Latest Updates
-
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ!
ಬುಧನಿಂದಾಗಿ ಭದ್ರ ರಾಜಯೋಗ: ಮೂರು ರಾಶಿಯವರಿಗೆ ಸಂಪತ್ತು ಲಾಭ!
ಗ್ರಹಗಳ ಚಲನೆಯಿಂದಾಗಿ ಹಲವು ರಾಶಿಗಳ ಮೇಲೆ ಪರಿಣಾಮ ಉಂಟಾಗುವುದು ನೋಡಬಹುದು. ಎಲ್ಲಾ ಗ್ರಹಗಳ ಸಂಚಾರದಿಂದಲೂ ರಾಶಿಗಳ ಮೇಲೆಯೂ ಪರಿಣಾಮದ ಕಾರಣ ಶುಭ ಹಾಗೂ ಅಶುಭ ಲಾಭಗಳ ನಾವು ನೋಡಬಹುದು. ಹಾಗೆ ಇದರಿಂದ ಹಲವು ರೀತಿಯ ಪ್ರಗತಿಗಳ ನೋಡಬಹುದು.
ಕನ್ಯಾ ರಾಶಿಯಲ್ಲಿ ಬುಧನ ಸಂಚಾರ ಆಗುತ್ತಿರುವುದು ಈಗ ಹೊಸ ರೀತಿಯ ಯೋಗಕ್ಕೆ ಕಾರಣವಾಗುತ್ತಿದೆ. ಭದ್ರ ಮಹಾಪುರುಷ ರಾಜಯೋಗಕ್ಕೆ ಇದು ಕಾರಣವಾಗುತ್ತಿದೆ. ಇದರಿಂದ ಹಲವು ರಾಶಿಗಳಿಗೆ ಲಾಭದಾಯಕ ದಿನಗಳು ಬರಲಿವೆ. ಹಾಗೆ ಈ ಯೋಗದಿಂದಾಗಿ ಹಲವು ರಾಶಿಯವರಿಗೆ ಸುವರ್ಣ ಯುಗ ಎಂದು ಕರೆಯಬಹುದು.

ವೈದಿಕ ಜ್ಯೋತಿಷ್ಯದ ಪ್ರಕಾರ ಗ್ರಹಗಳು ತಮ್ಮ ಸ್ಥಾನವನ್ನು ಬದಲಾಯಿಸಿದಾಗ ಹಲವು ರೀತಿಯ ಬದಲಾವಣೆಗಳಾಗುವುದು ಸಾಮಾನ್ಯ. ಅದರಲ್ಲೂ ಯೋಗಗಳನ್ನು ರೂಪಿಸಿದರೆ ಅದರಿಂದ ಲಾಭಗಳು ಹೆಚ್ಚಾಗುತ್ತದೆ. ಕನ್ಯಾ ರಾಶಿಗೆ ಬುಧನ ಸಂಚಾರದಿಂದಲೂ ಈ ಭದ್ರ ಯೋಗ ರೂಪುಗೊಳ್ಳುತ್ತದೆ. ಇದು ಅಪರೂಪದಲ್ಲಿ ಅಪರೂಪವಾಗಿ ಸೃಷ್ಟಿಯಾಗುವ ಯೋಗ ಎನ್ನಲಾಗಿದೆ. ಸೆಪ್ಟೆಂಬರ್‌ನಲ್ಲಿ ಈ ಯೋಗ ಸೃಷ್ಟಿಯಾಗುತ್ತಿದ್ದು, ಮುಂದೆ ಬಹಳ ವರ್ಷಗಳ ಬಳಿಕ ಈ ಯೋಗ ಮತ್ತೆ ರೂಪುಗೊಳ್ಳಬಹುದು ಎನ್ನಲಾಗಿದೆ.
ಹಾಗಾದ್ರೆ ಈ ಭದ್ರ ಮಹಾಪುರುಷ ರಾಜಯೋಗದಿಂದ ಯಾರಿಗೆ ಲಾಭಕರ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಿಥುನ ರಾಶಿ
ಭದ್ರ ಯೋಗವು ಮಿಥುನ ರಾಶಿಯವರಿಗೆ ಅದೃಷ್ಟ ತರಲಿದೆ. ಮನೆ, ಸೌಕರ್ಯ, ಆಸ್ತಿ ಮತ್ತು ತಾಯಿಯ ಅಂಶವಾಗಿರುವ ನಿಮ್ಮ ರಾಶಿ ಜನರಿಗೆ ಬುಧನು ನಾಲ್ಕನೇ ಮನೆಯಲ್ಲಿ ಸಾಗುತ್ತಾನೆ. ಈ ಸಂಚಾರದ ಹೊಸ ವಸ್ತುಗಳ ಖರೀದಿಯ ಲಾಭ ನೀಡಲಿದೆ. ಅದರಲ್ಲೂ ನೀವು ವಾಹನ ಖರೀದಿ ವಿಚಾರದಲ್ಲಿ ನಿಮಗೆ ಲಾಭದಾಯಕವಾಗಲಿದೆ. ಪೂರ್ವಜರ ಆಸ್ತಿ ಸಂಬಂಧಿಸಿದ ವಿಷಯಗಳಲ್ಲಿ ನಿಮ್ಮ ಕೆಲಸಗಳು ಸಿಲುಕಿದ್ದರೆ ಪರಿಹಾರವಾಗಲಿದೆ. ಆರೋಗ್ಯದಲ್ಲಿ ಸುಧಾರಣೆ ಆಗಲಿದೆ. ವ್ಯವಹಾರದಲ್ಲೂ ದೊಡ್ಡ ಮಟ್ಟದ ಒಪ್ಪಂದ ಅಥವಾ ದೊಡ್ಡ ಪ್ರಗತಿ ನೋಡಬಹುದು.
ಸಿಂಹ ರಾಶಿ
ಸೆಪ್ಟೆಂಬರ್‌ನಲ್ಲಿ ರೂಪುಗೊಂಡ ಭದ್ರ ಮಹಾಪುರುಷ ರಾಜ್ಯಯೋಗವು ಸಿಂಹ ರಾಶಿಯ ಜನರಿಗೆ ಬಹಳ ಶುಭಕಾರಕವಾಗಿರಲಿದೆ. ಬುಧನು 2ನೇ ಮನೆಯಲ್ಲಿ ಚಲಿಸುವುದರಿಂದ ನಿಮ್ಮ ಹಣಕಾಸು ಸಮಸ್ಯೆ ದೂರಾಗಲಿದೆ. ಕೌಟುಂಬಿಕ ಸಂಬಂಧಗಳು, ದಾಂಪತ್ಯ, ಪ್ರೀತಿ, ಪ್ರೇಮದಂತಹ ವಿಚಾರದಲ್ಲಿ ನಿಮಗೆ ಲಾಭದಾಯಕವಾಗಲಿದೆ. ಮನೆ ನವೀಕರಣ, ನಿರ್ಮಾಣದಲ್ಲಿ ಧನಾತ್ಮಕ ಪರಿಸ್ಥಿತಿ ಇರಲಿದೆ. ಅವಿವಾಹಿತರಿಗೆ ವಿವಾಹ ಸಂಬಂಧಿ ಶುಭಕರ ಸುದ್ದಿ ಬರಬಹುದು. ಮಾಧ್ಯಮ, ಬ್ಯಾಂಕಿಂಗ್, ಫೈನಾನ್ಸ್, ಮಾರಾಟ-ಖರೀದಿಯಂತಹ ಕೆಲಸದಲ್ಲಿರುವವರಿಗೆ ಬಹಳ ಅನುಕೂಲಕರ ಸಮಯವಾಗಿರಲಿದೆ. ಬಹಳ ಸಮಯದಿಂದ ಹಣ ಯಾರ ಬಳಿಯಾದರು ಸಿಲುಕಿದ್ದರೆ ಮರಳಿ ನಿಮ್ಮ ಕೈ ಸೇರಬಹುದು.
ಧನು ರಾಶಿ
ಈ ಸಮಯವು ಧನು ರಾಶಿಯ ಜನರಿಗೆ ಯಶಸ್ಸು ಮತ್ತು ಸಮೃದ್ಧಿಯ ಸೂಚಿಸುತ್ತದೆ. ಬುಧನು ನಿಮ್ಮ 10ನೇ ಮನೆಯಲ್ಲಿ ಸಾಗುವುದರಿಂದ ನಿಮ್ಮ ವೃತ್ತಿ ವ್ಯವಹಾರಗಳು ಉದ್ಯೋಗದಲ್ಲಿ ಬಡ್ತಿ, ವರ್ಗಾವಣೆಯಂತಹ ವಿಚಾರದಲ್ಲಿ ಲಾಭದಾಯಕ ದಿನಗಳಾಗಿರುತ್ತವೆ. ನೀವು ವರ್ಷಗಳಿಂದ ಬಯಸಿದ್ದ ವಸ್ತುವೊಂದನ್ನು ಪಡೆಯಬಹುದು. ಶಿಕ್ಷಣ ಕ್ಷೇತ್ರದಲ್ಲಿ ಶುಭವಿದೆ. ಹೂಡಿಕೆಗಳು, ಉಳಿತಾಯಗಳಲ್ಲಿ ನಿಮಗೆ ಧನಾತ್ಮಕ ಬದಲಾವಣೆ ಇರಲಿದೆ. ನಿಮ್ಮ ಕಠಿಣ ಪರಿಶ್ರಮಗಳಿಗೆ ತಕ್ಕ ಪ್ರತಿಫಲ ಇರಲಿದೆ. ನಿಮ್ಮ ದಾಂಪತ್ಯ ವಿಚಾರವಾಗಿ ಶುಭ ಸುದ್ದಿಗಳು, ಸಂತಸದ ವಾತಾವರಣ ಇರುವುದು ನೋಡಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications
