Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಆಗಸ್ಟ್ ಮಾಸದ ಭವಿಷ್ಯ: ಈ 6 ರಾಶಿಯವರಿಗೆ ಈ ತಿಂಗಳು ಹೆಚ್ಚು ಅನುಕೂಲಕರ
ಗ್ರಹಗತಿಗಳ ಸ್ಥಾನದ ಪ್ರಕಾರ ಆಗಸ್ಟ್ ಮಾಸದಲ್ಲಿ ಈ 6 ರಾಶಿಯವರಿಗೆ ಹೆಚ್ಚು ಅನುಕೂಲಕರವಾಗಿದೆ..........
ಮೇಷ ರಾಶಿ
ಮೇಷ ರಾಶಿಯವರಿಗೆ ಆಗಸ್ಟ್ ಮಾಸ ಅನುಕೂಲಕರವಾಗಿದೆ. ಈ ಮಾಸದಲ್ಲಿ ಯಾವುದೇ ದೊಡ್ಡ ಸಮಸ್ಯೆ ಕಾಡಲ್ಲ, ವೃತ್ತಿ ಬದುಕಿನಲ್ಲಿ ನೀವು ಯೋಚಿಸಿದಂತೆಯೇ ಕೆಲಸ ಕಾರ್ಯಗಳು ನಡೆಯಲಿದೆ, ವೃತ್ತಿ ಜೀವನದಲ್ಲಿ ನೀವು ಧನಾತ್ಮಕ ಬೆಳವಣಿಗೆ ಕಾಣಬಹುದು, ಕೆಲಸವನ್ನು ಬದಲಾಯಿಸಲು ಯೊಚಿಸುತ್ತಿದ್ದರೆ ಈ ಸಮಯ ಉತ್ತಮವಾಗಿದೆ. ಇನ್ನು ಆರ್ಥಿಕವಾಗಿ ಉತ್ತಮವಾಗಿರುವುದರಿಂದ ಹೊಸ ಕಾರು, ಮನೆ, ಆಸ್ತಿ ಇತ್ತಾದಿಗಳನ್ನು ಖರೀದಿಸುವ ನಿಮ್ಮ ಬಹುಕಾಲದ ಆಸೆ ಈ ಸಮಯದಲ್ಲಿ ಈಡೇರುವ ಬಲವಾದ ಸೂಚನೆಯಿದೆ,

ಕರ್ಕ ರಾಶಿ
ಆಗಸ್ಟ್ ಮಾಸ ಕರ್ಕ ರಾಶಿಯವರಿಗೆ ಅದೃಷ್ಟದ ಸೂಚನೆಯಿದೆ, ಗ್ರಹಗಳ ಸ್ಥಾನವು ಅನುಕೂಲಕರ ಸ್ಥಿತಿಯಲ್ಲಿ ಇರುವುದರಿಂದ ನೀವು ಉತ್ತಮ ಪ್ರಯೋಜನ ಪಡೆಯುತ್ತೀರಿ. ಹಣಕ್ಕಾಗಿ ನೀವು ಮಾಡುವ ಪ್ರಯತ್ನಕ್ಕೆ ಫಲ ಸಿಗಲಿದೆ, ಹೀಗಾಗಿ ಅರ್ಥಿಕ ಸಮಸ್ಯೆ ಇರಲ್ಲ, ಹಣದ ತೊಡಕಿನಿಂದ ಅಪುರ್ಣವಾಗಿದ್ದ ಕೆಲಸವನ್ನು ಪೂರ್ಣಗೊಳಿಸಲು ಇ ಸಮಯದಲ್ಲಿ ಸಾಧ್ಯವಾಗುವುದು. ಉದ್ಯೋಗಿಗಳು ವೃತ್ತಿ ಬದುಕಿನಲ್ಲಿ ಯಶಸ್ಸು ಪಡೆಯುತ್ತೀರಿ. ಬಡ್ತಿ ಅಥವಾ ವರ್ಗಾವಣೆಯ ನಿರೀಕ್ಷೆಯಲ್ಲಿದ್ದರೆ ಖುಷಿ ಸಿಗಲಿದೆ, ಹೊಸ ಕೆಲಸಕ್ಕೆ ಹುಡುಕಾ ನಡೆಸುತ್ತಿರುವವರಿಗೂ ಈ ಸಮಯ ಒಳ್ಳೆಯದಿದೆ. ಗ್ರಹಗತಿಗಳ ಅನುಕೂಲಕರ ಸ್ಥಾನದಿಂದಾಗಿ ಕುಟುಂಬದಲ್ಲಿ ಉತ್ತಮ ವಾತಾವರಣ ಇರಲಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಈ ಅವಧಿ ತುಂಬಾನೇ ಚೆನ್ನಾಗಿರಲಿದೆ. ಈ ಮಾಸ ನಿಮ್ಮ ಪ್ರಯತ್ನಗಳಲ್ಲಿ ಯಶಸ್ಸು ಪಡೆಯುತ್ತೀರಿ, ವೃತ್ತಿ ಹಾಗೂ ವೈಯಕ್ತಿಕ ಜೀವನದಲ್ಲಿ ತೃಪ್ತಿ ಇರಲಿದೆ. ಹೊಸ ಕೆಲಸದ ಹಡುಕಾಟ ಮಾಡುತ್ತಿರುವವರಿಗೆ, ಬಡ್ತಿ ನಿರೀಕ್ಷೆ ಮಾಡುತ್ತಿರುವವರಿಗೆ ಈ ಮಾಸ ಸಕರಾತ್ಮಕವಾಗಿದೆ. ವ್ಯಾಪಾರಿಗಳು ಆಗಸ್ಟ್ ಮಾಸದಲ್ಲಿ ಉತ್ತಮ ಲಾಭ ಗಳಿಸಲು ಸಾಧ್ಯವಾಗುವುದು. ಆರ್ಥಿಕವಾಗಿ ಉತ್ತಮವಾಗಿದೆ. ಆದರೆ ಮೂರನೇಯ ವ್ಯಕ್ತಿಯ ಸಲಹೆ ಮೇರೆಗೆ ಯಾವುದೇ ಹೂಡಿಕೆ ಮಾಡಬೇಡಿ, ನಿವು ಸರಿಯಾಗಿ ವಿಚಾರಿಸಿದ ಬಳಿಕವಷ್ಟೇ ಹಣದ ಹೂಡಿಕೆ ಮಾಡಿದರೆ ಒಳ್ಳೆಯದು.
ತುಲಾ ರಾಶಿ
ವ್ಯಾಪಾರಿಗಳು ಈ ಮಾಸ ಅದ್ಭುತ ಲಾಭ ಕಾಣುತ್ತೀರಿ, ಉದ್ಯೋಗಿಗಳ ವೃತ್ತಿ ಬದುಕು ಕೂಡ ಚೆನ್ನಾಗಿರಲಿದೆ, ನಿಮ್ಮ ಯೋಜನೆಯಂತೆಯೇ ಕೆಲಸ ಕಾರ್ಯಗಳು ನಡೆಯಲಿದೆ. ಮನೆಯ ವಾತಾವರಣ ತುಂಬಾ ಚೆನ್ನಾಗಿರಲಿದೆ, ಕುಟುಂಬದಲ್ಲಿನ ಸಮಸ್ಯೆಗಳು ಬಗೆಹರಿಯುವುದು, ಗಂಡ-ಹೆಂಡತಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಪ್ರಯತ್ನ ಹಾಕುತ್ತೀರಿ, ಗ್ರಹಗಳ ಅನುಕೂಲಕರ ಸ್ಥಾನದಿಂದಾಗಿ ಈ ರೀತಿಯ ಒಳ್ಳೆಯ ಪ್ರಭಾವಗಳು ಬೀರುತ್ತದೆ, ಕುಟುಂಬ ಜೀವನ ತುಂಬಾ ಚೆನ್ನಾಗಿರಲಿದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ವ್ಯಾಪಾರಿಗಳು ಜುಲೈಗಿಂತ ಆಗಸ್ಟ್‌ನಲ್ಲಿ ಹೆಚ್ಚಿನ ಲಾಭ ಗಳಿಸುತ್ತೀರಿ, ಈ ಮಾಸದಲ್ಲಿ ನೀವು ನಿರೀಕ್ಷೆ ಮಾಡಿರುವುದಕ್ಕಿಂತಲೂ ಹೆಚ್ಚಿನ ಲಾಭ ಪಡೆಯುತ್ತೀರಿ. ಕೆಲಸದಲ್ಲಿ ಒತ್ತಡ ಕೂಡ ಕಡಿಮೆ ಇರುವುದರಿಂದ ಆರಾಮವಾಗಿರುತ್ತೀರಿ, ಆರಂಭದಲ್ಲಿ ಕೆಲ ಸವಾಲುಗಳು ಇರಬಹುದು, ಕುಟುಂಬ ಜೀವನದಲ್ಲಿಯೂ ಅಷ್ಟೇ ಆದರೆ ಎಲ್ಲವೂ ಸುಧಾರಿಸಲಿದೆ, ಈ ಮಾಸವನ್ನು ಆನಂದದಿಂದ ಕಳೆಯುವಂತಾಗುವುದು.
ಕುಂಭ ರಾಶಿ
ಕುಂಭ ರಾಶಿಯವರಿಗೆ ಅಗಸ್ಟ್ ಮಾಸ ಉತ್ತಮವಾಗಿರಲಿದೆ. ವ್ಯಾಪಾರಿಗಳು ಒಳ್ಳೆಯ ಲಾಭ ಗಳಿಸುತ್ತೀರಿ, ನೀವು ಸರ್ಕಾರಿ ಕೆಲಸಕ್ಕೆ ಪ್ರಯತ್ನಿಸುತ್ತಿದ್ದರೆ ಈ ಅವಧಿಯಲ್ಲಿ ಕೆಲಸ ಪಡೆಯುವಲ್ಲಿ ಯಶಸ್ವಿಯಾಗುತ್ತೀರಿ, ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ.ವೈವಾಹಿಕ ಜೀವನದಲ್ಲಿ ಸಾಮರಸ್ಯ ಇರಲಿದೆ. ವಿದೇಶದಲ್ಲಿ ಉನ್ನತ ಶಿಕ್ಷಣ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಈ ಸಮಯ ಉತ್ತಮವಾಗಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications