Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಈ ರಾಶಿಯವರು ಜೋಡಿಯಾದರೆ ಸಂಸಾರ ಹಾಲು-ಜೇನಿನಂತಿರಬೇಕು
ಸಂಸಾರ ಎಂದರೆ ಹಾಲು -ಜೇನಿನಂತಿರಬೇಕು, ಜ್ಯೋತಿಷ್ಯ ಪ್ರಕಾರ ಈ ರಾಶಿಗಳು ವಿವಾಹವಾದರೆ ದಾಂಪತ್ಯ ಜೀವನ ತುಂಬಾ ಸುಂದರವಾಗಿರುವುದು...........
ಮೇಷ ರಾಶಿ ಮತ್ತು ಕುಂಭ ರಾಶಿ
ಈ ಜೋಡಿ ಮದುವೆಯಾದರೆ ಅನ್ಯೂನ್ಯರಾಗಿರುತ್ತಾರೆ. ಏಕೆಂದರೆ ಇಬ್ಬರ ಗುಣಗಳು ಒಂದೇ ರೀತಿಯಲ್ಲಿ ಇರುತ್ತದೆ. ಇವರಿಬ್ಬರು ಒಳ್ಳೆಯ ಜೋಡಿಗಳು ಮಾತ್ರವಲ್ಲ, ಒಳ್ಳೆಯ ಸ್ನೇಹಿತರೂ ಆಗಿರುತ್ತಾರೆ.

ಮಿಥುನ ರಾಶಿ ಮತ್ತು ತುಲಾ ರಾಶಿ
ಈ ಎರಡೂ ಜೋಡಿ ಒಳ್ಳೆಯ ಮ್ಯಾಚ್ ಆಗುತ್ತಾರೆ. ಇವರಿಬ್ಬರ ಮನಸ್ಥಿತಿ ಒಂದೇ ರೀತಿ ಇರುತ್ತದೆ, ಹೀಗಾಗಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುತ್ತಾರೆ, ಹೀಗಾಗಿ ಇಬ್ಬರ ನಡುವೆ ಒಳ್ಳೆಯ ಬಾಂಧವ್ಯ ಕಾಣಬಹುದು.
ವೃಶ್ಚಿಕ ರಾಶಿ ಮತ್ತು ಮೀನ ರಾಶಿ
ಈ ರಾಶಿಯವರು ಕೂಡ ಒಳ್ಳೆಯ ಜೋಡಿಯಾಗುತ್ತಾರೆ, ಒಬ್ಬರನ್ನೊಬ್ಬರು ಅಕ್ಕರೆಯಿಂದ ನೋಡಿಕೊಳ್ಳುತ್ತಾರೆ, ಇವರು ಸಂಗಾತಿಯ ಭಾವನೆಗಳಿಗೆ ಸ್ಪಂದಿಸುತ್ತಾರೆ. ಇವರ ನಡುವೆ ಯಾವುದೇ ದೊಡ್ಡ ಸಮಸ್ಯೆ ಉಂಟಾಗುವುದಿಲ್ಲ.
ಕನ್ಯಾ ರಾಶಿ ಮತ್ತು ವೃಷಭ ರಾಶಿ
ಇವರಿಬ್ಬರದ್ದು ಶಾಂತ ಸ್ವಭಾವ, ಹೀಗಾಗಿ ಒಬ್ಬರನ್ನೊಬ್ಬರು ದಬ್ಬಾಳಿಕೆ ಮಾಡುವುದಿಲ್ಲ, ಹೊಂದಾಣಿಕೆಯಿಂದ ಸಂಸಾರ ಸಾಗಿಸುತ್ತಾರೆ. ಇವರಿಬ್ಬರ ನಡುವೆ ಒಳ್ಳೆಯ ಹೊಂದಾಣಿಕೆ ಇರಲಿದೆ.
ಸಿಂಹ ರಾಶಿ ಮತ್ತು ಧನು ರಾಶಿ
ಇಬ್ಬರೂ ಧೈರ್ಯ ಶಾಲಿಗಳು, ಏನೇ ಸಮಸ್ಯೆ ಬರಲಿ ಜೊತೆಯಾಗಿ ಎದುರಿಸುತ್ತಾರೆ, ಇವರು ಒಬ್ಬರನ್ನೊಬ್ರು ಗೌರವಿಸುತ್ತಾರೆ, ಒತೆಯಾಗಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಜೊತೆಯಾಗಿ ಸಮಸ್ಯೆಗಳನ್ನು ಎದುರಿಸುತ್ತಾರೆ, ಹಾಗಾಗಿ ಇವರ ನಡುವೆ ಹೊಂದಾಣಿಕೆ ಚೆನ್ನಾಗಿರಲಿದೆ.
ಮೀನ ರಾಶಿ ಮತ್ತು ಕರ್ಕ ರಾಶಿ
ಈ ಎರಡೂ ರಾಶಿಯವರು ಸ್ವಲ್ಪ ಸೂಕ್ಷ್ಮ ಸ್ವಭಾವದವರು, ಇಂಥ ರಾಶಿಗಳಿಗೆ ಆ ಗುಣದವರೇ ಹೊಂದಾಣಿಕೆಯಾಗುತ್ತಾರೆ. ಇವರಿಬ್ಬರು ಸಂಗಾತಿಗಳಾದರೆ ಇಬ್ಬರ ಗುಣಗಳ ನಡುವೆ ಹೊಂದಾಣಿಕೆ ಇರಲಿದೆ, ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುತ್ತಾರೆ.
ಕರ್ಕ ರಾಶಿ ಹಾಗೂ ವೃಶ್ಚಿಕ ರಾಶಿ
ಈ ರಾಶಿಯವರ ಗುಣ ಹೇಗೆಂದರೆ ಒಬ್ಬರನ್ನು ತುಂಬಾನೇ ಹಚ್ಚಿಕೊಂಡು ಬಿಡುತ್ತಾರೆ, ಸ್ವಲ್ಪ ನೋವಾದರೂ ತುಂಬಾನೇ ನೊಂದುಕೊಳ್ಳುತ್ತಾರೆ. ಈ ರಾಶಿಯವರು ತನ್ನ ಸಂಗಾತಿಯನ್ನು ತುಂಬಾನೇ ಪ್ರೀತಿಸುತ್ತಾರೆ. ಈ ಎರಡು ರಾಶಿಗಳ ನಡುವೆ ತುಂಬಾ ಹೊಂದಾಣಿಕೆ ಇರಲಿದೆ.
ಧನು ರಾಶಿ ಹಾಗೂ ಮೇಷ ರಾಶಿ
ಈ ಎರಡು ರಾಶಿಯವರು ಏನನ್ನಾದರೂ ಬಯಸಿದರೆ ಅದನ್ನು ಪಡೆಯುವವರೆಗೂ ಬಿಡೋದಿಲ್ಲ. ಇವರಿಬ್ಬರು ಒಟ್ಟಾಗಿ ಅಡ್ವೆಂಚರಸ್ ಚಟುವಟಿಕೆಗಳನ್ನು ಮಾಡುತ್ತಾರೆ. ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಂಡಿರುತ್ತಾರೆ. ಇನ್ನೂ ಈ ರಾಶಿಯವರು ಚೆನ್ನಾಗಿ ರೆಡಿಯಾಗೋದಕ್ಕೆ ಇಷ್ಟ ಒಡುತ್ತಾರೆ. ಹಾಗೂ ಹೊರಗಡೆ ಹೋಗುವಾಗ ಉತ್ತಮವಾಗಿ ಡ್ರೆಸ್ ಮಾಡಿಕೊಂಡು ಹೋಗುತ್ತಾರೆ.
ತುಲಾ ರಾಶಿ ಮತ್ತು ಮೀನ ರಾಶಿ
ಈ ಎರಡು ರಾಶಿಗಳ ನಡುವೆ ಕೂಡ ಒಳ್ಳೆಯ ಹೊಂದಾಣಿಕೆ ಇರಲಿದೆ. ಇವರಿಬ್ಬರೂ ಬುದ್ಧಿವಂತರು, ಮೀನ ರಾಶಿಯವರು ಅಂತರ್ಮುಖಿ ಸ್ವಭಾವದವರು, ಇವರು ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ.
ಕನ್ಯಾ ರಾಶಿ ಮತ್ತು ವೃಷಭ ರಾಶಿ
ಈ ರಾಶಿಯವರು ಹೇಗೆಂದರೆ ಎಲ್ಲಾವನ್ನೂ ಪ್ರಾಕ್ಟಿಕಲ್ ಆಗಿ ಯೋಚಿಸುವವರು. ಇಬ್ಬರ ಆಲೋಚನೆಗಳು ತುಂಬಾನೇ ಹೋಲುತ್ತದೆ, ಈ ಗುಣಗಳಿಂದಲೇ ಅವರಿಬ್ಬರ ನಡುವೆ ಹೊಂದಾಣಿಕೆ ಕಂಡು ಬರುವುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
