Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
Dina Bhavishya: ಆಗಸ್ಟ್ 29ರ ಶುಕ್ರವಾರ ಯಾರಿಗೆ ಶುಭಕರ ದಿನ?
ವೈದಿಕ ಶಾಸ್ತ್ರದ ಪ್ರಕಾರ ಆಗಸ್ಟ್ 29ರಂದು ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯವರಿಗೆ ಈ ದಿನವು ಅನುಕೂಲಕರವಾಗಿರಿದೆ, ನಿಮ್ಮ ಮನೆಗಾಗಿ ನೀವು ಹೊಸ ವಸ್ತುವೊಂದನ್ನು ಖರೀದಿಸುತ್ತೀರಿ. ನಿಮ್ಮ ಹಣಕಾಸಿನ ಸ್ಥಿತಿ ಸುಧಾರಿಸಲಿದೆ. ಅನೇಕರಲ್ಲಿ ದೂರ ಪ್ರಯಾಣ ಮಾಡಬೇಕಾಗಿ ಬರಬಹುದು. ಆಪ್ತರಿಂದ ಹಣಕಾಸಿನ ಸಹಾಯ ಪಡೆಯುವಿರಿ.
ವೃಷಭ ರಾಶಿ
ವೃಷಭ ರಾಿಯ ಜನರಿಗೆ ಇಂದು ಬಹಳ ಸಮಸ್ಯೆಯ ದಿನ. ನಿಮ್ಮ ಹಣಕಾಸು ಸಂಬಂಧವಾಗಿ ಅತ್ಯಂತ ಕಠಿಣ ದಿನ. ನಿಮ್ಮ ಮುಖ್ಯವಾದ ಕೆಲಸಕ್ಕೆ ಹಣದ ಕೊರತೆ ಕಾಡಬಹುದು. ಅನೇಕರಲ್ಲಿ ಅನಾರೋಗ್ಯ ಸಮಸ್ಯೆ ಕಾಡಬಹುದು.

ಮಿಥುನ ರಾಶಿ
ಮಿಥುನ ರಾಶಿಯ ಜನರಲ್ಲಿ ಇಂದು ಮಿಶ್ರ ಫಲದ ದಿನ. ನಿಮ್ಮ ಆದಾಯಕ್ಕಿಂತ ಖರ್ಚು ಹೆಚ್ಚಾಗುವ ದಿನ. ವಾಹನ ಸಂಬಂಧವಾಗಿ ಎಚ್ಚರಿಕೆಯಿಂದ ಇರಿ. ಹಲವು ಕೆಲಸಗಳಲ್ಲಿ ಅಡ್ಡಿ ಎದುರಾಗಬಹುದು.
ಕರ್ಕ ರಾಶಿ
ಕರ್ಕ ರಾಶಿಯವರಲ್ಲಿ ಇಂದು ಉತ್ತಮ ದಿನ. ನಿಮ್ಮ ಬಹಳ ದಿನದ ಕೆಲಸವೊಂದನ್ನು ಪೂರ್ಣ ಮಾಡುವಿರಿ. ಆಪ್ತ ಬಳಗದ ಭೇಟಿಯಾಗುವಿರಿ. ಗೃಹಿಣಿಯರಲ್ಲಿ ಅನಾರೋಗ್ಯ ಕಾಡಬಹುದು. ತಾಳ್ಮೆಯಿಂದ ಎಲ್ಲರ ಜೊತೆಗೆ ಮಾತನಾಡುವುದು ಉತ್ತಮ.
ಸಿಂಹ ರಾಶಿ
ಸಿಂಹ ರಾಶಿಯ ಜನರಿಗೆ ಇಂದು ಮಿಶ್ರ ಫಲ. ದಿನದ ಆರಂಭದಲ್ಲಿ ಕೆಲಸದ ಕಾರಣಕ್ಕೆ ಒತ್ತಡ ಇರಲಿದೆ. ದಿನದ ಅಂತ್ಯದಲ್ಲಿ ಸಂತಸ ಇರಲಿದೆ. ಯಾರೊಂದಿಗೂ ಅನಗತ್ಯ ವಿಚಾರವಾಗಿ ಅಥವಾ ಹಣಕಾಸಿನ ವ್ಯವಹಾರಕ್ಕೆ ಮುಂದಾಗದೆ ಇರುವುದು ಉತ್ತಮ. ವ್ಯಾಪಾರಿಗಳಿಗೆ ಇಂದು ಉತ್ತಮ ಲಾಭ ತರುವ ದಿನವಾಗಿದೆ.
ಕನ್ಯಾ ರಾಶಿ
ನೀವು ಬಹಳ ಸಮಯದಿಂದ ಬ್ಯಾಂಕಿಂಗ್ ಕುರಿತಾದ ಯಾವುದಾದರು ವಿಚಾರದಲ್ಲಿ ಓಡಾಟದಲ್ಲಿ ತೊಡಗಿದ್ದರೆ ಈ ದಿನ ಆ ಕಾರ್ಯ ನೆರವೇರಲಿದೆ. ನಿರುದ್ಯೋಗಿಗಳಿಗೆ ಉತ್ತಮ ಉದ್ಯೋಗ ಅವಕಾಶ ಬರಲಿದೆ. ದೇವಾಲಯ ಭೇಟಿಯ ಸಾಧ್ಯತೆ ಇದೆ. ಮನೆಯಲ್ಲಿ ನೆಮ್ಮದಿಯ ವಾತಾವರಣ ಇರಲಿದೆ.
ತುಲಾ ರಾಶಿ
ನೀವು ಸರ್ಕಾರಿ ಕೆಲಸದಲ್ಲಿ ಈ ದಿನ ಸಮಸ್ಯೆಗಳ ಎದುರಿಸಬಹುದು. ಅನಾರೋಗ್ಯ ವಿಚಾರವಾಗಿ ನೀವು ನಿರ್ಲಕ್ಷ್ಯ ಮಾಡಬೇಡಿ. ದೂರ ಪ್ರಯಾಣಗಳಲ್ಲಿ ನಿಮಗೆ ಸಂತಸ ಇರಲಿದೆ. ಸ್ವಂತ ಉದ್ಯೋಗ ಅಥವಾ ಹೊಸದಾಗಿ ಉದ್ಯಮ ಆರಂಭಿಸಿದ್ದರೆ ಅವರಲ್ಲಿ ಲಾಭ ನೋಡುವ ದಿನ. ಹಣಕಾಸಿನ ವಿಚಾರದಲ್ಲಿ ಮತ್ತೊಬ್ಬರ ಸಹಕಾರ ಪಡೆಯಲಿದ್ದೀರಿ.
ವೃಶ್ಚಿಕ ರಾಶಿ
ನಿಮಗಿಂದು ಅಚ್ಚರಿ ಫಲಿತಾಂಶಗಳು ಬರುವ ದಿನ. ನಿಮ್ಮ ಕೆಲಸಗಳು ಎಂದಿನಂತೆ ನಡೆಯಲಿದೆ. ನಿಮ್ಮ ಮನೆಯಲ್ಲಿ ಹಣಕಾಸು ವಿಚಾರವಾಗಿ ಹಲವು ಚರ್ಚೆಗಳು ನಡೆಯಬಹುದು. ಉದ್ಯೋಗದಲ್ಲಿನ ಒತ್ತಡವು ನಿಮಗೆ ಹೊಸ ಸಮಸ್ಯೆಯಂತೆ ಕಾಡಬಹುದು. ಪ್ರಯಾಣಗಳಲ್ಲಿ ಸುಖವಿರಲಿದೆ.
ಧನು ರಾಶಿ
ಧನು ರಾಶಿಯವರು ಈ ದಿನ ದೊಡ್ಡ ವ್ಯವಹಾರಗಳಿಗೆ ಮುಂದಾಗದೆ ಇರುವುದು ಉತ್ತಮ. ದೇವಾಲಯ ಅಥವಾ ಕುಟುಂಬಸ್ಥರೊಂದಿಗೆ ಯಾವುದಾದರು ಸ್ಥಳಕ್ಕೆ ತೆರಳಬಹುದು. ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಶ್ರಮದಾಯಕ ದಿನವಾಗಲಿದೆ. ವ್ಯಾಪಾರಿಗಳಿಗೆ ಉತ್ತಮ ದಿನ.
ಮಕರ ರಾಶಿ
ಮಕರ ರಾಶಿಯವರಲ್ಲಿ ಇಂದು ಅನೇಕ ರೀತಿಯ ಸವಾಲು ಎದುರಿಸಬಹುದು. ನಿಮ್ಮಲ್ಲಿ ಕೆಲಸ ಬದಲಾಯಿಸುವ ಸಂಬಂಧ ಗೊಂದಲ ಇರಬಹುದು. ವಾಹನ ಸವಾರರಿಗೆ ಹೆಚ್ಚು ಖರ್ಚಿನ ದಿನವಾಗುತ್ತಿದೆ. ಬಟ್ಟೆ ವ್ಯಾಪಾರಿಗಳಿಗೆ ಬಹಳ ಉತ್ತಮ ದಿನ. ಅನೇಕ ರೀತಿಯಲ್ಲಿ ನಿಮ್ಮ ಹಣಕಾಸಿನ ಸಮಸ್ಯೆ ದೊಡ್ಡದಾಗುವ ಸಾಧ್ಯತೆ ಇದೆ.
ಕುಂಭ ರಾಶಿ
ಕುಂಭ ರಾಶಿಯ ಜನರು ಈ ದಿನ ಸವಾಲುಗಳ ಎದುರಿಸುತ್ತೀರಿ. ಕೆಲಸದಲ್ಲಿ ತರಾತುರಿಯ ನಿರ್ಧಾರ ತೆಗೆದುಕೊಳ್ಳಬೇಡಿ. ಆಹಾರ ವಿಚಾರವಾಗಿ ದುಂದು ವೆಚ್ಚ ಮಾಡಬೇಡಿ, ಮನೆಗಾಗಿ ಖರ್ಚು ಮಾಡಬೇಕಾಗಬಹುದು.
ಮೀನ ರಾಶಿ
ಇಂದು ನಿಮ್ಮ ಹಲವು ಕೆಲಸಗಳಲ್ಲಿ ಅಡ್ಡಿ ನೋಡಬಹುದು. ಆದ್ರೆ ದಿನದ ಅಂತ್ಯದಲ್ಲಿ ನಿಮ್ಮ ಕೆಲಸವನ್ನು ಪೂರ್ಣಗೊಳಿಸಿದ ನೆಮ್ಮದಿ ಇರಲಿದೆ. ಆರ್ಥಿಕ ವಿಚಾರವಾಗಿ ನಿಮಗೆ ಉತ್ತಮ ದಿನವಾಗಿರಲಿದೆ. ಆಪ್ತರೊಬ್ಬರಿಂದ ಹಣಕಾಸಿನ ನೆರವು ಪಡೆಯಬಹುದು.



Click it and Unblock the Notifications