Dina Bhavishya: ಆಗಸ್ಟ್ 24ರ ಭಾನುವಾರ ಯಾರಿಗೆಲ್ಲಾ ಅಚ್ಚರಿ ತರಲಿದೆ!

ವೈದಿಕ ಶಾಸ್ತ್ರದ ಪ್ರಕಾರ ಆಗಸ್ಟ್ 24ರಂದು ನಿಮ್ಮ ರಾಶಿಫಲ ನೋಡೋಣ:

ಮೇಷ ರಾಶಿ

ಮೇಷ ರಾಶಿಯ ಜನರಿಗೆ ಬಹಳ ಅನುಕೂಲಕರ ದಿನವಾಗಿರಲಿದೆ. ನಿಮ್ಮ ಹಲವು ಕೆಲಸಗಳನ್ನು ಪೂರ್ಣ ಮಾಡಬೇಕಾಗುತ್ತದೆ. ಆಪ್ತರ ಭೇಟಿಗೆ ನೀವು ಪ್ರಯಾಣ ಮಾಡಹುದು. ಹಣಕಾಸು ಖರ್ಚು ಮಾಡಬೇಕಾಗಿ ಬರಬಹುದು. ಆರೋಗ್ಯ ಕುರಿತಾಗಿ ನಿರ್ಲಕ್ಷ್ಯ ಮಾಡಬೇಡಿ.

ವೃಷಭ ರಾಶಿ

ವೃಷಭ ರಾಶಿಯ ಜನರಿಗೆ ಹಲವು ದಿನಗಳಿಂದ ಕಾಡಿದ್ದ ಸಮಸ್ಯೆ ಪರಿಹಾರವಾಗಬಹುದು. ಆರ್ಥಿಕ ವಿಚಾರವಾಗಿ ನಿಮಗೆ ಮಿಶ್ರ ಫಲದ ದಿನವಾಗಿರಲಿದೆ. ಯಾರಿಗೂ ಹಣ ನೀಡಲು ಮುಂದಾಗಬೇಡಿ. ಅನೇಕರಲ್ಲಿ ಶ್ರಮದಾಯಕ ದಿನವಾಗಬಹುದು.

August-24-2025-daily-horoscope-

ಮಿಥುನ ರಾಶಿ

ಮಿಥುನ ರಾಶಿಯವರು ಈ ದಿನ ಸಮಸ್ಯೆಗಳ ನೋಡಬಹುದು. ಪಂಚೇಂದ್ರಿಯ ಸಂಬಂಧಿ ಸಮಸ್ಯೆಗಳಿದ್ದರೆ ಕಡೆಗಣಿಸಬೇಡಿ. ಇಂದು ಮನೆಗಾಗಿ ನೀವು ಹಲವು ವಸ್ತುಗಳ ಖರೀದಿಸಬಹುದು. ಅರ್ಧಕ್ಕೆ ನಿಲ್ಲಿಸಿರುವ ಕೆಲಸಗಳನ್ನು ಪೂರ್ಣ ಮಾಡಿ.

ಕರ್ಕ ರಾಶಿ

ಕರ್ಕ ರಾಶಿಯವರು ಈ ದಿನ ಪ್ರಯಾಣ ಮಾಡುತ್ತೀರಿ, ಕೆಲಸದ ವಿಚಾರವಾಗಿ ಅಥವಾ ಆಪ್ತರ ಭೇಟಿಗಾಗಿ ಪ್ರಯಾಣ ಮಾಡುತ್ತೀರಿ. ಬಹಳ ದಿನಗಳಿಂದ ಕಾಡಿದ್ದ ಆರ್ಥಿಕ ಸಮಸ್ಯೆ ನಿವಾರಣೆ ಸಂಭವವಿದೆ. ದೂರ ಪ್ರಯಾಣಗಳಲ್ಲಿ ನಿರೀಕ್ಷಿತ ಫಲ ಸಿಗದೆ ಇರಬಹುದು.

ಸಿಂಹ ರಾಶಿ

ಸಿಂಹ ರಾಶಿಯ ಜನರಲ್ಲಿ ಈ ದಿನ ಉತ್ತಮವಾಗಿರಲಿದೆ, ನೀವು ವಿಶ್ರಾಂತಿ ಪಡೆಯುವ ದಿನವಿದು. ನಿಮ್ಮ ಅನೇಕ ಕೆಲಸಗಳು ನೀವು ಅಂದುಕೊಂಡ ರೀತಿ ನಡೆಯಲಿದೆ. ಆಹಾರ ಸಂಬಂಧವಾಗಿ ಖರ್ಚು ಇರಬಹುದು. ವ್ಯಾಪಾರಿಗಳಿಗೆ ಸಾಮಾನ್ಯ ದಿನ.

ಕನ್ಯಾ ರಾಶಿ

ಕನ್ಯಾ ರಾಶಿಯವರು ಇಂದು ದೊಡ್ಡ ಮಟ್ಟದ ಸವಾಲುಗಳ ಎದುರಿಸಬಹುದು. ಸಾಲ ಮರಳಿ ನೀಡುವಂತೆ ನಿಮಗೆ ಒತ್ತಡ ಬರಬಹುದು. ವಾಹನ ಸಂಬಂಧಿ ಖರ್ಚು ಕೂಡ ಇರಬಹುದು. ಕುಟುಂಬಸ್ಥರೊಂದಿಗೆ ನೀವು ಹೆಚ್ಚು ಸಮಯ ಕಳೆಯುತ್ತೀರಿ.

ತುಲಾ ರಾಶಿ

ತುಲಾ ರಾಶಿಯ ಜನರಿಗೆ ಸಮಸ್ಯೆಗಳ ದಿನ. ಅದ್ರಲ್ಲೂ ಗೃಹಿಣಿಯರ ಆರೋಗ್ಯ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು. ನಿಮ್ಮಲ್ಲಿ ಹಣಕಾಸಿನ ವಿಚಾರವಾಗಿ ಸಮಸ್ಯೆ ಇದ್ದರೂ ದಿನದ ಅಂತ್ಯದಲ್ಲಿ ನಿವಾರಣೆ ಸಂಭವವಿದೆ. ಸ್ವಂತ ಉದ್ಯೋಗ ಮಾಡುವವರಿಗೆ ಇಂದು ಉತ್ತಮ ದಿನವಾಗಲಿದೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯ ಜನರಿಗೆ ಇಂದು ಮಿಶ್ರಫಲವಾಗಿರಲಿದೆ. ನಿಮ್ಮ ದೈನಂದಿನ ಕೆಲಸ ಕಾರ್ಯಗಳು ನಿಧಾನತಿಯಲ್ಲಿ ಸಾಗಬಹುದು. ಅಪಾಯಕಾರಿ ಸ್ಥಳದಲ್ಲಿ ಕೆಲಸ ಮಾಡುವವರು ಎಚ್ಚರಿಕೆಯಿಂದ ಇರಬೇಕಿದೆ. ಕುಟುಂಬದಲ್ಲಿ ಸಣ್ಣ ಪುಟ್ಟ ಮನಸ್ತಾಪಗಳು ಎದುರಾಗಬಹುದು.

ಧನು ರಾಶಿ

ಧನು ರಾಶಿಯವರಲ್ಲಿ ಇಂದು ನಿತ್ಯದ ಕೆಲಸಕ್ಕೆ ಅಡ್ಡಿ ಇರಬಹುದು. ಜ್ವರ, ಶೀತ ಸಂಬಂಧಿತ ಯಾವುದಾದರು ಸಮಸ್ಯೆಗೆ ತುತ್ತಾಗಬಹುದು. ವಾಹನ ಸಂಬಂಧ ಖರ್ಚು ಉಂಟಾಗಬಹುದು. ಪ್ರಯಾಣದಲ್ಲಿ ನೀವು ತೊಡಗಬಹುದು. ದಾಂಪತ್ಯದಲ್ಲಿ ಮುನಿಸು ಬರಬಹುದು. ದುರ್ಜನರ ಸಂಘದಿಂದ ದೂರ ಉಳಿಯುವುದು ಬಹಳ ಉತ್ತಮ.

ಮಕರ ರಾಶಿ

ನಿಮಗಿಂದು ಮಿಶ್ರ ಫಲದ ದಿನ. ನಿಮ್ಮ ಹಣಕಾಸಿನ ವಿಚಾರವಾಗಿ ಆಪ್ತರೊಬ್ಬರಿಂದ ಸಲಹೆ ಪಡೆಯಬಹುದು. ಆಸ್ಪತ್ರೆ ಸಂಬಂಧ ಓಡಾಟ ಮಾಡಬಹುದು. ಆಸ್ತಿ, ಮನೆ ವಿಚಾರದಲ್ಲಿ ಚಿಂತೆಯೊಂದು ಕಾಡಬಹುದು. ಗೃಹಿಣಿಯರು ಶ್ರಮದಾಯಕ ಕೆಲಸದಲ್ಲಿ ಭಾಗಿಯಾಗಬಹುದು.

ಕುಂಭ ರಾಶಿ

ಕುಂಭ ರಾಶಿಯ ಜನರಲ್ಲಿ ಇಂದು ಉತ್ತಮ ಫಲಿತಾಂಶ ದಿನ. ನಿಮ್ಮ ಅನೇಕ ಕೆಲಸಗಳು ಯಶಸ್ಸಿಗೆ ಕೊಂಡೊಯ್ಯಬಹುದು. ನಿಮ್ಮ ಬಹಳ ದಿನದ ಕೆಲಸ ಅಪೂರ್ಣ ಕೆಲಸ ಪೂರ್ಣ ಮಾಡುವಿರಿ. ಗೃಹಿಣಿಯರಲ್ಲಿ ಇಂದು ಖರ್ಚು ಹೆಚ್ಚಾಗುವ ದಿನ. ವ್ಯಾಪಾರಿಗಳಿಗೆ ಸಾಮಾನ್ಯ ದಿನವಾಗಿರಲಿದೆ.

ಮೀನ ರಾಶಿ

ಮೀನ ರಾಶಿಯ ಜನರಿಗೆ ಇಂದು ಮಿಶ್ರ ಫಲದ ದಿನ. ದಣಿವು ಹೆಚ್ಚಾಗಬಹುದು. ವಾಹನ ಕುರಿತಾದ ನಿಮ್ಮ ನಿರ್ಧಾರ ಬದಲಾಯಿಸಬಹುದು. ಶ್ರಮದಾಯಕ ಕೆಲಸಗಳು ಉತ್ತಮ ಫಲಿತಾಂಶ ನೀಡಲಿವೆ. ಆರೋಗ್ಯದ ಕಡೆ ಗಮನವಿಡಿ.

English summary

August-24-2025-daily-horoscope-prediction-for-12-zodiac-signs-in-kannada

Here is August 24 daily horoscope prediction for 12 zodiac signs read on...
Story first published: Sunday, August 24, 2025, 6:26 [IST]
X
Desktop Bottom Promotion