Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಜನವರಿ ತಿಂಗಳಿನಲ್ಲಿ ಶುಭ ಕಾರ್ಯಗಳಿಗೆ ಇರುವ ಶುಭ ದಿನಾಂಕಗಳಿವು
ಹೊಸ ವರ್ಷ ಇನ್ನೇನು ಆರಂಭವಾಗಲಿದೆ. ಹಿಂದೂ ಕ್ಯಾಲೆಂಡನ ಪ್ರಕಾರ ಯುಗಾದಿ ಹೊಸ ವರ್ಷ ಆಗಿದ್ದರೂ, ಜನವರಿ ಒಂದರಂದು ಕೂಡ ಹೆಚ್ಚಿನ ಜನರು ಹೊಸ ವರ್ಷವನ್ನು ಆಚರಿಸುತ್ತಾರೆ. ಏನೋ ಒಂದು ಹೊಸ ಯೋಚನೆಗಳಿಗೆ ಅಥವಾ ತಮ್ಮ ಜೀವನದಲ್ಲಿ ಮಾಡಿಕೊಳ್ಳಬೇಕಾದ ಬದಲಾವಣೆಗಳಿಗೆ ಈ ಹೊಸ ವರ್ಷ ಹೊಸ ಆರಂಭ ಆಗಲಿದೆ.
ನಿಮ್ಮ ಅಂತಹ ಯೋಜನೆಗಳು ಅಥವಾ ಯಾವುದೋ ಪ್ರಾಜೆಕ್ಟ್ ಗಳು 20204ರಲ್ಲಿ ಆರಂಭಗೊಳ್ಳುತ್ತಿದ್ದರೆ ಅದಕ್ಕೆ ಮೊದಲನೇದಾಗಿ ಶುಭಾಶಯಗಳು. ಮತ್ತು 2024ರ ಮೊದಲ ತಿಂಗಳು ಅಂದರೆ ಜನವರಿ 2024ರ ಶುಭ ಮುಹೂರ್ತಗಳು ಯಾವುದು ಎಂದು ನೋಡೋಣ.

2024ರ ಅಭಿಜಿತ್ ಮುಹೂರ್ತ ಯಾವಾಗ ಇದೆ ನೋಡೋಣ:
ಜನವರಿ 12 ಶುಕ್ರವಾರ ಬೆಳಗ್ಗೆ 10:00 ಇಂದ ಆರಂಭವಾಗಿ ಜನವರಿ 12ರ ಶುಕ್ರವಾರ ಸಂಜೆ 4:40 ನಿಮಿಷದ ತನಕ ಅಭಿಜಿತ್ ಮುಹೂರ್ತ ಇದೆ.
ಗೃಹ ಪ್ರವೇಶ
ನಿಮ್ಮ ಹೊಸ ಮನೆ ನಿರ್ಮಾಣ ಸಂಪೂರ್ಣ ಆಗಿದ್ದು, ಜನವರಿ ತಿಂಗಳಲ್ಲಿ ಗೃಹಪ್ರವೇಶಕ್ಕೆ ಮುಹೂರ್ತ ನೋಡುತ್ತಿದ್ದೀರಿ ಎಂದಾದರೆ 3 ಜನವರಿ ಬುಧವಾರ 7:15 ರಿಂದ ಮಧ್ಯಾಹ್ನ 4:36 ನಿಮಿಷದ ತನಕ ಉತ್ತರ ಫಾಲ್ಗುಣಿ ನಕ್ಷತ್ರದ ಮುಹೂರ್ತ ಶ್ರೇಷ್ಠವಾಗಿದೆ.
ಉಪನಯನ
ಜನವರಿ 24ರ ಉಪನಯನ ಸಂಸ್ಕಾರಕ್ಕೆ ಶುಭವಾದ ದಿನಗಳು
•21ನೇ ಜನವರಿ ರವಿವಾರ ಸಂಜೆ 7:30 ನಿಮಿಷದಿಂದ ರಾತ್ರಿ11: 50 ನಿಮಿಷದ ತನಕ
•31ನೇ ಜನವರಿ ಬುಧವಾರ ಬೆಳಿಗ್ಗೆ 7:10 ನಿಮಿಷದಿಂದ ಮಧ್ಯಾಹ್ನ 11:30 ತನಕ.
ಮದುವೆ ಶುಭ ಮುಹೂರ್ತಗಳು
ಜನವರಿ ತಿಂಗಳಲ್ಲಿ ಮದುವೆಗಳಿಗೆ ಇರುವ ಶುಭ ಮುಹೂರ್ತಗಳು ಈ ಕೆಳಗಿನಂತಿವೆ.
•17ನೇ ಜನವರಿ ಬೆಳಿಗ್ಗೆ 7:20 ನಿಮಿಷದಿಂದ 9:50 ನಿಮಿಷ ರೇವತಿ ನಕ್ಷತ್ರ
•22 ಜನವರಿ ಬೆಳಿಗ್ಗೆ 7:15 ನಿಮಿಷದಿಂದ ಮಧ್ಯಾಹ್ನ 2:00 ಗಂಟೆ ತನಕ ಮೃಗಶೀರ ನಕ್ಷತ್ರ
•28ನೇ ಜನವರಿ ಬೆಳಿಗ್ಗೆ 7:15 ನಿಮಿಷದಿಂದ ಮಧ್ಯಾಹ್ನ 3:50 ನಿಮಿಷ ಮಾಘ ನಕ್ಷತ್ರ
•30ನೇ ಜನವರಿ ಬೆಳಿಗ್ಗೆ 10 ಗಂಟೆ 45 ನಿಮಿಷದಿಂದ 11 ಗಂಟೆ 30 ನಿಮಿಷ ಉತ್ತರ ಫಾಲ್ಗುಣಿ ನಕ್ಷತ್ರ
•31ನೇ ಜನವರಿ ಬೆಳಿಗ್ಗೆ 7:15 ರಿಂದ ರಾತ್ರಿ 11:30 ಹಸ್ತ ನಕ್ಷತ್ರ.
ಹೊಸ ವ್ಯಾಪಾರ ಆರಂಭ
ಹೊಸ ವರ್ಷಕ್ಕೆ ಹೊಸ ವ್ಯಾಪಾರ ವಹಿವಾಟನ್ನು ಆರಂಭ ಮಾಡಿದ್ದೀರಿ ಎಂದಾದಲ್ಲಿ 1 ಜನವರಿ ಬೆಳಗ್ಗೆ 10:30 ನಿಮಿಷದಿಂದ ಮಧ್ಯಾಹ್ನ 1:10 ನಿಮಿಷದ ತನಕ ೫ ಜನವರಿ ಬೆಳಿಗ್ಗೆ 9:40 ರಿಂದ 10:50 ರ ತನಕ.
ಹೊಸ ಜಾಗ ಖರೀದಿ
ಹೊಸ ಜಾಗ ಅಥವಾ ಪ್ರಾಪರ್ಟಿ ಖರೀದಿಸುತ್ತಿದ್ದೀರಿ ಎಂದಾದರೆ ಜನವರಿ 11 ಗುರುವಾರ, ಜನವರಿ 25 ಗುರುವಾರ ಮತ್ತು ಜನವರಿ 26ರ ಶುಕ್ರವಾರಗಳನ್ನು ಪರಿಗಣಿಸಬಹುದು. ಈ ದಿನಗಳು ಪ್ರಾಪರ್ಟಿ ಖರೀದಿಗಾಗಿ ಒಳ್ಳೆಯ ದಿನಗಳಾಗಿವೆ.
ವಾಹನ ಖರೀದಿ
ವಾಹನ ಖರೀದಿಗಾಗಿ ಜನವರಿ 1 ಬೆಳಿಗ್ಗೆ 7:30ರಿಂದ ರಾತ್ರಿ 10:00 ತನಕದ ಸಮಯ ಶುಭವಾಗಿದೆ.
ವಿದ್ಯಾರಂಭ
ನಿಮ್ಮ ಮಗುವಿನ ವಿದ್ಯಾರಂಭ ಮಾಡುತ್ತಿದ್ದೀರಿ ಎಂದಾದರೆ ಜನವರಿ ತಿಂಗಳಲ್ಲಿ ಇರುವ ಶುಭ ಮುಹೂರ್ತಗಳು ಈ ಕೆಳಗಿನಂತಿವೆ
•ಜನವರಿ 5 ಶುಕ್ರವಾರ ಮಧ್ಯರಾತ್ರಿ 1:11 ನಿಮಿಷದಿಂದ 2:13 ನಿಮಿಷದ ತನಕ ಮತ್ತು ಬೆಳಿಗ್ಗೆ 05:49 ನಿಮಿಷದಿಂದ 7:15 ನಿಮಿಷದ ತನಕ
•ಜನವರಿ 7 ರವಿವಾರ 7:05 ನಿಮಿಷದಿಂದ 7:15 ನಿಮಿಷದ ತನಕ
•ಜನವರಿ 12 ಶುಕ್ರವಾರ ಮಧ್ಯರಾತ್ರಿ 12 ಗಂಟೆ 43 ನಿಮಿಷದಿಂದ ಬೆಳಗಿನ ಜಾವ 3 ಗಂಟೆ 3 ನಿಮಿಷದ ತನಕ ಮತ್ತು ಬೆಳಗ್ಗಿನ ಜಾವ 5 ಗಂಟೆ 22 ನಿಮಿಷದಿಂದ 7:15 ತನಕ
•ಜನವರಿ 14ರ ರವಿವಾರ ಬೆಳಗ್ಗೆ 05:14 ನಿಮಿಷದಿಂದ 7:15 ನಿಮಿಷ
•ಜನವರಿ 21 ರವಿವಾರ ಬೆಳಗಿನ ಜಾವ 4:46 ನಿಮಿಷದಿಂದ 7:14 ರ ತನಕ
•ಜನವರಿ 31 ಬುಧವಾರ ಬೆಳಗ್ಗೆ 7 ಗಂಟೆ 10 ನಿಮಿಷದಿಂದ 7:57 ತನಕ ಮತ್ತು 9 ಗಂಟೆ 24 ನಿಮಿಷದಿಂದ 11:09 ರ ತನಕ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications