Dina Bhavishya: ಆಗಸ್ಟ್ 27ರ ಗಣೇಶ ಚತುರ್ಥಿಯಂದು ನಿಮ್ಮ ರಾಶಿಫಲ

ವೈದಿಕ ಶಾಸ್ತ್ರದ ಪ್ರಕಾರ ಆಗಸ್ಟ್ 27ರಂದು ನಿಮ್ಮ ರಾಶಿಫಲ ನೋಡೋಣ:

ಮೇಷ ರಾಶಿ

ಮೇಷ ರಾಶಿ ಜನರಿಗೆ ಬಹಳ ಅನುಕೂಲಕರ ದಿನವಾಗಿರಲಿದೆ. ನಿಮ್ಮ ಹಲವು ಕೆಲಸಗಳಲ್ಲಿ ಲಾಭದಾಯಕ ದಿನ ಎನ್ನಬಹುದು. ನಿಮ್ಮ ಆಲೋಚನೆಯಲ್ಲಿನ ಹೊಸ ಆರಂಭಕ್ಕೆ ಉತ್ತಮ ದಿನ. ಆಪ್ತರೊಂದಿಗೆ ಸಮಯ ಕಳೆಯುವಿರಿ.

ವೃಷಭ ರಾಶಿ

ವೃಷಭ ರಾಶಿಯ ಜನರಲ್ಲಿ ಇಂದು ಉತ್ತಮ ಫಲದ ದಿನ. ನಿಮ್ಮ ಕೆಲಸಗಳಿಗೆ ಯಶಸ್ಸು ದೊರೆಯಲಿದೆ. ಆರೋಗ್ಯದಲ್ಲಿ ಚೇತರಿಕೆ ಕಾಣಲಿದ್ದೀರಿ. ಯಾರೊಂದಿಗಾದರು ಪ್ರಯಾಣ ಮಾಡುವಾಗ ಎಚ್ಚರಿಕೆ ವಹಿಸಿ.

August-27-2025-daily-horoscope-

ಮಿಥುನ ರಾಶಿ

ಮಿಥುನ ರಾಶಿಯ ಜನರಲ್ಲಿ ಇಂದು ಮಿಶ್ರ ಫಲವಿದೆ. ಹಣಕಾಸು ಕುರಿತಾಗಿ ಬಹಳ ಎಚ್ಚರಿಕೆಯಿಂದ ವ್ಯವಹಾರಗಳ ಮಾಡಬೇಕಿದೆ. ನಿಮ್ಮಲ್ಲಿ ವಿಪರೀತ ಖರ್ಚು ಬರಬಹುದು. ಗೃಹಿಣಿರಲ್ಲಿ ಅನಾರೋಗ್ಯ ಕಾಡುವ ಸಾಧ್ಯತೆ ಅಧಿಕವಾಗಿದೆ. ಮಕ್ಕಳ ಕುರಿತಾಗಿ ಎಚ್ಚರಿಕೆ ಅಗತ್ಯ.

ಕರ್ಕ ರಾಶಿ

ಕರ್ಕ ರಾಶಿಯ ಜನರಿಗೆ ಈ ದಿನ ಬಹಳ ಅನುಕೂಲ. ನಿಮ್ಮ ಕೆಲಸ ಕಾರಣಕ್ಕೆ ಪ್ರಯಾಣ ಮಾಡುವಿರಿ. ಆಪ್ತರೊಂದಿಗೆ ಸಮಯ ಕಳೆಯುವಿರಿ. ಸ್ನೇಹಿತರಿಂದ ಹಣಕಾಸು ಸಹಾಯ ಪಡೆಯಬಹುದು. ಮನೆಯಲ್ಲಿ ಶಾಂತಿ ಇರಲಿದೆ.

ಸಿಂಹ ರಾಶಿ

ಸಿಂಹ ರಾಶಿಯ ಜನರು ಪ್ರಯಾಣ ಮಾಡುವಿರಿ. ಮನೆಯಲ್ಲಿ ಸಂತಸ ಮೂಡುವಂತಹ ದಿನ. ಬಹಳ ದಿನದಿಂದ ಅಪೂರ್ಣವಾದ ಕೆಲಸಗಳು ಪೂರ್ಣವಾಗಲಿದೆ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸಿ.

ಕನ್ಯಾ ರಾಶಿ

ಕನ್ಯಾ ರಾಶಿಯ ಜನರಲ್ಲಿ ಓಡಾಟದ ದಿನ. ನಿಮ್ಮ ಅನೇಕ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ನಿಮ್ಮ ಆಪ್ತರೊಬ್ಬರಿಗೆ ಹಣದ ಅವಶ್ಯಕತೆ ಬರಬಹುದು. ಆರೋಗ್ಯ ಬಗ್ಗೆ ಕಾಳಜಿ ವಹಿಸಿವಹಿಸಿ.

ತುಲಾ ರಾಶಿ

ತುಲಾ ರಾಶಿಯವರಲ್ಲಿ ಇಂದು ಮಿಶ್ರ ಫಲದ ದಿನ. ನಿಮ್ಮ ಅನೇಕ ಕೆಲಸಗಳು ಬಹಳ ಅಡೆತಡೆಯಿಂದ ಕೂಡಿರಬಹುದು. ಕೆಲಸದಲ್ಲಿನ ಅಡ್ಡಿ ನಿಮ್ಮಲ್ಲಿ ಅಶಾಂತಿ ಹಾಗೂ ಒತ್ತಡಕ್ಕೆ ಕಾರಣವಾಗಲಿದೆ. ದಾಂಪತ್ಯ ವಿಚಾರದಲ್ಲಿ ನಿಮಗೆ ಉತ್ತಮ ದಿನವಲ್ಲ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯ ಜನರು ಇಂದು ಓಡಾಟದಲ್ಲಿ ಕಳೆಯುವಿರಿ. ನಿಮ್ಮ ಹಣಕಾಸು ವ್ಯವಹಾರ ಸಂಬಂಧವಾಗಿ ವ್ಯಕ್ತಿಯೊಬ್ಬರನ್ನು ಭೇಟಿ ಮಾಡುವಿರಿ. ಇದರಿಂದ ನಿಮ್ಮ ಸಮಸ್ಯೆಯೊಂದಕ್ಕೆ ಪರಿಹಾರ ಪಡೆಯಬಹುದು. ಅನಾರೋಗ್ಯ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಿದರೆ ಮುಂದೆ ಸಮಸ್ಯೆಗಳು ಬರಬಹುದು. ಸಾಲ ಮಾಡುವುದನ್ನು ತಪ್ಪಿಸುವುದು ಉತ್ತಮ.

ಧನು ರಾಶಿ

ಧನು ರಾಶಿಯವರಿಗೆ ಇಂದು ಉತ್ತಮ ದಿನ. ಅನೇಕ ಕೆಲಸಗಳು ಅರ್ಧಕ್ಕೆ ನಿಲ್ಲಬಹುದು. ಶ್ರಮದಾಯಕ ಕೆಲಸದಲ್ಲಿ ಭಾಗಿಯಾಗುವಿರಿ. ಕುಟುಂಬದ ಸದಸ್ಯರೊಬ್ಬರಿಗೆ ಅನಾರೋಗ್ಯ ಬರಬಹುದು. ಆದ್ರೆ ದಿನದ ಅಂತ್ಯದಲ್ಲಿ ನೆಮ್ಮದಿ ಇರಲಿದೆ.

ಮಕರ ರಾಶಿ

ಮಕರ ರಾಶಿಯ ಜನರಿಗೆ ಇಂದು ಹಲವು ರೀತಿಯಲ್ಲಿ ಅನುಕೂಲವಿದೆ. ಹೊಸ ವ್ಯವಹಾರ ಸಂಬಂಧವಾಗಿ ಯಾರ ಬಳಿಯು ಚರ್ಚೆ, ಒಪ್ಪಂದ ಮಾಡಿಕೊಳ್ಳಲು ಮುಂದಾಗಬೇಡಿ. ವಾಹನ ಸಂಬಂಧವಾಗಿ ಖರ್ಚು ಇರಬಹುದು. ಪ್ರಯಾಣದಲ್ಲಿ ಎಚ್ಚರಿಕೆ ಇರಲಿ.

ಕುಂಭ ರಾಶಿ

ಕುಂಭ ರಾಶಿಯ ಜನರಲ್ಲಿ ಇಂದು ಬಹಳ ಶ್ರಮದಾಯಕ ದಿನವಾಗುತ್ತಿದೆ. ಹಲವು ವರ್ಷಗಳ ಬೇಡಿಕೆ ಅಥವಾ ಕನಸೊಂದನ್ನು ನೀವು ನನಸು ಮಾಡಿಕೊಳ್ಳಬಹುದು. ಸ್ನೇಹಿತರ ಭೇಟಿಯಾಗುತ್ತೀರಿ. ನಿಮ್ಮ ದೈನಂದಿನ ಕೆಲಸಗಳಲ್ಲಿ ಅಡೆತಡೆ ಇರಬಹುದು.

ಮೀನ ರಾಶಿ

ಮೀನ ರಾಶಿಯ ಜನರಿಗೆ ಇಂದು ಮಿಶ್ರ ಫಲದ ದಿನ. ನಿಮ್ಮ ಕೆಲಸಗಳಲ್ಲಿ ಲಾಭದಾಯಕ ಫಲಿತಾಂಶ ಬರಲಿದೆ. ನಿಮ್ಮ ವೈಯಕ್ತಿಕ ಕೆಸಲಕ್ಕಾಗಿ ಪ್ರಯಾಣ ಮಾಡುವಿರಿ. ಯಾರಿಗಾದರು ಹಣ ನೀಡಿದ್ದರೆ ಮರಳಿ ಪಡೆಯಲು ಇಂದು ಉತ್ತಮ ದಿನವಾಗಿರಲಿದೆ.

English summary

August-27-2025-daily-horoscope-prediction-for-12-zodiac-signs-in-kannada

Here is August 27 daily horoscope prediction for 12 zodiac signs read on...
X
Desktop Bottom Promotion