ಫೆಬ್ರವರಿ 2025: ಈ ರಾಶಿಯವರಲ್ಲಿ ಎದುರಾಗಲಿವೆ ಕಂಟಕಗಳು.!!

ಫೆಬ್ರವರಿಯಲ್ಲಿ ಹಲವು ರೀತಿಯ ಗ್ರಹಗತಿಗಳ ಬದಲಾವಣೆ, ಯೋಗಗಳ ನಿರ್ಮಾಣ, ಗ್ರಹಗಳು ಬೇರೆ ಬೇರೆ ರಾಶಿಗಳಿಗೆ ಚಲಿಸುವುದರಿಂದ ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಉಂಟಾಗುತ್ತಿದೆ. ಇದು ಹಲವರಿಗೆ ಧನಾತ್ಮಕವಾಗಿ ಹಾಗೆ ಋಣಾತ್ಮಕವಾಗಿ ಪರಿಣಾಮ ಬೀರಲಿದೆ. ಹಾಗಾದ್ರೆ ಈ ಫೆಬ್ರವರಿಯಲ್ಲಿ ಯಾವೆಲ್ಲಾ ರಾಶಿಗಳಿಗೆ ನಾಕಾರಾತ್ಮಕ ಬೆಳವಣಿಗೆ ಆಗಲಿದೆ ಎಂದು ನಾವಿಂದು ತಿಳಿದುಕೊಳ್ಳೋಣ.

2015ರ ಫೆಬ್ರವರಿಯಲ್ಲಿ ಕೆಲವೊಂದು ರಾಶಿ ಜನರಿಗೆ ಸವಾಲಿನ ಸಮಯವಾಗಿರಲಿದೆಯಂತೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಹಲವು ಗ್ರಹಗಳ ಬದಲಾವಣೆ ಕೆಲವೊಂದು ರಾಶಿಗೆ ಒಳ್ಳೆಯ ಬೆಳವಣಿಗೆಗೆ ಕಾರಣವಾಗುತ್ತಿಲ್ಲ. ಹಾಗಾದ್ರೆ ಈ ಸಾಲಿನಲ್ಲಿ ನಿಮ್ಮ ರಾಶಿಯೂ ಇದೆಯೇ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

Bad Luck For Zodiac Sign This February Will Be Prepared For Unlucky

ಮಿಥುನ ರಾಶಿ

ಮಿಥುನ ರಾಶಿಯವರಿಗೆ ಈ ಫೆಬ್ರವರಿ ಮಿಶ್ರಫಲದಿಂದ ಕೂಡಿರಲಿದೆ. ಆರಂಭದಲ್ಲಿ ಈ ರಾಶಿಯವರಿಗೆ ಲಾಭದಾಯಕ ದಿನಗಳು ಕಾಣಬಹುದು. ಆದ್ರೆ ತಿಂಗಳ ಅಂತ್ಯದಲ್ಲಿ ಬಹಳಷ್ಟು ಸಮಸ್ಯೆ ಎದುರಿಸಬೇಕಾಗಬಹುದು. ಆದರಲ್ಲೂ ಆರ್ಥಿಕ ಸಮಸ್ಯೆ, ಹಾಗೂ ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗಬಹುದು. ಹಾಗೆ ಕೆಲಸಗಳಲ್ಲಿ ಹಿಡನ್ನಯನ್ನು ನೀವು ಎದುರಿಸಬೇಕಾಗಬಹುದು.

ಸಿಂಹ ರಾಶಿ

ಸಿಂಹ ರಾಶಿಯವರಲ್ಲಿ ಈ ತಿಂಗಳು ಲಾಭಕ್ಕಿಂತ ನಾಕಾರಾತ್ಮಕ ಅಂಶಗಳು ಹೆಚ್ಚಿರಲಿವೆ. ನೀವು ಹೆಚ್ಚು ಸಮಯ ಪ್ರಯಾಣದಂತಹ ಅಥವಾ ಒತ್ತಡದಿಂದ ಬಳಲಬಹುದು. ಹಾಗೆ ಹಣಕಾಸು ಪರಿಸ್ಥಿತಿಯಲ್ಲಿ ಏರುಪೇರಾಗುವುದು ನೋಡಬಹುದು. ನಿಮ್ಮ ಆದಾಯದಲ್ಲಿ ಕೊರತೆ ನೋಡಬಹುದು. ಆದಾಯಕ್ಕಿಂತ ಖರ್ಚು ಹೆಚ್ಚಾಗುವಂತಹ ತಿಂಗಳು ಎಂದು ಪರಿಗಣಿಸಲಾಗಿದೆ.

ಕನ್ಯಾ ರಾಶಿ

ಕನ್ಯಾ ರಾಶಿಯವರಲ್ಲಿ ಫೆಬ್ರವರಿ 2025ರಲ್ಲಿ ಮಿಶ್ರ ಫಲದ ನಿರೀಕ್ಷೆ ಇದೆ. ಆರಂಭದಲ್ಲಿ ಹಲವು ಕೆಲಸಗಳಲ್ಲಿ ಅಡೆತಡೆ ಇದ್ದರೂ ತಿಂಗಳ ಕೊನೆಯ ವಾರದಲ್ಲಿ ನಿಮಗೆ ಅದ್ಭುತ ಫಲದ ನಿರೀಕ್ಷೆ ಇದೆ. ಮಂಗಳ ಗ್ರಹದ ಚಲನೆಯಿಂದಾಗಿ ಈ ರಾಶಿಯವರಲ್ಲಿ ಆರ್ಥಿಕ ಮುಗ್ಗಟ್ಟು, ಹಣಕಾಸು ಸಮಸ್ಯೆಯಿಂದ ಒತ್ತಡ ಎದುರಿಸಬಹುದು. ಹಾಗೆ ನಿಮ್ಮ ಕುಟುಂಬದಲ್ಲಿ ಅಶಾಂತಿ ಇರಬಹುದು. ನೀವು ಮಾಡಬೇಕು ಅಂದುಕೊಂಡಿದ್ದ ಕೆಲಸ ಕಾರ್ಯಗಳಲ್ಲಿ ಮತ್ತೆ ನಿಧಾನವಾಗಬಹುದು. ವಾಹನ ಖರೀದಿಯ ಯೋಗ ಮುಂದೂಡಬಹುದು.

ಧನು ರಾಶಿ

ಈ ಫೆಬ್ರವರಿಯಲ್ಲಿ ಧನು ರಾಶಿಯವರಲ್ಲಿ ಮಿಶ್ರ ಫಲ ನೋಡಬಹುದು. ನಿಮ್ಮ ದೈನಂದಿನ ಕೆಲಸಗಳಲ್ಲಿ ಅಡೆತಡೆ, ಆರೋಗ್ಯ ಏರುಪೇರು. ಅವಿವಾಹಿತರಲ್ಲಿ ಶುಭ ಕಾರ್ಯಕ್ಕೆ ತಡೆಯಾಗುವ ಸಂಭವವಿದೆ. ನಿಮ್ಮ ಆರ್ಥಿಕ ಸಮ್ಯಸ್ಯೆಗಳು ಮತ್ತಷ್ಟು ಹೆಚ್ಚಬಹುದು. ತಿಂಗಳ ಕೊನೆಯಲ್ಲಿ ಖರ್ಚು ಹೆಚ್ಚಾಗಬಹುದು. ಇದು ಒತ್ತಡದಂತಹ ಸಮ್ಯಸ್ಯೆ ತರಬಹುದು. ವ್ಯಾಪಾರದಲ್ಲಿ ಲಾಬದ ಪ್ರಮಾಣ ಇಳಿಕೆಯಾಗಬಹುದು, ಇದು ನಿಮ್ಮ ದೈನಂದಿನ ವ್ಯವಹಾರಕ್ಕೆ ಅಡ್ಡಿಪಡಿಸಬಹುದು.

ಮಕರ ರಾಶಿ

ಮಕರ ರಾಶಿಯವರಿಗೆ ಫೆಬ್ರವರಿ 2025 ಭಾವನಾತ್ಮಕ ಒತ್ತಡದಿಂದ ಕೂಡಿರಬಹುದು. ಕೆಲಸ ಕಾರ್ಯದಲ್ಲಿ ಸಣ್ಣ ಪುಟ್ಟ ಅಡೆತಡೆಗಳು, ಮಾನಸಿಕ ನೆಮ್ಮದಿ ಹಾಳಾಗುವುದು, ಹಣಕಾಸಿನ ತೊಂದರೆ, ವೃತ್ತಿ ಜೀವನದಲ್ಲೂ ಏರುಪೇರಿನ ಸಮಸ್ಯೆ ಇರಬಹುದು. ಆಪ್ತರೊಂದಿಗೆ ವೈಮನಸ್ಸು, ದಾಂಪತ್ಯದಲ್ಲಿ ವಿರಸ ಮೂಡಬಹುದು. ಪ್ರೀತಿ ಪ್ರೇಮದ ವಿಚಾರದಲ್ಲಿ ನಿಮಗೆ ಹಿನ್ನಡೆಯಾಗಬಹುದು. ಮನೆಯ ಹಿರಿಯೊಬ್ಬರ ಆಸ್ಪತ್ರೆ ಅಥವಾ ಚಿಕಿತ್ಸೆಗಾಗಿ ಹಣ ವ್ಯಯಿಸಬಹುದು.

ಮೀನ ರಾಶಿ

ಮೀನ ರಾಶಿಯವರು ಫೆಬ್ರವರಿಯಲ್ಲಿ ಅನೇಕ ಸಮಸ್ಯೆಗಳ ತರಬಹುದು. ಉಳಿತಾಯ, ಕೂಡಿಟ್ಟ ಹಣ ನಿಮ್ಮ ಕೈ ಸೇರುವಲ್ಲಿ ತಡವಾಗಬಹುದು. ದೂರ ಪ್ರಯಾಣದಿಂದ ದೈಹಿಕ ಅನಾರೋಗ್ಯಕ್ಕೆ ಕಾರಣವಾಗಬಹುದು. ವೃತ್ತಿ ಜೀವನದಲ್ಲಿ ಏರುಪೇರು ನೋಡಬಹುದು. ವಾಹನ ಮಾಲಿಕರಲ್ಲಿ ಒಂದಿಷ್ಟು ಎಚ್ಚರಿಕೆಯಿಂದಿರುವುದು ಒಳಿತು. ತಿಂಗಳಿನ ಹೆಚ್ಚು ದಿನಗಳು ನಿಮಗೆ ಹಣಕಾಸಿನಿಂದ ಸಮಸ್ಯೆ ಕಾಡಬಹುದು. ನೀಡದ್ದ ಸಾಲ ವಾಪಸಾಗುವಲ್ಲಿ ತಡವಾಗಬಹುದು.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Bad Luck For Zodiac Sign: This February Will Be Prepared For Unlucky

February is going to be a challenging time for some zodiac signs. According to astrology, the changes in many planets are not leading to good growth for some zodiac signs.
Story first published: Monday, February 3, 2025, 13:08 [IST]
X
Desktop Bottom Promotion