ಜ್ಯೋತಿಷ್ಯ ಪ್ರಕಾರ ಆಗಸ್ಟ್ ಮಾಸದ ಮೊದಲ ವಾರ ನಿಮಗೆ ಆರ್ಥಿಕವಾಗಿ ಹೇಗಿರಲಿದೆ?

ಮೇಷ ರಾಶಿ

ಆರ್ಥಿಕವಾಗಿ ನೋಡುವುದಾದರೆ ಆಗಸ್ಟ್‌ ಮಾಸದ ಮೊದಲ ವಾರ ನಿಮಗೆ ಅನುಕೂಲಕರವಾಗಿದೆ. ಈ ಸಮಯದಲ್ಲಿ ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ, ವ್ಯಾಪಾರಿಗಳು ಕೂಡ ಉತ್ತಮ ಲಾಭ ಪಡೆಯುತ್ತೀರಿ.

weekly horoscope

ವೃಷಭ ರಾಶಿ

ವೃಷಭ ರಾಶಿಯವರಿಗೂ ಆಗಸ್ಟ್‌ ಮಾಸದ ಮೊದಲ ವಾರ ಆರ್ಥಿಕವಾಗಿ ತುಂಬಾ ಚೆನ್ನಾಗಿರಲಿದೆ, ಯಾವುದೇ ದೊಡ್ಡ ಖರ್ಚು ಕೂಡ ಬರಲ್ಲ, ಆದರೆ ಅನಗ್ಯತ ಖರ್ಚು ಅಥವಾ ಆಡಂಬರದ ಖರ್ಚು ನಿಮ್ಮನ್ನು ಆರ್ಥಿಕ ಸಂಕಷ್ಟಕ್ಕೆ ದೂಡಬಹುದು ಜಾಗ್ರತೆ.

ಮಿಥುನ ರಾಶಿ

ಮಿಥುನ ರಾಶಿಯವರಿಗೂ ಆಗಸ್ಟ್ ಮಾಸದ ಮೊದಲ ವಾರ ತುಂಬಾ ಚೆನ್ನಾಗಿರಲಿದೆ, ಆರ್ಥಿಕವಾಗಿ ಯಾವುದೇ ತೊಂದರೆ ಇರಲ್ಲ, ಆದರೆ ಖರ್ಚು ಮಿತಿಯಲ್ಲಿ ಮಾಡಿದರೆ ನಿಮಗೆ ಒಳ್ಳೆಯದು.

ಕರ್ಕ ರಾಶಿ

ಕರ್ಕ ರಾಶಿಯವರಿಗೆ ಕೂಡ ಆಗಸ್ಟ್‌ ತಿಂಗಳ ಮೊದಲ ವಾರ ಆರ್ಥಿಕವಾಗಿ ಉತ್ತಮವಾಗಿದೆ, ಹೀಗಾಗಿ ಆರ್ಥಿಕ ಕಾರಣದಿಂದ ಯಾವುದೇ ಕೆಲಸ ಬಾಕಿಯುಳಿಯಲ್ಲ, ವ್ಯಾಪಾರಿಗಲೂ ಲಾಭ ಗಳಿಸುತ್ತೀರಿ, ಅದರೆ ಅತಿಯಾಸೆಗೆ ಬಿದ್ದು ಅಡ್ಡಮಾರ್ಗ ಬೇಡ, ಸಮಸ್ಯೆಗೆ ಸಿಕ್ಕಾಕಿಕೊಳ್ಳುವಿರಿ.

ಸಿಂಹ ರಾಶಿ

ಸಿಂಹ ರಾಶಿಯವರು ಈ ಅವಧಿಯಲ್ಲಿ ಉತ್ತಮ ಆರ್ಥಿಕ ಪ್ರಯೋಜನ ಪಡೆಯುತ್ತೀರಿ, ಆದರೆ ಹಣಕ್ಕೆ ಸಂಬಂಧಿಸಿದ ನಿರ್ಧಾರ ತುಂಬಾ ಆಲೋಚಿಸಿ ತೆಗೆದುಕೊಳ್ಳಿ, ಏಕೆಂದರೆ ಬೇರೆಯವರ ಮಾತು ಕೇಳಿ ಹೂಡಿಕೆ ಮಾಡಲು ಹೋಗದಿರಿ.


ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ಈ ಸಮಯ ಉತ್ತಮವಾಗಿದೆ, ಈ ಅವಧಿಯಲ್ಲಿ ನಿಮ್ಮ ಬದುಕಿನಲ್ಲಿ ಆರ್ಥಿಕ ಪ್ರಗತಿ ಕಾಣುತ್ತೀರಿ, ಪಾಲುದಾರಿಕೆಯ ವ್ಯಾಪಾರ ಮಾಡುವವರು ಕೂಡ ಉತ್ತಮ ಪ್ರಯೋಜನ ಪಡೆಯುವಲ್ಲಿ ಯಶಸ್ವಿಯಾಗುತ್ತೀರಿ.


ತುಲಾ ರಾಶಿ

ಆಗಸ್ಟ್‌ ತಿಂಗಳ ಮೊದಲ ವಾರ ಆರ್ಥಿಕವಾಗಿ ತುಲಾ ರಾಶಿಯವರಿಗೆ ಅನುಕೂಲಕರವಾಗಿದೆ. ಹೀಗಾಗಿ ನಿಮ್ಮ ಕೆಲಸ ಕಾರ್ಯದಲ್ಲಿ ಯಶಸ್ಸು ಪಡೆಯುತ್ತೀರಿ. ಆದರೆ ಹೂಡಿಕೆ, ಸಾಲ ನೀಡುವುದು, ಪಡೆಯುವುದು ಆಲೊಚಿಸಿ ಮಾಡುವುದು ಒಳ್ಳೆಯದು.

ವೃಶ್ಚಿಕ ರಾಶಿ
ಆಗಸ್ಟ್ ಪ್ರಾರಂಭ ವೃಶ್ಚಿಕ ರಾಶಿಯವರಿಗೂ ತುಂಬಾನೇ ಪ್ರಯೋಜನಕಾರಿಯಾಗಿದೆ, ಕೆಲಸದಲ್ಲಿ ಆರ್ಥಿಕ ಲಾಭ ಪಡೆಯುತ್ತೀರಿ, ವ್ಯಾಪಾರಿಗಳು ಉತ್ತಮ ಲಾಭ ಪಡೆಯುವಲ್ಲಿ ಯಶಸ್ವಿಯಾಗುತ್ತೀರಿ.

ಧನು ರಾಶಿ

ಧನು ರಾಶಿಯವರು ಹಣದ ಬಗ್ಗೆ ಜಾಗ್ರತೆ ವಹಿಸಿಬೇಕು, ತುಂಬಾನೇ ಖರ್ಚು ಮಾಡಲು ಹೋಗಬೇಡಿ, ಕೆಲವೊಂದು ಅನಾವಶ್ಯಕ ಖರ್ಚು ಬರುವುದರಿಂದ ಆರ್ಥಿಕ ತೊಂದರೆಗಳಿರಬಹುದು.


ಮಕರ ರಾಶಿ

ಮಕರ ರಾಶಿಯವರಿಗೆ ಈ ವಾರ ಹಣದ ದೃಷ್ಟಿಯಿಂದ ಉತ್ತಮವಾಗಿದೆ, ಹಾಗಾಗಿ ನಿಮ್ಮ ಕೆಲಸ ಕಾರ್ಯಗಳಿಗೆ ಹಣದ ಕಾರಣದಿಂದ ಅಡ್ಡಿಗಳಿರಲ್ಲ, ನಿಮ್ಮ ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ,

ಕುಂಭ ರಾಶಿ

ವ್ಯಾಆರಿಗಳಿಗೆ ಲಾಭದ ಸಮಯ, ಅದರಲ್ಲಿಯೂ ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವವರು ಲಾಭ ಗಳಿಸುತ್ತೀರಿ, ಆರ್ಥಿಕವಾಗಿ ಈ ಅವಧಿ ಚೆನ್ನಾಗಿರಲಿದೆ.

ಮೀನ ರಾಶಿ

ಹಣದ ವಿಷಯದಲ್ಲಿ ಸ್ವಲ್ಪ ಜಾಗ್ರತೆವಹಿಸಿ, ಹಣ ನೋಡಿಕೊಂಡು ಖರ್ಚು ಮಾಡಿದರೆ ದೊಡ್ಡ ಹಣದ ತೊಂದರ ಇರಲ್ಲ, ಇಲ್ಲದಿದ್ದರೆ ಕೆಲಸದ ಒತ್ತಡ, ಹಣದ ಒತ್ತಡ ಎರಡೂ ಉಂಟಾಗಬಹುದು.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

August First Week Financial Prediction For 12 Zodiac signs

Here is August first week financial prediction for each zodiac signs
X
Desktop Bottom Promotion