Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಡಿಸೆಂಬರ್‌ನಲ್ಲಿ ಶುಭ ಕಾರ್ಯಕ್ಕೆ, ಗಾಡಿ ಖರೀದಿಗೆ ಶುಭ ದಿನಾಂಕಗಳಿವು
ವರ್ಷದ ಆರಂಭದಲ್ಲಿ ಎಲ್ಲರೂ ಆ ವರ್ಷದ ಪ್ಲಾನ್ ಗಳನ್ನು ಮಾಡಿರುತ್ತಾರೆ. ಆದರೆ ಯಾವುದೋ ಕಾರಣಗಳಿಂದಾಗಿ ಅದನ್ನು ಪೂರ್ಣ ಮಾಡಲು ಆಗಿರುವುದಿಲ್ಲ .ಅಂತಹ ಯಾವುದೇ ಅಪೂರ್ಣ ಯೋಜನೆಗಳು ನಿಮ್ಮಲ್ಲಿ ಇದ್ದರೆ ಡಿಸೆಂಬರ್ ತಿಂಗಳಲ್ಲೇ ಅದನ್ನು ಪೂರ್ಣಗೊಳಿಸಿ. ಮುಂದಿನ ವರ್ಷಕ್ಕೆ ಹೊಸ ಯೋಜನೆಗಳನ್ನು ಆಗ ಹಾಕಿಕೊಳ್ಳಬಹುದು.

ಆದರೆ ಹೀಗೆ ಅಪೂರ್ಣ ಆಗಿರುವ ಯೋಜನೆಗಳನ್ನು ಪೂರ್ಣಗೊಳಿಸಲು ಯಾವ ದಿನಗಳು ಸೂಕ್ತ ಎಂಬ ಗೊಂದಲ ನಿಮ್ಮಲ್ಲಿದ್ದರೆ ಅದಕ್ಕೆ ಇಲ್ಲಿ ಉತ್ತರ ನೀಡುತ್ತಿದ್ದೇವೆ. ಯಾವುದೇ ಕೆಲಸವಾದರೂ ಒಳ್ಳೆಯ ದಿನವನ್ನು ನೋಡಿ ಹಾಗೂ ಒಳ್ಳೆಯ ಸಮಯದಲ್ಲಿ ಮಾಡಿದರೆ ಕೈಗೂಡುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಇದು ಗೃಹಗಳ ಸ್ಥಿತಿಗತಿಗಳ ಮೇಲೆ ಆಧರಿಸಿ ಇರುವ ಶಾಸ್ತ್ರವಾಗಿದೆ. ಇದರ ಜೊತೆಗೆ ಒಳ್ಳೆಯ ದಿನ ಒಳ್ಳೆಯ ಸಮಯದಲ್ಲಿ ಹೊಸತೇನನ್ನೋ ಆರಂಭಿಸಿದ್ದೇನೆ, ಮುಂದೆ ಒಳ್ಳೆಯದೇ ಆಗುತ್ತದೆ ಎನ್ನುವ ಧೈರ್ಯವು ನಮ್ಮಲ್ಲಿ ಬರುತ್ತದೆ.
ಡಿಸೆಂಬರ್ ತಿಂಗಳ ಅಭಿಜಿತ್ ಮುಹೂರ್ತ ಯಾವುದು ಎಂದು ನೋಡೋಣ. ಡಿಸೆಂಬರ್ 16 ಶನಿವಾರ ಮಧ್ಯರಾತ್ರಿ 12 ಗಂಟೆ 51 ನಿಮಿಷದಿಂದ ಆರಂಭವಾಗಿ ಡಿಸೆಂಬರ್ 16 ಶನಿವಾರ ಬೆಳಗ್ಗೆ ಏಳು ಗಂಟೆ 53 ನಿಮಿಷದ ತನಕ ಅಭಿಜಿತ್ ಮುಹೂರ್ತ ಇದೆ.
ಅನ್ನ ಪ್ರಾಶನ ಮಾಡುವ ಸುಸಂದರ್ಭ ನಿಮ್ಮ ಕುಟುಂಬಲ್ಲಿದ್ದರೆ ಅದಕ್ಕೆ ಸರಿಹೊಂದುವ ಶುಭದಿನಗಳು ಈ ಕೆಳಗಿನಂತಿವೆ: ಡಿಸೆಂಬರ್ 1, ಡಿಸೆಂಬರ್ 7, ಡಿಸೆಂಬರ್ 15, ಡಿಸೆಂಬರ್ 18, ಡಿಸೆಂಬರ್ 21, ಡಿಸೆಂಬರ್ 22, ಡಿಸೆಂಬರ್ 28, ಡಿಸೆಂಬರ್ 29.
ಮದುವೆ ಗಂಡು ಹೆಣ್ಣು ಇಬ್ಬರ ಬಾಳಿನ ಮಹತ್ವದ ದಿನ. ಅಲ್ಲಿಂದ ಮುಂದೆ ಇಬ್ಬರೂ ಜೊತೆಯಾಗಿಯೇ ತನ್ನ ಬಾಳನ್ನು ಬಾಳುತ್ತೇವೆ ಎಂದು ನಿರ್ಧರಿಸುವ ದಿನ. ಸುಖವಿರಲಿ ಕಷ್ಟವಿರಲಿ ಒಬ್ಬರನ್ನೊಬ್ಬರು ಬಿಟ್ಟು ಕೊಡದೇ ಮುಂದೆ ಜೀವನವನ್ನು ಸಾಗಿಸುವ ಭರವಸೆ ಕೊಡುವ ದಿನ. ಇಂತಹ ಮಹತ್ವದ ದಿನವನ್ನು ಶುಭದಿನ ಮತ್ತು ಶುಭಸಮಯದಲ್ಲಿ ಮಾಡಲೇಬೇಕು.
ಡಿಸೆಂಬರ್ ತಿಂಗಳ ಶುಭ ದಿನಗಳು:
ಡಿಸೆಂಬರ್ 1 ಬುಧವಾರ - ಸ್ವಾತಿ ನಕ್ಷತ್ರ - ದ್ವಾದಷಿ
ಡಿಸೆಂಬರ್ 2, ಗುರುವಾರ - ಸ್ವಾತಿ ನಕ್ಷತ್ರ - ತ್ರಯೋದಷಿ
ಡಿಸೆಂಬರ್ 6 - ಸೋಮವಾರ - ಉತ್ತರಾಶಾಢ - ಚತುರ್ಥಿ
ಡಿಸೆಂಬರ್ 7 - ಮಂಗಳವಾರ - ಉತ್ತರಾಷಾಢ - ಚತುರ್ಥಿ, ಪಂಚಮಿ
ಡಿಸೆಂಬರ್ 11 - ಶನಿವಾರ - ಉತ್ತರಾಭಾದ್ರ - ನವಮಿ
ಡಿಸೆಂಬರ್ 13 - ಸೋಮವಾರ - ರೇವತಿ - ದಶಮಿ
ನಾಮಕರಣ ಕಾರ್ಯಕ್ರಮಕ್ಕೆ ಶುಭವಾದ ಡಿಸೆಂಬರ್ ತಿಂಗಳ ದಿನಗಳು ಈ ಕೆಳಗಿನಂತಿವೆ
ಡಿಸೆಂಬರ್ 8 - ಬೆಳಿಗ್ಗೆ 8:30 ರಿಂದ 11:55 ಮತ್ತು ಮಧ್ಯಾಹ್ನ 1:30 ರಿಂದ ಸಂಜೆ 4:15
ಡಿಸೆಂಬರ್ 15 - ಬೆಳಗ್ಗೆ 8:50 ರಿಂದ 9:50 ಮಧ್ಯಾಹ್ನ 11:40 ರಿಂದ ಸಂಜೆ 5:40
ಡಿಸೆಂಬರ್ 18 ಮಧ್ಯಾಹ್ನ 1:50 ರಿಂದ ಸಂಜೆ 5:40
ಡಿಸೆಂಬರ್ 21 ಮಧ್ಯಾಹ್ನ 11:20 ರಿಂದ 2:00 ಗಂಟೆ ಮತ್ತು 3:50 ನಿಮಿಷದಿಂದ 5:30 ನಿಮಿಷ
ಡಿಸೆಂಬರ್ 22 ಬೆಳಿಗ್ಗೆ 7.50 ರಿಂದ 9:20 ಮತ್ತು 11:20 ರಿಂದ ಸಂಜೆ 5:20
ಡಿಸೆಂಬರ್ 28 ಬೆಳಿಗ್ಗೆ 7:50 ರಿಂದ ಮಧ್ಯಾಹ್ನ 12:00 ಮತ್ತು ಮಧ್ಯಾಹ್ನ 1:40 ರಿಂದ ಸಂಜೆ 5:00 ಗಂಟೆ
ಡಿಸೆಂಬರ್ 29 ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 1:10
ಹೊಸ ವ್ಯಾಪಾರ ವಹಿವಾಟು ಆರಂಭ ಮಾಡುವ ಯೋಚನೆಯಲ್ಲಿ ಇದ್ದರೆ ಡಿಸೆಂಬರ್ ತಿಂಗಳ ಈ ದಿನಗಳು ಶುಭವಾಗಿವೆ ಡಿಸೆಂಬರ್ 14 ಮಧ್ಯಾಹ್ನ 11:40 ನಿಮಿಷದಿಂದ 1:00 ತನಕ
ಡಿಸೆಂಬರ್ 15 ಬೆಳಿಗ್ಗೆ 7:40 ರಿಂದ 9:30 ತನಕ
ಡಿಸೆಂಬರ್ 24 ಬೆಳಿಗ್ಗೆ 7:50 ನಿಮಿಷದಿಂದ 10:50 ನಿಮಿಷದ ತನಕ
ಹೊಸ ಜಾಗ ಖರೀದಿ ಮಾಡುವ ಯೋಜನೆಯಲ್ಲಿ ಇದ್ದವರಿಗೆ ಡಿಸೆಂಬರ್ ತಿಂಗಳ ಶುಭ ದಿನಗಳು ಯಾವುದು ಎಂದು ಇಲ್ಲಿ ಹೇಳುತ್ತಿದ್ದೇವೆ.
ಡಿಸೆಂಬರ್ 1 ಬೆಳಿಗ್ಗೆ 7:04 ನಿಮಿಷದಿಂದ ಸಂಜೆ 4:40 ನಿಮಿಷದ ತನಕ
ಡಿಸೆಂಬರ್ 14 ಬೆಳಿಗ್ಗೆ 7:12 ನಿಮಿಷದಿಂದ ಡಿಸೆಂಬರ್ 15ರ ಬೆಳಿಗ್ಗೆ 7:13 ನಿಮಿಷದ ತನಕ
ಡಿಸೆಂಬರ್ 21 ಬೆಳಿಗ್ಗೆ 7:16 ನಿಮಿಷದಿಂದ ರಾತ್ರಿ 10:09 ನಿಮಿಷದ ತನಕ
ಡಿಸೆಂಬರ್ 28 ಬೆಳಿಗ್ಗೆ 7:19 ನಿಮಿಷದಿಂದ ಡಿಸೆಂಬರ್ 29ರ ಮಧ್ಯರಾತ್ರಿ 1:05 ನಿಮಿಷದ ತನಕ
ಡಿಸೆಂಬರ್ 29 ಬೆಳಿಗ್ಗೆ 3:10 ನಿಮಿಷದಿಂದ ಡಿಸೆಂಬರ್ 30 ಬೆಳಿಗ್ಗೆ 7:20 ನಿಮಿಷದ ತನಕ
ಡಿಸೆಂಬರ್ ತಿಂಗಳಲ್ಲಿ ವಾಹನ ಖರೀದಿಗೆ ಇರುವ ಶುಭದಿನಗಳು:
ಡಿಸೆಂಬರ್ 1, ಡಿಸೆಂಬರ್ 7, ಡಿಸೆಂಬರ್ 8, ಡಿಸೆಂಬರ್ 10, ಡಿಸೆಂಬರ್ 17, ಡಿಸೆಂಬರ್ 18, ಡಿಸೆಂಬರ್ 21. ಡಿಸೆಂಬರ್ 24 ಮತ್ತು ಡಿಸೆಂಬರ್ 29.
ವಿದ್ಯಾರಂಭ ಅಥವಾ ಅಕ್ಷರಾಭ್ಯಾಸ ಮಾಡಲು ಸೂಕ್ತ ದಿನವನ್ನು ಹುಡುಕುತ್ತಿದ್ದರೆ ಇಲ್ಲಿದೆ ಉತ್ತರ:
ಡಿಸೆಂಬರ್ 1, ಡಿಸೆಂಬರ್ 2, ಡಿಸೆಂಬರ್ 7, ಡಿಸೆಂಬರ್ 8, ಡಿಸೆಂಬರ್ 9, ಡಿಸೆಂಬರ್ 21, ಡಿಸೆಂಬರ್ 22, ಡಿಸೆಂಬರ್ 28, ಡಿಸೆಂಬರ್ 29.
ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಒಳ್ಳೆಯ ದಿನಗಳ ವಿವರ ಇಲ್ಲಿದೆ.
ಡಿಸೆಂಬರ್ 1, ಡಿಸೆಂಬರ್ 9, ಡಿಸೆಂಬರ್ 10, ಡಿಸೆಂಬರ್ 13 ಮತ್ತು ಡಿಸೆಂಬರ್ 27.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications