Dina Bhavishya: ಆಗಸ್ಟ್ 26ರ ಮಂಗಳವಾರ ಯಾರಿಗೆ ಧನಲಾಭ?

ವೈದಿಕ ಶಾಸ್ತ್ರದ ಪ್ರಕಾರ ಆಗಸ್ಟ್ 26ರಂದು ನಿಮ್ಮ ರಾಶಿಫಲ ನೋಡೋಣ:

ಮೇಷ ರಾಶಿ

ಮೇಷ ರಾಶಿಯ ಜನರಲ್ಲಿ ಈ ದಿನ ಸಮಸ್ಯೆಗಳು ಬರಬಹುದು. ನಿಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ. ಮೂಳೆ ಸಂಬಂಧಿತ ವಿಚಾರದಲ್ಲಿ ಸಮಸ್ಯೆಗಳು ಎದುರಾಗುವುದು ನೋಡಬಹುದು. ನಿಮ್ಮ ಕೆಲಸಗಳಲ್ಲಿ ಇಂದು ಅಡೆತಡೆ ಇದೆ. ಆಪ್ತರೊಬ್ಬರಿಂದ ನಿಮಗೆ ಪ್ರಯಾಣ ಮಾಡಬೇಕಾದ ಅನಿವಾರ್ಯತೆ ಇರಲಿದೆ.

ವೃಷಭ ರಾಶಿ

ವೃಷಭ ರಾಶಿಯವರಿಗೆ ಇಂದು ಉತ್ತಮ ದಿನವಾಗಿರಲಿದೆ. ನಿಮ್ಮ ಕೆಲಸ ಕಾರ್ಯಗಳು ಸಲೀಸಾಗಿ ನಡೆಯಲಿವೆ. ಅಪಾಯಕಾರಿ ಕೆಲಸಗಳಲ್ಲಿ ಇರುವವರು ಎಚ್ಚರಿಕೆ ವಹಿಸಬೇಕಿದೆ. ಸರ್ಕಾರಿ ಕೆಲಸದಲ್ಲಿರುವವರು ಬಹಳ ಶ್ರಮ ಹಾಕಬೇಕಿದೆ.

August-26-2025-daily-horoscope-prediction-for-12-zodiac-signs-in-kannada

ಮಿಥುನ ರಾಶಿ

ಮಿಥುನ ರಾಶಿಯ ಜನರಿಗೆ ಇಂದು ಉತ್ತಮ ದಿನ. ನಿಮ್ಮ ಹಣಕಾಸು ಸಂಬಂಧಿ ವಿಚಾರದಲ್ಲಿ ಲಾಭವಿದೆ. ವ್ಯಾಪಾರಿಗಳಿಗೆ ಲಾಭದ ದಿನ. ನಿಮ್ಮ ಹಲವು ಕೆಲಸಗಳಲ್ಲಿ ಲಾಭವಿದೆ. ಆರೋಗ್ಯದಲ್ಲಿ ನಿಮಗೆ ಯಥಾಸ್ಥಿತಿ ಇರಲಿದೆ.

ಕರ್ಕ ರಾಶಿ

ಕರ್ಕ ರಾಶಿಯ ಜನರಿಗೆ ಇಂದು ಮಿಶ್ರ ಫಲದ ದಿನ. ನಿಮ್ಮ ಹಲವು ಕೆಲಸಗಳಲ್ಲಿ ಅನುಕೂಲಕರ ಪರಿಸರ ಇರಲಿದೆ. ನಿಮ್ಮ ಆಲೋಚನೆಯಲ್ಲಿ ಹಲವು ದಿನದಂದು ವಸ್ತು ಖರೀದಿಯ ಕುರಿತು ಹಣಕಾಸು ಖರ್ಚು ಮಾಡಬಹುದು.

ಸಿಂಹ ರಾಶಿ

ನಿಮಗಿಂದು ಸಮಸ್ಯೆಗಳು ಬರುವ ದಿನ. ನೀವು ಓಡಾಟದಲ್ಲಿ ಅಥವಾ ಪ್ರಯಾಣದಲ್ಲಿ ತೊಡಗಬಹುದು. ಹಣಕಾಸಿನ ವಿಚಾರದಲ್ಲಿ ನೆಮ್ಮದಿ ಇರಲಿದೆ. ವ್ಯಾಪಾರಿಗಳಿಗೆ ಉತ್ತಮ ದಿನ. ಅನೇಕ ಕೆಲಸಗಳು ನೀವು ಅಂದುಕೊಂಡಂತೆ ನೆರವೇರಲಿದೆ.

ಕನ್ಯಾ ರಾಶಿ

ಕನ್ಯಾ ರಾಶಿಯ ಜನರಿಗೆ ನಿಮ್ಮ ದಿನವು ಒತ್ತಡದಿಂದ ಕೂಡಿರಲಿದೆ. ಅನೇಕ ಕೆಲಸಗಳಲ್ಲಿ ಗೊಂದಲ ಮೂಡಬಹುದು. ಇಂದು ಯಾವುದೇ ತರಾತುರಿಯ ನಿರ್ಧಾರ ತೆಗೆದುಕೊಳ್ಳಬೇಡಿ. ಆಪ್ತರಿಗೆ ಸಾಲ ನೀಡುವ ಕೆಲಸಕ್ಕೆ ಮುಂದಾಗಬೇಡಿ.

ತುಲಾ ರಾಶಿ

ತುಲಾ ರಾಶಿಯ ಜನರಲ್ಲಿ ಇಂದು ಸವಾಲುಗಳಿರಲಿವೆ. ನಿಮ್ಮ ದೈನಂದಿನ ಕೆಲಸಗಳಲ್ಲಿ ಅಡೆತಡೆಗಳಿರಲಿದೆ. ಆಪ್ತರಿಂದ ಶುಭ ಸುದ್ದಿ ಕೇಳಿಬರಲಿದೆ. ನಿಮ್ಮ ಹಣಕಾಸು ಸಮಸ್ಯೆಗಳನ್ನು ಜಾಣತನದಿಂದ ನಿರ್ವಹಿಸಿ. ಆರೋಗ್ಯದಲ್ಲಿ ಸಣ್ಣ ಪುಟ್ಟ ಏರಿಳಿತ ಇರಬಹುದು.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯ ಜನರಲ್ಲಿ ಇಂದು ಮಿಶ್ರಫಲ ಇರಲಿದೆ. ನಿಮ್ಮ ಆಪ್ತರ ಭೇಟಿಯಿಂದ ಸಂತಸ ಇರಲಿದೆ. ದೇವಾಲಯ ಭೇಟಿ ಮಾಡಬಹುದು. ಗೃಹಿಣಿರಲ್ಲಿ ಖರ್ಚು ಹೆಚ್ಚಾಗುವ ದಿನ. ಆಧ್ಯಾತ್ಮಿಕ ವಿಚಾರವಾಗಿಯೂ ನಿಮಗೆ ಉತ್ತಮ ದಿನವಾಗಿರಲಿದೆ.

ಧನು ರಾಶಿ

ಧನು ರಾಶಿಯವರಿಗೆ ಅನುಕೂಲಕರ ದಿನ. ನಿಮ್ಮ ಆದಾಯದ ಮೂಲ ಹೆಚ್ಚಾಗಬಹುದು. ಬಹಳ ಸಮಯದಿಂದ ಬಯಸಿದ್ದ ವಸ್ತುವೊಂದನ್ನು ಖರೀದಿಸಬಹುದು. ದಿಢೀರ್ ಧನ ಲಾಭದ ದಿನವಾಗಿರಲಿದೆ. ಆಪ್ತರೊಬ್ಬರಿಗೆ ಹಣಕಾಸಿನ ನೆರವು ನೀಡಬಹುದು.

ಮಕರ ರಾಶಿ

ಮಕರ ರಾಶಿಯವರು ಇಂದು ಎಲ್ಲಾ ಕೆಲಸದಲ್ಲೂ ಜಾಗೃತೆ ವಹಿಸಬೇಕು. ಹಾಗೆ ವ್ಯಾಪಾರದಲ್ಲಿ ಬುದ್ದಿವಂತಿಕೆ ಪ್ರದರ್ಶಿಸಿ. ವಾಹನ ಸಂಬಂಧ ವಿಚಾರವಾಗಿ ಎಚ್ಚರವಿರಲಿ. ನೀವು ಪ್ರಯಾಣ ಮಾಡಬಹುದು. ಮನೆಯಲ್ಲಿ ಹಣಕಾಸು ಕುರಿತಾದ ಒತ್ತಡ ಇರಲಿದೆ.

ಕುಂಭ ರಾಶಿ

ಕುಂಭ ರಾಶಿಯ ಜನರಿಗೆ ಇಂದು ಉತ್ತಮ ದಿನ. ಅನೇಕರಲ್ಲಿ ಇಂದು ಆರ್ಥಿಕ ಸ್ವಾವಲಂಬನೆಯ ದಿನ. ಪ್ರಯಾಣ ಮಾಡುವಿರಿ. ಹಣ ಸಂಬಂಧವಾಗಿ ಕುಟುಂಬಸ್ಥರಿಂದ ನಿಮಗೆ ಒತ್ತಡ ಬರಬಹುದು. ಕೆಲಸದ ವಿಚಾರವಾಗಿ ಬಹಳ ಎಚ್ಚರಿಕೆ ವಹಿಸಿ.

ಮೀನ ರಾಶಿ

ಮೀನ ರಾಶಿಯ ಜನರಿಗೆ ಇಂದು ಪ್ರಯಾಣದ ದಿನ. ನಿಮ್ಮ ಹಣಕಾಸು ವಿಚಾರವಾಗಿ ಸಲಹೆಗಳ ಪಡೆಯುವುದು ಉತ್ತಮ. ನಿರುದ್ಯೋಗಿಗಳು ಉತ್ತಮ ಅವಕಾಶಗಳ ಪಡೆಯಬಹುದು. ದೇವಾಲಯ ಭೇಟಿ ಮಾಡುವಿರಿ.

English summary

August-26-2025-daily-horoscope-prediction-for-12-zodiac-signs-in-kannada

Here is August 26 daily horoscope prediction for 12 zodiac signs read on...
Story first published: Tuesday, August 26, 2025, 5:00 [IST]
X
Desktop Bottom Promotion