Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬಾಬಾ ವಂಗಾ ಭವಿಷ್ಯ ಪ್ರಕಾರ ಈ 3 ರಾಶಿಯವರು 2025ರಲ್ಲಿ ತುಂಬಾ ಹಣಗಳಿಸುತ್ತಾರಂತೆ, ಇದರಲ್ಲಿ ನಿಮ್ಮ ರಾಶಿ ಇದೆಯೇ?
ಶ್ರೀಮಂತರಾಗುವುದು ಒಂದು ಯೋಗ ಎಂದು ಭವಿಷ್ಯ ಹೇಳುತ್ತದೆ. ನಮ್ಮ ಹಣೆಯಲ್ಲಿ ಏನಾಗುತ್ತೆ ಅಂತ ಮೊದಲೇ ನಿಶ್ಚಯವಾಗಿರುತ್ತೆ, ಅದರಂತೇ ಬದುಕು ನಡೆಯುತ್ತದೆ ಎಂದು ಹೇಳಲಾಗುವುದು. ಭವಿಷ್ಯ ನುಡಿಯುವುದರಲ್ಲಿ ಪ್ರಸಿದ್ಧರಾದ ಹಲವಾರು ವ್ಯಕ್ತಿಗಳು ಜಗತ್ತಿನಲ್ಲಿದ್ದಾರೆ, ಅವರಲ್ಲೊಬ್ಬರು ಬಾಬಾ ವಂಗಾ. ಇವರು 1996ರಲ್ಲಿ ಸಾವನ್ನಪ್ಪುತ್ತಾರೆ, ಆದರೆ ಅವರಿಲ್ಲದಿದ್ದರೂ ಅವರು ನುಡಿದಿರುವ ಭವಿಷ್ಯವಾಣಿಗಳು ಹರಿದಾಡುತ್ತಲೇ ಇರುತ್ತದೆ, ಇದರಲ್ಲಿ ಹಲವಾರು ಭವಿಷ್ಯವಾಣಿಗಳು ನಿಜವಾಗಿದೆ, ಹಾಗಾಗಿ ಬಾಬಾ ವಂಗಾ ಭವಿಷ್ಯ ತಿಳಿಯುವ ಕಾತರ ಹಾಗೂ ಆ ಭವಿಷ್ಯದ ಬಗ್ಗೆ ನಂಬಿಕೆ ಜನರಲ್ಲಿ ಈಗಲೂ ಇದೆ.
ಬಾಬಾ ವಂಗಾ 2025ರ ಕುರಿತು ಹಲವಾರು ಭವಿಷ್ಯ ನುಡಿದಿದ್ದಾರೆ. 2025ರ ವರ್ಷದಲ್ಲಿ ಮಹಾಯುದ್ಧ ನಡೆಯಲಿದೆ ಎಂಬ ಭವಿಷ್ಯ ನುಡಿದಿದ್ದಾರೆ, ಕ್ಯಾನ್ಸರ್‌ಗೆ ಚಿಕಿತ್ಸೆ ಕಂಡು ಹಿಡಿಯಲಾಗುವುದು, ಹಲವು ರಾಷ್ಟ್ರಗಳಲ್ಲಿ ಆರ್ಥಿಕ ಸಮಸ್ಯೆ ಉಂಟಾಗಲಿದೆ ಎಂಬ ಭವಿಷ್ಯ ನುಡಿದಿದ್ದಾರೆ. ಜೊತೆ 2025 ಈ ರಾಶಿಯವರು ಹೆಚ್ಚಿನ ಹಣ ಗಳಿಸುತ್ತಾರೆ ಎಂಬ ಭವಿಷ್ಯ ನುಡಿದಿದ್ದಾರೆ, ಆ ರಾಶಿಗಳೆಂದರೆ..

ಮೇಷ ರಾಶಿ
ಈ ವರ್ಷ ಈ ರಾಶಿಯವರು ಅದ್ಭುತ ಬದಲಾವಣೆಯನ್ನು ಕಾಣಬಹುದು, ಈ ವರ್ಷ ನಿಮ್ಮ ಕನಸು ನನಸಾಗಲಿದೆ,ನೀವು ನಿಮ್ಮ ಗುರಿಯತ್ತ ಗಮನಹರಿಸಿ, ನಿಮ್ಮ ದೊಡ್ಡ ಕನಸು ನನಸಾಗಲಿದೆ. ಈ ವರ್ಷ ಸವಾಲುಗಳನ್ನು ಸ್ವೀಕರಿಸುತ್ತೀರಿ, ಆದರೆ ನೀವು ಉತ್ತಮ ಪ್ರಯೋಜನ ಕೂಡ ಪಡೆಯುತ್ತೀರಿ. ನಿಮ್ಮ ವೃತ್ತು ಬದುಕಿನಲ್ಲಿ ಮತ್ತಷ್ಟು ಬೆಳೆಯುವಂತಾಗುವುದು. ಹಣ ಗಳಿಸುವುದು ಮಾತ್ರವಲ್ಲ, ಹಣ ಉಳಿತಾಯ ಮಾಡಲು ಸಾಧ್ಯವಾಗುವುದು.
ಇಷ್ಟು ವರ್ಷ ನೀವು ಇದ್ದಿದ್ದು ಬೇರೆ, ಈ ವರ್ಷ ನಿಮ್ಮ ಬದುಕಿನಲ್ಲಿ ತುಂಬಾನೇ ಬದಲಾವಣೆ ಕಾಣಬಹುದು. ನಿಮ್ಮ ಪ್ರಮುಖ ಕನಸು ನನಸಾಗಲಿದೆ. ನೀವು ಹೊಸ ಕಾರ್ಯದಲ್ಲಿ ಕೈ ಹಾಕಿದರೆ ಅದರಲ್ಲಿ ಯಶಸ್ಸು ಸಿಗಲಿದೆ, ಒಟ್ಟಿನಲ್ಲಿ ಆರ್ಥಿಕವಾಗಿ ತುಂಬಾ ಒಳ್ಳೆಯದು.
ವೃಷಭ ರಾಶಿ
ಈ ವರ್ಷ ನಿಮಗೆ ಸಮೃದ್ಧಿಯ ವರ್ಷವಾಗಲಿದೆ. ಇಷ್ಟು ವರ್ಷಗಳ ಕಠಿಣ ಶ್ರಮಕ್ಕೆ ಈ ವರ್ಷ ಉತ್ತಮ ಫಲ ಸಿಗಲಿದೆ, ಹೀಗಾಗಿ ಆರ್ಥಿಕವಾಗಿ ತುಂಬಾ ಚೆನ್ನಾಗಿರಲಿದೆ. ಕಳೆದ ಎರಡು ವರ್ಷಗಳಿಂದ ನೀವು ಏನು ಪ್ರಯತ್ನ ಪಟ್ಟಿದ್ದೀರೋ ಅದು ಈ ವರ್ಷ ನೆರವೇರಲಿದೆ. ವೃಷಭ ರಾಶಿಯವರಿಗೆ ವೃತ್ತಿ ಜೀವನದಲ್ಲಿ ಹೊಸ ಅವಕಾಶಗಳು ದೊರೆಯಲಿದೆ. ಆರ್ಥಿಕವಾಗಿ ತುಂಬಾ ಉತ್ತಮ ಪ್ರಯೋಜನ ಪಡೆಯುತ್ತೀರಿ. ಹೂಡಿಕೆಗೆ ಈ ಅವಧಿ ಅನುಕೂಲಕರವಾಗಿದೆ. ಆರ್ಥಿಕ ಸ್ಥಿತಿ ಉತ್ತಮವಾಗುವುದರಿಂದ ಹಣದ ಕಾರಣದಿಂದ ಬಾಕಿಯುಳಿದ ಕೆಲಸ ಪೂರ್ಣವಾಗಲಿದೆ.
ಮಿಥುನ ರಾಶಿ
ಮಿಥುನ ರಾಶಿಯವರು ಮಹತ್ವದ ಬದಲಾವಣೆಯನ್ನು ಕಾಣಬಹುದು, ವೃತ್ತಿ ಬದುಕಿನಲ್ಲಿ, ನಿಮ್ಮ ಬದುಕಿನಲ್ಲಿ ಇದ್ದ ಸವಾಲುಗಳು ದೂರಾಗಲಿದೆ. ನಿಮ್ಮ ಸಮಸ್ಯೆ ಬಗೆಹರಿಯುವುದರಿಂದ ಜೀವನದಲ್ಲಿ ಧನಾತ್ಮಕ ಬದಲಾವಣೆಯನ್ನು ಕಾಣಬಹುದು. ಆರ್ಥಿಕವಾಗಿ ಈ ಅವಧಿ ಅನುಕೂಲಕರವಾಗಿದೆ. ಈ ವರ್ಷ ಮನೆ ಕಟ್ಟಬೇಕು, ಗಾಡಿ ಖರೀದಿಸಬೇಕು ಎಂಬ ಭವಿಷ್ಯ ಈಡೇರಲಿದೆ. ಈ ವರ್ಷ ಅತ್ಯುತ್ತಮವಾದ ಅವಕಾಶಗಳು ದೊರೆಯಲಿದೆ, ಅದನ್ನು ಉತ್ತಮವಾಗಿ ಬಳಸಿಕೊಳ್ಳಲು ಪ್ರಯತ್ನಿಸಿದರೆ ನೀವು ತುಂಬಾ ಉತ್ತಮ ಪ್ರಯೋಜನ ಪಡೆಯಬಹುದು. ಹಣವನ್ನು ಉಳಿತಾಯ ಮಾಡುತ್ತೀರಿ, ಸಮಾಜದಲ್ಲಿ ನಿಮ್ಮ ಸ್ಥಾನ ಮಾನ ಸುಧಾರಿಸಲಿದೆ.
ಸೂಚನೆ
ಈ ಲೇಖನವನ್ನು ಜ್ಯೋತಿಷ್ಯ ಪ್ರಕಾರ ನೀಡಲಾಗಿದ್ದು, ಮಾಹಿತಿಯ ಉದ್ದೇಶದಿಂದ ಮಾತ್ರ ನೀಡಲಾಗಿದೆ, ಯಾವುದೇ ನಿರ್ಧಾರ ಅಥವಾ ನಷ್ಟಗಳಿಗೆ Kannada Boldsky.com ಹೊಣೆಯಲ್ಲ. ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಅಥವಾ ಹೂಡಿಕೆ ಮುನ್ನ ತಜ್ಞರ ಸಲಹೆ ಪಡೆಯುವುದು ಸೂಕ್ತ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications