Latest Updates
-
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ?
ಆಗಸ್ಟ್ ಮಾಸದ ಭವಿಷ್ಯ: ಈ ಮಾಸ 12 ರಾಶಿಗಳಿಗೆ ಹೇಗಿರಲಿದೆ?
ಗ್ರಹಗಳ ಸ್ಥಾನದ ಪ್ರಕಾರ ಆಗಸ್ಟ್ ಮಾಸ 12 ರಾಶಿಗಳಿಗೆ ಹೇಗಿರಲಿದೆ?
ಮೇಷ ರಾಶಿ
ಆಗಸ್ಟ್ ಮಾಸ ನಿಮಗೆ ಮಿಶ್ರಫಲ. ಈ ಅವಧಿಯಲ್ಲಿ ಹಣದ ವಿಷಯದಲ್ಲಿ ಮಿಶ್ರಫಲ, ಹಣದ ಬಗ್ಗೆ ಜಾಗ್ರತೆವಹಿಸಬೇಕು. ಖರ್ಚುಗಳಿಗೆ ಕಡಿವಾಣ ಹಾಕಿದರೆ ಒಳ್ಳೆಯದು. ಇನ್ನು ಈ ಸಮಯದಲ್ಲಿ ಆರೋಗ್ಯ ವಿಷಯದಲ್ಲಿ ನಿರ್ಲಕ್ಷ್ಯ ಬೇಡ. ಆರೋಗ್ಯ ಚೆನ್ನಾಗಿರಲಿದೆ. ಉದ್ಯೋಗಿಗಳಿಗೆ, ವ್ಯಾಪಾರಿಗಳಿಗೆ ಈ ಸಮಯ ಉತ್ತಮವಾಗಿದೆ. ವೈವಾಹಿಕ ಜೀವನ ಚೆನ್ನಾಗಿರಲಿದೆ, ಪ್ರೇಮಿಗಳಿಗೆ ಉತ್ತಮವಾಗಿರಲಿದೆ. ಅವಾಹಿತರಿಗೆ ಒಳ್ಳೆಯ ಪ್ರಸ್ತಾಪ ಬರಲಿದೆ.

ರಾಶಿಯ ಅಂಶ: ಬೆಂಕಿ
ರಾಶಿಯ ಅಧಿಪತಿ: ಮಂಗಳ
ಅದೃಷ್ಟದ ಸಂಖ್ಯೆಗಳು: 11, 25, 39, 45, 50
ಶುಭ ದಿನಗಳು: ಗುರುವಾರ, ಭಾನುವಾರ, ಮಂಗಳವಾರ, ಬುಧವಾರ
ಅದೃಷ್ಟದ ಬಣ್ಣಗಳು: ನೀಲಿ, ಕಡು ಕೆಂಪು, ಕಂದು, ಬಿಳಿ
ವೃಷಭ ರಾಶಿ
ಆಗಸ್ಟ್ ಮಾಸ ನಿಮಗೆ ಶುಭವಾಗಿದೆ. ವೃತ್ತಿ ಬದುಕಿನ ದೃಷ್ಟಿಯಿಂದ ನೋಡುವುದಾದರೆ ಈ ಅವಧಿ ತುಂಬಾ ಚೆನ್ನಾಗಿರಲಿದೆ. ವಿದೇಶಕ್ಕೆ ಹೋಗಲು ಪ್ರಯತ್ನಿಸುತ್ತಿರುವವರೆಗೆ ಹಾಗೂ ವೃತ್ತಿ ಬದಲಾವಣೆಗೆ ಪ್ರಯತ್ನಿಸುತ್ತಿದ್ದರೆ ಈ ಸಮಯ ತುಂಬಾ ಒಳ್ಳೆಯದಿದೆ. ವ್ಯಾಪಾರಿಗಳಿಗೆ ಉತ್ತಮ ಹಣ ಲಾಭವಾಗಲಿದೆ. ಆರ್ಥಿಕವಾಗಿ ಈ ಸಮಯ ತುಂಬಾ ಚೆನ್ನಾಗಿರಲಿದೆ. ಕುಟುಂಬ ಜೀವನ ಚೆನ್ನಾಗಿರಲಿದೆ. ಆದರೆ ನೀವು ನಿಮ್ಮ ಸಂಗಾತಿಯ ಭಾವನೆಗಳನ್ನು ಗುರುತಿಸಬೇಕು. ಏನಾದರೂ ಆರೋಗ್ಯ ಸಮಸ್ಯೆ ಇದ್ದರೆ ನಿರ್ಲಕ್ಷ್ಯ ಮಾಡಬೇಡಿ.
ರಾಶಿಯ ಅಂಶ: ಭೂಮಿ
ರಾಶಿಯ ಅಧಿಪತಿ: ಶುಕ್ರ
ಅದೃಷ್ಟದ ಸಂಖ್ಯೆಗಳು: 4, 18, 29, 32, 49, 57
ಶುಭ ದಿನಗಳು: ಭಾನುವಾರ, ಗುರುವಾರ, ಬುಧವಾರ, ಶುಕ್ರವಾರ
ಅದೃಷ್ಟದ ಬಣ್ಣಗಳು: ಹಸಿರು, ಕೆಂಗಂದು, ಆಕಾಶ ನೀಲಿ, ಗುಲಾಬಿ, ಬಿಳಿ
ಮಿಥುನ ರಾಶಿ
ಈ ಅವಧಿಯಲ್ಲಿ ನೀವು ಜಾಗ್ರತೆವಹಿಸಬೇಕು. ವೃತ್ತಿ ಬದುಕಿನಲ್ಲಿ ಕೆಲ ಅಡೆತಡೆಗಳು ಎದುರಾಗಬಹುದು. ಆದರೆ ನಿಮ್ಮ ಸಹೋದ್ಯೋಗಿಗಳು ಮತ್ತು ಉನ್ನತ ಅಧಿಕಾರಿಗಳ ಬೆಂಬಲವನ್ನು ನೀವು ಪಡೆಯುತ್ತೀರಿ. ವ್ಯಾಪಾರಿಗಳು ಕೂಡ ಜಾಗ್ರತೆವಹಿಸಬೇಕು. ಇನ್ನು ಈ ಅವಧಿಯಲ್ಲಿ ಆರೋಗ್ಯದ ಕಡೆಗೆ ತುಂಬಾನೇ ಗಮನಹರಿಸಬೇಕು. ಈ ಅವಧಿಯಲ್ಲಿ ಕುಟುಂಬ ಜೀವನ ಚೆನ್ನಾಗಿರಲಿದೆ. ಆರ್ಥಿಕವಾಗಿ ಈ ಸಮಯ ಉತ್ತಮವಾಗಿದೆ.
ರಾಶಿಯ ಅಂಶ: ಗಾಳಿ
ರಾಶಿಯ ಅಧಿಪತಿ: ಬುಧ
ಅದೃಷ್ಟದ ಸಂಖ್ಯೆಗಳು: 2, 18, 26, 31, 44, 57
ಶುಭ ದಿನಗಳು: ಬುಧವಾರ, ಮಂಗಳವಾರ, ಭಾನುವಾರ, ಸೋಮವಾರ
ಅದೃಷ್ಟದ ಬಣ್ಣಗಳು: ಕಡು ನೀಲಿ, ಕೆಂಪು, ಕಂದು, ಬಿಳಿ
ಕರ್ಕ ರಾಶಿ
ಈ ರಾಶಿಯ ಉದ್ಯೋಗಿಗಳಿಗೆ ತುಂಬಾ ಉತ್ತಮವಾಗಿದೆ, ಕೆಲಸ ಹುಡುಕುತ್ತಿದ್ದರೆ ಈ ಸಮಯದಲ್ಲಿ ನಿಮಗೆ ಕೆಲಸ ಸಿಗಲಿದೆ, ವ್ಯಾಪಾರಿಗಳು ಹಣದ ವಿಷಯಗಳಲ್ಲಿ ಅಸಡ್ಡೆ ಮಾಡಬೇಡಿ. ಇತರರ ಸಲಹೆಯ ಮೇರೆಗೆ ಹೂಡಿಕೆ ಮಾಡಬೇಡಿ. ನಿಮ್ಮ ಹಾಗೂ ಸಂಗಾತಿಯ ನಡುವೆ ಕೆಲ ಭಿನ್ನಾಭಿಪ್ರಾಯವಿರಬಹುದು. ಆದರೆ ನಿಮ್ಮ ನಡುವಿನ ಭಿನ್ನಾಭಿಪ್ರಾಯ ಬಗೆಹರಿಯಲಿದೆ. ಪ್ರೇಮಿಗಳಿಗ ಈ ಸಮಯ ಉತ್ತಮವಾಗಿದೆ. ಆರೋಗ್ಯ ಸಮಸ್ಯೆ ಇದ್ದರೆ ಜಾಗ್ರತೆವಹಿಸಿ.
ರಾಶಿಯ ಅಂಶ: ನೀರು
ರಾಶಿಯ ಅಧಿಪತಿ: ಚಂದ್ರ
ಅದೃಷ್ಟದ ಸಂಖ್ಯೆಗಳು: 5, 17, 24, 30, 45, 54
ಶುಭ ದಿನಗಳು: ಬುಧವಾರ, ಗುರುವಾರ, ಭಾನುವಾರ, ಶುಕ್ರವಾರ
ಅದೃಷ್ಟದ ಬಣ್ಣಗಳು: ಆಕಾಶ ನೀಲಿ, ಕೆಂಪು, ಹಳದಿ, ಕೆನೆ
ಸಿಂಹ ರಾಶಿ
ಸಿಂಹ ರಾಶಿಯವರು ಆಗಸ್ಟ್‌ನಲ್ಲಿ ಹೆಚ್ಚು ಜಾಗ್ರತೆವಹಿಸಬೇಕು. ನಿಮ್ಮ ಹಣಕಾಸಿನ ಸ್ಥಿತಿಯು ಉತ್ತಮವಾಗಿರುತ್ತದೆ, ಆದರೆ ಖರ್ಚು ಇರಲಿದೆ. ಕೆಲಸ ಕಾರ್ಯದಲ್ಲಿ ಉತ್ತಮವಾಗಿದೆ, ಆದರೆ ಕೆಲಸದ ಒತ್ತಡ ಇರಲಿದೆ. ನೀವು ದೊಡ್ಡ ಉದ್ಯಮಿಗಳಾಗಿದ್ದರೆ ಉದ್ಯೋಗಿಗಳಿಂದ ಸಮಸ್ಯೆಗಳು ಬರಬಹುದು, ಬುದ್ಧಿವಂತಿಕೆಯಿಂದ ನಿಭಾಯಿಸಿ. ಕಣ್ಣಿಗೆ ಸಂಬಂಧಿಸಿದ ಸಮಸ್ಯೆವಿರಬಹುದು.
ರಾಶಿಯ ಅಂಶ: ಬೆಂಕಿ
ರಾಶಿಯ ಅಧಿಪತಿ: ಸೂರ್ಯ
ಅದೃಷ್ಟದ ಸಂಖ್ಯೆಗಳು: 7, 10, 19, 21, 33, 40, 55
ಶುಭ ದಿನಗಳು: ಗುರುವಾರ, ಶುಕ್ರವಾರ, ಸೋಮವಾರ, ಬುಧವಾರ
ಅದೃಷ್ಟದ ಬಣ್ಣಗಳು: ಕೆಂಪು, ಕಡು ಹಸಿರು, ನೀಲಿ, ಕೇಸರಿ
ಕನ್ಯಾ ರಾಶಿ
ಆಗಸ್ಟ್ ಮಾಸ ನಿಮಗೆ ತುಂಬಾ ಉತ್ತಮವಾಗಿದೆ. ಈ ಸಮಯದಲ್ಲಿ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡು ಬರಲಿದೆ, ಅಪೂರ್ಣವಾಗಿದ್ದ ಕೆಲಸ ಕಾರ್ಯವನ್ನು ಈ ವಾರದಲ್ಲಿ ಪೂರ್ಣಗೊಳಿಸಲು ಸಾಧ್ಯವಾಗುವುದು. ವೃತ್ತಿ ಬದುಕಿನಲ್ಲಿ ಉತ್ತಮ ಅವಕಾಶ ದೊರೆಯಲಿದೆ. ವ್ಯಾಪಾರಿಗಳು ಯಾವುದೇ ವ್ಯವಹಾರ ಮಾಡುವುದಾದರೆ ಜಾಗ್ರತೆವಹಿಸಿ, ಕಣ್ಮುಚ್ಚಿ ಯಾರನ್ನೂ ನಂಬಬೇಡಿ. ಆರೋಗ್ಯದ ಕಡೆಗೆ ಗಮನಹರಿಸಿ, ಆರೋಗ್ಯ ಸಮಸ್ಯೆ ಇದ್ದರೆ ನಿರ್ಲಕ್ಷ್ಯ ಮಾಡಬೇಡಿ.
ರಾಶಿಯ ಅಂಶ: ಭೂಮಿ
ರಾಶಿಯ ಅಧಿಪತಿ: ಬುಧ
ಅದೃಷ್ಟದ ಸಂಖ್ಯೆಗಳು: 1, 15, 22, 35, 40, 57
ಶುಭ ದಿನಗಳು: ಮಂಗಳವಾರ, ಗುರುವಾರ, ಸೋಮವಾರ, ಬುಧವಾರ
ಅದೃಷ್ಟದ ಬಣ್ಣಗಳು: ಹಳದಿ, ಕೆಂಪು, ಕೆಂಗಂದು, ಬಿಳಿ
ತುಲಾ ರಾಶಿ
ತುಲಾ ರಾಶಿಯವರಿಗೆ ಆಗಸ್ಟ್ ಮಾಸ ಸಾಧಾರಣವಾಗಿದೆ. ನಿಮ್ಮ ಕೆಲಸ ಕಾರ್ಯಗಳು ಅಡೆತಡೆಯಿಲ್ಲದೆ ಪೂರ್ಣಗೊಳ್ಳಲಿದೆ. ಆದರೆ ನೀವು ಹಣದ ವಿಚಾರದಲ್ಲಿ ಸ್ವಲ್ಪ ಜಾಗ್ರತೆವಹಿಸಿ. ಆರೋಗ್ಯ ಸಮಸ್ಯೆ ನಿರ್ಲಕ್ಷ್ಯ ಮಾಡುತ್ತಿದ್ದರೆ ಹೆಚ್ಚಿನ ಹಣ ಖರ್ಚಾಗುವುದು. ವ್ಯಾಪಾರಸ್ಥರು ಜಾಗರೂಕರಾಗಿರಬೇಕು. ನಿಮ್ಮ ವೈಯಕ್ತಿಕ ವಿಷಯಗಳಲ್ಲಿ ಇತರರು ಹೆಚ್ಚು ಹಸ್ತಕ್ಷೇಪ ಮಾಡಲು ಬಿಡಬೇಡಿ. ನಿಮ್ಮ ಹಾಗೂ ಸಂಗಾತಿ ನಡುವೆ ಕೆಲ ಭಿನ್ನಾಭಿಪ್ರಾಯವಿರಬಹುದು.
ರಾಶಿಯ ಅಂಶ: ಗಾಳಿ
ರಾಶಿಯ ಅಧಿಪತಿ: ಶುಕ್ರ
ಅದೃಷ್ಟದ ಸಂಖ್ಯೆಗಳು: 6, 14, 29, 33, 40, 56
ಶುಭ ದಿನಗಳು: ಭಾನುವಾರ, ಮಂಗಳವಾರ, ಗುರುವಾರ, ಸೋಮವಾರ
ಅದೃಷ್ಟದ ಬಣ್ಣಗಳು: ಬಿಳಿ, ಕಂದು, ಹಳದಿ, ಕೆನೆ
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಆಗಸ್ಟ್ ಮಾಸ ತುಂಬಾ ಚೆನ್ನಾಗಿರಲಿದೆ. ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ಆಸ್ತಿ ಸಂಬಂಧಿಸಿದ ವ್ಯವಹಾರ ಮಾಡಿದರೆ ಲಾಭ ಸಿಗಲಿದೆ. ವ್ಯಾಪಾರಿಗಳು, ಉದ್ಯಮಿಗಳಿಗೆ ಧನ ಲಾಭವಾಗಲಿದೆ. ಕುಟುಂಬ ಜೀವನ ಚೆನ್ನಾಗಿರಲಿದೆ, ಆರೋಗ್ಯದ ದೃಷ್ಟಿಯಿಂದ ಈ ತಿಂಗಳು ನಿಮಗೆ ಉತ್ತಮವಾಗಿರುತ್ತದೆ.
ರಾಶಿಯ ಅಂಶ: ನೀರು
ರಾಶಿಯ ಅಧಿಪತಿ: ಮಂಗಳ ಮತ್ತು ಪ್ಲುಟೊ
ಅದೃಷ್ಟದ ಸಂಖ್ಯೆಗಳು: 5, 19, 20, 31, 40, 56
ಶುಭ ದಿನಗಳು: ಗುರುವಾರ, ಸೋಮವಾರ, ಶನಿವಾರ, ಬುಧವಾರ
ಅದೃಷ್ಟದ ಬಣ್ಣಗಳು: ಮರೂನ್, ಕೆಂಪು, ಗುಲಾಬಿ, ಆಕಾಶ ನೀಲಿ
ಧನು ರಾಶಿ
ಧನು ರಾಶಿಯವರುಬ ಬಯಸಿದ ಫಲ ಪಡೆಯಲು ಹೆಚ್ಚಿನ ಶ್ರಮ ಹಾಕಬೇಕು, ಬರಿ ಅದೃಷ್ಟವನ್ನು ಮಾತ್ರ ನಂಬಿ ಕೂರಬೇಡಿ, ಉದ್ಯಮಿಗಳಿಗೆ ಈ ಸಮಯ ತುಂಬಾ ಚೆನ್ನಾಗಿರಲಿದೆ. ವೈವಾಹಿಕ ಜೀವನ ಚೆನ್ನಾಗಿರಲಿದೆ. ಇನ್ನು ಪ್ರೇಮಿಗಳು ನಿಮ್ಮ ಸಂಬಂಧವನ್ನು ಮದುವೆ ಮೂಲಕ ಗಟ್ಟಿಯಾಗಿಸಲು ಪ್ರಯತ್ನಿಸಬಹುದು. ಹಣವನ್ನು ನೋಡಿಕೊಂಡು ಖರ್ಚು ಮಾಡಿ ಅಗ್ಯತಕ್ಕಿಂತ ಹೆಚ್ಚು ಸಾಲ ಪಡೆಯಬೇಡಿ, ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಆಗಾಗ ಕಾಡಬಹುದು.
ರಾಶಿಯ ಅಂಶ: ಬೆಂಕಿ
ರಾಶಿಯ ಅಧಿಪತಿ: ಗುರು
ಅದೃಷ್ಟದ ಸಂಖ್ಯೆಗಳು: 1, 7, 14, 21, 38, 49
ಶುಭ ದಿನಗಳು: ಭಾನುವಾರ, ಶನಿವಾರ, ಸೋಮವಾರ, ಬುಧವಾರ
ಅದೃಷ್ಟದ ಬಣ್ಣಗಳು: ಕಡು ಕೆಂಪು, ಹಸಿರು, ಗುಲಾಬಿ, ನೇರಳೆ
ಮಕರ ರಾಶಿ
ಈ ಸಮಯದಲ್ಲಿ ನೀವು ಕುಟುಂಬ ಜೀವನದ ಕಡೆಗೆ ತುಂಬಾನೇ ಗಮನಹರಿಸಬೇಕು. ನಿಮ್ಮ ನಡುವೆ ಕೆಲ ಭಿನ್ನಾಬಿಪ್ರಾಯಗಳಿರಬಹುದು. ವಿದ್ಯಾರ್ಥಿಗಳಿಗೆ ಆಗಸ್ಟ್ ಮಾಸ ಉತ್ತಮವಾಗಿದೆ. ವ್ಯಾಪಾರಿಗಳು ಉತ್ತಮ ಲಾಭ ಪಡೆಯುತ್ತೀರಿ. ಆರೋಗ್ಯ ಸಮಸ್ಯೆಗಳಿದ್ದರೆ ನಿರ್ಲಕ್ಷ್ಯ ಬೇಡ, ಆರೋಗ್ಯದ ಕಡೆಗೆ ಗಮನಹರಿಸಿ.
ರಾಶಿಯ ಅಂಶ: ಭೂಮಿ
ರಾಶಿಯ ಅಧಿಪತಿ: ಶನಿ
ಅದೃಷ್ಟದ ಸಂಖ್ಯೆಗಳು: 6, 18, 24, 36, 44, 54
ಶುಭ ದಿನಗಳು: ಸೋಮವಾರ, ಗುರುವಾರ, ಮಂಗಳವಾರ, ಶನಿವಾರ
ಅದೃಷ್ಟದ ಬಣ್ಣಗಳು: ಕೆನೆ, ನೇರಳೆ, ಕೆಂಪು, ಕೇಸರಿ
ಕುಂಭ ರಾಶಿ
ಈ ಮಾಸ ನಿಮಗೆ ಉತ್ತಮವಾಗಿದೆ, ಪ್ರಾರಂಭದಲ್ಲಿ ಕೆಲ ಸಮಸ್ಯೆಗಳು ಬಂದರು ನಂತರ ಎಲ್ಲವೂ ಸರಿಯಾಗಲಿದೆ. ವೃತ್ತಿಗೆ ಸಂಬಂಧಿಸಿದ ಯಾವುದೇ ಪ್ರಮುಖ ಸಮಸ್ಯೆಯು ಪರಿಹರಿಸಲ್ಪಡುತ್ತದೆ. ಆರ್ಥಿಕವಾಗಿ ನೋಡುವುದಾದರೆ ಈ ದಿನ ಉತ್ತಮವಾಗಿದೆ. ವೈವಾಹಿಕ ಜೀವನ ಚೆನ್ನಾಗಿರಲಿದೆ, ಅವಾಹಿತರಿಗೆ ಮದುವೆ ಪ್ರಸ್ತಾಪ ಬರಲಿದೆ. ಆರೋಗ್ಯದ ಕಡೆಗೆ ಗಮನಹರಿಸಿ.
ರಾಶಿಯ ಅಂಶ: ಗಾಳಿ
ರಾಶಿಯ ಅಧಿಪತಿ: ಶನಿ
ಅದೃಷ್ಟದ ಸಂಖ್ಯೆಗಳು: 4, 11, 26, 35, 44, 54
ಶುಭ ದಿನಗಳು: ಬುಧವಾರ, ಭಾನುವಾರ, ಗುರುವಾರ, ಮಂಗಳವಾರ
ಅದೃಷ್ಟದ ಬಣ್ಣಗಳು: ಹಳದಿ, ಗುಲಾಬಿ, ನೇರಳೆ, ಬಿಳಿ, ಕಿತ್ತಳೆ
ಮೀನ ರಾಶಿ
ಈ ಅವಧಿಯಲ್ಲಿ ತುಂಬಾನೇ ಜಾಗ್ರತೆವಹಿಸಬೇಕು. ಹಣದ ಚಿಂತೆ ಕಾಡಬಹುದು, ಹಣಕ್ಕೆ ಸಂಬಂಧಿಸಿದ ಯಾವುದೇ ವ್ಯವಹಾರವನ್ನು ಯೋಚಿಸದೆ ಮಾಡಬೇಡಿ. ಉದ್ಯಮಿಗಳ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯ ಸಾಧ್ಯತೆಯಿದೆ, ವಿದ್ಯಾರ್ಥಿಗಳು ತಮ್ಮ ಪರಿಶ್ರಮಕ್ಕೆ ಉತ್ತಮ ಯಶಸ್ಸನ್ನು ಪಡೆಯಬಹುದು. ಆರೋಗ್ಯ ದುರ್ಬಲವಾಗಿರುತ್ತದೆ.
ರಾಶಿಯ ಅಂಶ: ನೀರು
ರಾಶಿಚಕ್ರದ ಅಧಿಪತಿ: ನೆಪ್ಚೂನ್, ಗುರು
ಅದೃಷ್ಟದ ಸಂಖ್ಯೆಗಳು: 2,10, 20, 36, 45, 51
ಶುಭ ದಿನಗಳು: ಮಂಗಳವಾರ, ಸೋಮವಾರ, ಬುಧವಾರ, ಭಾನುವಾರ
ಅದೃಷ್ಟದ ಬಣ್ಣಗಳು: ಕೆಂಪು, ಹಳದಿ, ನೀಲಿ, ಗುಲಾಬಿ, ಹಸಿರು
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











