Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ನವೆಂಬರ್ 2023: ಶುಭ ಕಾರ್ಯಕ್ಕೆ ಈ ದಿನಗಳು ತುಂಬಾನೇ ಶುಭವಾಗಿದೆ ನೋಡಿ
ಯಾವುದೇ ಶುಭ ಕೆಲಸ ಮಾಡಬೇಕಾದರೆ ಒಳ್ಳೆಯ ದಿನವನ್ನು ನೋಡುವುದು ಹಿಂದೂ ಪದ್ಧತಿಯ ಪ್ರಕಾರ ಬಹಳ ಅಗತ್ಯವಾದ ಕೆಲಸ. ಮದುವೆಯಾಗಲಿ, ನಾಮಕರಣ ಇರಲಿ, ಹೊಸ ಜಾಗ ಖರೀದಿಯಾಗಲಿ ಅಥವಾ ಹೊಸ ಮನೆಗೆ ಕಟ್ಟಡಕ್ಕೆ ಗುದ್ದಲಿ ಪೂಜೆಯಾಗಲಿ ಯಾವುದೇ ಒಳ್ಳೆಯ ಕೆಲಸವನ್ನು ಆರಂಭಿಸುವ ಮೊದಲು ಶುಭ ಗಳಿಗೆಯನ್ನು ನೋಡಿಕೊಂಡು ಹಾಗೂ ಶುಭದಿನವನ್ನು ನೋಡಿಕೊಂಡು ಕೆಲಸವನ್ನು ಆರಂಭಿಸಲಾಗುತ್ತದೆ. ಇದರಿಂದಾಗಿ ಮಾಡುತ್ತಿರುವ ಶುಭ ಕೆಲಸದಲ್ಲಿ ಯಾವುದೇ ಅಡಚಣೆ ಇಲ್ಲದೆ ಸಾಂಗವಾಗಿ ಎಲ್ಲಾ ಕೆಲಸಗಳು ಮುಗಿಯುತ್ತದೆ ಎಂದು ನಂಬಿಕೆ.

ಮುಂದಿನ ತಿಂಗಳು ಅಂದರೆ ನವಂಬರ್ ನಲ್ಲೂ ನೀವು ಯಾವುದೇ ಶುಭ ಕೆಲಸವನ್ನು ಮಾಡಲು ಹೊರಟಿದ್ದೀರಿ ಎಂದಾದಲ್ಲಿ ಖಂಡಿತವಾಗಿ ಒಳ್ಳೆಯ ದಿನವನ್ನು ನೋಡಿ ನಿಮ್ಮ ಕೆಲಸವನ್ನು ಆರಂಭಿಸಿ. ಹಾಗಾದರೆ ಯಾವ ಯಾವ ಕೆಲಸಗಳಿಗೆ ನವೆಂಬರ್ ನಲ್ಲಿ ಒಳ್ಳೆಯ ದಿನಗಳು ಇವೆ ಎನ್ನುವುದನ್ನು ತಿಳಿದುಕೊಳ್ಳಬೇಕು ಎಂದಾದಲ್ಲಿ ನಾವು ನಿಮಗೆ ನೆರವಾಗುತ್ತೇವೆ.
ನವಂಬರ್ ತಿಂಗಳಲ್ಲಿ ಒಟ್ಟಾರೆಯಾಗಿ ಇರುವ ಒಳ್ಳೆಯ ದಿನಗಳು ಯಾವುವು ಹಾಗೂ ನಿರ್ದಿಷ್ಟವಾದ ಶುಭ ಸಮಾರಂಭಕ್ಕೆ ಯಾವ ದಿನ ಒಳ್ಳೆಯದು ಎನ್ನುವುದನ್ನು ನೋಡಬೇಕು ಎಂದಾದರೆ ಮುಂದಿನ ದಿನಗಳ ಪಟ್ಟಿಯನ್ನು ನೋಡಿ.
ನವಂಬರ್ ತಿಂಗಳ ಒಳ್ಳೆಯ ದಿನಗಳ ಪಟ್ಟಿ ಈ ಕೆಳಗಿನಂತಿದೆ
ನವಂಬರ್ 1 ಶುಭದಿನ
ನವೆಂಬರ್ 3 ಶುಭದಿನ
ನವೆಂಬರ್ 4 ಬೆಳಗ್ಗೆ 11:59ರ ನಂತರ ಶುಭದಿನ
ನವೆಂಬರ್ 5 ಶುಭದಿನ
ನವೆಂಬರ್ 9 ಸಂಜೆ 4:46ರ ನಂತರ ಶುಭದಿನ
ನವೆಂಬರ್ 18 ಶುಭದಿನ
ನವೆಂಬರ್ 20 ಸಂಜೆ 4:19 ರ ನಂತರ ಶುಭದಿನ
ನವೆಂಬರ್ 21 ಶುಭದಿನ
ನವೆಂಬರ್ 23 ಬೆಳಗ್ಗೆ 10:02 ನಿಮಿಷಗಳ ತನಕ ಶುಭದಿನ
ನವೆಂಬರ್ 24 ರಾತ್ರಿ 9:04 ನಿಮಿಷಗಳ ತನಕ ಶುಭದಿನ
ನವೆಂಬರ್ 25 ಶುಭದಿನ
ನವೆಂಬರ್ 27 ಮಧ್ಯಾಹ್ನ 1:35 ರ ನಂತರ ಶುಭದಿನ
ನವೆಂಬರ್ 28 ಶುಭದಿನ
ನವೆಂಬರ್ 29 ಶುಭದಿನ.
ಇನ್ನು ಕೆಲವು ದಿನಗಳಲ್ಲಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಳ್ಳೆಯ ಯಾವುದೇ ಕೆಲಸಗಳನ್ನು ಮಾಡಬಾರದು ಎಂದಿರುತ್ತದೆ. ಈ ಸಮಯದಲ್ಲಿ ಗ್ರಹಗಳ ಸ್ಥಿತಿಗತಿಗಳ ಆಧಾರದಲ್ಲಿ ಒಳ್ಳೆಯ ಕೆಲಸಗಳನ್ನು ಆರಂಭಿಸಿದರೆ ಅದು ಕೈಗೂಡುವುದಿಲ್ಲ ಎಂದು ನಂಬಲಾಗಿದೆ. ನವಂಬರ್ ತಿಂಗಳ ಅಂತಹ ದಿನಗಳನ್ನು ತಿಳಿದುಕೊಳ್ಳೋಣ. ನವೆಂಬರ್ 7, ನವೆಂಬರ್ 11, ನವೆಂಬರ್ 12 ಮತ್ತು ನವೆಂಬರ್ 13 ಅಷ್ಟೊಂದು ಒಳ್ಳೆಯ ದಿನಗಳು ಅಲ್ಲ.
ನವಂಬರ್ ತಿಂಗಳ ಅಭಿಜಿತ್ ಮುಹೂರ್ತ ಯಾವುದು ಎಂದು ತಿಳಿದುಕೊಳ್ಳ ಬೇಕಾದರೆ ಅದರ ವಿವರ ಇಲ್ಲಿದೆ ನವೆಂಬರ್ 18 ಶನಿವಾರ ಸಂಜೆ 6:25 ನಿಮಿಷಗಳಲ್ಲಿ ಅಭಿಜಿತ್ ಮುಹೂರ್ತ ಆರಂಭವಾಗಿ ನವೆಂಬರ್ 19 ರ ಮಧ್ಯಾಹ್ನ 1:38 ನಿಮಿಷಕ್ಕೆ ಈ ಮೂರ್ತ ಕೊನೆಗೊಳ್ಳುತ್ತದೆ.
ನವೆಂಬರ್ ನ ಅನ್ನಪ್ರಾಶನದ ಶುಭ ದಿನಗಳು ಮತ್ತು ಸಮಯ ಈ ಕೆಳಗಿನಂತಿದೆ
10 ನವಂಬರ್ ಮಧ್ಯಾಹ್ನ 3:30 ರಿಂದ ರಾತ್ರಿ 8:00 ತನಕ
22 ನವೆಂಬರ್ ಸಂಜೆ 7:30 ರಿಂದ ರಾತ್ರಿ 11:00 ತನಕ
24ನೇ ನವೆಂಬರ್ ರಾತ್ರಿ 9:45 ರಿಂದ 11:30 ರ ತನಕ
27ನೇ ನವೆಂಬರ್ ಮಧ್ಯಾಹ್ನ 2:25 ರಿಂದ 3:25 ತನಕ
29 ನವೆಂಬರ್ ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 2:00 ತನಕ.
ನವಂಬರ್ ತಿಂಗಳ ಮದುವೆಯ ಮುಹೂರ್ತಗಳು ಈ ಕೆಳಗಿನಂತಿವೆ
15ನೇ ನವೆಂಬರ್ ಸೋಮವಾರ - ನಕ್ಷತ್ರ ಉತ್ತರಭಾದ್ರ ದ್ವಾದಶಿ ತಿಥಿ
16ನೇ ನವಂಬರ್ ಮಂಗಳವಾರ ರೇವತಿ ನಕ್ಷತ್ರ ತ್ರಯೋದಷಿ ತಿಥಿ
20ನೇ ನವಂಬರ್ ಶನಿವಾರ ರೋಹಿಣಿ ನಕ್ಷತ್ರ ಪ್ರತಿಪಾದ ತಿಥಿ
21ನೇ ನವಂಬರ್ ಶನಿವಾರ ಮೃಗಶಿರ ನಕ್ಷತ್ರ ದ್ವಿತೀಯಾ ತಿಥಿ
28ನೇ ನವಂಬರ್ ಶನಿವಾರ ಉತ್ತರ ಫಾಲ್ಗುಣಿ ನಕ್ಷತ್ರ ನವಮಿ ತಿಥಿ
29ನೇ ನವೆಂಬರ್ ಸೋಮವಾರ ಉತ್ತರ ಫಾಲ್ಗುಣಿ ನಕ್ಷತ್ರ ಸೋಮವಾರ ತಿಥಿ
30ನೇ ನವೆಂಬರ್ ಮಂಗಳವಾರ ಹಸ್ತ ನಕ್ಷತ್ರ ಏಕಾದಶಿ ತಿಥಿ.
ನವಂಬರ್ ತಿಂಗಳ ನಾಮಕರಣ ಮುಹೂರ್ತಗಳು ಈ ಕೆಳಗಿನಂತಿವೆ
9ನೇ ನವಂಬರ್ ಬೆಳಿಗ್ಗೆ 8:00 ರಿಂದ ಮಧ್ಯಾಹ್ನ 1:30 ತನಕ ಮತ್ತು ಮಧ್ಯಾಹ್ನ 3:30 ರಿಂದ 4:30
10 ನೇ ನವಂಬರ್ ಬೆಳಗ್ಗೆ 8:00 ರಿಂದ ಮಧ್ಯಾಹ್ನ 1:30
23ನೇ ನವೆಂಬರ್ 7:30 ನಿಮಿಷದಿಂದ 9:00 ರ ತನಕ
24 ನೇ ನಂಬರ್ ಬೆಳಿಗ್ಗೆ 8:40 ರಿಂದ 9:00 ಮತ್ತು ಬೆಳಗ್ಗೆ 11:30 ರಿಂದ 3:30
27ನೇ ನವಂಬರ್ ಮಧ್ಯಾಹ್ನ 3:40 ನಿಮಿಷದಿಂದ 5:00
29ನೇ ನವಂಬ ಬೆಳಿಗ್ಗೆ 8:55 ರಿಂದ ಮಧ್ಯಾಹ್ನ 2:00
ನವೆಂಬರ್ ತಿಂಗಳಲ್ಲಿ ನೀವು ಯಾವುದೇ ಹೊಸ ವ್ಯವಹಾರವನ್ನು ಆರಂಭಿಸಬೇಕು ಎಂದು ನಿರ್ಧರಿಸಿದ್ದಲ್ಲಿ 8 ನೇ ನವಂಬರ್ ಬೆಳಿಗ್ಗೆ 10:30 ನಿಮಿಷದಿಂದ ಮಧ್ಯಾಹ್ನ 12 ಗಂಟೆಯ ತನಕದ ಅವಧಿ ಬಹಳ ಉತ್ತಮವಾಗಿದೆ.
ನವಂಬರ್ ತಿಂಗಳಲ್ಲಿ ನೀವು ಯಾವುದೇ ಹೊಸ ಜಾಗವನ್ನು ಅಥವಾ ಪ್ರಾಪರ್ಟಿಯನ್ನು ಖರೀದಿಸಬೇಕು ಎಂದು ನಿರ್ಧರಿಸಿದ್ದಲ್ಲಿ ಈ ಕೆಳಗಿನ ಮೂರ್ತಗಳು ಶುಭವಾಗಿವೆ.
ನವೆಂಬರ್ 3 ಶುಕ್ರವಾರ 6:45 ರಿಂದ 4 ನೇ ನವಂಬರ್ ಬೆಳಿಗ್ಗೆ 6:46 ತನಕ
ನವೆಂಬರ್ 16 ಗುರುವಾರ ಬೆಳಿಗ್ಗೆ 6:53 ರಿಂದ 17ನೇ ನವಂಬರ್ ಬೆಳಿಗ್ಗೆ 6:54 ತನಕ
17ನೇ ನವಂಬರ್ ಶುಕ್ರವಾರ ಬೆಳಿಗ್ಗೆ 6:54 ನಿಮಿಷದಿಂದ 18ನೇ ನವಂಬರ್ ಮಧ್ಯರಾತ್ರಿ 1:17 ತನಕ
ನವೆಂಬರ್ 23 ಗುರುವಾರ ಸಂಜೆ 5:16 ರಿಂದ 24ನೇ ನವಂಬರ್ ಬೆಳಿಗ್ಗೆ 6:59 ತನಕ
24ನೇ ನವೆಂಬರ್ ಶುಕ್ರವಾರ ಬೆಳಿಗ್ಗೆ 6:59 ರಿಂದ ಸಂಜೆ 4:01 ತನಕ
30 ನೇ ನವೆಂಬರ್ ಗುರುವಾರ ಮಧ್ಯಾಹ್ನ 3:01 ರಿಂದ ಡಿಸೆಂಬರ್ ಒಂದರ ಬೆಳಗಿನ ಜಾವ 7:04 ತನಕ.
ನವಂಬರ್ ತಿಂಗಳ ವಾಹನ ಖರೀದಿಯ ಶುಭ ಮುಹೂರ್ತಗಳು ಇಂತಿವೆ.
ನವೆಂಬರ್ 1 ಬುಧವಾರ ರಾತ್ರಿ 9:19 ರಿಂದ ನವಂಬರ್ 2 ರ ಬೆಳಗಿನ ಜಾವ 4:36 ರ ತನಕ
ನವಂಬರ್ 3 ಶುಕ್ರವಾರ ಬೆಳಿಗ್ಗೆ 6:45 ರಿಂದ ಮಧ್ಯಾಹ್ನ 11:07
ನವಂಬರ್ 10 ಶುಕ್ರವಾರ ಮಧ್ಯಾಹ್ನ 12:35 ರಿಂದ ನವಂಬರ್ 11ರ ಬೆಳಗ್ಗೆ 6:50 ತನಕ
ನವೆಂಬರ್ 20 ಸೋಮವಾರ 6:56 ನಿಮಿಷದಿಂದ ನವೆಂಬರ್ 21 ಮಧ್ಯಾಹ್ನ 3:16 ತನಕ
ನವಂಬರ್ 27 ಸೋಮವಾರ ಮಧ್ಯಾಹ್ನ 1:35 ರಿಂದ ನವೆಂಬರ್ 28ರ ಬೆಳಿಗ್ಗೆ 7:01 ತನಕ.
ನವೆಂಬರ್ ತಿಂಗಳ ಗೃಹಪ್ರವೇಶ ಮೂರ್ತಗಳು ಇಂತಿವೆ.
10ನೇ ನವೆಂಬರ್ ಬೆಳಗ್ಗೆ 9:12 ತನಕ ಮತ್ತು ಮಧ್ಯಾಹ್ನ 11:19 ರಿಂದ ಸಂಜೆ 3:43
13 ನೇ ನವೆಂಬರ್ ಮಧ್ಯಾಹ್ನ 3:26 ತನಕ
27ನೇ ನವೆಂಬರ್ ರಾತ್ರಿ 7:36 ತನಕ
29ನೇ ನವಂಬರ್ ಸಂಜೆ 4:00 ತನಕ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications