Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ಈ 5 ರಾಶಿಯ ಮಂದಿ 2025ರಲ್ಲಿ ಹಣವಂತರಾಗುತ್ತಾರೆ...ಬಾಬಾ ವಂಗಾ ಹೇಳಿರುವ ಭವಿಷ್ಯ..!!
ನೀವು ನಾಸ್ಟ್ರಾಡಾಮಸ್ ಹೆಸರು ಕೇಳಿರುತ್ತೀರಿ. ಆತ ಜಗತ್ತಿನ ಆಗು ಹೊಗುಗಳನ್ನು ಶತಮಾನಗಳ ಹಿಂದೆಯೇ ಭವಿಷ್ಯ ನುಡಿದಿದ್ದ. ಇದಾದ ಬಳಿಕ ಇದೇ ರೀತಿ ಭವಿಷ್ಯಗಳ ನುಡಿದವರ ಪೈಕಿ ಬಾಬಾ ವಂಗಾ ಕೂಡ ಒಬ್ಬರಾಗಿದ್ದಾರೆ. ಬಾಬಾ ವಂಗಾ ಕೂಡ ಇಂತಹ ಹಲವು ರೀತಿಯ ಭವಿಷ್ಯಗಳ ನುಡಿದು ಫೇಮಸ್ ಆಗಿರುವ ಅತೀಂದ್ರಿಯ ಶಕ್ತಿ ಹೊಂದಿದ್ದ ಮಹಿಳೆ ಎಂದು ನಂಬಲಾಗಿತ್ತು.
ಅವರು 2025ರಲ್ಲಿ ಈ ಜಗತ್ತಿನಲ್ಲಿ ಏನೆಲ್ಲಾ ಸಂಭವಿಸಲಿದೆ ಎಂಬುದನ್ನು ಮೊದಲೇ ಊಹಿಸಿದ್ದರು. ಅವರು ನುಡಿದಿರುವ ಹಲವು ಭವಿಷ್ಯಗಳು ನಿಜವಾಗಿವೆ ಕೂಡ. ಬಾಬಾ ವಂಗಾ 1911 ರಲ್ಲಿ ಬಲ್ಗೇರಿಯಾದಲ್ಲಿ ಜನಿಸಿದರು. ಅವರು 12ನೇ ವಯಸ್ಸಿನಲ್ಲಿ ಚಂಡಮಾರುತದಲ್ಲಿ ದೃಷ್ಟಿ ಕಳೆದುಕೊಂಡರು. ಇದಾದ ಬಳಿಕ ಅವರು ಅತೀಂದ್ರಿಯ ಶಕ್ತಿ ಪಡೆದಿದ್ದರು ಎಂದು ನಂಬಲಾಗಿತ್ತು.

ಬಾಬಾ ವಂಗಾ 2025ರಲ್ಲಿ ಏನೆಲ್ಲಾ ನಡೆಯಲಿದೆ ಎಂಬುದನ್ನು ಮಾತ್ರ ಊಹಿಸಲಿಲ್ಲ. ಬದಲಿಗೆ 2025ರಲ್ಲಿ ಯಾವ ಯಾಶಿಯವರಿಗೆ ಧನಲಾಭವಿದೆ.? ಯಾವ ರಾಶಿ ಜನರು ಆರ್ಥಿಕವಾಗಿ ಲಾಭ ಗಳಿಸಲಿದ್ದಾರೆ ಎಂಬುದನ್ನು ಹೇಳಿದ್ದಾರೆ. ಹಾಗಾದ್ರೆ ಬಾಬಾ ವಂಗಾ ಪ್ರಕಾರ ಮುಂದಿನ ವರ್ಷ ಯಾವ ರಾಶಿಯವರು ಆರ್ಥಿಕ ಲಾಭ ಕಾಣಲಿದ್ದಾರೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮೇಷ ರಾಶಿ
ಬಾಬಾ ವಂಗಾ ಅವರ ಭವಿಷ್ಯವಾಣಿಯ ಪ್ರಕಾರ 2025ರ ವರ್ಷವು ಮೆಷ ರಾಶಿಯವರ ಪಾಲಿಗೆ ಅತ್ಯಂತ ಅದೃಷ್ಟದ ವರ್ಷವಂತೆ. ಈ ರಾಶಿ ಜನರಿಗೆ ಹೆಚ್ಚಿನ ಸಂಪತ್ತನ್ನು ಗಳಿಸುವ ಅವಕಾಶ ಲಭಿಸಲಿದೆಯಂತೆ. ಈ ರಾಶಿಯವರು ಯಶಸ್ಸಿನ ಉತ್ತುಂಗ ಏರಬಹುದು. ಅವರು ತಮಗೆ ಸಿಗುವಂತಹ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡರೆ ಜೀವನದಲ್ಲಿ ಆರ್ಥಿಕ ಲಾಭ ಕಾಣಲಿದ್ದೀರಿ ಎಂದಿದ್ದಾರೆ. ಈ ವರ್ಷ ನಿಮ್ಮ ಜೀವನದಲ್ಲಿ ಮಹತ್ವದ ಬದಲಾವಣೆಗಳನ್ನು ನಾವು ನೋಡಬಹುದಂತೆ.
ಕುಂಭ ರಾಶಿ
ಬಾಬಾ ವಂಗಾ ಪ್ರಕಾರ 2025ರಲ್ಲಿ ಕುಂಭ ರಾಶಿಯವರು ತಮ್ಮ ಯಶಸ್ಸು ಗಳಿಸುತ್ತಾರೆ. ಕುಂಭ ರಾಶಿಯಲ್ಲಿ ಶನಿ ಪ್ರಬಲವಾದ ಪ್ರಭಾವ ಉಂಟು ಮಾಡುವುದರಿಂದಾಗಿ ನಿಮ್ಮ ಈ ವರ್ಷ ಅತ್ಯಂತ ಲಾಭದಾಯಕವಾಗಿ ಸಾಗಲಿದೆ. ಯಾವುದೇ ಕೆಲಸವನ್ನು ಧೈರ್ಯದಿಂದ ಕೈಗೆತ್ತಿಕೊಳ್ಳಿ ಮತ್ತು ಅದನ್ನು ಉತ್ತಮವಾಗಿ ಮಾಡಿ ಮತ್ತು ನೀವು ಯಶಸ್ವಿಯಾಗುತ್ತೀರಿ. ಗ್ರಹಗತಿಗಳ ಕಾರಣದಿಂದಾಗಿ ನಿಮ್ಮ ದಿನಗಳು ಉತ್ತಮವಾಗಿರಲಿದೆ.
ವೃಷಭ ರಾಶಿ
ವೃಷಭ ರಾಶಿಯವರು 2025ರಲ್ಲಿ ಅಪಾರ ಸಂಪತ್ತನ್ನು ಗಳಿಸುವ ಸಾಧ್ಯತೆ ಇದೆ. ನಿಮ್ಮ ಶ್ರಮಕ್ಕೆ ತಕ್ಕಂತಹ ಪ್ರತಿಫಲ ನಿಮ್ಮದಾಗುತ್ತದೆ. ಹಲವು ವರ್ಷಗಳಿಂದ ನಿಮ್ಮ ಕನಸಾಗಿದ್ದ ವಸ್ತು ನಿಮಗೆ ಸಿಗುವ ಸಾಧ್ಯತೆ ಇದೆ. ಇದು ನಿಮ್ಮ ಆರ್ಥಿಕ ಸ್ಥಿತಿ ಸುಧಾರಣೆಗೆ ಕಾರಣವಾಗಲಿದೆ. ವೃತ್ತೀಪರರಲ್ಲಿ ಈ ವರ್ಷ ನೀವು ಅಂದುಕೊಂಡಿರುವುದಕ್ಕಿಂತ ಲಾಭಗಳನ್ನು ಕಾಣಲು ಸಾಧ್ಯವಾಗುತ್ತದೆ.
ಮಿಥುನ ರಾಶಿ
ಬಾಬಾ ವಂಗಾ ಅವರ ಪ್ರಕಾರ 2025ರ ವರ್ಷವು ಮಿಥುನ ರಾಶಿಯವರಲ್ಲಿ ಇನ್ನಿಲ್ಲದ ಅದೃಷ್ಟ ತರಲಿದೆ. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ವೈಯಕ್ತಿಕ ಕಾರಣಕ್ಕೆ ನೀವು ಖರ್ಚು ಮಾಡಬೇಕಾದ ಅನಿವಾರ್ಯತೆ ಎದುರಾಗಬಹುದು, ಆದ್ರೆ ಇದರಿಂದ ನಿಮಗಿದು ಆರ್ಥಿಕ ಲಾಭಕ್ಕೆ ಕಾರಣವಾಗಲಿದೆ. ನಿಮ್ಮ ವ್ಯಾಪಾರ, ವ್ಯವಹಾರ, ವೃತ್ತಿಯಲ್ಲಿ ನೀವು ಲಾಭ ಮಾಡುತ್ತೀರಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications