Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Dina Bhavishya: ಆಗಸ್ಟ್ 21ರ ಗುರುವಾರ ಯಾರಿಗೆಲ್ಲಾ ಶುಭದಿನ?
ವೈದಿಕ ಶಾಸ್ತ್ರದ ಪ್ರಕಾರ ಆಗಸ್ಟ್ 21ರಂದು ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯ ಜನರಿಗೆ ಈ ದಿನ ಬಹಳ ಅನುಕೂಲಕರ ದಿನ. ನಿಮ್ಮ ಹಲವು ಕೆಲಸದಲ್ಲಿ ಧನಾತ್ಮಕ ಬದಲಾವಣೆ ನೋಡಬಹುದು. ಹಲವು ದಿನಗಳ ಬಳಿಕ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ನಿಮ್ಮ ಅನಾರೋಗ್ಯ ಸಂಬಂಧವಾಗಿ ನಿರ್ಲಕ್ಷ್ಯ ಮಾಡಬೇಡಿ.
ವೃಷಭ ರಾಶಿ
ವೃಷಭ ರಾಶಿಯ ಜನರಿಗೆ ಈ ದಿನವು ಮಿಶ್ರ ಫಲದಿಂದ ಕೂಡಿರಲಿದೆ. ನಿಮ್ಮ ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಇಡಿ. ಯಾರೊಂದಿಗೂ ವ್ಯವಹಾರ ಸಂಬಂಧವಾಗಿ ಪ್ರಯಾಣ ಮಾಡುವುದನ್ನು ತಪ್ಪಿಸಿ. ಆಪ್ತರಿಂದ ಹಣಕಾಸು ಸಂಬಂಧವಾಗಿ ತೃಪ್ತಿ ಇರಲಿದೆ. ವ್ಯಾಪಾರದಲ್ಲಿ ಮಿಶ್ರ ಫಲ.

ಮಿಥುನ ರಾಶಿ
ಇಂದು ನಿಮಗೆ ದಿಢೀರ್ ಧನಲಾಭ ಇರಬಹುದು. ಸಂಜೆಯ ಸಮಯದಲ್ಲಿ ಖರ್ಚು ಕೂಡ ಇರಲಿದೆ. ನಿಮ್ಮ ಮಕ್ಕಳ ಭವಿಷ್ಯ ಕುರಿತಾದ ಚಿಂತೆ ಇರಬಹುದು. ವಾಹನ ಸವಾರರು ಬಹಳ ಎಚ್ಚರಿಕೆಯಿಂದ ಇರುವುದು ಉತ್ತಮ.
ಕರ್ಕ ರಾಶಿ
ಕರ್ಕ ರಾಶಿಯ ಜನರಿಗೆ ಇಂದು ಬಹಳ ಉತ್ತಮ ದಿನ. ನಿಮ್ಮ ಬ್ಯಾಂಕಿಂಗ್ ಹಾಗೂ ಸಾಲ ಕುರಿತಾದ ವಿಚಾರದಲ್ಲಿ ಧನಾತ್ಮಕ ವಿಚಾರವಾಗಿರಲಿದೆ. ಸರ್ಕಾರಿ ದಾಖಲೆಗಳು, ಕಚೇರಿ ವಿಚಾರದಲ್ಲೂ ಮಿಶ್ರಫಲ. ಗೃಹಿಣಿಯರು ಶ್ರಮದಾಯಕ ಕೆಲಸದಲ್ಲಿ ಭಾಗಿಯಾಗುತ್ತಾರೆ.
ಸಿಂಹ ರಾಶಿ
ಸಿಂಹ ರಾಶಿಯ ಜನರಿಗೆ ಅನುಕೂಲಕರ ದಿನ. ನಿಮ್ಮ ಆರ್ಥಿಕ ಸ್ಥಿತಿ ಸುಸ್ಥಿತಿಯಲ್ಲಿ ಇರಲಿದೆ. ಆತ್ಮವಿಶ್ವಾಸ ಹೆಚ್ಚಾಗುವಂತಹ ಕೆಲಸದಲ್ಲಿ ಭಾಗಿಯಾಗುತ್ತೀರಿ. ಶುಭ ಕಾರ್ಯಗಳಲ್ಲಿ ನೀವು ಭಾಗಿಯಾಗಬಹುದು.
ಕನ್ಯಾ ರಾಶಿ
ಕನ್ಯಾ ರಾಶಿಯ ಜನರಿಗೆ ಇಂದು ಸಮಸ್ಯೆಗಳು ಎದುರಾಗಬಹುದು. ಉದ್ಯೋಗ ಸಂಬಂಧವಾಗಿ ನಿಮಗೆ ಕಠಿಣ ದಿನ. ಹಾಗೆ ಹಣಕಾಸಿನ ವಿಚಾರವಾಗಿಯೂ ನಿಮಗೆ ಒತ್ತಡದ ದಿನ. ವಿಪರೀತ ಓಡಾಟದಲ್ಲಿ ತೊಡಗಬಹುದು. ದಾಂಪತ್ಯದಲ್ಲಿ ನಿಮಗೆ ಮನಸ್ತಾಪಗಳ ಎದುರಿಸಬೇಕಾಗಬಹುದು.
ತುಲಾ ರಾಶಿ
ತುಲಾ ರಾಶಿಯವರು ಓಡಾಟದಲ್ಲಿ ತೊಡಗಬಹುದು. ನಿಮ್ಮದಲ್ಲದ ಕೆಲಸದಲ್ಲೂ ನೀವು ಭಾಗಿಯಾಗಬಹುದು. ಯಾರಿಗಾದರು ಹಣಕಾಸಿನ ನೆರವು ನೀಡುವ ಮುನ್ನ ಎಚ್ಚರ ವಹಿಸಿ. ಕೌಟುಂಬಿಕ ಜೀವನದಲ್ಲಿ ಒತ್ತಡ ಹೆಚ್ಚಾಗಲಿದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಈ ದಿನ ಮಿಶ್ರ ಫಲ ನೋಡಬಹುದು. ಆರ್ಥಿಕ ಸಮಸ್ಯೆಗಳು ನಿವಾರಣೆಯಾಗುವ ದಿನ. ದೊಡ್ಡ ಕೆಲಸಗಳಲ್ಲಿ ನಿಮ್ಮ ಶುಭವಾಗುತ್ತಿದೆ. ಆರೋಗ್ಯದಲ್ಲಿ ಏರುಪೇರಾಗುವ ಸಂಭವವಿದೆ.
ಧನು ರಾಶಿ
ಧನು ರಾಶಿಯವರಿಗೆ ಇಂದು ಬಹಳ ಉತ್ತಮ ಫಲಿತಾಂಶ ಬರುವ ದಿನ. ನಿಮ್ಮ ಹಲವು ಕೆಲಸಗಳು ಧನಾತ್ಮಕ ರೀತಿಯಲ್ಲಿ ಮುಗಿಯಲಿವೆ. ಪ್ರೀತಿ, ದಾಂಪತ್ಯ ವಿಚಾರವಾಗಿ ಬಹಳ ಉತ್ತಮ ಸಮಯ ಆಗಿರಲಿದೆ. ಮನೆಯಲ್ಲಿ ಶಾಂತಿ ಇರಲಿದೆ.
ಮಕರ ರಾಶಿ
ಮಕರ ರಾಶಿಯ ಜನರಿಗೆ ಇಂದು ಬಹಳ ಶ್ರಮದಾಯಕ ದಿನ. ನಿಮ್ಮ ಕೆಲಸಗಳು ನಿಮಗೆ ಬಹಳ ಸಮಸ್ಯೆ ತರಬಹುದು. ಅದ್ರಲ್ಲೂ ಹಣಕಾಸಿನ ವಿಚಾರವಾಗಿ ನೀವು ದೊಡ್ಡ ಸಮಸ್ಯೆ ಎದುರಿಸುತ್ತೀರಿ. ಅಮೂಲ್ಯ ವಸ್ತುಗಳ ಕುರಿತು ಎಚ್ಚರಿಕೆ ವಹಿಸಿ.
ಕುಂಭ ರಾಶಿ
ಕುಂಭ ರಾಶಿಯ ಜನರಿಗೆ ಉತ್ತಮ ದಿನವಾಗಲಿದೆ. ನಿಮ್ಮ ಕೆಲಸದ ಒತ್ತಡವು ಕಡಿಮೆಯಾಗಲಿದೆ. ಗೃಹಿಣಿಯರು ಖರ್ಚು ಮಾಡಬೇಕಾಗಲಿದೆ. ಕೌಟುಂಬಿಕ ಸಮಸ್ಯೆಗಳು ದೊಡ್ಡದಾಗಲು ಆಸ್ಪದ ನೀಡಬೇಡಿ. ಮಕ್ಕಳ ಆರೋಗ್ಯದ ಕುರಿತು ಕಾಳಜಿ ವಹಿಸಬೇಕಿದೆ.
ಮೀನ ರಾಶಿ
ಮೀನ ರಾಶಿಯ ಜನರಿಗೆ ಇಂದು ಮಿಶ್ರ ಫಲದ ದಿನ ಎನ್ನಬಹುದು. ನಿಮ್ಮ ಹಲವು ಅನಿಸಿಕೆಗಳಿಗೆ ಮನ್ನಣೆ ಸಿಗುವ ದಿನ. ಆರ್ಥಿಕ ಸಮಸ್ಯೆ ವಿಚಾರವಾಗಿ ನೀವು ಇತರರೊಂದಿಗೆ ಹಂಚಿಕೊಳ್ಳುವುದು ಬಹಳ ಉತ್ತಮ. ಮನೆಯ ಹಿರಿಯ ಸದಸ್ಯರ ಆರೋಗ್ಯದ ಕುರಿತು ಎಚ್ಚರಿಕೆ ಇರಲಿ.



Click it and Unblock the Notifications