Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
2025ರಲ್ಲಿ ನಡೆಯಲಿದೆಯೇ 3ನೇ ಮಹಾಯುದ್ಧ? ಬಾಬಾ ವಂಗಾ 2024ರಲ್ಲಿ ನುಡಿದ ಭವಿಷ್ಯದಲ್ಲಿ ಎಷ್ಟು ನಿಜವಾಗಿದೆ?
2025ರಲ್ಲಿ ಮೂರನೇ ಮಹಾಯುದ್ಧ ನಡೆಯಲಿದೆಯೇ? ರಷ್ಯಾ-ಉಕ್ರೇನ್‌ನಡುವಿನ ಕದನ ಮುಕ್ತಾಯವಾಗುವ ಸೂಚನೆಯೂ ಕಾಣುತ್ತಿಲ್ಲ, ಇಸ್ತೇಲ್-ಪ್ಯಾಲೆಸ್ತೀನ್ ನಡುವೆ ಕದನ ನಡೆಯುತ್ತಲೇ ಇದೆ ಪರಿಸ್ಥಿತಿ ಹೀಗಿರುವಾಗ 2025ರಲ್ಲಿ 3ನೇ ಮಹಾಯುದ್ಧ ನಡೆಯಲಿದೆ ಎಂಬ ಭವಷ್ಯವು ನೂರಾರು ವರ್ಷಗಳ ಹಿಂದೆಯೇ ಹೇಳಲಾಗಿದೆ.
ಬಾಬಾ ವಂಗಾ ಭವಿಷ್ಯದ ಬಗ್ಗೆ ಕೇಳಿರಬಹುದು, ಅಂಧೆಯಾಗಿದ್ದ ಆಕೆ ಆ ಕಾಲದಲ್ಲಿಯೇ ಭವಿಷಯವು ಹೇಗಿರಲಿದೆ, ಭವಿಷ್ಯದಲ್ಲಿ ಏನು ನಡೆಯುತ್ತದೆ ಎಂಬ ಭವಿಷ್ಯ ನುಡಿದಿದ್ದಾಳೆ, ಅಚ್ಚರಿ ಎಂಬಂತೆ ಆ ಭವಿಷ್ಯಗಳು ಬಹುತೇಕ ನಿಜವಾಗಿದೆ, ಹಾಗಾಗಿ ಬಾಬಾ ವಂಗಾ ಭವಿಷ್ಯ ಸುಳ್ಳಾಗಲ್ಲ ಎಂಬ ನಂಬಿಕೆ ಜನರಲ್ಲಿದೆ.

2024ರಲ್ಲಿ ವಂಗಾ ಬಾಬಾ ನುಡಿದ ಭವಷ್ಯಗಳಲ್ಲಿ ಹಲವು ನಿಜವಾಗಿದೆ
ಪ್ರಕೃತಿ ವಿಕೋಪಗಳು ಸಂಭವಿಸಲಿದೆ
ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಪ್ರಕೃತಿ ವಿಕೋಪ ಸಂಭವಿಸಿದೆ, ಭಾರತದಲ್ಲಿಯೂ ಹಲವು ಕಡೆ ಸಂಭವಿಸಿದೆ, ಆದರೆ ವಯನಾಡ್ ಮರಣ ಮೃದಂಗ ಭಾರಿಸಿ ವಿಶ್ವದ ಗಮನ ಸೆಳೆಯಿತು.
ಚೀನಾ ಸೂಪರ್ ರಾಷ್ಟ್ರವಾಗಲಿದೆ
ಚೀನಾ ಆ ನಿಟ್ಟಿನಲ್ಲಿ ತನ್ನೆಲ್ಲಾ ಪ್ರಯತ್ನ ಮಾಡುತ್ತಿದೆ ಎಂಬುವುದು ಮಾತ್ರ ಸತ್ಯ, ಇಸ್ರೇಲ್ ಯುದ್ಧದಲ್ಲಿಯೂ ಚೀನಾ ಮೂಗು ತೂರಿಸಿದೆ, ತನ್ನ ಕುತಂತ್ರ ಬುದ್ಧಿಯಿಂದ ತಾನೇ ನಂಬರ್ 1 ರಾಷ್ಟ್ರವಾಗಲು ತನ್ನೆಲ್ಲಾ ಪ್ರಯತ್ನ ಮಾಡುತ್ತಿದೆ.
ಯುರೋಪ್‌ನಲ್ಲಿ ಭಯೋತ್ಪಾದನೆ ಹೆಚ್ಚಾಗಲಿದೆ
ಯಾವ ರಾಷ್ಟ್ರವೂ ಭಯೋತ್ಪಾದನೆಯ ಆತಂಕದಿಂದ ಮುಕ್ತವಾಗಿಲ್ಲ, ಯಾವಾಗ ಎಲ್ಲಿ ಭಯೋತ್ಪಾದಕ ಕೃತ್ಯ ನಡೆಯುತ್ತದೆ ಎಂದು ಹೇಳಲು ಸಾಧ್ಯವಿಲ್ಲ, ಅಷ್ಟರ ಮಟ್ಟಿಗೆ ಭಯೋತ್ಪಾದನೆ ಹೆಚ್ಚಾಗಿದೆ.
ಕ್ಯಾನ್ಸರ್‌ಗೆ ಚಿಕಿತ್ಸೆ ಕಂಡು ಹಿಡಿಯಲಾಗುವುದು
ಮಾರಕ ಕಾಯಿಲೆಗೆ ಮದ್ದು ಕಂಡು ಹಿಡಿಯಲಾಗುವುದು ಎಂದು ಭವಿಷ್ಯ ನುಡಿದಿದ್ದರು ಅದು ಕೂಡ ನಿಜವಾಗಿದೆ. ರಷ್ಯಾ ಮಾರಕ ಕ್ಯಾನ್ಸರ್‌ಗೆ ಔಷಧಿ ಕಂಡು ಹಿಡಿದಿರುವುದಾಗಿ ಹೇಳಿದೆ.
ಹಲವು ರಾಷ್ಟ್ರಗಳಲ್ಲಿ ಆರ್ಥಿಕ ಸಮಸ್ಯೆ
ಇದು ಕೂಡ ನಿಜವಾಗಿದೆ, ಪಾಕಿಸ್ತಾನ, ಬಾಂಗ್ಲಾದೇಶ ಸೇರಿದಂತೆ ಹಲವಾರು ರಾಷ್ಟ್ರಗಳಲ್ಲಿ ಆರ್ಥಿಕ ಕುಸಿತ ಉಂಟಾಗಿದೆ.
2025ರಲ್ಲಿ ಯುದ್ಧಗಳು ನಡೆಯಲಿದೆ
2025ರ ವರ್ಷ ಈ ಭೂಮಿಯಲ್ಲಿ ಹಲವು ವಿನಾಶಕಾರಿ ಘಟನೆಗಳು ನಡೆಯಲಿದೆ, ಸರಣಿ ದುರಂತಗಳು ನಡೆಯುತ್ತದೆ, ಯುದ್ದಗಳು ನಡೆದು ನೇಕ ಸಾವು-ನೋವುಗಳು ಸಂಭವಿಸಲಿದೆ, ಯುರೋಪ್ ರಾಷ್ಟ್ರಗಳಲ್ಲಿ ಪರಿಸ್ಥಿತಿ ಹದಗೆಡಲಿದೆ ಎಂಬ ಭವಿಷ್ಯ ನುಡಿದಿದ್ದಾರೆ.
ಯಾರು ಬಾಬಾ ವಂಗಾ?
ಈಕೆ ಬಲ್ಗೇರಿಯಾದಲ್ಲಿ ವಾಸವಾಗಿದ್ದರು , ತನ್ನ 12ನೇ ವಯಸ್ಸಿನಲ್ಲಿ ದೃಷ್ಟಿ ಕಳೆದುಕೊಳ್ಳುತ್ತಾರೆ, ಅಲ್ಲಿಂದ ಭವಿಷ್ಯ ನುಡಿಯುವ ದಿವ್ಯದೃಷ್ಟಿ ಅವರಿಗೆ ಬಂತು ಎಂದು ಹೇಳಲಾಗುವುದು, ಇವರು ನುಡಿದ ಭವಿಷ್ಯವನ್ನು ಬೇರೆಯವರು ದಾಖಲಿಸಿಕೊಂಡಿದ್ದಾರೆ ಎಂದು ಹೇಳಲಾಗುವುದು. ಇವರು ನುಡಿದ ಭವಿಷ್ಯ ಬಹುತೇಕ ನಿಜವಾಗಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











