Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Dina Bhavishya: ಆಗಸ್ಟ್ 22ರ ಶುಕ್ರವಾರ ಯಾರಿಗೆ ಶುಭಕರ?
ವೈದಿಕ ಶಾಸ್ತ್ರದ ಪ್ರಕಾರ ಆಗಸ್ಟ್ 22ರಂದು ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯ ಜನರಿಗೆ ಈ ದಿನ ಬಹಳ ಉತ್ತಮವಾಗಿರಲಿದೆ. ನಿಮ್ಮ ಅನೇಕ ಕೆಲಸಗಳಲ್ಲಿ ಇಂದು ಲಾಭದಾಯಕ ಆಪ್ತರೊಬ್ಬರಿಂದ ನಿಮ್ಮ ಹಣಕಾಸು ವಿಚಾರವಾಗಿ ಸಹಕಾರ ಇರಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ ಹುಡುಕಿ ಬರಲಿದೆ.
ವೃಷಭ ರಾಶಿ
ವೃಷಭ ರಾಶಿಯ ಜನರಿಗೆ ಇಂದು ಸಮಸ್ಯೆಗಳ ದಿನವಾಗಬಹುದು. ನಿಮ್ಮ ಹಣಕಾಸು ವಿಚಾರದಲ್ಲಿ ಬಹಳ ಕಷ್ಟದ ದಿನ. ನೀವು ಅಂದುಕೊಂಡಂತೆ ಕೆಲಸಗಳಲ್ಲಿ ಯಶಸ್ಸು ಇರುವುದಿಲ್ಲ. ವಿಪರೀತ ಮೈ ಕೈ ನೋವು ಕಾಡಬಹುದು. ಪ್ರೀತಿಯ ವಿಚಾರದಲ್ಲಿ ಇಂದು ಉತ್ತಮ ದಿನವಾಗಿರುವುದಿಲ್ಲ.

ಮಿಥುನ ರಾಶಿ
ಮಿಥುನ ರಾಶಿಯ ಜನರಲ್ಲಿ ಈ ದಿನ ಮಿಶ್ರಫಲದ ದಿನ. ನಿಮ್ಮ ಮನೆಯಲ್ಲಿ ಹಣಕಾಸು ಸಂಬಂಧ ಒತ್ತಡ ಇರಲಿದೆ. ದಿನದ ಆರಂಭದಲ್ಲಿ ದೊಡ್ಡ ಸಮಸ್ಯೆಯೊಂದು ಎದುರಾಗಬಹುದು. ಖರ್ಚು ಕೂಡ ಹೆಚ್ಚಾಗಿರಲಿದೆ. ದೇವಾಲಯ ಭೇಟಿಯ ಸಾಧ್ಯತೆ ಇದೆ.
ಕರ್ಕ ರಾಶಿ
ಕರ್ಕ ರಾಶಿಯ ಜನರಲ್ಲಿ ಇಂದು ಕೆಲಸದಲ್ಲಿ ಅಡ್ಡಿಯಾಗಬಹುದು. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹಣ ಖರ್ಚು ಮಾಡಬೇಕಾಗಿ ಬರಬಹುದು. ಆಪ್ತರೊಬ್ಬರ ನೆರವಿನಿಂದ ನಿಮ್ಮ ಉದ್ಯೋಗದಲ್ಲಿ ಉತ್ತಮ ಸಫಲತೆ ಸಿಗಲಿದೆ.
ಸಿಂಹ ರಾಶಿ
ಸಿಂಹ ರಾಶಿಯ ಜನರಿಗೆ ಈ ದಿನ ಮಿಶ್ರ ಫಲ ತರಲಿದೆ. ನಿತ್ಯದ ಕೆಲಸಗಳಲ್ಲಿ ಶ್ರಮ ಹಾಕಬೇಕಿದೆ. ಮನೆಯ ಸದಸ್ಯರೊಬ್ಬರ ಆರೋಗ್ಯ ವಿಚಾರವಾಗಿ ಆತಂಕ ಇರಬಹುದು. ಸಾಲ ನೀಡಲು ಹೋಗಬೇಡಿ. ಆಪ್ತರೊಬ್ಬರಿಂದ ನೀವು ಹಣಕಾಸಿನ ನೆರವು ಕೇಳಬಹುದು.
ಕನ್ಯಾ ರಾಶಿ
ಕನ್ಯಾ ರಾಶಿಯ ಮಂದಿಗೆ ಇಂದು ಬಹಳ ಪ್ರಯಾಣ ಮಾಡುವ ದಿನ. ನೀವು ಬಯಸಿದಂತೆ ನಿಮ್ಮ ಪ್ರಯಾಣದಲ್ಲಿ ಯಶಸ್ಸು ಸಿಗದೆ ಇರಬಹುದು. ಸಂಬಂಧಿಕರ ಭೇಟಿಯಿಂದಾಗಿ ನಿಮಗೆ ಚಿಂತೆಯೊಂದು ಕಾಡಬಹುದು. ಆರೋಗ್ಯ ವಿಚಾರದಲ್ಲಿ ಏರುಪೇರು ಸಂಭವ.
ತುಲಾ ರಾಶಿ
ತುಲಾ ರಾಶಿಯ ಜನರಿಗೆ ಇಂದು ಅನುಕೂಲಕರ ದಿನ. ನೀವು ಬಯಸಿದ ಕೆಲಸವೊಂದರಲ್ಲಿ ನಿಮಗೆ ಯಶಸ್ಸು ಸಿಗಲಿದೆ. ಪೋಷಕರ ಆರೋಗ್ಯದ ಕಡೆ ಗಮನವಿಡಿ. ಮಕ್ಕಳ ಕುರಿತಾದ ಚಿಂತೆ ಹೆಚ್ಚಾಗಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಜನರಲ್ಲಿ ಇಂದು ಮಿಶ್ರ ಫಲ. ಆದಾಯಕ್ಕಿಂತ ಖರ್ಚು ಹೆಚ್ಚಾಗಬಹುದು. ಬಹಳಷ್ಟು ದಿನದಿಂದ ಅರ್ಧಕ್ಕೆ ನಿಲ್ಲಿಸಿದ್ದ ಕೆಲಸವನ್ನು ಪೂರ್ಣ ಮಾಡಬಹುದು. ಪ್ರಯಾಣಗಳಿಗೆ ನೀವು ತಯಾರಿ ಮಾಡಿಕೊಳ್ಳಬಹುದು.
ಧನು ರಾಶಿ
ಧನು ರಾಶಿಯ ಜನರಲ್ಲಿ ಇಂದು ಶ್ರಮದಾಯಕ ದಿನ. ಆಧ್ಯಾತ್ಮಿಕ ವಿಚಾರವಾಗಿ ಇಂದು ಉತ್ತಮ ದಿನವಾಗಿರಲಿದೆ. ನಿರುದ್ಯೋಗಿಗಳಿಗೆ ಉತ್ತಮ ಅವಕಾಶ ಪಡೆಯುವ ದಿನವಾಗಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ದಿನವಾಗಲಿದೆ. ಆಪ್ತರೊಬ್ಬರಿಂದ ನೀವು ಹಣಕಾಸಿನ ನೆರವು ಕೇಳಬಹುದು.
ಮಕರ ರಾಶಿ
ಮಕರ ರಾಶಿಯವರು ಅನಾರೋಗ್ಯ ವಿಚಾರವಾಗಿ ಖರ್ಚು ಹೆಚ್ಚಾಗಬಹುದು. ಆಹಾರ ಸಂಬಂಧಪಟ್ಟ ಅನಾರೋಗ್ಯ ಕಾಡಬಹುದು. ವಾಹನ ವಿಚಾರವಾಗಿ ಎಚ್ಚರಿಕೆ ವಹಿಸಿ. ಯಾರಿಗೂ ಈ ದಿನ ಸಾಲ ನೀಡುವುದು ಅಥವಾ ಪಡೆಯುವುದು ಮಾಡಬೇಡಿ.
ಕುಂಭ ರಾಶಿ
ನಿಮ್ಮ ಅನೇಕ ಕೆಲಸಗಳು ಅಡಚಣೆಯಿಂದ ಕೂಡಿರಬಹುದು. ಹಣಕಾಸಿನ ಸಮಸ್ಯೆಯಿಂದಾಗಿ ನಿಮ್ಮ ಕೆಲಸಗಳು ಮುಗಿಯದೆ ಇರಬಹುದು. ಓಡಾಟಗಳ ಮಾಡುವಿರಿ. ಕೆಲಸದ ಸ್ಥಳದಲ್ಲಿನ ಒತ್ತಡ ಹೆಚ್ಚಾಗಬಹುದು.
ಮೀನ ರಾಶಿ
ಮೀನ ರಾಶಿಯ ಜನರಲ್ಲಿ ಸಮಸ್ಯೆಗಳು ಬರಬಹುದು. ವ್ಯಾಪಾರಿಗಳಿಗೆ ಇಂದು ನಷ್ಟದ ದಿನ. ಗೃಹಿಣಿಯರಲ್ಲಿ ಈ ದಿನವು ಖರ್ಚುಗಳಿಂದ ತುಂಬಿರಬಹುದು. ನಿಮ್ಮ ಪ್ರಯಾಣಗಳು ಸುಖಕರವಾದರು ಅದರಲ್ಲಿನ ಫಲಿತಾಂಶ ನಿಮಗೆ ತೃಪ್ತಿ ತರದೆ ಇರಬಹುದು.



Click it and Unblock the Notifications