Bottom Promotion