Dina Bhavishya: ಆಗಸ್ಟ್ 20ರ ಬುಧವಾರ ಯಾರ ಅದೃಷ್ಟ ಹೇಗಿದೆ ನೋಡಿ?

ವೈದಿಕ ಶಾಸ್ತ್ರದ ಪ್ರಕಾರ ಆಗಸ್ಟ್ 20ರಂದು ನಿಮ್ಮ ರಾಶಿಫಲ ನೋಡೋಣ:

ಮೇಷ ರಾಶಿ

ಮೇಷ ರಾಶಿಯ ಜನರಿಗೆ ಇಂದು ಉತ್ತಮ ದಿನ. ನಿಮ್ಮ ಕೌಟುಂಬಿಕ ವಿಚಾರಗಳಲ್ಲಿ ಧನಾತ್ಮಕ ವಾತಾವರಣ ಇರಲಿದೆ. ಆರ್ಥಿಕ ಸಮಸ್ಯೆಗಳು ನಿವಾರಣೆಯಾಗುವ ದಿನ. ದೊಡ್ಡ ಕೆಲಸಗಳಲ್ಲಿ ನಿಮ್ಮ ಶುಭವಾಗುತ್ತಿದೆ. ಆರೋಗ್ಯದಲ್ಲಿ ಏರುಪೇರಾಗುವ ಸಂಭವವಿದೆ.

ವೃಷಭ ರಾಶಿ

ವೃಷಭ ರಾಶಿಯ ಜನರಿಗೆ ಈ ದಿನ ಮಿಶ್ರಫಲವಿದೆ. ನಿಮ್ಮ ಹಲವು ಕೆಲಸಗಳು ನೀವು ಅಂದುಕೊಂಡಂತೆ ನಡೆಯಲಿದೆ. ದಿಢೀರ್ ಹಣಕಾಸು ಖರ್ಚುಗಳು ಬರಬಹುದು. ಆಪ್ತರೊಬ್ಬರು ಹಣಕ್ಕಾಗಿ ಮನವಿ ಮಾಡಬಹುದು.

August-20-2025-daily-horoscope-prediction-for-12-zodiac-signs-in-kannada

ಮಿಥುನ ರಾಶಿ

ಮಿಥುನ ರಾಶಿಯ ಜನರಿಗೆ ಸಮಸ್ಯೆಗಳಿಂದ ತುಂಬಿದ ದಿನ ಎನ್ನಬಹುದು. ಯಾರಿಗಾದರು ಹಣ ನೀಡುವುದಾದರೆ ಬಹಳ ಎಚ್ಚರಿಕೆ ಇಡಿ. ಉದ್ಯೋಗ ಸಂಬಂಧಿ ವಿಚಾರವಾಗಿ ಒತ್ತಡ ಹೆಚ್ಚಾಗಬಹುದು. ಆಪ್ತರಿಂದ ಉತ್ತಮ ಸುದ್ದಿಯೊಂದನ್ನು ಕೇಳಬಹುದು.

ಕರ್ಕ ರಾಶಿ

ಕರ್ಕ ರಾಶಿಯ ಜನರಿಗೆ ಈ ದಿನ ಮಿಶ್ರಫಲವಾಗಿದೆ. ಇಂದು ಆದಾಯದಷ್ಟೇ ಖರ್ಚು ಕೂಡ ಇರಲಿದೆ. ವ್ಯಾಪಾರ ಸಂಬಂಧವಾಗಿ ನಿಮಗೆ ದೊಡ್ಡ ಸವಾಲು ಇರಬಹುದು. ಅಪಾಯಕಾರಿ ಕೆಲಸ ಮಾಡುವವರು ಇಂದು ಎಚ್ಚರಿಕೆಯಿಂದ ಇರಬೇಕು.

ಸಿಂಹ ರಾಶಿ

ಸಿಂಹ ರಾಶಿಯ ಜನರಿಗೆ ಇಂದು ಉತ್ತಮ ದಿನವಾಗಿರಲಿದೆ. ನಿಮ್ಮ ದೈನಂದಿಕ ಕೆಲಸ ಕಾರ್ಯದಲ್ಲಿ ಉತ್ತಮ ಫಲಿತಾಂಶ ಇರಲಿದೆ. ನಿಮ್ಮ ಹಲವು ಕೆಲಸದಲ್ಲಿ ಅಚ್ಚರಿ ಫಲಿತಾಂಶ ಇರಲಿದೆ. ಆಹಾರ ಸಂಬಂಧಿತ ಖರ್ಚುಗಳ ಕುರಿತು ಗಮನವಿಡಿ.

ಕನ್ಯಾ ರಾಶಿ

ಕನ್ಯಾ ರಾಶಿಯ ಜನರಿಗೆ ಇಂದು ಬಹಳ ಉತ್ತಮ ಫಲಿತಾಂಶ ಬರುವ ದಿನ. ನಿಮ್ಮ ಹಲವು ಕೆಲಸಗಳು ಧನಾತ್ಮಕ ರೀತಿಯಲ್ಲಿ ಮುಗಿಯಲಿವೆ. ಆಪ್ತರೊಬ್ಬರಿಂದ ನಿಮ್ಮ ಹಣಕಾಸು ವಿಚಾರದಲ್ಲಿ ಸಹಕಾರ ಇರಲಿದೆ.

ತುಲಾ ರಾಶಿ

ತುಲಾ ರಾಶಿಯ ಜನರಿಗೆ ಇಂದು ಅನುಕೂಲಕರ ದಿನ ಎನ್ನಬಹುದು. ಆಪ್ತರೊಬ್ಬರ ಭೇಟಿ ಮಾಡುವಿರಿ. ಕುಟುಂಬದಲ್ಲಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಹಿರಿಯರ ಮಾತು ನಿರ್ಲಕ್ಷಿಸಬೇಡಿ. ಗೃಹಿಣಿಯರು ತಮ್ಮ ಆರೋಗ್ಯ ಕುರಿತಾದ ಎಚ್ಚರಿಕೆ ವಹಿಸಬೇಕಿದೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯ ಜನರಿಗೆ ಮಿಶ್ರ ಫಲದ ದಿನ. ನಿಮ್ಮ ಮನೆಯಲ್ಲಿ ಶುಭ ಕಾರ್ಯ ಸಂಬಂಧವಾಗಿ ಮಾತುಕತೆ ಇರಲಿದೆ. ಇಂದು ಯಾರಿಗೆ ಸಾಲ ನೀಡಲು ಅಥವಾ ಪಡೆಯಲು ಮುಂದಾಗಬೇಡಿ. ನಿಮ್ಮ ವೈಯಕ್ತಿಕ ಕೆಲಸಗಳು ನಿಧಾನವಾಗಬಹುದು.

ಧನು ರಾಶಿ

ಧನು ರಾಶಿಯ ಜನರಿಗೆ ಸಾಮಾನ್ಯ ದಿನವಾಗಿರಲಿದೆ. ನಿಮ್ಮ ಉಳಿತಾಯದ ಹಣವನ್ನು ಬೇರೊಂದು ಕೆಲಸಕ್ಕೆ ನೀವು ವಿನಿಯೋಗಿಸಬಹುದು. ಅಪರಿಚಿತರ ಬಳಿ ಯಾವುದೇ ವ್ಯವಹಾರಕ್ಕೆ ಮುಂದಾಗದೆ ಇರುವುದು ಉತ್ತಮ. ವ್ಯಾಪಾರ ವ್ಯವಹಾರದಲ್ಲಿ ಯಥಾಸ್ಥಿತಿ ಇರಲಿದೆ. ಅನಗತ್ಯ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡಬೇಡಿ.

ಮಕರ ರಾಶಿ

ಮಕರ ರಾಶಿಯವರು ಬಹಳ ಎಚ್ಚರಿಕೆಯಿಂದ ಇರಬೇಕಾದ ದಿನ. ಪಂಚೇಂದ್ರಿಯ ಸಂಬಂಧಿ ಸಮಸ್ಯೆಗಳಿಗೆ ನೀವು ತುತ್ತಾಗಬಹುದು. ಹೊಸ ವ್ಯವಹಾರ ಆರಂಭಿಸಿದ್ದ ಮಂದಿಯಲ್ಲಿ ಹಣಕಾಸಿನ ಸಮಸ್ಯೆ ನೋಡಬಹುದು. ಆಸ್ತಿ ಸಂಬಂಧಿತ ವಿಚಾರವಾಗಿ ಸಮಸ್ಯೆಗಳಿವೆ.

ಕುಂಭ ರಾಶಿ

ಕುಂಭ ರಾಶಿಯ ಗೃಹಿಣಿಯರಿಗೆ ಬಹಳ ಸಮಸ್ಯೆಯ ದಿನ. ಇಡೀ ದಿನ ವಿಶ್ರಾಂತಿ ಇಲ್ಲದೆ ಕಳೆಯುತ್ತೀರಿ. ಸಾಲ ಮರುಪಾವತಿ ಮಾಡಬಹುದು. ದೈನಂದಿನ ಕೆಲಸಗಳಲ್ಲಿ ಎಚ್ಚರಿಕೆ ಇಡಿ.

ಮೀನ ರಾಶಿ

ಮೀನ ರಾಶಿಯ ಜನರಿಗೆ ಅನಗತ್ಯ ವಿಚಾರವಾಗಿ ಒತ್ತಡ ಎದುರಿಸಬಹುದು. ಹಣಕಾಸಿನ ವಿಚಾರದಲ್ಲಿ ಮಿಶ್ರ ಫಲವಿದೆ. ಯಾರಿಗೂ ಮಾತು ನೀಡಲು ಮುಂದಾಗಬೇಡಿ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಇಂದು ಉತ್ತಮ ದಿನ.

Story first published: Wednesday, August 20, 2025, 5:00 [IST]
X
Desktop Bottom Promotion