Dina Bhavishya: ಆಗಸ್ಟ್ 28ರ ಗುರುವಾರ ಯಾರಿಗೆಲ್ಲಾ ಶುಭಕರ ದಿನ?

ವೈದಿಕ ಶಾಸ್ತ್ರದ ಪ್ರಕಾರ ಆಗಸ್ಟ್ 28ರಂದು ನಿಮ್ಮ ರಾಶಿಫಲ ನೋಡೋಣ:

ಮೇಷ ರಾಶಿ

ಮೇಷ ರಾಶಿಯವರಿಗೆ ಬಹಳ ಶ್ರಮದಾಯಕ ದಿನ, ನಿಮ್ಮ ಹಲವು ಕೆಲಸಗಳಲ್ಲಿ ಅತ್ಯಂತ ಶ್ರಮವಹಿಸಿ ಭಾಗಿಯಾಗಬೇಕಿದೆ. ನಿಮ್ಮ ಹಲವು ಆಲೋಚನೆಗಳನ್ನು ಮತ್ತೆ ನೀವು ವಿಮರ್ಷೆ ಮಾಡಿಕೊಳ್ಳಬೇಕಾಗಬಹುದು. ಆಪ್ತರ ಭೇಟಿ ಮಾಡುವಿರಿ. ವಾಹನ ಸಂಬಂಧವಾಗಿ ಶುಭ ದಿನವಾಗಿರುತ್ತದೆ.

ವೃಷಭ ರಾಶಿ

ನಿಮ್ಮಲ್ಲಿಂದ ಉತ್ತಮ ದಿನ, ನಿಮ್ಮ ಅನೇಕ ಕೆಲಸಗಳಲ್ಲಿ ಲಾಭದಾಯಕ. ನಿಮ್ಮ ಕನಸುಗಳನ್ನು ಈಡೇರಿಸಿಕೊಳ್ಳಬಹುದು. ಆಂತರಿಕ ಸಮಸ್ಯೆಗಳನ್ನು ಮನೆಯ ಒಳಗೆ ಪರಿಹರಿಸಿಕೊಳ್ಳುವುದು ಉತ್ತಮ.

August-28-2025-daily-horoscope-prediction-for-12-zodiac-signs-in-kannada

ಮಿಥುನ ರಾಶಿ

ಮಿಥುನ ರಾಶಿಯವರಿಗೆ ಮಿಶ್ರ ಫಲದ ದಿನ. ನೀವು ಮಾಡಬೇಕೆಂದು ಬಯಸಿರುವ ಅನೇಕ ಕೆಲಸಗಳನ್ನು ಸಮಯದೊಳಗೆ ಮಾಡಿ ಮುಗಿಸುವುದು ಉತ್ತಮ. ದೊಡ್ಡ ನಿರ್ಧಾರಗಳ ತೆಗೆದುಕೊಳ್ಳುವುದರಿಂದಾಗಿ ನಿಮ್ಮಲ್ಲಿ ಒತ್ತಡ ಅಥವಾ ಗೊಂದಲದ ವಾತಾವರಣ ಇರಬಹುದು.

ಕರ್ಕ ರಾಶಿ

ನಿಮಗಿಂದು ಹಣಕಾಸು ವಿಚಾರವಾಗಿ ಉತ್ತಮ ದಿನ. ನಿಮ್ಮ ವೈಯಕ್ತಿಕ ಕಲಸವೊಂದಕ್ಕೆ ಬಯಸಿದಷ್ಟು ಹಣ ನಿಮ್ಮ ಕೈ ಸೇರಲಿದೆ. ಗೃಹಿಣಿಯರಿಗೆ ಉತ್ತಮ ವಿಶ್ರಾಂತಿಯ ದಿನ. ಅನೇಕ ಕೆಲಸಗಳಲ್ಲಿ ನಿಮಗೆ ಧನಾತ್ಮಕ ಬದಲಾವಣೆಗಳಿರಲಿದೆ.

ಸಿಂಹ ರಾಶಿ

ಸಿಂಹ ರಾಶಿಯ ಜನರಿಗೆ ಇಂದು ಅನುಕೂಲಕರ ದಿನವಾಗಿರಲಿದೆ. ಆದರೆ ನಿಮ್ಮ ಖರ್ಚುಗಳ ಮೇಲೆ ಬಹಳ ನಿಗಾ ಇಡಬೇಕಿದೆ. ಯಾರೊಂದಿಗಾದರು ಹೊಸ ವ್ಯವಹಾರ ಮಾಡುವ ಮುನ್ನ ಎಚ್ಚರಿಕೆ ವಹಿಸಿ. ಸವಾಲುಗಳನ್ನು ಎದುರಿಸುವುದು ಉತ್ತಮ.

ಕನ್ಯಾ ರಾಶಿ

ಕನ್ಯಾ ರಾಶಿಯ ಜನರಲ್ಲಿ ಪ್ರೀತಿ ಪ್ರೇಮಕ್ಕೆ ಸಂಬಂಧಿಸಿದಂತೆ ಉತ್ತಮ ದಿನ. ನಿಮ್ಮ ಪ್ರೀತಿ ಹೇಳಿಕೊಳ್ಳಬಹುದು, ದಾಂಪತ್ಯದಲ್ಲಿ ಸುಖವಿದೆ. ಪೋಷಕರ ಆರೋಗ್ಯದಲ್ಲಿ ಏರುಪೇರು ಸಂಭವಿಸಬಹುದು. ಹಲವು ದಿನದಿಂದ ಅರ್ಧಕ್ಕೆ ನಿಂತ ಕೆಲಸಗಳನ್ನು ಪೂರ್ಣ ಮಾಡಬೇಕಾಗಬಹುದು.

ತುಲಾ ರಾಶಿ

ತುಲಾ ರಾಶಿಯವರು ಪ್ರಯಾಣ ಮಾಡಬೇಕಾಗುತ್ತದೆ. ಹಾಗೆ ಗೃಹಿಣಿಯರಿಗೆ ಇಂದು ಖರ್ಚಿನ ದಿನ. ವ್ಯಾಪಾರಿಗಳು ತಮ್ಮ ಬುದ್ದಿವಂತಿಕೆಯಿಂದ ವ್ಯವಹಾರ ಮಾಡಬೇಕಾಗುತ್ತದೆ. ವೈಯಕ್ತಿಕ ವಿಚಾರಕ್ಕೆ ಉಳಿತಾಯದ ಹಣ ಬಳಸಬೇಕಾಗಬಹುದು. ಮನೆಯಲ್ಲಿ ಶಾಂತಿ ನೆಲೆಸಲಿದೆ.

ವೃಶ್ಚಿಕ ರಾಶಿ

ಇಂದು ನಿಮಗೆ ಅನೇಕ ರೀತಿಯಲ್ಲಿ ಶುಭಕರ ದಿನ. ನಿಮ್ಮ ಬಹಳ ದಿನದ ಅನಾರೋಗ್ಯ ಸಮಸ್ಯೆ ಸುಧಾರಿಸಲಿದೆ. ಕುಟುಂಬಸ್ಥರಿಂದ ಹಣಕಾಸು ಸಂಬಂಧ ನಿಮ್ಮ ಮೇಲೆ ಒತ್ತಡ ಹೇರಬಹುದು. ಸಹೋದರರೊಂದಿಗೆ ನಿಮ್ಮ ಸಂಬಂಧ ವೃದ್ಧಿಸಲಿದೆ. ನಿರುದ್ಯೋಗಿಗಳಾಗಿದ್ದರೆ ಇಂದಿನ ಪ್ರಯತ್ನದಲ್ಲಿ ಉದ್ಯೋಗ ಪಡೆಯಬಹುದು.

ಧನು ರಾಶಿ

ಧನು ರಾಶಿಯವರು ಈ ದಿನ ಓಡಾಟಗಳಿಂದ, ಪ್ರಯಾಣಗಳಿಂದ ಕೂಡಿರಲಿದೆ. ನಿಮ್ಮ ಅನುಭವದ ಕಾರಣದಿಂದ ನಿಮ್ಮ ಕೆಲಸದಲ್ಲಿ ಶುಭವಿದೆ. ಆಪ್ತರೊಬ್ಬರಿಂದ ಹಣ ನಿಮ್ಮ ಕೈ ಸೇರಬಹುದು. ಸಾಲ ತೀರಿಸಲು ಇಂದು ಉತ್ತಮ ದಿನ. ಪ್ರವಾಸ ತೆರಳುವ ನಿಮ್ಮ ಯೋಜನೆಯನ್ನು ಮುಂದೂಡುವುದು ಉತ್ತಮ.

ಮಕರ ರಾಶಿ

ಮಕರ ರಾಶಿಯ ಜನರಿಗೆ ಇಂದು ಮಿಶ್ರ ಫಲದ ದಿನ. ನಿಮ್ಮ ಆದಾಯದಷ್ಟೇ ಖರ್ಚು ಕೂಡ ಇರಲಿದೆ. ಹಲವು ಕೆಲಸಗಳಲ್ಲಿ ಒತ್ತಡದ ದಿನ. ಕಚೇರಿ ಕೆಲಸಗಳು ನಿಧಾನವಾಗಲಿದೆ. ಸ್ನೇಹಿತರ ಭೇಟಿಯೂ ಉತ್ತಮ ದಿನವನ್ನಾಗಿಸಲಿದೆ.

ಕುಂಭ ರಾಶಿ

ಕುಂಭ ರಾಶಿಯ ಜನರಲ್ಲಿ ಇಂದು ಸಮಸ್ಯೆಗಳು ಎದುರಾಗಬಹುದು. ನಿಮ್ಮ ಕೆಲಸದ ವಿಚಾರವಾಗಿ ಉತ್ತಮ ಸುದ್ದು ಸಿಗಬಹುದು. ವಾಹನ ಚಲಾಯಿಸುವವರು ಇಂದು ಜಾಗೃತೆ ವಹಿಸಬೇಕಿದೆ.

ಮೀನ ರಾಶಿ

ಮೀನ ರಾಶಿಯವರಿಗೆ ಮಿಶ್ರ ಫಲದ ದಿನ. ನಿಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ಅಡೆತಡೆ ನೋಡಬಹುದು. ನಿಮ್ಮ ಕೆಲಸಗಳು ನಿಧಾನವಾಗಲಿವೆ. ಯಾರಿಗೂ ಹಣವನ್ನು ಸಾಲವಾಗಿ ನೀಡಬೇಡಿ. ಸಹಾಯವಾಗಿ ನೀಡಿದರೆ ಉತ್ತಮ. ದಾಂಪತ್ಯದಲ್ಲಿ ಮನಸ್ತಾಪ ಉಂಟಾಗಬಹುದು.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

August-28-2025-daily-horoscope-prediction-for-12-zodiac-signs-in-kannada

Here is August 28 daily horoscope prediction for 12 zodiac signs read on...
Story first published: Thursday, August 28, 2025, 5:00 [IST]
X
Desktop Bottom Promotion