Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
August Monthly Horoscope 2025: ಆಗಸ್ಟ್‌ನಲ್ಲಿ ಈ ರಾಶಿಯವರಿಗೆ ಅಶುಭ! ಸಮಸ್ಯೆ ಹೆಚ್ಚಳ
ಆಗಸ್ಟ್ ತಿಂಗಳಲ್ಲಿನಲ್ಲಿ ಹಲವು ಗ್ರಹಗಳ ಸಂಚಾರ, ಹಲವು ಗ್ರಹಗಳ ಸಂಯೋಗಳು ಉಂಟಾಗುವುದು ನೋಡಬಹುದು. ಆಗಸ್ಟ್ 16ರ ವರೆಗೆ ಸೂರ್ಯನು ಕರ್ಕ ರಾಶಿಯಲ್ಲಿರುತ್ತಾನೆ, ನಂತರ ಆಗಸ್ಟ್ 17 ರಂದು ಸಿಂಹ ರಾಶಿಗೆ ಚಲಿಸಲಿದ್ದಾನೆ. ಹಾಗೆ ಕನ್ಯಾ ರಾಶಿಯಲ್ಲಿನ ಮಂಗಳನೊಂದಿಗೆ ಬುಧನ ಸಂಯೋಗವಾಗುತ್ತದೆ. ಆಗಸ್ಟ್ 30ರಲ್ಲಿ ಬುಧ ಸಿಂಹ ರಾಶಿಗೆ ಚಲಿಸುತ್ತಾನೆ.
ಹಾಗೆ ಇದೇ ಆಗಸ್ಟ್‌ನಲ್ಲಿ ಶುಕ್ರನು ಮಿಥುನ ರಾಶಿಗೆ ಚಲಿಸುತ್ತಾನೆ. ಹೀಗೆ ಹಲವು ಗ್ರಹಗಳ ಸ್ಥಾನದಲ್ಲಿನ ಬದಲಾವಣೆಯು ಆಗಸ್ಟ್ ತಿಂಗಳಿನಲ್ಲಿ ಹಲವು ರೀತಿಯಾದ ಯೋಗಗಳಿಗೆ, ಶುಭಗಳಿಗೆ, ಅಶುಭಗಳಿಗೂ ಸಹ ಕಾರಣವಾಗುತ್ತಿದೆ. ಹಾಗಾದ್ರೆ ಈ ಸಮಯದಲ್ಲಿ ಯಾವೆಲ್ಲಾ ರಾಶಿಯವರಿಗೆ ಅಶುಭ ಆಗಲಿದೆ ಎಂಬುದನ್ನು ನಾವು ತಿಳಿಯೋಣ.

ಅದ್ರಲ್ಲೂ ಈ ಆಗಸ್ಟ್ ತಿಂಗಳಿನಲ್ಲಿ ಯಾವೆಲ್ಲಾ ರಾಶಿಯವರಿಗೆ ಅಶುಭವಾಗುತ್ತಿದೆ. ಯಾರಿಗೆ ಈ ಗ್ರಹಗಳ ಸ್ಥಾನಪಲ್ಲಟದಿಂದ ಆಗುವ ನಷ್ಟವೇನು? ಆಗಸ್ಟ್ ತಿಂಗಳಲ್ಲಿ ಯಾವ ರಾಶಿಯವರಿಗೆ ಅನಾನುಕೂಲತೆ ಇರಲಿದೆ.
ಮೇಷ ರಾಶಿ
ಆಗಸ್ಟ್ ತಿಂಗಳ ಆರಂಭದಲ್ಲಿ ಕೆಲವು ನಕಾರಾತ್ಮಕ ಫಲಿತಾಂಶಗಳನ್ನು ಪಡೆಯಬಹುದು. ನಿಮ್ಮ ಹಣಕಾಸಿನ ವಿಚಾರವಾಗಿ ಈ ತಿಂಗಳು ಬಹಳ ಅನಾನುಕೂಲವಾಗಿ ಎದುರಾಗಬಹುದು. ನಿಮ್ಮ ಹಲವು ಕೆಲಸಗಳಿಗೆ ಅಡ್ಡಿಗಳ ನೋಡಬಹುದು. ನಿಮ್ಮ ಅಜಾಗೂಕತೆಯಿಂದ ಒಂದಿಷ್ಟು ಸಮಸ್ಯೆಗಳು ಹುಟ್ಟಿಕೊಳ್ಳಬಹುದು. ದೂರ ಪ್ರಯಾಣಗಳು ಖರ್ಚಿಗೆ ಕಾರಣವಾಗುತ್ತದೆ. ನಿಮ್ಮ ಸಂಬಂಧಿಗಳಿಂದ ಕಹಿ ಸುದ್ದಿಗಳ ಕೇಳುವಿರಿ. ಮಧುಮೇಹದಂತಹ ದೀರ್ಘಕಾಲದ ಸಮಸ್ಯೆಗಳಿದ್ದರೆ ಎಚ್ಚರಿಕೆ ವಹಿಸಿ. ಶತ್ರುಗಳಿಂದ ನಿಮಗೆ ಹಾನಿಯಾಗುವ ಸಂಭವ.
ಮಿಥುನ ರಾಶಿ
ಆಗಸ್ಟ್ ತಿಂಗಳಿನಲ್ಲಿ ಮಿಥುನ ರಾಶಿ ಜನರಿಗೆ ಈ ತಿಂಗಳು ಆರ್ಥಿಕ ಸಮಸ್ಯೆ ಎದುರಾಗಬಹುದು. ನಿಮ್ಮ ಹಲವು ಕೆಲಸಗಳು ಒತ್ತಡದ ಕಾರಣಕ್ಕೆ ಅರ್ಧಕ್ಕೆ ನಿಲ್ಲಬಹುದು. ಆಪ್ತರೊಬ್ಬರಿಗೆ ನೀವು ಹಣಕಾಸಿನ ನೆರವು ನೀಡಬಹುದು. ಆದ್ರೆ ಅದರಿಂದ ನಿಮಗೆ ಸಮಸ್ಯೆ ಎದುರಾಗಬಹುದು. ವ್ಯಾಪಾರದ ವಿಚಾರದಲ್ಲಿ ನಿಮಗೆ ನಷ್ಟವಾಗುವ ಭೀತಿ ಇದೆ. ಅವಿವಾಹಿತರಿಗೆ ನಿರಾಸೆ ತರುವ ಸಮಯ. ವಾಹನ ಖರೀದಿಯಂತಹ ಆಲೋಚನೆಯನ್ನು ಮೂಂದೂಡುವುದು ಉತ್ತಮ. ಸಾಲ ಮಾಡಲು ಮುಂದಾಗಬೇಡಿ.
ಕನ್ಯಾ ರಾಶಿ
ಈ ತಿಂಗಳು ಕನ್ಯಾ ರಾಶಿಯವರಿಗೆ ಅಸ್ತವ್ಯಸ್ತವಾದ ತಿಂಗಳು ಎನ್ನಬಹುದು. ಈ ತಿಂಗಳು ಕೆಲವು ಆರೋಗ್ಯ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆಯಿದೆ, ಆದ್ದರಿಂದ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಮುಖ್ಯ. ನಿಮ್ಮ ಸಣ್ಣಪುಟ್ಟ ಸಮಸ್ಯೆಗಳು ದೊಡ್ಡದಾಗಬಹುದು. ಕೌಟುಂಬಿಕ ಸಮಸ್ಯೆಗಳು ಹೆಚ್ಚಾಗುವುದು ಅಥವಾ ಮನಸ್ತಾಪಗಳು ಮೂಡಬಹುದು. ನೀವು ಸಾಲ ಮಾಡಿದ್ದರೆ ಅವರಿಂದ ಒತ್ತಡ ಬೀಳಬಹುದು. ಆರೋಗ್ಯದಲ್ಲಿ ಏರುಪೇರು ನಿರ್ಲಕ್ಷಿಸಬೇಡಿ. ಆಸ್ತಿ ಸಂಬಂಧಿತ ವಿಚಾರವಾಗಿ ನಿಮಗೆ ಉತ್ತಮ ಸಮಯವಲ್ಲ.
ತುಲಾ ರಾಶಿ
ತುಲಾ ರಾಶಿಯವರು ಆಗಸ್ಟ್‌ನಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಲಿದ್ದಾರೆ. ಈ ಇಡೀ ತಿಂಗಳು ಅವರಿಗೆ ಸವಾಲುಗಳ ಎದುರಿಸಬೇಕಾದ ತಿಂಗಳು. ಶ್ರಮದಾಯಕ ಕೆಲಸಗಳಲ್ಲಿ ನಿಮಗೆ ಅಶುಭ ಇರಬಹುದು. ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಆಪ್ತರ ಸಹಕಾರ ಪಡೆಯುವುದು ಬಹಳ ಉತ್ತಮ ಮಾರ್ಗವಾಗಿರುವುದಿಲ್ಲ. ಬಹಳ ಸಮಯ ನಿಮ್ಮ ಆಸೆಯೊಂದು ಮತ್ತೆ ಮುಂದೂಡಬೇಕಾಗಬಹುದು. ಮನೆ ನಿರ್ಮಾಣ ಮಾಡುವ ಜನರಿಗೆ ಹಣಕಾಸು ವಿಚಾರವಾಗಿ ಅಡೆತಡೆ ನೋಡಬಹುದು. ವೈವಾಹಿಕ ಜೀವನದಲ್ಲಿ ಕೆಲವು ವಾದಗಳು ಮತ್ತು ಸಮಸ್ಯೆಗಳು ಉದ್ಭವಿಸಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications