Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಆಗಸ್ಟ್‌ನಲ್ಲಿ ಮಹಾ ವಿನಾಶ! ಆಕಾಶದಿಂದ ಸುರಿಯಲಿದೆ ಬೆಂಕಿ.. ಬಾಬಾ ವಂಗಾ ಭವಿಷ್ಯ ಏನು ಗೊತ್ತಾ?
ಜಗತ್ತಿನಲ್ಲಿ ನಡೆಯಲಿದೆ ಮಹಾ ವಿನಾಶ! ಬಾಬಾ ವಂಗಾ ಭವಿಷ್ಯವಾಣಿ ನಿಜವಾದರೆ ಏನಾಗುತ್ತೆ? ಆಗಸ್ಟ್ 2025ರ ಭವಿಷ್ಯವಾಣಿಇಲ್ಲಿದೆ. ಬಲ್ಗೇರಿಯಾದ ನಿಗೂಢ ದಾರ್ಶಿನಿ ಬಾಬಾ ವಂಗಾ (Baba Vanga) ಅವರನ್ನು 'ಬಾಲ್ಕನ್ಸ್‌ನ ನಾಸ್ಟ್ರಾಡಾಮಸ್' ಎಂದು ಜಗತ್ತು ಕರೆಯುತ್ತದೆ. ನೈಸರ್ಗಿಕ ವಿಕೋಪಗಳು, ಯುದ್ಧಗಳು ಮತ್ತು ಪ್ರಮುಖ ಜಾಗತಿಕ ಬದಲಾವಣೆಗಳು ಸೇರಿದಂತೆ ಬಾಬಾ ವಂಗಾ ಅವರ ಅನೇಕ ಹಳೆಯ ಭವಿಷ್ಯವಾಣಿಗಳು ನಿಜವಾಗಿವೆ. ಬಾಬಾ ವಂಗಾ ಅವರ ಭವಿಷ್ಯವಾಣಿಗಳಲ್ಲಿ ತಿಳಿಸಲಾದ ವಿಷಯಗಳು ಸಂಭವಿಸಲಿರುವ ಘಟನೆಗಳಿಗೆ ನಿಖರವಾಗಿ ಹೊಂದಿಕೆಯಾಗುತ್ತವೆ. ಅದರಂತೆ ಆಗಸ್ಟ್ 2025ಕ್ಕೆ ಬಾಬಾ ವಂಗಾ (Baba Vanga August prediction) ಎಚ್ಚರಿಕೆ ನೀಡಿದ್ದು, ಈ ಭವಿಷ್ಯ ಕೇಳಿದ್ರೆ ಬೆಚ್ಚಿಬೀಳ್ತೀರಾ.
ಈಗ ಬಾಬಾ ವಂಗಾ ಅವರ ಭವಿಷ್ಯವಾಣಿಯು ಮತ್ತೊಮ್ಮೆ ಸುದ್ದಿಯಲ್ಲಿದೆ. ಬಾಬಾ ವಂಗಾ ಅವರಿಗೂ ಕೆಲವು ಘಟನೆಗಳಿಗೂ ಅಗಾಧ ಸಂಬಂಧವಿದೆ ಎಂದು ನಂಬುವಂತೆ ಮಾಡಿದೆ. ಆದರೆ, ಅವರು ಎಂದಿಗೂ ನಿರ್ದಿಷ್ಟ ಘಟನೆಗಳನ್ನು ತಮ್ಮ ಭವಿಷ್ಯವಾಣಿಗಳಲ್ಲಿ ಉಲ್ಲೇಖಿಸಿಲ್ಲ. ಈಗ ಅವರ ಮತ್ತೊಂದು ಭವಿಷ್ಯವಾಣಿಯು ಜನರ ಹೃದಯದಲ್ಲಿ ಭಯವನ್ನು ಸೃಷ್ಟಿಸಿದೆ. ಆಗಸ್ಟ್‌ನಲ್ಲಿ ಆಕಾಶದಿಂದ ಬೆಂಕಿಯ ಮಳೆ (Fire rain) ಬೀಳುತ್ತದೆ. ಅದು ಭೂಮಿಯ ಮೇಲೆ ಭಾರೀ ವಿನಾಶವನ್ನು ಉಂಟುಮಾಡುತ್ತದೆ ಎಂದು ಬಾಬಾ ವಂಗಾ ಹೇಳಿಕೊಂಡಿದ್ದರು. 'ಡಬಲ್ ಫೈರ್' ಅಂದ್ರೆ ಏನು? ಬಾಬಾ ವಂಗಾ ಭವಿಷ್ಯ ನುಡಿದಂತೆ ಪ್ರಳಯ ಸಂಭವಿಸುತ್ತಾ? ನೋಡೋಣ ಬನ್ನಿ.

ಆಕಾಶದಿಂದ ಬೆಂಕಿ ಮಳೆ ಸುರಿಯಲಿದೆ
ವಾಸ್ತವವಾಗಿ, ಬಾಬಾ ವಂಗಾ ಅವರು ಆಗಸ್ಟ್ 2025ರ ಬಗ್ಗೆ ಭಯಾನಕ ಭವಿಷ್ಯವಾಣಿಯನ್ನು ಸಹ ನೀಡಿದ್ದರು ಎಂದು ಹೇಳಲಾಗುತ್ತಿದೆ. ಹಲವು ವರ್ಷಗಳ ಹಿಂದೆ, ಬಾಬಾ ವಂಗಾ ಆಗಸ್ಟ್ ತಿಂಗಳಲ್ಲಿ ಭೂಮಿಯ ಮೇಲೆ ಎರಡು ಬಾರಿ ಬೆಂಕಿ ಬೀಳುತ್ತದೆ ಎಂದು ಭವಿಷ್ಯ ನುಡಿದಿದ್ದರು. ಇದರರ್ಥ ಭೂಮಿಯಿಂದ ಆಕಾಶಕ್ಕೆ ಮತ್ತು ಆಕಾಶದಿಂದ ಭೂಮಿಗೆ ಬೆಂಕಿಯ ಮಳೆಯಾಗುತ್ತದೆ. ಈ ಭವಿಷ್ಯವನ್ನು ಕೆಲವರು ಕಾಡ್ಗಿಚ್ಚಿಗೆ (ಕಾಡಿನ ಬೆಂಕಿಗೆ) ಹೋಲಿಕೆ ಮಾಡುತ್ತಿದ್ದಾರೆ. ಇನ್ನೂ ಕೆಲವರು ಜ್ವಾಲಾಮುಖಿ ಸ್ಫೋಟದ ಸಾಧ್ಯತೆಯನ್ನು ಸಹ ವ್ಯಕ್ತಪಡಿಸುತ್ತಿದ್ದಾರೆ.
ಆಕಾಶದಿಂದ ಬೆಂಕಿಯ ಮಳೆ ಹೇಗೆ ಸುರಿಯುತ್ತೆ?
ಭೂಮಿಯ ಮೇಲೆ, ಕಾಡಿನ ಬೆಂಕಿ ಅಥವಾ ಜ್ವಾಲಾಮುಖಿ ಸ್ಫೋಟಗಳ ಸಾಧ್ಯತೆಯಿದೆ. ಆದರೆ, ಆಕಾಶದಿಂದ ಬೆಂಕಿಯ ಮಳೆ ಹೇಗೆ ಸುರಿಯಲಿದೆ ಎಂಬುವುದು ಹಲವರ ಕುತೂಹಲ ಮತ್ತು ಪ್ರಶ್ನೆಯಾಗಿದೆ. ಈ ಭವಿಷ್ಯವಾಣಿಯು ದೊಡ್ಡ ಉಲ್ಕಾಶಿಲೆ, ಸೌರ ಚಂಡಮಾರುತ ಅಥವಾ ಪರಮಾಣು ದಾಳಿಯಂತಹ ದೊಡ್ಡ ಘಟನೆಗಳನ್ನು ಇದು ಸೂಚಿಸಬಹುದು ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಬಾಹ್ಯಾಕಾಶದಿಂದ ಬಂದ ದೊಡ್ಡ ಕಾಯವು (ದೇಹವು) ಭೂಮಿಗೆ ಡಿಕ್ಕಿ (ಅಪ್ಪಳಿಸಿದರೆ) ಹೊಡೆದರೆ, ಅದು ಇಡೀ ಪ್ರಪಂಚದ ಹವಾಮಾನ, ತಾಂತ್ರಿಕ ವ್ಯವಸ್ಥೆಗಳು ಮತ್ತು ಭೂಮಿಯ ಮೇಲಿನ ಜೀವನದ ಮೇಲೆ ಪರಿಣಾಮ ಬೀರಬಹುದು ಎಂದು ತಜ್ಞರ ಹೇಳಿದ್ದಾರೆ.
ಮತ್ತೊಂದು ಭವಿಷ್ಯವಾಣಿ ನಿಜವಾಗುತ್ತಿದೆ!
ಬಾಬಾ ವಂಗಾ ಅವರ ಮತ್ತೊಂದು ಭವಿಷ್ಯವಾಣಿಯು ನಿಜವಾಗುವ ಸೂಚನೆ ಸಿಕ್ಕಿದೆ. ವಾಸ್ತವವಾಗಿ, ಬಾಬಾ ವಂಗಾ 2025 ರಲ್ಲಿ ಆರ್ಥಿಕ ಹಿಂಜರಿತದ ಬಗ್ಗೆ ಎಚ್ಚರಿಕೆ ನೀಡಿದ್ದರು. ಇದು ಡೊನಾಲ್ಡ್ ಟ್ರಂಪ್ ಅವರ ಸುಂಕ (ಸುಂಕ ನೀತಿ) ಯೋಜನೆಯಿಂದಾಗಿ ನಿಜವಾಗುತ್ತಿರುವಂತೆ ಕಾಣುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕ ನೀತಿಯೇ ಅವರ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಬಹುದು ಎಂದು ಹೇಳಲಾಗುತ್ತಿದೆ. ಬಾಬಾ ವಂಗಾ ಅವರ ಹಲವು ಭವಿಷ್ಯವಾಣಿಗಳು ಇತಿಹಾಸದಲ್ಲಿ ನಿಖರವಾಗಿವೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.
ಒಟ್ಟಾರೆಯಾಗಿ, ಬಾಬಾ ವಂಗಾ ಅವರು ತಮ್ಮ ಸಾವಿನ ಪೂರ್ವದಲ್ಲಿ ಮುಂದಿನ ದಶಕಗಳಿಗೆ ಸಂಬಂಧಿಸಿದಂತೆ ಹಲವು ಭವಿಷ್ಯಗಳನ್ನು ನುಡಿದಿದ್ದರು. ಅವುಗಳಲ್ಲಿ ಆಗಸ್ಟ್ 2025ರ ಕುರಿತ ಈ ಭವಿಷ್ಯವಾಣಿಗಳು ಈಗ ವ್ಯಾಪಕವಾಗಿ ಚರ್ಚೆಗೊಳಗಾಗಿವೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
