Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Dina Bhavishya: ಆಗಸ್ಟ್ 30ರ ಶನಿವಾರ ನಿಮ್ಮ ರಾಶಿಫಲ
ವೈದಿಕ ಶಾಸ್ತ್ರದ ಪ್ರಕಾರ ಆಗಸ್ಟ್ 30ರಂದು ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯವರಿಗೆ ಈ ದಿನ ಬಹಳ ಅನುಕೂಲಕರವಾಗಿರಲಿದೆ. ನಿಮ್ಮ ಪ್ರೀತಿ ಪಾತ್ರರನ್ನು ಅನಿರೀಕ್ಷಿತವಾಗಿ ಭೇಟಿಯಾಗುತ್ತೀರಿ. ಆರೋಗ್ಯ ವಿಚಾರವಾಗಿ ಆಯಾಸ ಅಥವಾ ದೈಹಿಕ ನೋವು ಇರಬಹುದು. ಗೃಹಿಣಿಯರಲ್ಲಿ ಉಳಿತಾಯ ಹೆಚ್ಚಾಗಬಹುದು. ಮನೆಯಲ್ಲಿ ಶಾಂತಿಯ ವಾತಾವರಣ ಇರಲಿದೆ.
ವೃಷಭ ರಾಶಿ
ವೃಷಭ ರಾಶಿಯ ಮಂದಿಗೆ ಇಂದು ಮಿಶ್ರ ಫಲದ ದಿನ. ನಿಮ್ಮ ಅನೇಕ ಕೆಲಸಗಳಲ್ಲಿ ಶುಭಕರ ಲಾಭವಿದೆ. ನಿತ್ಯದ ಕೆಲಸಗಳು ಅಂದುಕೊಂಡ ಸಮಯಕ್ಕೆ ಮುಗಿಯಲಿದೆ. ಆಪ್ತರೊಬ್ಬರಿಂದ ದಿಢೀರ್ ಹಣಕಾಸು ಸಹಾಐ ಪಡೆಯಬಹುದು. ಪ್ರಯಾಣ ಮಾಡಬೇಕಾಗಬಹುದು.

ಮಿಥುನ ರಾಶಿ
ಅವಿವಾಹಿತರಲ್ಲಿ ಇಂದು ಹೆಚ್ಚು ಖರ್ಚಿನ ದಿನ, ಸ್ವಂತ ಉದ್ಯೋಗ ಅಥವಾ ಮನೆಯಲ್ಲೇ ಸಣ್ಣ ಉದ್ಯಮ ಕಟ್ಟಿಕೊಂಡ ಮಂದಿಗೆ ಉತ್ತಮ ದಿನ. ಪ್ರವಾಸದಲ್ಲಿ ಸುಖವಿದೆ. ಅನೇಕರಿಗೆ ಧನಲಾಭದ ನಿರೀಕ್ಷೆ ಇದೆ. ವ್ಯಾಪಾರಿಗಳಿಗೆ ಪ್ರಗತಿಯ ದಿನವಾಗಲಿದೆ.
ಕರ್ಕ ರಾಶಿ
ಕರ್ಕ ರಾಶಿಯ ಜನರಲ್ಲಿ ಇಂದು ಉತ್ತಮ ಉತ್ತಮ ಫಲಿತಾಂಶ ಪಡೆಯುವ ದಿನ, ನಿಮ್ಮ ಅನೇಕ ಕೆಲಸಗಳಿಗೆ ಆಪ್ತರ ಸಹಕಾರ ಪಡೆಯಬಹುದು. ಕೃಷಿ ಸಂಬಂಧಿ ವಿಚಾರದಲ್ಲಿ ಲಾದಾಯಕ ದಿನ. ಮಕ್ಕಳ ಆರೋಗ್ಯದಲ್ಲಿ ಏರುಪೇರು ಸಂಭವಿಸಬಹುದು.
ಸಿಂಹ ರಾಶಿ
ಸಿಂಹ ರಾಶಿಯ ಜನರಲ್ಲಿ ಇಂದು ಸಮಸ್ಯೆಗಳಿರಬಹುದು. ನಿಮ್ಮ ಹಣಕಾಸಿನ ವಿಚಾರವಾಗಿ ಅದ್ರಲ್ಲೂ ಸಾಲದ ಪ್ರಮಾಣ ಏರಿಕೆಯಾಗುವುದು ಒತ್ತಡ ತರಬಹುದು. ಸರ್ಕಾರಿ ನೌಕರರಿಗೆ ಶ್ರಮದಾಯಕ ದಿನ. ನಿಮ್ಮ ಬಹಳ ದಿನಗಳ ಬಯಕೆಯೊಂದನ್ನು ಮತ್ತೆ ಮುಂದೂಡಬೇಕಾಗಿ ಬರಬಹುದು.
ಕನ್ಯಾ ರಾಶಿ
ಕನ್ಯಾ ರಾಶಿಯ ಜನರಿಗೆ ಇಂದು ಅತ್ಯಂತ ಶುಭದಿನ. ನಿಮ್ಮ ಕೆಲಸ ಕಾರ್ಯಗಳಲ್ಲಿ ಅಡ್ಡಿ ಆತಂಕವಿಲ್ಲದೆ ನಡೆಯಲಿದೆ. ಪತ್ನಿಯ ಮನೆಯಿಂದ ಶುಭ ಸುದ್ದಿ ಬರಬಹುದು. ನಿರುದ್ಯೋಗಿಗಳಿಂದು ಉದ್ಯೋಗ ಹುಡುಕಬಹುದು. ಪಾಲುದಾರಿಕೆ ವ್ಯವಹಾರದಲ್ಲಿ ಲಾಭದಾಯಕ ದಿನ.
ತುಲಾ ರಾಶಿ
ತುಲಾ ರಾಶಿ ಜನರಿಗೆ ಇಂದು ಮಿಶ್ರ ಫಲದ ದಿನ, ನಿಮ್ಮ ಖರ್ಚುಗಳ ಮೇಲೆ ಹಿಡಿತ ಸಾಧಿಸಬೇಕಿದೆ. ಸಾಲ ಮರುಪಾವತಿಗೆ ನಿಮಗೆ ಒತ್ತಡ ಕೇಳಿ ಬರಬಹುದು. ಪತ್ನಿಯ ಆರೋಗ್ಯದಲ್ಲಿ ಏರುಪೇರು ಕಾಣಿಸಬಹುದು. ವಾಹನ ಸಂಬಂಧಿತ ಖರ್ಚು ಇರಬಹುದು. ದಿನದ ಅಂತ್ಯದಲ್ಲಿ ನಿಮ್ಮ ಕೆಲಸ ಸಂಬಂಧವಾಗಿ ಶುಭ ಸುದ್ದಿ ಕೇಳಬಹುದು.
ವೃಶ್ಚಿಕ ರಾಶಿ
ಇಂದು ನೀವು ಓಡಾಟಗಳಲ್ಲಿ ತೊಡಗುತ್ತೀರಿ. ಹಲವು ವಿಚಾರಗಳನ್ನು ಆಪ್ತರೊಂದಿಗೆ ಹಂಚಿಕೊಳ್ಳುತ್ತೀರಿ. ಮೂಳೆ ಸಂಬಂಧಿತ ಅನಾರೋಗ್ಯ ಸಮಸ್ಯೆಗಳಿದ್ದರೆ ವೈದ್ಯರ ಭೇಟಿಯಾಗುತ್ತೀರಿ. ಚಿಕ್ಕ ಪುಟ್ಟ ವಿಚಾರದಲ್ಲಿ ಮನೆಯಲ್ಲಿ ಕಲಹ ಮಾಡಿಕೊಳ್ಳುವುದನ್ನು ತಪ್ಪಿಸುವುದು ಸೂಕ್ತ.
ಧನು ರಾಶಿ
ಧನು ರಾಶಿಯವರಿಗೆ ಸಮಸ್ಯೆಗಳು ಬರಬಹುದು. ನಿಮ್ಮ ಆರ್ಥಿಕ ವಿಚಾರದಲ್ಲಿ ಅಡ್ಡಿಗಳು ಎದುರಾಗಬಹುದು. ಹಣದ ವಿಚಾರವಾಗಿ ಜಾಗೃತೆ ಅಗತ್ಯ. ವಾಹನ ಸಂಬಂಧವಾಗಿ ಒಪ್ಪಂದಕ್ಕೆ ಮುಂದಾಗದೆ ಇರುವುದು ಉತ್ತಮ. ಕಚೇರಿ ಕೆಲಸಗಳು ನಿಧಾನವಾಗಬಹುದು.
ಮಕರ ರಾಶಿ
ಮಕರ ರಾಶಿಯ ಜನರಿಗೆ ಇಂದು ಮಿಶ್ರ ಫಲ. ನಿಮ್ಮ ಅನೇಕ ಕೆಲಸಗಳು ತಡವಾಗಬಹುದು. ಹಣಕಾಸಿನ ವಿಚಾರದಲ್ಲಿ ಮನಸ್ತಾಪಗಳ ಬರಬಹುದು. ವ್ಯಾಪಾರಿಗಳು ಬುದ್ದಿವಂತಿಕೆಯಿಂದ ಇರಬೇಕು. ಮನೆಯ ಹಿರಿಯ ಸದಸ್ಯರ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು.
ಕುಂಭ ರಾಶಿ
ಕುಂಭ ರಾಶಿಯ ಜನರಿಗೆ ಅಚ್ಚರಿ ಫಲಿತಾಂಶಗಳು ಬರಹುದು ಹಲವು ದಿನಗಳ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿ ಫಲ ಪಡೆಯಬಹುದು. ಆರೋಗ್ಯ, ವ್ಯಾಪಾರ ಸುಧಾರಣೆ ನೋಡುವಿರಿ. ವಾಹನ ಚಾಲನೆಯಲ್ಲಿ ನಿಗಾ ಇಡಬೇಕು. ಹೊಸ ಕೆಲಸಗಳ ಕುರಿತು ನೀವು ಚರ್ಚೆಯಲ್ಲಿ ತೊಡಗಬಹುದು.
ಮೀನ ರಾಶಿ
ಮೀನ ರಾಶಿಯ ಜನರಿಗೆ ಇಂದು ಅನುಕೂಲಕರ ದಿನ. ಗೃಹಿಣಿಯರಲ್ಲಿ ಲಾಭದಾಯಕ ದಿನವಾಗುತ್ತದೆ. ಬಹಳ ಸಮಯದಿಂದ ನೀವು ಬಯಸಿದ್ದಂತಹ ಹಣ ನಿಮ್ಮ ಕೈಸೇರಬಹುದು. ಪ್ರಯಾಣಗಳ ಮಾಡಬೇಕಾಗುತ್ತದೆ. ಅನೇಕರಿಗೆ ಉದ್ಯೋಗ ಸಂಬಂಧಿ ಸಮಸ್ಯೆ ದೂರಾಗುತ್ತಿದೆ.



Click it and Unblock the Notifications