Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬಾಬಾ ವಂಗಾ ಭವಿಷ್ಯವಾಣಿ: ಈ 4 ರಾಶಿಯವರಿಗೆ 2025ರಲ್ಲಿ ಎಂದೂ ಕಂಡಿರದ ಯಶಸ್ಸು..!!
ಬಾಬಾ ವಂಗಾ ಈ ಹೆಸರನ್ನು ನೀವು ಕೇಳಿಯೇ ಇರುತ್ತೀರಿ. ಭೂಮಿ ಮೇಲೆ ನಡೆಯಲಿರುವ ಅನೇಕ ಘಟನೆಗಳನ್ನು ಮೊದಲೇ ಊಹಿಸಿರುವ ಅತೀಂದ್ರಿಯ ಶಕ್ತಿ ಇರವಂತಹ ಮಹಿಳೆ. ಆಕೆ ಮೃತಪಟ್ಟು ದಶಕ ಕಳೆದರು ಆಕೆ ಹೇಳಿರುವ ಒಂದೊಂದು ಭವಿಷ್ಯವಾಣಿಗಳು ಕೂಡ ನಿಜವಾಗುತ್ತಿವೆ. ಈವರೆಗೆ ಆಕೆಯ ಬಹುತೇಕ ಭವಿಷ್ಯಗಳು ನಿಜವಾಗಿವೆ. ಹಾಗೆ ಆಕೆಯನ್ನು ಇಂದಿಗೂ ಅತೀಂದ್ರಿಯ ಶಕ್ತಿ ಹೊಂದಿರುವ ಮಹಿಳೆ ಎಂದು ನಂಬಲಾಗಿದೆ. ಬಲ್ಗೇರಿಯಾದಲ್ಲಿ ಆಕೆಯನ್ನು ಹೆಚ್ಚಾಗಿ ನಂಬುತ್ತಾರೆ.
ಜಗತ್ತಿನ ಕುರಿತು ಭವಿಷ್ಯ ನುಡಿದಂತಹ ನಾಸ್ಟ್ರಾಡಾಮಸ್ ಹೊರತಾಗಿ ಈ ಬಾಬಾ ವಂಗಾ ಬಹಳ ನಿಖರವಾಗಿ ಭವಿಷ್ಯಗಳ ನುಡಿದಿರುವ ಮಹಿಳೆ. ಹಾಗೆ ಆಕೆ ನುಡಿದಿರುವಂತಹ ಹಲವು ಭವಿಷ್ಯಗಳಲ್ಲಿ 2025ರಲ್ಲಿ ಕೆಲವೊಂದು ರಾಶಿಯ ಜನರು ಇನ್ನಿಲ್ಲದ ಸಿರಿ ಸಂಪತ್ತು, ಆರ್ಥಿಕ ಪ್ರಗತಿ ಕಾಣಲಿದ್ದಾರೆ ಎಂದಿದ್ದಾಳೆ. ಈ ರಾಶಿಯವರು 2025ರಲ್ಲಿ ತಮ್ಮ ಅತ್ಯುತ್ತಮ ಸ್ಥಿತಿಯಲ್ಲಿರುತ್ತಾರೆ ಎಂದು ಆಕೆ ಹೇಳಿದ್ದಾಳೆ.

ಹಾಗಾದ್ರೆ ಬಾಬಾ ವಂಗಾ ಹೇಳಿರುವಂತೆ 2025ರಲ್ಲಿ ಯಾವ 4 ರಾಶಿಯವರಿಗೆ ಆರ್ಥಿಕ ಲಾಭವಾಗುತ್ತಿದೆ. ಯಾರಿಗೆ ಲಾಭದಾಯಕ ದಿನಗಳು ಕಾದಿವೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮೇಷ ರಾಶಿ
ಮೇಷ ರಾಶಿಯ ಜನರು 2025 ರಲ್ಲಿ ತಮ್ಮ ಜೀವನದಲ್ಲಿ ಹಲವು ರೀತಿಯ ಬದಲಾವಣೆಗಳ ನೋಡಲಿದ್ದಾರೆ. ನೀವು ಉದ್ಯೋಗ ವಲಯದಲ್ಲಿದ್ದರೆ ಬಡ್ತಿ, ವೇತನ ಹೆಚ್ಚಳದಂತಹ ಲಾಭಕ್ಕೆ ಕಾರಣರಾಗಲಿದ್ದೀರಿ. ನೀವು ಬಯಸಿದ ಫಲಿತಾಂಶದಂತೆಯೇ ನಿಮ್ಮ ಕೆಲಸ ಕಾರ್ಯಗಳು ಪೂರ್ಣವಾಗಲಿವೆ. ಹಾಗೆ ನೀವು ಎಷ್ಟು ತಾಳ್ಮೆ ಇಟ್ಟಿರುತ್ತಿರೋ ಅಷ್ಟು ನಿಮ್ಮ ಪ್ರಗತಿಗೆ ಕಾರಣವಾಗುತ್ತದೆ. ಮಕ್ಕಳ, ಕುಟುಂಬದ ಭವಿಷ್ಯಕ್ಕೆ ಸಂಬಂಧಿಸಿದಂತೆ ನೀವು ಬಹುದೊಡ್ಡ ಕಾರ್ಯವೊಂದನ್ನು ಈ ಸಮಯದಲ್ಲಿ ಮಾಡಲಿದ್ದೀರಿ.
ವೃಷಭ ರಾಶಿ
ವೃಷಭ ರಾಶಿಯವರಿಗೆ 2025 ಅತ್ಯಂತ ಸಂತೋಷದಾಯಕ ಮತ್ತು ಅತ್ಯಂತ ಸಮೃದ್ಧಿಯುತ ವರ್ಷವಾಗಲಿದೆ. ನಿಮ್ಮ ಕಠಿಣ ಪರಿಶ್ರಮದ ಕಾರಣದಿಂದಾಗಿ ನಿಮ್ಮ ಕೆಲಸಗಳು ಸುಲಭವಾಗಿ ಈಡೇರಲಿದೆ. ನಿಮ್ಮ ಬದುಕಿನ ಬಹುದೊಡ್ಡ ಕನವೊಂದು ಈ ಸಮಯದಲ್ಲಿ ಸುಲಭದ ರೀತಿ ಈಡೇರಿಸಿಕೊಳ್ಳಬಹುದು. ಎಲ್ಲಾ ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತೀರಿ. ಮನೆಯಲ್ಲಿ ಶಾಂತಿ, ಆಸ್ತಿಯ ಪ್ರಗತಿ ನಿಮಗಾಗಲಿದೆ.
ಮಿಥುನ ರಾಶಿ
ಮಿಥುನ ರಾಶಿಯವರು 2025ರಲ್ಲಿ ಉತ್ತಮ ಬದಲಾವಣೆಗಳ ನೋಡಲಿದ್ದಾರೆ. ನೀವು ಈ ವರ್ಷ ಅನೇಕ ಶುಭ ಸುದ್ದಿಗಳ ಕೇಳುತ್ತೀರಿ. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುವ ಜೊತೆಗೆ ಒಂದಿಷ್ಟು ಲಾಭದಾಯಕ ಹೂಡಿಕೆಗಳ ಮಾಡಲಿದ್ದೀರಿ. ಈ ವರ್ಷ ನಿಮ್ಮ ಕನಸುಗಳ ಈಡೇರಿಸಿಕೊಳ್ಳಲು ಸ್ನೇಹ, ಸಂಬಂಧಗಳ ಪ್ರಗತಿಯ ಮೂಲಕ ಅತ್ಯಂತ ನೆಮ್ಮದಿಯ ಜೀವನ ನಡೆಯಲು ಮುಂದಾಗುತ್ತೀರಿ.
ಸಿಂಹ ರಾಶಿ
ಈ 2025ನೇ ವರ್ಷದಲ್ಲಿ ಸಿಂಹ ರಾಶಿಯವರಿಗೆ ಅತ್ಯಂತ ಶುಭಕರವಾಗುವ ವರ್ಷ ಎಂದು ಬಾಬಾ ವಂಗಾ ಹೇಳಿಕೊಂಡಿದ್ದಾರೆ. ನಿಮ್ಮ ಉದ್ಯಮ, ವ್ಯಾಪಾರದಲ್ಲಿ ನೀವು ಎಂದಿಗೂ ನೋಡಿರದಷ್ಟು ಲಾಭ ನೋಡಲಿದ್ದೀರಿ. ಎಲ್ಲಾ ಕಡೆಗಳಿಂದ ನಿಮಗೆ ಶುಭ ಸುದ್ದಿಗಳ ನೋಡಲಿದ್ದೀರಿ. ನಿಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು ಈ ದಿನ ಶುಭಕರವಂತೆ. ಹಾಗೆ ಈ ಸಮಯದಲ್ಲಿ ನಿಮ್ಮ ಜೀವನದ ಬಹುದೊಡ್ಡ ಆಸೆ ಆಕಾಂಕ್ಷೆಗಳ ಈಡೇರಿಸಿಕೊಳ್ಳಲಿದ್ದಿರಂತೆ. ಈವರೆಗೆ ನೋಡಿರದ ಬಹುದೊಡ್ಡ ಯಶಸ್ಸಿಗೆ ನೀವು ಕಾರಣರಾಗಲಿದ್ದೀರಿ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯನ್ನು ಖಾತರಿಪಡಿಸಲಾಗಿಲ್ಲ. ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕನ್ನಡ ಬೋಲ್ಡ್ ಸ್ಕೈ ಖಚಿತಪಡಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications