Dina Bhavishya: ಆಗಸ್ಟ್ 31ರ ಭಾನುವಾರ ಯಾರಲ್ಲಿ ಧನಲಾಭ?

ವೈದಿಕ ಶಾಸ್ತ್ರದ ಪ್ರಕಾರ ಆಗಸ್ಟ್ 31ರಂದು ನಿಮ್ಮ ರಾಶಿಫಲ ನೋಡೋಣ:

ಮೇಷ ರಾಶಿ

ಮೇಷ ರಾಶಿಯ ಜನರಿಗೆ ಇಂದು ಒಂದಿಷ್ಟು ಸಮಸ್ಯೆಗಳು ಎದುರಾಗಬಹುದು. ಅದ್ರಲ್ಲೂ ಹಣಕಾಸು ಕುರಿತ ಸಮಸ್ಯೆಗಳು ನಿಮ್ಮ ಒತ್ತಡ ಹಾಗೆ ಗೊಂದಲ ಹೆಚ್ಚಿಸಬಹುದು. ನೀವು ಪ್ರಯಾಣ ಮಾಡಬೇಕಾಗಿ ಬರಬಹುದು. ಅನೇಕರಲ್ಲಿ ಇಂದು ಕೌಟುಂಬಿಕ ಸಮಸ್ಯೆ ಹೆಚ್ಚಾಗಬಹುದು.

ವೃಷಭ ರಾಶಿ

ವೃಷಭ ರಾಶಿಯ ಜನರಿಗೆ ಇಂದು ಸಮಸ್ಯೆಯ ದಿನ. ಹಣಕಾಸು ವಿಚಾರದಲ್ಲಿ ಆಪ್ತರೊಬ್ಬರಿಂದ ನಿಮಗೆ ಸಮಸ್ಯೆ ಬರಬಹುದು. ಅನೇಕ ದಿನಗಳಿಂದ ಮಾಡದೆ ಉಳಿಸಿಕೊಂಡಿದ್ದ ಕೆಲಸಗಳ ಮಾಡಿ ಮುಗಿಸುವಿರಿ.

August-31-2025-daily-horoscope-prediction-for-12-zodiac-signs-in-kannada

ಮಿಥುನ ರಾಶಿ

ಇಂದು ನಿಮ್ಮ ಪ್ರಯಾಣಗಳು ಮಿಶ್ರ ಫಲದಿಂದ ಕೂಡಿರಲಿದೆ. ನೀವು ಅಂದುಕೊಂಡಂತೆ ಪ್ರಯಾಣದಲ್ಲಿ ಫಲಿತಾಂಶ ಇರುವುದಿಲ್ಲ. ಮನೆಯ ಹಿರಿಯ ಸದಸ್ಯರಲ್ಲಿ ಅನಾರೋಗ್ಯಗಳಿದ್ದರೆ ಪರಿಹಾರಕ್ಕೆ ಮುಂದಾಗುವುದು ಉತ್ತಮ. ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡುವ ಯತ್ನ ಮಾಡಿ.

ಕರ್ಕ ರಾಶಿ

ಕರ್ಕ ರಾಶಿಗೆ ಮಿಶ್ರ ಫಲದ ದಿನ. ನಿಮ್ಮ ಅನೇಕ ಕೆಲಸಗಳು ಅರ್ಧಕ್ಕೆ ನಿಲ್ಲಬಹುದು. ದೂರದ ಸಂಬಂಧಿಯೊಬ್ಬರ ಭೇಟಿ ಮಾಡಬಹುದು, ಮನೆಯಲ್ಲಿ ಶ್ರಮದಾಯಕ ಕೆಲಸದಲ್ಲಿ ನೀವು ಭಾಗಿಯಾಗುತ್ತೀರಿ.

ಸಿಂಹ ರಾಶಿ

ಸಿಂಹ ರಾಶಿಯ ಜನರಿಗೆ ಅನೇಕ ರೀತಿಯಲ್ಲಿಂದು ಉತ್ತಮ ದಿನ, ನಿಮ್ಮ ಪ್ರೀತಿ ಪ್ರೇಮದ ವಿಚಾರದಲ್ಲಿ ದಾಂಪತ್ಯ, ಕುಟುಂಬ ವಿಚಾರದಲ್ಲಿ ನಿಮಗೆ ಶುಭ ಗಳಿಗೆಯಾಗಿರಲಿದೆ. ಹಣಕಾಸು ಪರಿಸ್ಥಿತಿಯು ನೀವು ಅಂದುಕೊಂಡಂತೆ ಇರಲಿದೆ. ಆರೋಗ್ಯದಲ್ಲಿನ ಸುಧಾರಣೆಯು ನಿಮ್ಮ ಕೆಲಸ ಕಾರ್ಯಗಳಿಗೆ ಪೂರಕ ವಾತಾವರಣ ಸೃಷ್ಟಿಸಲಿದೆ.

ಕನ್ಯಾ ರಾಶಿ

ಕನ್ಯಾ ರಾಶಿಯರಿಗೆ ಅನುಕೂಲಕರ ದಿನ. ನವವಿವಾಹಿತರಲ್ಲಿ ಖರ್ಚು ಹೆಚ್ಚಾಗಬಹುದು. ನೀವು ಸಂಬಂಧಿಕರ ಮನೆಗೆ ಪ್ರವಾಸ ಮಾಡಬೇಕಾಗಿ ಬರಬಹುದು. ಅನೇಕರಿಗೆ ಇಂದು ದೊಡ್ಡ ಸವಾಲುಗಳು ಎದುರಾಗಬಹುದು. ವ್ಯಾಪಾರಿಗಳಿಗೆ ಪ್ರತಿ ಸ್ಪರ್ಧಿಗಳಿಂದ ಸಮಸ್ಯೆ ಇರಬಹುದು.

ತುಲಾ ರಾಶಿ

ತುಲಾ ರಾಶಿಯ ಜನರಿಗೆ ಹಲವು ರೀತಿಯ ಸಮಸ್ಯೆ ಇದೆ. ವಾಹನ ಚಾಲಕರು ಇಂದು ಬಹಳ ಜಾಗೃತೆ ವಹಿಸಬೇಕು. ಗೃಹಿಣಿಯರು ತಮ್ಮ ಕೆಲಸದಲ್ಲಿ ಮೈ ಮರೆತರೆ ಅಪಾಯ ಎದುರಾಗಬಹುದು. ಮನೆಯಿಂದ ಹೊರಗೆ ಕೆಲಸ ಮಾಡುತ್ತಿದ್ದವರು ಹಣಕಾಸು ವ್ಯವಹಾರದಲ್ಲಿ ಎಚ್ಚರಿಕೆ ವಹಿಸಬೇಕಿದೆ.

ವೃಶ್ಚಿಕ ರಾಶಿ

ವೃಶಚಿಕ ರಾಶಿಯ ಮಂದಿಗೆ ಇಂದು ಸಮಸ್ಯೆಗಳು ಇದ್ದರೂ ಅದರ ನಿವಾರಣೆ ಮಾಡುತ್ತೀರಿ. ಅನಾರೋಗ್ಯ ಸಂಬಂಧವಾಗಿ ನೀವು ಪ್ರಯಾಣ ಮಾಡುತ್ತೀರಿ. ಸಹೋದರರ ಸಂಬಂಧದಲ್ಲಿ ಮನಸ್ತಾಪಗಳಿರಬಹುದು. ದಿನದ ಅಂತ್ಯದಲ್ಲಿ ಹಣಕಾಸು ಸಂಬಂಧ ಸಂತಸದ ಸುದ್ದಿ ಕೇಳಬಹುದು.

ಧನು ರಾಶಿ

ಧನು ರಾಶಿಯವರು ಈ ದಿನ ಮಿಶ್ರ ಫಲ ನೋಡುತ್ತಾರೆ. ಆರಂಭದಲ್ಲಿ ಹಣಕಾಸು ಖರ್ಚು ಎನಿಸಿದರು ದಿನದ ಅಂತ್ಯದಲ್ಲಿ ನೆಮ್ಮದಿ ಪಡೆಯಲಿದ್ದೀರಿ. ಆಪ್ತರೊಬ್ಬರಿಂದ ಹಣಕಾಸಿನ ನೆರವು ಕೋರಿದ್ದರೆ ಈ ಸಮಯದಲ್ಲಿ ಈಡೇರಬಹುದು. ಅನಗತ್ಯ ವಿಚಾರದಲ್ಲಿ ಹಸ್ತಕ್ಷೇಪ ಮಾಡಲು ಮುಂದಾಗಬೇಡಿ.

ಮಕರ ರಾಶಿ

ಮಕರ ರಾಶಿಯವರು ಈ ದಿನ ನಿಮ್ಮ ಹಲವು ಸಮಸ್ಯೆಗಳಿಗೆ ಪರಿಹಾರ ಪಡೆಯುವ ದಿನವಾಗಿರಲಿದೆ. ಬಹಳ ದಿನದ ಹಿಂದೆ ಅರ್ಧಕ್ಕೆ ನಿಲ್ಲಿಸಿರುವ ಕೆಲವನ್ನು ಪೂರ್ಣ ಮಾಡುವಿರಿ. ಆಪ್ತರೊಬ್ಬರಿಗೆ ಕೆಲಸದಲ್ಲಿ ಸಹಾಯ ಮಾಡುವಿರಿ.

ಕುಂಭ ರಾಶಿ

ಕುಂಭ ರಾಶಿಯ ಜನರಿಗೆ ಇಂದು ಅನುಕೂಲಕರ ದಿನ. ಗೃಹಿಣಿಯರು ಈ ದಿನ ಲಾಭ ನೋಡುವಿರಿ. ನಿಮ್ಮ ಹಣ ಎಲ್ಲಾದರು ಸಿಲುಕಿದ್ದರೆ ನಿಮ್ಮ ಕೈ ಸೇರಲಿದೆ. ದೂರ ಪ್ರಯಾಣಗಳ ಮಾಡುವಿರಿ. ಮನೆಯ ವಾತಾವರಣ ಮಧುರವಾಗಿರಲಿದೆ. ಕಚೇರಿ ಕೆಲಸದಲ್ಲಿ ವೇಗವಿದೆ.

ಮೀನ ರಾಶಿ

ಮೀನ ರಾಶಿಯವರು ಈ ದಿನ ಪ್ರಯಾಣದಲ್ಲಿ ಕಳೆಯುತ್ತೀರಿ. ಆದ್ರೆ ನೀವು ಅಂದುಕೊಂಡಿದ್ದ ಫಲಿತಾಂಶ ಸಿಗದೆ ಇರಬಹುದು. ನಿಮ್ಮಲ್ಲಿ ಕೆಲಸದ ವಿಚಾರದಲ್ಲಿ ಕಷ್ಟಗಳ ಬರಬಹುದು. ಯಾರೊಂದಿಗೂ ದೊಡ್ಡ ಹಣಕಾಸು ವ್ಯವಹಾರ ಮಾಡಲು ಮುಂದಾಗಬೇಡಿ.

English summary

August-31-2025-daily-horoscope-prediction-for-12-zodiac-signs-in-kannada

Here is August 31 daily horoscope prediction for 12 zodiac signs read on...
Story first published: Sunday, August 31, 2025, 5:01 [IST]
X
Desktop Bottom Promotion