Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಆಗಸ್ಟ್ ಮಾಸ ವಿವಾಹಿತರಿಗೆ, ಪ್ರೇಮಿಗಳಿಗೆ, ಅವಾಹಿತರಿಗೆ ಹೇಗಿರಲಿದೆ?
ಆಗಸ್ಟ್ ಮಾಸದ ಭವಿಷ್ಯ ಪ್ರಕಾರ ಈ ಮಾಸ ನಿಮ್ಮ ಪ್ರೀತಿ ಭವಿಷ್ಯ ಹೇಗಿರಲಿದೆ? ವಿವಾಹಿತರಿಗೆ, ಪ್ರೇಮಿಗಳಿಗೆ ಹೇಗಿರಲಿದೆ, ಅವಾಹಿತರಿಗೆ ಮದುವೆ ಪ್ರಸ್ತಾಪ ಬರುವುದೇ?
ಮೇಷ ರಾಶಿ
ಸಂಬಂಧದ ದೃಷ್ಟಿಯಿಂದ ನೋಡುವುದಾದರೆ ಮೇಷ ರಾಶಿಯವರಿಗೆ ಆಗಸ್ಟ್ ಮಾಸ ಅನುಕೂಲಕರವಾಗಿದೆ, ಪ್ರೇಮಿಗಳ ಸಂಬಂಧ ಗಟ್ಟಿಯಾಗುವುದು, ವಿವಾಹವಾಗಲು ನಿರ್ಧರಿಸಬಹುದು, ಕುಟುಂಬ ಜೀವನ ಚೆನ್ನಾಗಿರಲಿದೆ, ವೈವಾಹಿಕ ಜೀವನದಲ್ಲಿ ಪ್ರೀತಿ, ಹೊಂದಾಣಿಕೆ ಇರಲಿದೆ, ಅವಾಹಿತರಿಗೆ ಮದುವೆ ಪ್ರಸ್ತಾಪ ಬರಬಹುದು.

ವೃಷಭ ರಾಶಿ
ಆಗಸ್ಟ್ ಮಾಸದ ಆರಂಭದಲ್ಲಿ ಸಂಬಂಧದ ವಿಷಯದಲ್ಲಿ ಕೆಲ ಸವಾಲುಗಳು ಇರಬಹುದು, ಆದರೆ ನಂತರ ಎಲ್ಲಾ ಸರಿಯಾಗಲಿದೆ. ಪ್ರೇಮಿಗಳು ಸಂಗಾತಿಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು. ವೈವಾಹಿಕ ಜೀವನದಲ್ಲಿ ನೀವು ನಿಮ್ಮ ಸಂಗಾತಿಯನ್ನು ಗೌರವಿಸಿ, ಹೊಂದಾಣಿಕೆಯ ಕಡೆಗೆ ಗಮನಹರಿಸಿ.
ಮಿಥುನ ರಾಶಿ
ವೈವಾಹಿಕ ಜೀವನ ಚೆನ್ನಾಗಿರಲಿದೆ, ನೀವು ಏನಾದರೂ ಅಸಮಧಾನವಿದ್ದರೆ ಸಂಗಾತಿಯ ಜೊತೆಗೆ ಮುಕ್ತ ಮಾತನಾಡಿ. ನಿಮ್ಮ ಹಾಗೂ ಸಂಗಾತಿಯ ನಡುವಿನ ಹೊಂದಾಣಿಕೆಯಿದ್ದರೆ ಕುಟುಂಬ ಜೀವನ ತುಂಬಾ ಚೆನ್ನಾಗಿರಲಿದೆ.
ಕರ್ಕ ರಾಶಿ
ಪ್ರೀತಿ ಅಥವಾ ದಾಂಪತ್ಯ ಜೀವನದಲ್ಲಿ ಸಣ್ಣ-ಪುಟ್ಟ ಸಮಸ್ಯೆಗಳಿರಬಹುದು, ಸಂಬಂಧಗಳಲ್ಲಿ ಸಾಮರಸ್ಯ ಇರುತ್ತದೆ. ಪ್ರೇಮಿಗಳಿಗೆ ಈ ಮಾಸ ಉತ್ತಮವಾಗಿರಲಿದೆ, ನೀವು ಮದುವೆಯ ಬಗ್ಗೆ ತೀರ್ಮಾನ ತೆಗೆದುಕೊಳ್ಳಬಹುದು.
ಸಿಂಹ ರಾಶಿ
ಈ ತಿಂಗಳಿನಲ್ಲಿ ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯಗಳಿರಬಹುದು, ಆದರೆ ತಾಳ್ಮೆಯಿಂದ ವರ್ತಿಸಿ, ಎಲ್ಲವೂ ಸರಿಯಾಗಲಿದೆ. ಪ್ರೇಮಿಗಳು ಕೂಡ ಈ ಸಮಯದಲ್ಲಿ ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ. ಅವಾಹಿತರಿಗೆ ಮದುವೆ ಪ್ರಸ್ತಾಪ ಬಂದರೆ ಸ್ವಲ್ಪ ಕಾಯುವುದು ಒಳ್ಳೆಯದು.
ಕನ್ಯಾ ರಾಶಿ
ವಿವಾಹಿತರಿಗೆ ಈ ಅವಧಿ ತುಂಬಾ ಚೆನ್ನಾಗಿರಲಿದೆ, ಆದರೂ ನಿಮ್ಮ ನಡುವೆ ಕೆಲ ಭಿನ್ನಾಭಿಪ್ರಾಯಗಳು ಬರಬಹುದು, ಅದು ದೊಡ್ಡದಾಗದಂತೆ ಜಾಗ್ರತೆವಹಿಸಿ. ಪರಸ್ಪರ ಅರ್ಥ ಮಾಡಿಕೊಳ್ಳಲು ಇಬ್ಬರೂ ಪ್ರಯತ್ನಿಸಬೇಕು. ಪ್ರೇಮಿಗಳು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು.
ತುಲಾ ರಾಶಿ
ತುಲಾ ರಾಶಿಯವರು ನಿಮ್ಮ ಸಂಬಂಧದ ಕಡೆಗೆ ಹೆಚ್ಚಿನ ಗಮನಹರಿಸಬೇಕು, ನಿಮ್ಮ ವೈಯಕ್ತಿಕ ವಿಷಯಗಳಲ್ಲಿ ಇತರರು ಹೆಚ್ಚು ಹಸ್ತಕ್ಷೇಪ ಮಾಡಲು ಬಿಡಬೇಡಿ. ಪ್ರೇಮ ಸಂಬಂಧಗಳಲ್ಲಿ ಏರಿಳಿತಗಳಿರಬಹುದು, ಕೋಪ ನಿಯಂತ್ರಿಸಿ ಪರಸ್ಪರ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದರೆ ಒಳ್ಳೆಯದು.
ವೃಶ್ಚಿಕ ರಾಶಿ
ಪ್ರೇಮಿಗಳಿಗೆ ಈ ಅವಧಿ ಅಷ್ಟೊಂದು ಅನುಕೂಲಕರವಲ್ಲ, ಭಿನ್ನಾಭಿಪ್ರಾಯಗಳಿರಬಹುದು, ಆದರೆ ನಿಮ್ಮ ನಡುವಿನ ಪ್ರೀತಿ ಕಡಿಮೆಯಾಗಲ್ಲ. ವಿವಾಹಿತರು ವೈವಾಹಿಕ ಜೀವನದ ಕಡೆಗೆ ಗಮನಹರಿಸಿ. ಸಂಗಾತಿಯ ನಡವಳಿಕೆಯಲ್ಲಿ ಕೆಲ ಬದಲಾವಣೆ ಕಂಡು ಬರಬಹುದು, ಸಮಸ್ಯೆ ದೊಡ್ಡದಾಗಲು ಬಿಡಬೇಡಿ.
ಧನು ರಾಶಿ
ಈ ಮಾಸ ವಿವಾಹಿತರಿಗೆ, ಪ್ರೇಮಿಗಳಿಗೆ ಉತ್ತಮವಾಗಿರಲಿದೆ. ಪ್ರೇಮಿಗಳು ತಮ್ಮ ಪ್ರೀತಿಗೆ ಮನೆಯವರ ಒಪ್ಪಿಗೆ ಪಡೆಯಬಹುದು, ವಿವಾಹಿತರ ವೈವಾಹಿಕ ಬದುಕು ತುಂಬಾ ಚೆನ್ನಾಗಿರಲಿದೆ.
ಮಕರ ರಾಶಿ
ಈ ಮಾಸ ಸಂಬಂಧದ ವಿಷಯದಲ್ಲಿ ಅಷ್ಟೊಂದು ಅನುಕೂಲಕರವಲ್ಲ, ಚಿಕ್ಕ ಪುಟ್ಟ ವಿಷಯಕ್ಕೂ ಭಿನ್ನಾಭಿಪ್ರಾಯವಿರಬಹುದು, ನೀವು ಭಿನ್ನಾಭಿಪ್ರಾಯ ಹೆಚ್ಚಾಗದಂತೆ ನೋಡಿಕೊಳ್ಳಲು ಅಹಂ ದುರವಿಡಿ. ಅವಾಹಿತರಿಗೆ ಮದುವೆ ಪ್ರಸ್ತಾಪ ಬರಬಹುದು. ಮನೆಯಲ್ಲಿ ನಿಮ್ಮ ಕೋಪ ನೆಮ್ಮದಿ ಹಾಳು ಮಾಡಬಹುದು, ಹಾಗಾಗಿ ಜಾಗ್ರತೆವಹಿಸಿ.
ಕುಂಭ ರಾಶಿ
ಕುಟುಂಬ ಜೀವನ ಚೆನ್ನಾಗಿರಲಿದೆ, ಅವಾಹಿತರು ಮದುವೆಗೆ ಸಂಬಂದ ಹುಡುಕುತ್ತಿದ್ದರೆ ಈ ಸಮಯದಲ್ಲು ಉತ್ತಮ ಬಾಂಧವ್ಯ ಬರಲಿದೆ. ವಿವಾಹಿತರ ವೈವಾಹಿಕ ಜೀವನ ಚೆನ್ನಾಗಿರಲಿದೆ. ಚಿಕ್ಕ-ಪುಟ್ಟ ಮನಸ್ತಾಪ ಬರಬಹುದು, ಆದರೆ ನೀವು ಮೊದಲಿಗಿಂತ ಹೆಚ್ಚು ಪ್ರೀತಿಸಲಾರಂಭಿಸುತ್ತೀರಿ.
ಮೀನ ರಾಶಿ
ಈ ಅವಧಿ ಸಂಬಂಧದ ವಿಷಯದಲ್ಲಿ ಅನುಕೂಲಕರವಲ್ಲ, ನೀವು ಸಂಗಾತಿಯನ್ನು ಅನುಮಾನದಿಂದ ನೋಡುವುದನ್ನು ಬಿಡಬೆಕು, ಆವಾಗ ಮಾತ್ರ ಸಂಬಂಧ ಸರಿಹೋಗಲಿದೆ, ಬೇರೆಯವರ ಮಾತುಕೇಳಿ ನಿಮ್ಮ ಸಂಗಾತಿ ಜೊತೆ ಕೋಪಗೊಳ್ಳಬೇಡಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











