Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Dina Bhavishya: ಆಗಸ್ಟ್ 23ರ ಶನಿ ಅಮಾವಾಸ್ಯೆಯ ದಿನ ಯಾರಿಗೆ ಕೆಡುಕು..!
ವೈದಿಕ ಶಾಸ್ತ್ರದ ಪ್ರಕಾರ ಆಗಸ್ಟ್ 23ರಂದು ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯ ಜನರಿಗೆ ಇಂದು ಸಮಸ್ಯೆಗಳಿಂದ ತುಂಬಿದ ದಿನವಾಗಬಹುದು. ನಿಮ್ಮ ನಿತ್ಯದ ಕೆಲಸಗಳಲ್ಲಿ ಅಡೆತಡೆ ಇರಬಹುದು. ದಿನದ ಆರಂಭದಲ್ಲಿ ನಿಮ್ಮ ಗಮನ ಕೆಲಸದಿಂದ ಬೇರೆ ಕಡೆಗೆ ಸೆಳೆಯಬಹುದು. ಮನೆಯಲ್ಲಿ ಅಶಾಂತಿ ಇರಲಿದೆ.
ವೃಷಭ ರಾಶಿ
ವೃಷಭ ರಾಶಿಯ ಜನರಿಗೆ ಇಂದು ಬಹಳ ಅನುಕೂಲಕರ ದಿನ. ಹಣಕಾಸು ವಿಚಾರವಾಗಿ ಉತ್ತಮ ದಿನವಾಗಿರಲಿದೆ. ವಿದ್ಯಾರ್ಥಿಕಗಳಿಗೆ ಈ ದಿನ ಸೂಕ್ತ ಫಲಿತಾಂಶಗಳ ತರಬಹುದು. ವ್ಯಾಪಾರಿಗಳು ಲಾಭಗಳಿಸಬಹುದು.

ಮಿಥುನ ರಾಶಿ
ಮಿಥುನ ರಾಶಿಯ ಜನರಿಗೆ ಈ ದಿನ ಮಿಶ್ರ ಫಲವಿದೆ. ನಿಮ್ಮ ಪ್ರಯಾಣವನ್ನು ಮುಂದೂಡುವುದು ಉತ್ತಮ. ಹಣಕಾಸು ವಿಚಾರವಾಗಿ ಬಹಳ ಸಮಸ್ಯೆ ಎದುರಿಸಬಹುದು. ಸಹೋದರರೊಂದಿಗೆ ಅಥವಾ ಹಿರಿಯರೊಂದಿಗೆ ಕಲಹ ಉಂಟಾಗಬಹುದು.
ಕರ್ಕ ರಾಶಿ
ಕರ್ಕ ರಾಶಿಯ ಜನರಿಗೆ ಇಂದು ಸಮಸ್ಯೆಗಳು ಬರಬಹುದು. ನಿಮ್ಮ ಕೌಟುಂಬಿಕ ವಿಚಾರವಾಗಿ ಇಂದು ಉತ್ತಮ ದಿನವಲ್ಲ. ಗೃಹಿಣಿಯರಲ್ಲಿ ಹಣಕಾಸು ಸಂಬಂಧವಾಗಿ ಕಷ್ಟದ ದಿನ. ದಿನದ ಅಂತ್ಯದಲ್ಲಿ ಬಹಳ ಖರ್ಚು ಮಾಡಬೇಕಾಗಿ ಬರಬಹುದು.
ಸಿಂಹ ರಾಶಿ
ಸಿಂಹ ರಾಶಿಯ ಜನರಿಗೆ ಇಂದು ಮಿಶ್ರ ಫಲದ ದಿನ. ಇಂದು ನೀವು ಸಾಲ ಮಾಡುವ ಕಾರ್ಯಕ್ಕೆ ಮುಂದಾಗಬೇಡಿ. ಹಾಗೆ ಯಾವುದಾದರು ಹೊಸ ವಸ್ತು ಖರೀದಿಗೂ ಇಂದು ಉತ್ತಮ ದಿನವಲ್ಲ. ನಿಮ್ಮ ಆರೋಗ್ಯದ ಕಡೆಗೂ ಗಮವಿಡಿ. ಆಹಾರ ವಿಚಾರವಾಗಿ ಖರ್ಚು ಮಾಡಬೇಕಾಗಿ ಬರಬಹುದು.
ಕನ್ಯಾ ರಾಶಿ
ಕನ್ಯಾ ರಾಶಿಯ ಜನರಿಗೆ ಇಂದು ಮಿಶ್ರ ಫಲ ಇರಲಿದೆ. ನಿಮ್ಮ ಹಲವು ಕಾರ್ಯಗಳಲ್ಲಿ ಇಂದು ಅಡಚಣೆ ನೋಡಬಹುದು. ನಿಮ್ಮ ಕೌಟುಂಬಿಕ ಸಮಸ್ಯೆಗಳು ಮತ್ತಷ್ಟು ಹೆಚ್ಚಾಗಹುದು. ರಾತ್ರಿ ಸಮಯದಲ್ಲಿ ವಾಹನ ಚಾಲನೆಯನ್ನು ತಪ್ಪಿಸುವುದು ಬಹಳ ಉತ್ತಮ.
ತುಲಾ ರಾಶಿ
ತುಲಾ ರಾಶಿಯ ಜನರಲ್ಲಿ ಈ ದಿನವು ಸಮಸ್ಯಾತ್ಮಕವಾಗಬಹುದು. ನಿಮ್ಮ ಕೆಲಸದ ಸ್ಥಳದಲ್ಲಿ ಅಪಾಯ ಎದುರಾಗಬಹುದು. ಆಪ್ತರೊಂದಿಗೆ ಮನಸ್ತಾಪ ಮೂಡುವ ಘಟನೆ ನಡೆಯಬಹುದು. ವ್ಯಾಪಾರಿಗಳಿಗೆ ನಷ್ಟದ ದಿನ ಎನ್ನಬಹುದು. ಆರೋಗ್ಯದಲ್ಲಿ ಏರುಪೇರು ಸಂಭವ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಜನರು ಈ ದಿನ ಓಡಾಟದಲ್ಲಿ ಕಳೆಯಬಹುದು. ಗೃಹಿಣಿಯರು ಹಣಕಾಸು, ಕೆಲಸದ ವಿಚಾರದಲ್ಲಿ ಸಮಸ್ಯೆ ಬರಬಹುದು. ನಿರುದ್ಯೋಗಿಗಳಿಗೆ ಮತ್ತಷ್ಟು ಸಮಸ್ಯೆ ಬರಬಹುದು. ಆಪ್ತರಿಗೆ ನೀವು ಹಣ ನೀಡುವುದು ಬಾಕಿ ಉಳಿಸಿಕೊಂಡಿದ್ದರು ಈ ದಿನ ನೀಡುವುದು ಉತ್ತಮ.
ಮಕರ ರಾಶಿ
ಮಕರ ರಾಶಿಯವರಲ್ಲಿ ಉತ್ತಮ ದಿನವಾಗಿರಲಿದೆ. ಹಲವು ದಿನದಿಂದ ನೀವು ಅನುಭವಿಸಿದ್ದ ಸಮಸ್ಯೆಯೊಂದು ಬಗೆಹರಿಯಲಿದೆ. ಹಣಕಾಸು ವಿಚಾರದಲ್ಲಿ ಕಷ್ಟದ ದಿನ. ಪ್ರೀತಿ, ಪ್ರೇಮ ದಾಂಪತ್ಯದ ವಿಚಾರವಾಗಿಯೂ ಇಂದು ಕಠಿಣ ದಿನ. ಉದ್ಯೋಗದ ವಿಚಾರದಲ್ಲಿ ಸವಾಲಿನ ದಿನ.
ಧನು ರಾಶಿ
ಧನು ರಾಶಿಯವರು ಬಹಳ ಕಾಲ ಮನೆಯಿಂದ ಹೊರಗೆ ಕಳೆಯುವುದನ್ನು ತಪ್ಪಿಸಿ. ನಿಮ್ಮ ಬಹಳ ದಿನದ ಅನಾರೋಗ್ಯ ಸಮಸ್ಯೆಗೆ ಪರಿಹಾರ ಪಡೆಯುವುದು ಉತ್ತಮ. ಕುಟುಂಬಸ್ಥರಿಂದ ನಿಮಗೆ ಹಣಕಾಸಿನ ಕುರಿತಾದ ಒತ್ತಡ ಇರಲಿದೆ. ಪ್ರಯಾಣಗಳಲ್ಲಿ ತೊಡಗುವುದು ಉತ್ತಮವಲ್ಲ.
ಕುಂಭ ರಾಶಿ
ಕುಂಭ ರಾಶಿಯವರಿಗೆ ಸಮಸ್ಯೆಗಳ ದಿನ. ನಿಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ಹಣಕಾಸಿನ ಸಮಸ್ಯೆ ಅಡ್ಡಿಯಾಗಬಹುದು. ಯಾರಿಗೂ ಸಾಲ ನೀಡುವುದು, ಅಥವಾ ಹಣಕಾಸು ವ್ಯವಹಾರ ಮಾಡಲು ಮುಂದಾಗಬೇಡಿ.
ಮೀನ ರಾಶಿ
ಮೀನ ರಾಶಿಯವರಿಗೆ ಮಿಶ್ರ ಫಲ. ನಿಮ್ಮ ಆಪ್ತರೊಬ್ಬರಿಂದ ದೊಡ್ಡ ಸಮಸ್ಯೆಗೆ ನೀವು ಸಿಲುಕಬಹುದು. ಕೆಲಸದ ಕಾರಣಕ್ಕೆ ನೀವು ಪ್ರಯಾಣ ಮಾಡಬೇಕಾಗಿ ಬರಬಹುದು. ದೇವಾಲಯ ಭೇಟಿ ಮಾಡಬಹುದು. ಮನೆಯ ಹಿರಿಯರ ಆರೋಗ್ಯದ ಕುರಿತಾಗಿ ಎಚ್ಚರಿಕೆ ವಹಿಸಿ.



Click it and Unblock the Notifications










